Breaking News
Home / ಅಂತರಾಷ್ಟ್ರೀಯ / ಮರಣಶಯ್ಯೆಯಲ್ಲಿ ಏಷ್ಯಾ ಹಿಟ್ಲರ್, ಡೆತ್ ಡಿಕ್ಟೇಟರ್ ಕಿಮ್ ಸತ್ತರೆ ಮುಂದೇನು..?

ಮರಣಶಯ್ಯೆಯಲ್ಲಿ ಏಷ್ಯಾ ಹಿಟ್ಲರ್, ಡೆತ್ ಡಿಕ್ಟೇಟರ್ ಕಿಮ್ ಸತ್ತರೆ ಮುಂದೇನು..?

Spread the love

ಪಯೋಂಗ್‍ಯಾಂಗ್/ಸಿಯೋಲ್, ಏ.24- ಏಷ್ಯಾದ ಅತ್ಯಂತ ನಿರ್ದಯಿ ಸರ್ವಾಧಿಕಾರಿ ಎಂದೇ ಕುಖ್ಯಾತಿ ಪಡೆದಿರುವ ಉತ್ತರ ಕೊರಿಯಾದ ಸುಪ್ರೀಂ ಲೀಡರ್ ಕಿಮ್ ಜಾಂಗ್ ಯುನ್ ಸಾವಿನ ಸನಿಹದಲ್ಲಿದ್ದು, ಮುಂದೇನು ಎಂಬ ಪ್ರಶ್ನೆ ಅವರ ಪರಮಾಪ್ತ ಬೆಂಬಲಿಗರನ್ನು ಕಾಡುತ್ತಿದೆ.

ಕೇವಲ 36 ವರ್ಷದ ಕಿಮ್ ಯಾವುದೋ ಗಂಭೀರ ಅನಾರೋಗ್ಯ ಸಮಸ್ಯೆಯಿಂದ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದು, ಸಾವಿನ ಸನಿಹದಲ್ಲಿದ್ದಾರೆ ಎಂಬ ವರದಿಗಳಿವೆ. ಆದರೆ, ಈವರೆಗೆ ಇದರ ಬಗ್ಗೆ ಯಾವುದೇ ಸುಳಿವು ಲಭಿಸಿಲ್ಲ

ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ್ದ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‍ನ ನಾಜಿ ಆಡಳಿತ ಶೈಲಿಯ ಸರ್ಕಾರ ನಡೆಸುತ್ತಿರುವ ಕಿಮ್ 2011ರಲ್ಲಿ ಉತ್ತರ ಕೊರಿಯಾ ಅಧ್ಯಕ್ಷರಾದರು. ಕೇವಲ 9 ವರ್ಷಗಳಲ್ಲಿ ನಿರ್ದಯಿ ಸರ್ವಾಧಿಕಾರಿ ನಡೆಸಿದ ಹಿಂಸಾ ಪ್ರವೃತ್ತಿ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಪಟ್ಟಿ ಬಹುದೊಡ್ಡದು.

ಹೆಸರಿಗಷ್ಟೆ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ ಅಧ್ಯಕ್ಷರಾದ ಇವರು ಅಕ್ಷರಶಃ ಕಾರ್ಮಿಕ ವಿರೋಧಿ ನಾಯಕ. ತನ್ನ ಎದುರಾಳಿಗಳನ್ನು ನಿರ್ದಯವಾಗಿ ಕೊಲ್ಲುವ ಕಿಮ್ ಏಷ್ಯಾ ಖಂಡದ ಹಿಟ್ಲರ್ ಎಂದೇ ಕುಖ್ಯಾತಿ ಪಡೆದಿದ್ದಾರೆ.

ಡೆತ್ ಡಿಕ್ಲೇಟರ್ ಎಂದೇ ವಿಶ್ವ ರಾಜಕೀಯ ವಲಯದಲ್ಲಿ ಕುಪ್ರಸಿದ್ಧರಾಗಿರುವ ಕಿಮ್ ಎಷ್ಟು ಕ್ರೂರಿ ಎಂದರೆ ತನಗೆ ಎದುರು ಮಾತನಾಡಿದ ಸ್ವಂತ ಚಿಕ್ಕಪ್ಪ ಜಾಂಗ್‍ಸಾಂಗ್ ತಯೀಕ್ ಅವರನ್ನು ಗಲ್ಲಿಗೇರಿಸಿದ ಕ್ರೂರಿ.

ಎರಡನೆ ಕಿಮ್‍ಜಾಂಗ್ ಪುತ್ರರಾದ ಇವರು 1984ರಲ್ಲಿ ಜನಿಸಿದರು. ಬಾಲ್ಯದಿಂದಲೂ ದುಷ್ಟ ಮತ್ತು ಹಠ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದ ಇವರು ತಮ್ಮ ತಂದೆ ಸತ್ತ ನಂತರ 2011ರಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ. ಅಂದಿನಿಂದ ಇವರ ದುರಾಡಳಿತ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ವ್ಯಾಪಕವಾಗಿ ಮುಂದುವರಿಯುತ್ತಲೇ ಇದೆ.

ಉತ್ತರ ಕೊರಿಯಾದಲ್ಲಿ ನಡೆಯುತ್ತಿರುವ ವ್ಯಾಪಕ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಜನಾಂಗೀಯ ಹತ್ಯೆ ಬಗ್ಗೆ ವಿಶ್ವಸಂಸ್ಥೆ ವರದಿಯೊಂದನ್ನು ಸಿದ್ಧಪಡಿಸಿತ್ತು. ಆದರೆ, ಈ ಕೃತ್ಯಗಳನ್ನು ಖಂಡಿಸಲಷ್ಟೇ ಇದು ಸೀಮಿತವಾಗಿತ್ತೇ ಹೊರತು ಸರ್ವಾಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ.

ಉತ್ತರಕೊರಿಯಾದ ಯಾವುದೇ ಸುದ್ದಿಗಳು ಹೊರಜಗತ್ತಿಗೆ ಸೋರಿಕೆಯಾಗದಷ್ಟು ಅತ್ಯಂತ ಪ್ರಬಲವಾದ ಮಾಧ್ಯಮ ನಿರ್ಬಂಧವಾಗಿದೆ. ಅಲ್ಲಿ ಬೆಳಕಿಗೆ ಬಂದಿರುವ ನರಮೇಧ ಮತ್ತು ಮಾನವ ಹಕ್ಕು ಉಲ್ಲಂಘನೆಯನ್ನು ಬೃಹತ್ ಹಿಮಬಂಡೆಯ ಒಂದು ತುದಿಯಷ್ಟು ಮಾತ್ರ ಎಂದು ಬಣ್ಣಿಸಲಾಗಿದೆ.

ಕಿಮ್ ಆಡಳಿತ ಶೈಲಿ ಮೊದಲಿನಿಂದಲೂ ಪ್ರಶ್ನಾರ್ಹವಾಗಿದೆ. ಆರ್ಥಿಕ ನಿರ್ವಹಣೆ, ಮಿಲಿಟರಿ ಸೇನೆ, ಪರಮಾಧಿಕಾರ ಎಲ್ಲವೂ ಕಿಮ್ ಕೈಯಲ್ಲಿ ಭದ್ರ. ಇದಕ್ಕೆ ಯಾರೇ ಎದುರಾದರೂ ಅವರನ್ನು ನಿರ್ದಯವಾಗಿ ಹೊಸಕಿ ಹಾಕಲು ಆದೇಶ ನೀಡುತ್ತಿದ್ದರು ಕಿಮ್ .

ಮಹಾಬಲಶಾಲಿ ರಾಷ್ಟ್ರವಾದ ಅಮೆರಿಕದಲ್ಲಿ ಇರದಷ್ಟು ಅತ್ಯಂತ ಅಪಾಯಕಾರಿ ಅಣ್ವಸ್ತ್ರಗಳು ಉತ್ತರ ಕೊರಿಯಾದ ಶಸ್ತ್ರಾಸ್ತ್ರ ಕೋಟೆಯಲ್ಲಿದೆ. ಇದಕ್ಕೆ ಸಾಕ್ಷಿ ಎಂದರೆ ಈವರೆಗೆ ಅಂದರೆ ಕೇವಲ 9 ವರ್ಷದಲ್ಲಿ ಕಿಮ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಅತ್ಯಂತ ಅಪಾಯಕಾರಿ ಅಣ್ವಸ್ತ್ರ ಪರೀಕ್ಷೆಗಳು ನಡೆದಿವೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಎಚ್ಚರಿಕೆಯನ್ನೂ ಲೆಕ್ಕಿಸದೆ ಕಿಮ್ ನಿರಂತರ ಅಣ್ವಸ್ತ್ರಗಳು ಮತ್ತು ಕ್ಷಿಪಣಿಗಳನ್ನು ಪ್ರಯೋಗಿಸುತ್ತಲೇ ಇದ್ದಾರೆ. ಕಳೆದ ವಾರವೂ ಸಹ ನಡೆದ ಅತ್ಯಂತ ಅಪಾಯಕಾರಿ ಶಸ್ತ್ರಾಸ್ತ್ರ ಪರೀಕ್ಷೆ ಏಷ್ಯಾ ಖಂಡವನ್ನೇ ಬೆಚ್ಚಿಬೀಳಿಸಿತ್ತು.
ಮರಣವನ್ನು ಯಾರೂ ಗೆಲ್ಲಲು ಸಾಧ್ಯವಿಲ್ಲ.

ಜನನದೊಂದಿಗೆ ಮರಣವೂ ಪ್ರತಿಯೊಬ್ಬರಿಗೂ ಕೊಡುಗೆ. ಕೇವಲ 36 ವರ್ಷಗಳಲ್ಲಿ ಏಷ್ಯಾಖಂಡದಲ್ಲಿ ಕೇವಲ 36 ವರ್ಷಗಳಲ್ಲಿ ಅತ್ಯಂತ ನಿರ್ದಯಿ ಕೃತ್ಯಗಳು ಮತ್ತು ಹಿಂಸಾಚಾರಗಳನ್ನು ನಡೆಸಿ ಕುಖ್ಯಾತರಾಗಿರುವ ಕಿಮ್ ಈಗ ಮರಣ ಶಯ್ಯೆಯಲ್ಲಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ವಂಶಪಾರಂಪರ್ಯ ಆಡಳಿತ ನಡೆಸಿದ್ದ ಕಿಮ್‍ನ ಹಿರಿಕರು ಸತ್ತ ನಂತರ ಪ್ರಪಂಚಕ್ಕೆ ಬಹುತಡವಾಗಿ ವಿಷಯ ಬಹಿರಂಗವಾಗುತ್ತಿತ್ತು.

ಕಿಮ್ ತಂದೆ ಮತ್ತು ಉತ್ತರ ಕೊರಿಯಾ ನಾಯಕರಾಗಿದ್ದ ಎರಡನೆ ಕಿಮ್ ಜಾಂಗ್ ಸತ್ತ ನಾಲ್ಕು ದಿನಗಳ ಬಳಿಕವಷ್ಟೇ ಪಕ್ಕದ ದಕ್ಷಿಣ ಕೊರಿಯಾಗೆ ಮೊದಲ ಬಾರಿಗೆ ಮಾಹಿತಿ ಲಭಿಸಿತ್ತು.ಈಗ ಕಿಮ್ ಜಾಂಗ್ ಬದುಕಿದ್ದಾರೋ ಅಥವಾ ಸತ್ತಿದ್ದಾರೋ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಒಟ್ಟಾರೆ ಉತ್ತರ ಕೊರಿಯಾದ ಜನರೇ ಕಿಮ್‍ಗೆ ಹಿಡಿಶಾಪ ಹಾಕುತ್ತಿರುವುದು ಸುಳ್ಳಲ್ಲ.

ಇವರು ಮೃತಪಟ್ಟರೆ ನಿರಾಳವಾಗಿರಬಹುದೆಂಬ ಭಾವನೆ ಕೊರಿಯನ್ನರಲ್ಲಿ ಮನೆ ಮಾಡಿರುವುದು ಸುಳ್ಳಲ್ಲ. ಕಿಮ್ ನಂತರ ಅವರ ಸೋದರಿ ಕಿಮ್ ಯೋ ಜಾಂಗ್ ಉತ್ತರ ಕೊರಿಯಾಗೆ ನಾಯಕಿಯಾಗುವುದು ಬಹುತೇ ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.


Spread the love

About Laxminews 24x7

Check Also

100 ರನ್​ಗಳಿಂದ ಗೆದ್ದ ಭಾರತ; ವಿಶ್ವಕಪ್​ನಿಂದ ಹೊರಬಿದ್ದ ಹಾಲಿ ಚಾಂಪಿಯನ್ …

Spread the loveಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ