Breaking News
Home / ರಾಜ್ಯ / ರಾಜ್ಯದಲ್ಲಿ ಈವರೆಗೆ ಮೂವರು ಡಿವೈಎಸ್‍ಪಿಗಳ ಆತ್ಮಹತ್ಯೆ

ರಾಜ್ಯದಲ್ಲಿ ಈವರೆಗೆ ಮೂವರು ಡಿವೈಎಸ್‍ಪಿಗಳ ಆತ್ಮಹತ್ಯೆ

Spread the love

ಬೆಂಗಳೂರು, ಡಿ.17- ಕಳೆದ ರಾತ್ರಿ ಸಿಐಡಿ ಡಿವೈಎಸ್‍ಪಿ ವಿ.ಲಕ್ಷ್ಮೀ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವೂ ಸೇರಿದಂತೆ ರಾಜ್ಯದಲ್ಲಿ ಈವರೆಗೂ ಮೂರು ಮಂದಿ ಡಿವೈಎಸ್‍ಪಿಗಳು ಆತ್ಮಹತ್ಯೆ ಮೂಲಕ ಜೀವ ಕಳೆದುಕೊಂಡಂತಾಗಿದೆ. ಲಕ್ಷ್ಮೀ ಅವರಿಗೂ ಮೊದಲು ಇಬ್ಬರು ಡಿವೈಎಸ್‍ಪಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಎರಡು ಪ್ರಕರಣಗಳು ಭಾರೀ ಚರ್ಚೆಗೆ ಗ್ರಾಸವಾಗಿದ್ದವು.

2016 ಜುಲೈ 5ರಂದು ಚಿಕ್ಕಮಗಳೂರು ಗ್ರಾಮಾಂತರ ಉಪವಿಭಾಗದಲ್ಲಿ ಡಿವೈಎಸ್‍ಪಿ ಆಗಿದ್ದ ಕಲ್ಲಪ್ಪ ಹಂಡಿಬಾಗ್ ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಮುರ್‍ಗೋಡು ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದ್ದ ಪ್ರಕರಣವೊಂದರಲ್ಲಿ ಕಲ್ಲಪ್ಪ ಅವರ ಹೆಸರು ಸೇರ್ಪಡೆಯಾಗಿದ್ದರಿಂದ ವಿಚಾರಣೆ ನಡೆಯುತ್ತಿತ್ತು. ಇದರಿಂದ ಹೆದರಿದ ಕಲ್ಲಪ್ಪ ನೇಣಿಗೆ ಶರಣಾಗಿದ್ದರು.

ಇನ್ನು 2017ರ ಜುಲೈ 7ರಂದು ಮಡಕೇರಿಯ ಲಾಡ್ಜ್ ಒಂದರಲ್ಲಿ ಡಿವೈಎಸ್‍ಪಿ ಎಂ.ಕೆ.ಗಣಪತಿ ರಿವಾಲ್ವಾರ್‍ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.  ಕರಣವೊಂದರ ವಿಚಾರಣೆ ನೆಪದಲ್ಲಿ ನನಗೆ ಇಲಾಖೆಯ ಇಬ್ಬರು ಹಿರಿಯ ಅಧಿಕಾರಿಗಳು ಮತ್ತು ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಕಿರುಕುಳ ನೀಡುತ್ತಿದ್ದಾರೆ ಎಂದು ಆತ್ಮಹತ್ಯೆಗೂ ಮುನ್ನಾ ಚಾನೆಲ್‍ವೊಂದಕ್ಕೆ ಸಂದರ್ಶನದ ಮೂಲಕ ಹೇಳಿಕೆ ನೀಡಿದ್ದರು.

ಈ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿತ್ತು, ಗೃಹ ಸಚಿವರಾಗಿದ್ದ ಜಾರ್ಜ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಸಿಬಿಐ ತನಿಖೆಯೂ ನಡೆದಿತ್ತು.  ಇದಕ್ಕೂ ಮೊದಲು ಬಳ್ಳಾರಿ ಜಿಲ್ಲೆಯಲ್ಲಿ ಡಿವೈಎಸ್‍ಪಿ ಆಗಿದ್ದ ಅನುಪಮ ಶೆಣೈ ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪವನ್ನು ವಿರೋಧಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ಸ್ಮರಿಸಿಕೊಳ್ಳಬಹುದು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ