Breaking News
Home / ರಾಜ್ಯ / ಕೋತಿಗಳ ಕಾಟಕ್ಕೆ ಹೈರಾಣಾದ ಗದಗದ ಪಾಪನಾಶಿ ಗ್ರಾಮಸ್ಥರು

ಕೋತಿಗಳ ಕಾಟಕ್ಕೆ ಹೈರಾಣಾದ ಗದಗದ ಪಾಪನಾಶಿ ಗ್ರಾಮಸ್ಥರು

Spread the love

ಗದಗ (ಜ. 2): ಗದಗ ಜಿಲ್ಲೆಯ ಪಾಪನಾಶಿ ಗ್ರಾಮದ ಜನರಿಗೆ ನೆಮ್ಮದಿಯಿಂದ ಜೀವನ ನಡೆಸಲು ಆಗದಂತಹ ಪರಿಸ್ಥಿತಿ ಎದುರಾಗಿದೆ. ಇಲ್ಲಿನ ಜನರು ಮನೆಯಿಂದ ಹೊರಗಡೆ ಬರಲು ಭಯ ಪಡುತ್ತಿದ್ದಾರೆ. ಅದರಲ್ಲೂ ಮಕ್ಕಳು, ಮಹಿಳೆಯರು ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡೆ ಓಡಾಡಬೇಕು. ಅಷ್ಟೊಂದು ಭಯಾನಕ ವಾತಾವರಣ ನಿರ್ಮಾಣವಾಗುವಂತೆ ವಾನರ ಸೈನ್ಯ ಮಾಡಿದೆ. ಹೌದು, ಕೋತಿಗಳ ಕಾಟಕ್ಕೆ ಇಡೀ ಗ್ರಾಮದ ಜನರು ಹೈರಾಣಾಗಿದ್ದಾರೆ.

ಮಂಗಗಳ ಚೇಷ್ಟೆ ನೋಡಲು ಚಂದ. ಆದರೆ, ಅವುಗಳ ಉಪಟಳ ಹೆಚ್ಚಾದರೆ ಬದುಕು ಸಾಗಿಸೋದು ದುರ್ಬಲವಾಗುತ್ತದೆ. ಈಗ ಆಗಿದ್ದೂ ಅದೇ. ಗದಗ ತಾಲೂಕಿನ ಪಾಪನಾಶಿ ಗ್ರಾಮದ ಜನರು ಮಂಗಗಳ ಕಾಟಕ್ಕೆ ಬೇಸತ್ತು ಹೋಗಿದ್ದಾರೆ. ಇಲ್ಲಿ ನೂರಾರು ಮಂಗಗಳು ಬೀಡುಬಿಟ್ಟಿದ್ದು, ಗ್ರಾಮಸ್ಥರ ನೆಮ್ಮದಿಯನ್ನು ಹಾಳು ಮಾಡಿವೆ. ಮನೆಯಿಂದ ಮಕ್ಕಳು, ಮಹಿಳೆಯರು ಹೊರಗಡೆ ಬಂದರೆ ಸಾಕು ಅಟ್ಯಾಕ್ ಮಾಡಿ ಅವರ ಹತ್ತಿರ ಇರೋ ವಸ್ತುಗಳನ್ನು ಕಸಿದುಕೊಂಡು ಹೋಗುತ್ತವೆ.ಮನೆಯ ಬಾಗಿಲು ಓಪನ್ ಮಾಡಿದರೆ ಸಾಕು ವಾನರ ಸೈನ್ಯ ಮನೆಗೆ ಎಂಟ್ರಿ ನೀಡಿ ಮನೆಯಲ್ಲಿನ ವಸ್ತುಗಳನ್ನು ಹಾಳು ಮಾಡುತ್ತವೆ. ಹಾಗೇ ಮನೆಗಳ ವಿದ್ಯುತ್ ಲೈನ್, ಕೇಬಲ್ ಲೈನ್ ಹಾಳು ಮಾಡ್ತಾ ಇವೆ. ಬಟ್ಟೆಗಳನ್ನು ಹೊರಗಡೆ ಹಾಕಿದ್ರೆ ಅವುಗಳನ್ನು ಸಹ ಹಾಳು ಮಾಡ್ತಾ ಇವೆ. ಹೀಗಾಗಿ ಮಂಗಗಳ ಕಾಟಕ್ಕೆ ಜನರು ಬೇಸತ್ತು ಹೋಗಿದ್ದಾರೆ. ನಮಗೆ ಈ ಊರಿನ ಸಹವಾಸವೇ ಬೇಡ ನಾವೇ ಬೇರೆ ಊರಿಗೆ ಹೋಗಬೇಕು ಅಂತ ವಿಚಾರ ಮಾಡುತ್ತಿದ್ದಾರೆ ಈ ಗ್ರಾಮಸ್ಥರು.

ಈ ಗ್ರಾಮದಲ್ಲಿ ಜನರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಂಗಗಳೇ ಓಡಾಡುತ್ತಿವೆ. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಂಗಗಳು ಲಗ್ಗೆ ಇಟ್ಟಿವೆ. ಆ ಓಣಿಯಿಂದ ಮಂಗಗಳನ್ನು ಓಡಿಸಿದ್ರೆ, ಇನ್ನೊಂದು ಓಡಿ ಬಂದು ಉಪಟಳ ಮುಂದುವರೆಸುತ್ತಿವೆ. ಗ್ರಾಮದಿಂದ ಓಡಿಸಿದ್ರೆ ಎಲ್ಲಾ ಮಂಗಗಳು ಜಮೀನುಗಳಿಗೆ ಹೋಗಿ ಜಮೀನಿನಲ್ಲಿ ಬೆಳೆದ ಬೆಳೆಯನ್ನು ಹಾಳು ಮಾಡ್ತಾಯಿವೆ. ಹೀಗಾಗಿ ಈ ವಾನರ ಸೈನ್ಯಕ್ಕೆ ಗ್ರಾಮಸ್ಥರು ಹೈರಾಣಾಗಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ