Breaking News
Home / ಜಿಲ್ಲೆ / ಬೆಳಗಾವಿ:ತನ್ನ ಹೆಂಡತಿ, ಪುಟ್ಟ ಕಂದಮ್ಮನೊಂದಿಗೆ ತುತ್ತು ಅನ್ನಕ್ಕಾಗಿ ಡ್ರೈವರ್ ನಾಗರಾಜ್ ಪರದಾಡುತ್ತಿದ್ದಾರೆ.

ಬೆಳಗಾವಿ:ತನ್ನ ಹೆಂಡತಿ, ಪುಟ್ಟ ಕಂದಮ್ಮನೊಂದಿಗೆ ತುತ್ತು ಅನ್ನಕ್ಕಾಗಿ ಡ್ರೈವರ್ ನಾಗರಾಜ್ ಪರದಾಡುತ್ತಿದ್ದಾರೆ.

Spread the love

ಬೆಳಗಾವಿ: ಕೊರೊನಾದ ಲಾಕ್‍ಡೌನ್‍ನಿಂದ ಅನೇಕ ಬಡ ಕುಟುಂಬಗಳು ತಿನ್ನಲು ಊಟವಿಲ್ಲದೇ ಪರದಾಡುತ್ತಿವೆ. ಅದರಂತೆಯೇ ಜಿಲ್ಲೆಯ ರಾಮನಗರದಲ್ಲಿ ಟ್ಯಾಕ್ಸಿ ಚಾಲಕನ ಕುಟುಂಬವೊಂದು ಕಣ್ಣೀರಲ್ಲಿ ಕೈತೊಳೆಯುತ್ತಿದೆ.

ಚಾಲಕ ನಾಗರಾಜ್ ಕುಟುಂಬ ತಿನ್ನಲು ಅನ್ನ ಇಲ್ಲದೇ ಪರದಾಟ ಮಾಡುತ್ತಿದೆ. ನಾಗರಾಜ್ ತನ್ನ ಮಗಳಿಗೆ ಚಿಕಿತ್ಸೆ ಕೊಡಿಸುವುದಕ್ಕೆ ಹೆಂಡತಿಯ ಒಡವೆ ಅಡವಿಟ್ಟಿದ್ದಾರೆ. ಅಷ್ಟೇ ಅಲ್ಲದೇ ರೇಷನ್ ಕಾರ್ಡ್ ಇಲ್ಲದವರಿಗೆ ಪಡಿತರವನ್ನು ವಿತರಿಸುತ್ತಿಲ್ಲ. ಹೀಗಾಗಿ ಬೆಳಗ್ಗೆ ಕೊಡುವ ಉಚಿತ ಹಾಲನ್ನೇ ತನ್ನ ಮಗಳಿಗೆ ಕೊಡುತ್ತಿದ್ದಾರೆ.

ನಾಗರಾಜ್ ಟ್ಯಾಕ್ಸಿ ಓಡಿಸಿಯೇ ಜೀವನ ಸಾಗಿಸುತ್ತಿದ್ದರು. ಆದರೆ ಲಾಕ್‍ಡೌನ್‍ನಿಂದಾಗಿ ಟಾಕ್ಸಿ ಓಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮನೆಗೆ ಬೇಕಾಗುವ ಸಾಮಾಗ್ರಿ ತೆಗೆದುಕೊಳ್ಳಲು ಹಣವಿಲ್ಲ. ಇತ್ತ ಬೆಳಗಾವಿಯ ರಾಮನಗರದ ಬಾಡಿಗೆ ಮನೆಯಲ್ಲಿ ನಾಗರಾಜ್ ದಂಪತಿ ವಾಸಮಾಡುತ್ತಿದ್ದಾರೆ. ಈ ನಡುವೆ ಮಗುವಿಗೆ ಅನಾರೋಗ್ಯ ಉಂಟಾಗಿತ್ತು. ಆಗ ಚಿಕಿತ್ಸೆಗಾಗಿ 2 ದಿನಗಳ ಹಿಂದೆ ಹೆಂಡತಿ ಒಡವೆಯನ್ನು ಅಡವಿಟ್ಟಿದ್ದರು.

ಒಟ್ಟಿನಲ್ಲಿ ಮನೆಯಲ್ಲಿ ತನ್ನ ಹೆಂಡತಿ, ಪುಟ್ಟ ಕಂದಮ್ಮನೊಂದಿಗೆ ತುತ್ತು ಅನ್ನಕ್ಕಾಗಿ ಡ್ರೈವರ್ ನಾಗರಾಜ್ ಪರದಾಡುತ್ತಿದ್ದಾರೆ.


Spread the love

About Laxminews 24x7

Check Also

ಜೆಡಿಎಸ್‌ನಿಂದ ಪ್ರಜ್ವಲ್‌ ರೇವಣ್ಣ ಉಚ್ಚಾಟನೆ

Spread the loveಜೆಡಿಎಸ್‌ನಿಂದ ಪ್ರಜ್ವಲ್‌ ರೇವಣ್ಣ ಉಚ್ಚಾಟನೆ ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಲುಕಿರುವ ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ