Breaking News
Home / ಜಿಲ್ಲೆ / ಶಾಸಕರ ಹೆಸರಲ್ಲಿ ನಕಲಿ ಪಾಸ್ ಸೃಷ್ಟಿಸಿ ಕಾರು ಚಾಲನೆ ವೇಳೆ ಎಡಿಸಿಗೆ ಸಿಕ್ಕಿಬಿದ್ದ

ಶಾಸಕರ ಹೆಸರಲ್ಲಿ ನಕಲಿ ಪಾಸ್ ಸೃಷ್ಟಿಸಿ ಕಾರು ಚಾಲನೆ ವೇಳೆ ಎಡಿಸಿಗೆ ಸಿಕ್ಕಿಬಿದ್ದ

Spread the love

ಶಾಸಕರ ಹೆಸರಲ್ಲಿ ನಕಲಿ ಪಾಸ್ ಸೃಷ್ಟಿಸಿ ಕಾರು ಚಾಲನೆ ವೇಳೆ ಎಡಿಸಿಗೆ ಸಿಕ್ಕಿಬಿದ್ದ
ಹಾವೇರಿ:ಎ. 16 (ಕರ್ನಾಟಕ ವಾರ್ತೆ): ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕರ ಹೆಸರಿನಲ್ಲಿ ನಕಲಿ ಪಾಸ್ ಸೃಷ್ಟಿಸಿ ಗದಗ ಜಿಲ್ಲೆಯಿಂದ ಹಾವೇರಿಗೆ ಪ್ರವೇಶಮಾಡುತ್ತಿದ್ದ ಕಾರು ಚಾಲಕನೋರ್ವ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಕಲಿ ಪಾಸ್ ಸೃಷ್ಟಿಕರ್ತನ ಮೇಲೆ ಮೊಕದ್ದಮೆ ದಾಖಲಿಸಲು ಸೂಚನೆ ನೀಡಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ವೈದ್ಯಕೀಯ ಕಾರಣ ಹೊರತುಪಡಿಸಿ ಇತರ ಪ್ರಯಾಣಿಕರ ವಾಹನ ಓಡಾಟಕ್ಕೆ ನಿರ್ಭಂಧ ಹೆರಲಾಗಿದೆ. ವೈದ್ಯಕೀಯ ಕಾರಣಗಳಿದ್ದರೆ ಅಧಿಕೃತವಾಗಿ ಪಾಸ್ ಪಡೆದು ಪ್ರಯಾಣ ಮಾಡಬಹುದು. ಆದರೆ ದಿಲೀಪ್ ಬಂಕಾಪುರ ಎಂಬಾತ ಮಾರುತಿ ವಿಟಾರ್ ಬ್ರಿಜ್ (ಕೆಎ-27 ಎನ್ 4122) ಕಾರಿನ ಮೇಲೆ ಬ್ಯಾಡಗಿ ಶಾಸಕರು ಎಂದು ನಕಲಿ ಪಾಸ್ ಅಂಟಿಸಿಕೊಂಡು ಲಕ್ಷ್ಮೇಶ್ವರದಿಂದ ರಾಣೇಬೆನ್ನೂರಿಗೆ ಕುಟುಂಬದೊಂದಿಗೆ ಕಾರಿನಲ್ಲಿ ಪ್ರಯಾಣಮಾಡುತ್ತಿದ್ದ ಎನ್ನಲಾಗಿದೆ.
ಚೆಕ್‍ಪೋಸ್ಟ್‍ಗಳ ತಪಾಸಣೆ ವೇಳೆಯಲ್ಲಿ ಈ ಕಾರ್‍ನ್ನು ಗಮನಿಸಿದ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರು ಕಾರ್ ತಡೆದು ವಿಚಾರಣೆ ನಡೆಸಿದ್ದಾರೆ. ಕಾರಿನ ಮೇಲಿದ್ದ ಶಾಸಕರ ಹೆಸರಿನ ಬಣ್ಣದ ಪಾಸ್ ಅಸಲಿ ಕುರಿತಂತೆ ಸಂಶಯಗೊಂಡು ಸ್ಥಳದಲ್ಲೇ ಶಾಸಕರಿಗೆ ಕರೆಮಾಡಿ ಮಾಹಿತಿ ಪಡೆದಿದ್ದಾರೆ. ಈ ವೇಳೆಯಲ್ಲಿ ಶಾಸಕರು ಯಾರಿಗೂ ಪಾಸ್ ನೀಡಿಲ್ಲ ಎಂಬ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ನಕಲಿ ಪಾಸ್ ಸೃಷ್ಟಿಸಿ ಕಾರು ಚಾಲನೆ ಮಾಡುತ್ತಿದ್ದವನ ಮೇಲೆ ಮೊಕದ್ದಮೆ ದಾಖಲಿಸಿ ಕಾರು ವಶಪಡಿಸಿಕೊಳ್ಳಲು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಾಗಿ ಅವರು ತಿಳಿಸಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ