Breaking News
Home / ಜಿಲ್ಲೆ / “ಮನೆ ಮನೆಯಲ್ಲೂ ಪೋಷಣ್ ಪಕ್ವಾಡ್”

“ಮನೆ ಮನೆಯಲ್ಲೂ ಪೋಷಣ್ ಪಕ್ವಾಡ್”

Spread the love

“ಮನೆ ಮನೆಯಲ್ಲೂ ಪೋಷಣ್ ಪಕ್ವಾಡ್”

ನಿಪ್ಪಾಣಿ ಮತಕ್ಷೇತ್ರದ ಯಮಗರ್ಣಿ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯತ ಕಟ್ಟಡದಲ್ಲಿ ತಾಲೂಕ ಆಡಳಿತ, ತಾಲೂಕ ಪಂಚಾಯತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜಿ, ಯವರ ಪೋಷಣ ಅಭಿಯಾನದ ಮುಂದವರೆದ ಪೋಷಣ ಪಕ್ವಾಡ್ ಯೋಜನೆಯ ತಿಳವಳಿಕೆ ಕಾರ್ಯಕ್ರಮದಲ್ಲಿ *ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ, ಯವರು ಭಾಗಿಯಾಗಿ, ತಿಳುವಳಿಕೆ ನೀಡಿದರು.
.
ತಾಯಿ ಹಾಗೂ ಮಗುವಿಗೆ ಪೌಷ್ಟಿಕ ಆಹಾರ ನೀಡುವುದು ಈ ಯೋಜನೆಯ ಮುಖ್ಯ ಆಶಯ‌. ಗರ್ಭಿಣಿಯರು, ಬಾಣಂತಿಯರು, 6 ವರ್ಷದೊಳಗಿನ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ಹೋಗಲಾಡಿಸವುದು ಮತ್ತು ಅಂಗನವಾಡಿಗಳಿಗೆ ಮಕ್ಕಳನ್ನು ಸೇರಿಸುವ ಮೂಲ ಉದ್ದೇಶ ಪೋಷಣ ಪಕ್ವಾಡ್ ಯೋಜನೆ ಹೊಂದಿದೆ‌. ಈ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಮಾರ್ಚ್ 8 ರಿಂದ ಮಾರ್ಚ್ 20ರ ವರೆಗೆ ಜನರಲ್ಲಿ ಜಾಗೃತಿ ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ‌ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಪಂ ಸದಸ್ಯರಾದ ಶ್ರೀಮತಿ ಅನಿತಾ ದೇಸಾಯಿ, ಗ್ರಾಪಂ ಅಧ್ಯಕ್ಷರಾದ ಶ್ರೀಮತಿ ವೈಶಾಲಿ ಕಾಂಬಳೆ , ಶ್ರೀಮತಿ ತೇಜಸ್ವಿನಿ ಪಾಟೀಲ, ಶ್ರಿಮತಿ ಸವಿತಾ ಮೋರೆ, ಶ್ರಿಮತಿ ಅಶ್ವಿನಿ ತಾಸಗಾವೆ, ಶ್ರಿಮತಿ ಪರವಿನ ಪಕಡಿ, ಶ್ರಿಮತಿ ಪರವಿನ ಮಕಾಂದರ, ಶ್ರಿಮತಿ ವಿಧ್ಯಾ ತಾಸಗಾವೆ, ಮೇಲ್ವಿಚಾರಕಿರಾದ ಶ್ರಿಮತಿ ಶಶಿಕಲಾ ಬಣ್ಣೆ, ಹಾಗೂ ಅಂಗನವಾಡಿ ಕಾರ್ಯಕರ್ತರು, ಮೇಲ್ವಿಚಾರಕರು, ಮಹಿಳೆಯರು, ಗ್ರಾಮಸ್ಥರು ಉಪಸ್ಥಿತರಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ