Home / ಜಿಲ್ಲೆ / ಬೆಳಗಾವಿ / ಗೋಕಾಕ / ರೀನ್ ಝೋನ್ ನಲ್ಲಿದ್ದರೂ ಗಡಿ ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಿಂದ ಗಡಿದಾಟಿ ಬರುವ ಜನರದ್ದೇ ಆತಂಕವಾಗಿದೆ.

ರೀನ್ ಝೋನ್ ನಲ್ಲಿದ್ದರೂ ಗಡಿ ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಿಂದ ಗಡಿದಾಟಿ ಬರುವ ಜನರದ್ದೇ ಆತಂಕವಾಗಿದೆ.

Spread the love

ರಾಯಚೂರು: ಜಿಲ್ಲೆ ಗ್ರೀನ್ ಝೋನ್ ನಲ್ಲಿದ್ದರೂ ಗಡಿ ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಿಂದ ಗಡಿದಾಟಿ ಬರುವ ಜನರದ್ದೇ ಆತಂಕವಾಗಿದೆ. ಹೀಗಾಗಿ ಅಡ್ಡದಾರಿಗಳಲ್ಲಿ ಬರುವ ಜನರನ್ನು ಪೊಲೀಸರು ಹಾಗೂ ಗ್ರಾಮಸ್ಥರು ವಾಪಸ್ ಕಳುಹಿಸುತ್ತಿದ್ದಾರೆ.

ತೆಲಂಗಾಣ ಗಡಿಯಿಂದ ರಾಯಚೂರಿನ ಸಿಂಗನೊಡಿ ಗ್ರಾಮಕ್ಕೆ ಬರುತ್ತಿದ್ದ ಬೈಕ್ ಸವಾರರನ್ನು ಪೊಲೀಸ್ ಅಧಿಕಾರಿಯೊಬ್ಬರು ಸಿನಿಮಾ ಶೈಲಿಯಲ್ಲಿ ಚೇಸಿಂಗ್ ಮಾಡಿ ಹಿಡಿದು, ತೆಲಂಗಾಣಕ್ಕೆ ವಾಪಸ್ ಕಳುಹಿಸಿದ್ದಾರೆ.

ಅಕ್ರಮ ಮಾರ್ಗದ ಮೂಲಕ ರಾಯಚೂರು ಪ್ರವೇಶ ಮಾಡುತ್ತಿರುವ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಜನರು ಜಿಲ್ಲೆಗೆ ತಲೆನೋವಾಗಿದ್ದಾರೆ. ಚೆಕ್ ಪೋಸ್ಟ್ ಹಾಗೂ ಚಿಕ್ಕ ರಸ್ತೆಗಳಲ್ಲಿ ಗುಂಡಿ ತೋಡುವ ಮೂಲಕ ಗಡಿಗಳನ್ನು ಬಂದ್ ಮಾಡಿದರೂ ಜನ ರಾಯಚೂರಿಗೆ ನುಸುಳುತ್ತಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ಇಲ್ಲ. ಆದರೆ ಆಂಧ್ರ ಹಾಗೂ ತೆಲಂಗಾಣದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ಕೃಷಿ ಉತ್ಪನ್ನ ಹಾಗೂ ಅವಶ್ಯಕ ವಸ್ತುಗಳ ಸಾಗಣೆ ನಿರಂತರವಾಗಿ ನಡೆದಿದೆ. ಕೃಷಿ ಚಟುವಟಿಕೆಗಳ ಯಂತ್ರೋಪಕರಣಗಳು ಸಹ ಗಡಿ ರಾಜ್ಯಗಳಿಂದ ಬರುತ್ತಲೇ ಇವೆ. ಪ್ರತಿ ದಿನ ಲಾರಿ, ಟ್ರಾಕ್ಟರ್ ಸೇರಿದಂತೆ ಎರಡು ನೂರಕ್ಕೂ ಹೆಚ್ಚು ವಾಹನಗಳು ಭತ್ತ, ಈರುಳ್ಳಿಯನ್ನು ಜಿಲ್ಲೆಗೆ ತರುತ್ತಿವೆ. ಇದರ ಜೊತೆ ಗಡಿ ಗ್ರಾಮ, ಪಟ್ಟಣಗಳ ಜನ ಅಡ್ಡದಾರಿಗಳ ಮೂಲಕ ಬರುತ್ತಿರುವುದು ಕೊರೊನಾ ಆತಂಕ ಹೆಚ್ಚಿಸಿದೆ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ