Breaking News
Home / ಜಿಲ್ಲೆ / 54 ಮಂದಿ ಪಾದರಾಯನಪುರ ಪುಂಡರು ವಶಕ್ಕೆ..! ಘಟನೆ ಹಿಂದಿದೆ ಇಬ್ಬರ ಕೈವಾಡ..?

54 ಮಂದಿ ಪಾದರಾಯನಪುರ ಪುಂಡರು ವಶಕ್ಕೆ..! ಘಟನೆ ಹಿಂದಿದೆ ಇಬ್ಬರ ಕೈವಾಡ..?

Spread the love

ಬೆಂಗಳೂರು : ಕಳೆದ ರಾತ್ರಿ ನಗರದ ಪಾದರಾಯನಪುರದಲ್ಲಿ ಕೊರೊನಾ ವಾರಿಯಸ್೯ ( ಕಾರ್ಯಕರ್ತೆಯರು ) ಮೇಲೆ ನಡೆದ ದಾಳಿ ಸಂಬಂಧ ಮಿಂಚಿನ ಕಾರ್ಯಚಾರಣೆ ನಡೆಸಿರುವ ಪೊಲೀಸರು 54 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಸಿಸಿ ಕ್ಯಾಮರಾ ಮತ್ತು ಮೊಬೈಲ್ ದೃಶ್ಯಾವಳಿಗಳನ್ನು ಆಧರಿಸಿ 54 ಜನರನ್ನು ಜೆ.ಜೆ.ನಗರ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ

ಜೊತೆಗೆ ಪಾದರಾಯನಪುರದಲ್ಲಿ ದಾಂಧಲೆ ಎಸಗಿದವರ ವಿರುದ್ಧ ನಾಲ್ಕು ಪ್ರತ್ಯೇಕ ಎಫ್ಐಆರ್ ಗಳನ್ನು ದಾಖಲಿಸಿಕೊಳ್ಳಲಾಗಿದೆ. ಐಪಿಸಿ ಸೆಕ್ಷನ್ 353, 307, ಎನ್ ಡಿಎಂಎ 353, 332, 324, ಹಾಗೂ 201ರ ಅಡಿಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೆಂದ್ ಮುಖರ್ಜಿ ತಿಳಿಸಿದ್ದಾರೆ.

ಇನ್ನು ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದೆಂದು ಗೃಹ ಸಚಿವ ಬಸವರಾಜ್ ಬೊಮ್ಮಯಿ ಎಚ್ವರಿಸಿದ್ದಾರೆ. ರಾತ್ರಿ ಘಟನೆ ವಿಕೋಪ ತಿರುಗುತ್ತಿದ್ದಂತೆ ಪಾದರಾಯನಪುರಕ್ಕೆ ಪೊಲೀಸರ ನಿಯೋಗವೇ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಕರ್ತವ್ಯನಿರತ ಸಿಬ್ಬಂದಿ ಮೇಲೆ ದಾಳಿಗೆ ಯತ್ನಿಸಿದ ಸುಮಾರು 54 ಜನರನ್ನು ರಾತ್ರಿಯೇ ಪೊಲೀಸರು ಬಂಧಿಸಿ ಆಡುಗೋಡಿ ಪೊಲೀಸ್ ಠಾಣೆಗೆ ಶಿಫ್ಟ್ ಮಾಡಲಾಗಿದೆ.

ಬ್ಯಾಟರಾಯನಪುರ ಇನ್ಸ್​ಪೆಕ್ಟರ್ ಲಿಂಗರಾಜು ಮತ್ತು ಚಾಮರಾಜಪೇಟೆ ಇನ್ಸ್​ಪೆಕ್ಟರ್ ಕುಮಾರಸ್ವಾಮಿ‌ ನೇತೃತ್ವದಲ್ಲಿ‌ ಕಾರ್ಯಾಚರಣೆ ನಡೆಸಲಾಗಿತ್ತು. ಸೀಲ್​​​ಡೌನ್‌ ಜಾಗದಲ್ಲಿ ಬ್ಯಾರಿಕೇಡ್ ಮತ್ತು ಶೀಟ್​​ಗಳನ್ನ ಕಿತ್ತೆಸಿದ್ದ ಆರೋಪದ ಮೇಲೆ ಓರ್ವ ಮಹಿಳೆ ಸೇರಿದಂತೆ ಹದಿಮೂರು ಜನರನ್ನ ವಶಕ್ಕೆ ಪಡೆಯಲಾಗಿತ್ತು. ರಾತ್ರಿಯಿಡೀ ಪೊಲೀಸರು ಪಾದರಾಯನಪುರದ ಗಲ್ಲಿ ಗಲ್ಲಿ ಹುಡುಕಿ ಗಲಾಟೆ ಮಾಡಿದವರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದ್ರ ಮುಖರ್ಜಿ ಮತ್ತು ಡಿಸಿಪಿ ರಮೇಶ್ ಬಾನೋತ್ ಸ್ಟೇಷನ್​​ನಲ್ಲೇ ಉಳಿದಿದ್ದಾರೆ.
ತಲೆಮರೆಸಿಕೊಂಡವರ ಪತ್ತೆ ಕಾರ್ಯ ಮುಂದುವರೆದಿದೆ. ಮುಂಜಾಗ್ರತ ಕ್ರಮವಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ 10 ಕೆಎಸ್‍ಆರ್ ಪಿ ತುಕಡಿ ಮತ್ತು 220ಪೊಲೀಸರನ್ನು ಪಾದರಾಯನಪುರದಲ್ಲಿ ನಿಯೋಜನೆ ಮಾಡಲಾಗಿದೆ.

# ಇಬ್ಬರ ಕೈವಾಡದ ಶಂಕೆ?

ಕೊರೊನಾ ವೈರಸ್ ಸೋಂಕಿತರ ವೈದ್ಯಕೀಯ ತಪಾಸಣೆಗೆ ತೆರಳಿದ್ದ ವೇಳೆ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ದಾಂಧಲೆಯ ಹಿಂದೆ ಗಾಂಜಾ ಮತ್ತಿನ ಗಮ್ಮತ್ತು ಇತ್ತು ಎಂಬ ಅನುಮಾನ ವ್ಯಕ್ತವಾಗಿದೆ. ಪಾದರಾಯನಪುರದಲ್ಲಿ ಲೇಡಿ ಡಾನ್ ಎಂದೇ ಪರಿಚಿತರಾಗಿರುವ ಸರೋಜಾ ಎಂಬ ಮಹಿಳೆಯೇ ಈ ದಾಂಧಲೆಯ ಹಿಂದಿನ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದೆ.

ಏರಿಯಾದಲ್ಲಿ ಇರುವ ಯುವಕರ ಪರಿಚಯವಿದ್ದ ಸರೋಜ ದಾಂಧಲೆಗೆ ಪ್ರಚೋದನೆ ನೀಡಿದರಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಯುವಕರನ್ನ ಪ್ರೇರೇಪಿಸಿ ಗಲಾಟೆ ಮಾಡಿರೋ ಶಂಕೆ ಹಿನ್ನೆಲೆಯಲ್ಲಿ ಅರಫತ್ ನಗರದ ನಿವಾಸಿಯಾಗಿರೋ ಇರ್ಫಾನ್​ ಎಂಬಾತನಿಗಾಗಿ ಪೊಲೀಸರು ಹುಟುಕಾಟ ನಡೆಸುತ್ತಿದ್ದಾರೆ. ಶೀಟ್​​ಗಳನ್ನ ಕಿತ್ತುಹಾಕುತ್ತಿರುವಾಗ ಆತ ಜೊತೆಯಲ್ಲೇ ಇದ್ದ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಆತನಿಗಾಗಿ ಪಾದರಾಯನಪುರ ವಾರ್ಡ್ ಪೂರ್ತಿ ಕಾರ್ಯಚಾರಣೆ ಮಾಡಿದ್ದಾರೆ ಎಂದು ಪೊಲಿಸ್  ಮೂಲಗಳು ತಿಳಿಸಿವೆ.

# ಘಟನೆಯ ಹಿನ್ನೆಲೆ

ಭಾನುವಾರ ರಾತ್ರಿ ಗುಂಪು ಗುಂಪಾಗಿ ಕರ್ತವ್ಯ ನಿರತ ಪೊಲೀಸರ ಮೇಲೆ ಪಾದರಾಯನಪುರದ ಪುಂಡರು ಹಲ್ಲೆ ನಡೆಸಿದ್ದರು. ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮತ್ತು ಚೆಕ್‍ಪೋಸ್ಟ್ ಧ್ವಂಸಗೊಳಿಸಿದ್ದರು. ಸ್ಥಳದಲ್ಲಿ ಕೆಲ ಪೊಲೀಸರು ಇದಿದ್ದರಿಂದ ಪುಂಡರ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆಗೆ ಮುಂದಾಗಿದ್ದರು.

ಕೊರೊನಾ ಸೋಂಕಿತರ ಹೆಚ್ಚು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾದರಾಯನಪುರವನ್ನು ಸಂಪೂರ್ಣವಾಗಿ ಸೀಲ್‍ಡೌನ್ ಮಾಡಲಾಗಿತ್ತು. ಪಾದರಾಯನಪುರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಿ, ಪ್ರಮುಖ ರಸ್ತೆಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಸೀಲ್ ಡೌನ್ ಆಗಿರುವ ಪಾದರಾಯನಪುರದಲ್ಲಿ ಕೊರೊನಾ ವೈರಸ್ ಸೋಂಕಿತರ ದ್ವಿತೀಯ ಸಂಪರ್ಕದಲ್ಲಿದ್ದ 58ಕ್ಕೂ ಹೆಚ್ಚು ಜನರನ್ನು ಗೃಹ ದಿಗ್ಬಂಧನದಲ್ಲಿ ಇರಿಸಲಾಗಿತ್ತು. 58 ಜನರ ಪೈಕಿ 20 ಜನರನ್ನು ಬೇರೆಡೆ ಶಿಫ್ಟ್ ಮಾಡಲಾಗಿದ್ದು, ಉಳಿದ 38 ಜನರನ್ನು ಸ್ಥಳಾಂತರಿಸಲು ಬಿಬಿಎಂಪಿ ಅಧಿಕಾರಿಗಳು ತೆರಳಿದ್ದರು.

ಪಾದರಾಯನಪುರದಲ್ಲಿ ಕ್ವಾರೆಂಟೈನ್ ಗೆ ಒಳಪಡಿಸಲು ಬಿಬಿಎಂಪಿ ಅಧಿಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ತೆರಳಿದ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೆರಳಿದ ಕೆಲವರು ಸೀಲ್ ಡೌನ್ ಮಾಡಿರುವ ಏರಿಯಾದಲ್ಲಿ ಅಳವಡಿಸಿದ ಬ್ಯಾರಿಕೇಡ್ ಹಾಗೂ ತಗಡುಗಳನ್ನು ಕಿತ್ತೆಸೆದು ಗಲಾಟೆ ಮಾಡಿದ್ದರು.

ಘಟನೆ ಕುರಿತಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಯಿ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದರು.

# ವ್ಯಾಪಕ ಖಂಡ : 
ಇನ್ನು ಘಟನೆಯ ಬಗ್ಗೆ ವಿವಿಧ ಪಕ್ಷಗಳ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ‌.  ಪಾದರಾಯನಪುರದಲ್ಲಿ ಕೊರೊನಾ ವಾರಿಯರ್ಸ್‌ ಮೇಲಿನ ದಾಳಿ ಅಮಾನವೀಯವಾದದ್ದು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಘಟನೆಯನ್ನು ಖಂಡಿಸಿದ್ದಾರೆ. ದಾಳಿ ಮಾಡಿದವರ ಮೇಲೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸ್ ಹಾಗು ಅರೋಗ್ಯ ಸಿಬ್ಬಂದಿಯವರ ಮೇಲೆ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಅತ್ಯಂತ ಖಂಡನೀಯ.  ತಮ್ಮನ್ನು ರಕ್ಷಿಸಲು ಬಂದಿರುವವರ ಮೇಲೆ ಹಲ್ಲೆ ಮಾಡುವಂತಹ ಹೀನ ಮನಸ್ಥಿತಿಯವರ ಮೇಲೆ ನಮ್ಮ ಸರ್ಕಾರ ಕಾನೂನು ರೀತ್ಯಾ ತಕ್ಕ ಕ್ರಮ ಕೈಗೊಳ್ಳಲಿದೆ.

ಘಟನೆ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸ್ ಹಾಗು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಅತ್ಯಂತ ಖಂಡನೀಯ. ತಮ್ಮನ್ನು ರಕ್ಷಿಸಲು ಬಂದಿರುವವರ ಮೇಲೆ ಹಲ್ಲೆ ಮಾಡುವಂತಹ ಹೀನ ಮನಸ್ಥಿತಿಯವರ ಮೇಲೆ ಸರಕಾರ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

ಇನ್ನು, ಸಚಿವ ಸಿ.ಟಿ.ರವಿ ಕೂಡ ಘಟನೆಯನ್ನು ಖಂಡಿಸಿದ್ದು, ಹೇಡಿಗಳ ಗ್ಯಾಂಗ್‌ವೊಂದು ಆರೋಗ್ಯ ಸಿಬ್ಬಂದಿ ಮೇಲೆ ದಾಳಿ ನಡೆಸಿದೆ. ಈ ಕೊರೊನಾ ವಾರಿಯರ್‌ಗಳು ತಬ್ಲಿಘಿ ಜಮಾತ್‌ನಿಂದ ಸೃಷ್ಟಿಯಾದ ಹಾಟ್‌ಸ್ಪಾಟ್‌ನಲ್ಲಿ ಕೊರೊನಾ ಸೋಂಕಿತ ಸಂಪರ್ಕಿತರನ್ನು ಕ್ವಾರಂಟೈನ್‌ ಮಾಡಲು ತೆರಳಿದ್ದರು. ಕೊರೊನಾ ವಿರುದ್ಧ ಭಾರತ ಹೋರಾಡುತ್ತಿದ್ದರೆ, ಇತ್ತ ಮೃಗಗಳಿಂದಲೂ ತೊಂದರೆ ಅನುಭವಿಸಬೇಕಾಗಿದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ ವಾರಿಯರ್ಸ್‌ ಮೇಲೆ ದಾಳಿ, ಪಾದರಾಯನಪುರದಲ್ಲಿ ಉದ್ವಿಗ್ನ ಪರಿಸ್ಥಿತಿ
ಘಟನೆಯನ್ನು ಅನೇಕರು ಖಂಡಿಸಿದ್ದು, ಕೊರೊನಾ ವಾರಿಯರ್ಸ್‌ ಮೇಲೆ ದಾಳಿ ನಡೆಸಿದವರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪಾದರಾಯನಪುರದಲ್ಲಿ ಸೋಂಕಿತ ವ್ಯಕ್ತಿಯ ಸಂಪರ್ಕ ಹೊಂದಿದ್ದ 58 ಜನರನ್ನು ಅಧಿಕಾರಿಗಳು ಪತ್ತೆಹಚ್ಚಿದ್ದರು.

58 ಜನರನ್ನು ಪರಿಶೀಲಿಸಲು ತೆರಳಿದಾಗ ಘರ್ಷಣೆ ನಡೆದಿದೆ. 15 ಜನ ಆಸ್ಪತ್ರೆಗೆ ಬರಲು ಒಪ್ಪಿದ್ದರೆ, ಉಳಿದವರಿಂದ ಗಲಾಟೆ ಸೃಷ್ಟಿಯಾಗಿದೆ. ಶಾಸಕರು ಬರಲಿ ನೋಡೋಣ ಎಂದು 100ಕ್ಕೂ ಹೆಚ್ಚು ಮಂದಿ ಗಲಾಟೆ ನಡೆಸಿದ್ದು, ಪೊಲೀಸರ ಮೇಲೆ ಹಾಗೂ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು.

ಪಾದರಾಯನಪುರದಲ್ಲಿ ಕೊರೊನಾ ವಾರಿಯರ್ಸ್‌ ಮೇಲೆ ನಡೆದ ಘಟನೆಯನ್ನು ಎಲ್ಲರೂ ಖಂಡಿಸಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಈ ಬಗ್ಗೆ ಗೃಹಸಚಿವ ಹಾಗೂ ಡಿಜಿಪಿ ಜೊತೆ ಮಾತನಾಡಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರೇಣುಕಾಚಾರ್ಯ ಘಟನೆಯನ್ನು ಖಂಡಿಸಿದ್ದಾರೆ.

ಕೊರೊನಾ ಸೋಂಕಿತನ ಸಂಪರ್ಕಿತರನ್ನು ಕ್ವಾರಂಟೈನ್‌ಗೆ ಒಳಪಡಿಸಲು ತೆರಳಿದ್ದ ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರ ಮೇಲಿನ ದಾಳಿ ಅತ್ಯಂತ ಖಂಡನೀಯ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸರಕಾರದೊಂದಿಗೆ ಚರ್ಚಿಸಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಹೇಳಿದ್ದಾರೆ.

ಘಟನೆ ಬಗ್ಗೆ ಟ್ವೀಟ್‌ ಮಾಡಿರುವ ಅವರು, ರಾಜ್ಯ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಹಾಗೂ ಡಿಜಿಪಿ ಪ್ರವೀಣ್‌ ಸೂದ್‌ ಅವರ ಜೊತೆ ಮಾತನಾಡಿದ್ದೇನೆ. ಕ್ವಾರಂಟೈನ್ ಆದವರ ಪರಿಶೀಲನೆಗೆ ಹೋದ ಪೊಲೀಸ್ ಹಾಗು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ, ಬೆಂಕಿ ಹಾಕಿರುವ ಘಟನೆ ಅತ್ಯಂತ ಖಂಡನೀಯ. ಕೊರೊನಾ ವಿರುದ್ಧದ ಹೋರಾಟ ಮಾನವತೆಯ ಹೋರಾಟವಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನು, ಸಂಸದೆ ಶೋಭಾ ಕರಂದ್ಲಾಜೆಯು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಆರೋಗ್ಯ ಸಿಬ್ಬಂದಿ ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ನಮ್ಮ ಹೀರೋಗಳ ಮೇಲೆ ಈ ಮೂರ್ಖರು ಹಲ್ಲೆ ನಡೆಸುತ್ತಾರೆ. ಈ ದೇಶ ದ್ರೋಹಿಗಳ ಮೇಲೆ ಯಾವುದೇ ಮೃದು ಧೋರಣೆ ಬೇಡ ಎಂದು ಟ್ವೀಟ್‌ ಮಾಡಿದ್ದಾರೆ. ಪಾದರಾಯನಪುರದಲ್ಲಿ ಆರೋಗ್ಯಾಧಿಕಾರಿಗಳಿಗೆ ಕೊರೊನ ಚಿಕಿತ್ಸೆಗೆ ಸ್ಪಂದಿಸದೆ, ಪೋಲಿಸ್ ಅಧಿಕಾರಿಗಳ ಮೇಲೆ ದುರ್ವರ್ತನೆ ತೋರಿದವರ ಮೇಲೆ ಈ ಕೊಡಲೆ ಶಿಸ್ತು ಕ್ರಮ ತೆಗೆದುಕೊಳ್ಳಿ.

ಪಾದರಾಯನಪುರದಲ್ಲಿ ಆರೋಗ್ಯಾಧಿಕಾರಿಗಳಿಗೆ ಕೊರೊನಾ ಚಿಕಿತ್ಸೆಗೆ ಸ್ಪಂದಿಸದೆ, ಪೊಲೀಸ್ ಅಧಿಕಾರಿಗಳ ಮೇಲೆ ದುರ್ವರ್ತನೆ ತೋರಿದವರ ಮೇಲೆ ಈ ಕೊಡಲೆ ಶಿಸ್ತು ಕ್ರಮ ತೆಗೆದುಕೊಳ್ಳಿ. ಪಾದರಾನಪುರದಲ್ಲಿ ಅಶಾಂತಿ ನಿರ್ಮಿಸಿದವರನ್ನ ತಕ್ಷಣ ಪೊಲೀಸ್‌ ವಶಕ್ಕೆ ಪಡೆದುಕೊಳ್ಳಿ ಎಂದು ಶಾಸಕ ರೇಣುಕಾಚಾರ್ಯ ಟ್ವೀಟ್‌ ಮಾಡಿದ್ದಾರೆ.


Spread the love

About Laxminews 24x7

Check Also

ಮಾಜಿ ಪ್ರಧಾನಿಗಳ ಮೊಮ್ಮಗ, ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡು : ಡಿಕೆಶಿ

Spread the loveಬೆಂಗಳೂರು,ಏ.28- ತಲೆ ತಗ್ಗಿಸುವ ಕೆಲಸ ಮಾಡಿ ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ