Breaking News
Home / ಜಿಲ್ಲೆ / ಕಲಬುರ್ಗಿ / ಕಲಬುರಗಿ ಯುವಕನಿಂದ ಏಕಕಾಲಕ್ಕೆ ಇಬ್ಬರಿಗೆ ಆಮ್ಲಜನಕ ಒದಗಿಸುವ ವೆಂಟಿಲೇಟರ್‌ ವಿನ್ಯಾಸ

ಕಲಬುರಗಿ ಯುವಕನಿಂದ ಏಕಕಾಲಕ್ಕೆ ಇಬ್ಬರಿಗೆ ಆಮ್ಲಜನಕ ಒದಗಿಸುವ ವೆಂಟಿಲೇಟರ್‌ ವಿನ್ಯಾಸ

Spread the love

ಕೊರೊನಾ ಸೋಂಕು ಜಗತ್ತಿನಾದ್ಯಂತ ಹಬ್ಬಿದೆ. ಒಂದು ಲಕ್ಷಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿದೆ. ಶ್ವಾಸಕೋಶ ದುರ್ಬಲವಾಗಿರುವವರ ಪಾಲಿಗೆ ಈ ಸೋಂಕು ಮಾರಣಾಂತಿಕವಾಗಿರುತ್ತದೆ. ಇದರಿಂದ ಪರಾಗಲು ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸಬೇಕು. ಈಗ ಹಾಲಿ ಇರುವ ವೆಂಟಿಲೇಟರ್‌ ಏಕಕಾಲದಲ್ಲಿ ಒಬ್ಬರಿಗೆ ಮಾತ್ರ ಬಳಸಬಹುದು.
ಕಲಬುರಗಿ ಮೂಲದ ಯುವ ಎಂಜಿನಿಯರೊಬ್ಬರು ಏಕಕಾಲದಲ್ಲಿ ಆಮ್ಲಜನಕ ಪೂರೈಸುವ ಟು-ವೇ-ವೆಂಟಿಲೇಟರ್‌ ವಿನ್ಯಾಸಗೊಳಿಸಿದ್ದಾರೆ. ಇದೊಂದು ವಿನೂತನ ಪ್ರಯತ್ನವಾಗಿದೆ. ಇದನ್ನು ಕಲಬುರಗಿ ಮೂಲದ ಕೌಶಿಕ್‌ ಮುದ್ದಾ ರೂಪಿಸಿದ್ದಾರೆ.
ಏಕಕಾಲದಲ್ಲಿಇದು 3-ಡಿ ಮುದ್ರಿತ ಕವಾಟದಂತಹ ರಚನೆಯಾಗಿದ್ದು, ಇಬ್ಬರು ರೋಗಿಗಳ ನಡುವೆ ಆಮ್ಲಜನಕದ ಹರಿವನ್ನು ವಿಭಜಿಸುತ್ತದೆ. ಮೊದಲು ಒಂದು ವೆಂಟಿಲೇಟರ್‌ಗೆ ಒಂದೇ ಸ್ಪ್ಲಿಟರ್‌ ಇರುತ್ತಿದ್ದವು. ಈಗ ಎರಡು ಅಳವಡಿಸಲಾಗಿದೆ. ಇಬ್ಬರೂ ರೋಗಿಗಳಿಗೆ ಸಮಾನವಾಗಿ ಆಮ್ಲಜನಕ ಪೂರೈಸುತ್ತದೆ. ಒಂದು ವೇಳೆ ಒಬ್ಬರ ಸ್ಥಿತಿ ಗಂಭೀರವಾಗಿದ್ದರೆ, ಇನ್ನೊಬ್ಬರದು ಕಡಿಮೆ ಅಪಾಯವಾಗಿದ್ದರೆ ಆಮ್ಲಜನಕ ಪೂರೈಕೆಯನ್ನು ಅಗತ್ಯಕ್ಕೆ ತಕ್ಕಂತೆ ಬದಲಿಸಲು ಗುಂಡಿಯನೂ್ನ ಅಳವಡಿಸಲಾಗಿದೆ ಎನ್ನುತ್ತಾರೆ ಕೌಶಿಕ್‌. ಒಬ್ಬ ರೋಗಿಯ ಗಾಳಿ ಇನ್ನೊಬ್ಬರಿಗೆ ಹರಡದಂತೆ ತಡೆಯಲು ಎರಡು ನಾನ್‌ ರಿಟರ್ನ್‌ ವಾಲ್ವ್‌ (ಎನ್‌ಆರ್‌ವಿ) ಅಳವಡಿಸಲಾಗಿದೆ. ಇಬ್ಬರಿಗೆ ಆಕ್ಸಿಜನ್‌ ಹೇಗೆ?:
30 ಸಾವಿರ ವೆಂಟಿಲೇಟರ್‌ ಉಚಿತ ವಿತರಣೆ:

ದೇಶದ ಎಲ್ಲ ರಾಜ್ಯಗಳಲ್ಲಿರುವ ಆಸ್ಪತ್ರೆಗಳಿಗೆ ಈ ವೆಂಟಿಲೇಟರ್‌ ಗಳನ್ನು ಉಚಿತವಾಗಿ ನೀಡಲು ಮುಂದಾಗಿದ್ದಾರೆ. ಅಂದಾಜು 60-70 ಲಕ್ಷ ರೂ. ವೆಚ್ಚವಾಗಲಿದೆ. ಈಗಾಗಲೇ ಭಾರತೀಯ ಸೇನಾ ಆಸ್ಪತ್ರೆ, ಒಡಿಶಾ, ತೆಲಂಗಾಣ, ಕನಾರ್‍ಟಕ ಸೇರಿದಂತೆ ಹಲವು ರಾಜ್ಯಗಳು ಸಂಪರ್ಕಿಸಿದ್ದು, ಅವುಗಳಿಗೆ ನೀಡಲಾಗುತ್ತಿದೆ.
ಮೋದಿಯಿಂದ ಶಹಬ್ಬಾಸ್‌ ಕೌಶಿಕ್‌ ಮೂಲತಃ ಕಲಬುರಗಿಯವರಾಗಿದ್ದು, ಬೆಂಗಳೂರಿನಲ್ಲಿ ಎಥೆರಿಯಲ್‌ ಮಶಿನ್ಸ್‌ ಎಂಬ ಕಂಪನಿಯನ್ನು ಸ್ಥಾಪಿಸಿದ್ದಾರೆ. ಇವರು ವಿನ್ಯಾಸಗೊಳಿಸಿದ್ದ ‘5 ಡಿ ಪ್ರಿಂಟರ್‌’ ಅನ್ನು ಕಂಡು ಪ್ರಧಾನಿ ನರೇಂದ್ರ ಮೋದಿ ಅವರು ಶಹಬ್ಬಾಸ್‌ ಎಂದಿದ್ದರು.


Spread the love

About Laxminews 24x7

Check Also

ಸುವರ್ಣಸೌಧದ ಹಾಲ್‌ನಲ್ಲಿ 10 ಮಂದಿ ಗಣ್ಯರ ಭಾವಚಿತ್ರ ಅಳವಡಿಸಲು ಸ್ಪೀಕರ್​ಗೆ ರಾಯರೆಡ್ಡಿ ಮನವಿ

Spread the loveಬೆಳಗಾವಿ: ಸಾವರ್ಕರ್ ಫೋಟೋ ತೆರವಿನ ಕೂಗಿನ‌ ಮಧ್ಯೆ ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಸುವರ್ಣಸೌಧ ಸಭಾಭವನದಲ್ಲಿ ಗಣ್ಯರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ