ನವದೆಹಲಿ: ಕೊರೋನಾ ಸೋಂಕು ನಿಯಂತ್ರಣಕ್ಕೆ ಗ್ರಾಮಗಳು ತೆಗೆದುಕೊಂಡ ಕ್ರಮಗಳು ಅನೇಕರಿಗೆ ಮಾದರಿಯಾಗಿವೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ಸರಪಂಚರನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೊರೋನಾ ವೈರಸ್ ನಿಯಂತ್ರಣಕ್ಕೆ ಸಾಕಷ್ಟು ಗ್ರಾಮಗಳು ಸ್ವಯಂ ನಿರ್ಬಂಧ ಹೇರಿಕೊಂಡಿವೆ. ಹಳ್ಳಿಗರಿಂದ ಸಾಕಷ್ಟು ಜನರು ಸ್ಫೂರ್ತಿ ಪಡೆದುಕೊಂಡಿದ್ದಾರೆ ಎಂದರು.
ಮೊದಲು ಗ್ರಾಮ ಪಂಚಾಯ್ತಿಯಲ್ಲಿ ಸರಿಯಾದ ಇಂಟರ್ನೆಟ್ ಸೌಲಭ್ಯ ಇರುತ್ತಿರಲಿಲ್ಲ. ಆದರೆ, ಇಂದು ಲಕ್ಷಾಂತರ ಪಂಚಾಯತಿಗಳಲ್ಲಿ ವೇಗದ ಇಂಟರ್ನೆಟ್ ಇದೆ. ದೇಶದ ಅನೇಕ ಸರಪಂಚರು ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದ್ದಾರೆ ಎಂದು ತಿಳಿಸಿದರು.
ಇಡೀ ವಿಶ್ವಕ್ಕೆ ಕೊರೋನಾ ದೊಡ್ಡ ಸಂದೆಶವೊಂದನ್ನು ನೀಡಿದೆ. ಕೊರೋನಾದಿಂದಾಗಿ ಸ್ವಯಂ ಅವಲಂಬನೆ ಕಲಿಯುವ ಅನಿವಾರ್ಯತೆ ಬಂದಿದೆ. ಸ್ವಾವಲಂಬಿಗಳಾಗದೇ ಈ ವೈರಸ್ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂದು ಹೇಳಿದರು.