Breaking News
Home / ಜಿಲ್ಲೆ / ಮಹೇಶ ಫೌಂಡೇಶನ’ಗೆ ಬೆಳಗಾವಿಯ ವಡಗಾಂವ’ನ ಪಿಎಸ್‌ಐ ಶ್ರೀಮತಿ ಕೃಷ್ಣವೇಣಿ ಸಿ ಜಿ ಅವರು ಸ್ಪೂರ್ತಿದಾಯಕ ಮಾತುಕತೆ..

ಮಹೇಶ ಫೌಂಡೇಶನ’ಗೆ ಬೆಳಗಾವಿಯ ವಡಗಾಂವ’ನ ಪಿಎಸ್‌ಐ ಶ್ರೀಮತಿ ಕೃಷ್ಣವೇಣಿ ಸಿ ಜಿ ಅವರು ಸ್ಪೂರ್ತಿದಾಯಕ ಮಾತುಕತೆ..

Spread the love

ಮಹೇಶ ಫೌಂಡೇಶನ’ಗೆ ಬೆಳಗಾವಿಯ ವಡಗಾಂವ’ನ ಪಿಎಸ್‌ಐ ಶ್ರೀಮತಿ ಕೃಷ್ಣವೇಣಿ ಸಿ ಜಿ ಅವರು ಸ್ಪೂರ್ತಿದಾಯಕ ಮಾತುಕತೆಯಲ್ಲಿ ತಮ್ಮ ವ್ಯಕ್ತಿತ್ವ ಹಾಗೂ ಜೀವನದಲ್ಲಿ ಆದ ಅನುಭವದ ಪ್ರಯಾಣವನ್ನು ನಮ್ಮ ಮಕ್ಕಳು ಮತ್ತು ತಂಡದ ಸದಸ್ಯರೊಂದಿಗೆ ಹಂಚಿಕೊಂಡರು.

ಸರ್ಕಾರಿ ಶಾಲಾ ಶಿಕ್ಷಕರಾಗಿರುವ ತಂದೆಯ ಕಿರಿಯ ಮಗಳಾಗಿ ಜನಿಸಿದ ಇವರು, ನಾವೆಲ್ಲರೂ ಆನಂದಿಸುವಂತೆಯೇ ಅವರ ಜೀವನವನ್ನು ಸಹ ಆನಂದಿಸಿದ್ದಾರೆ.

ಉನ್ನತ ಶಿಕ್ಷಣವನ್ನು ಪಡೆಯಲು ಮತ್ತು ಶಿಕ್ಷಕರಾಗಲು ಧಾರವಾಡಕ್ಕೆ ಕಳುಹಿಸಿದಾಗ ಅವರ ಜೀವನವು ಒಂದು ತಿರುವು ಪಡೆದುಕೊಂಡಿತು. ಅಲ್ಲಿ ಅವರು ಖರ್ಚುಗಳಿಗಾಗಿ ತನ್ನ ತಂದೆಯಿಂದ ಹಣವನ್ನು ಕೇಳಲು ಇಷ್ಟಪಡದೆ ಇದ್ದಿದ್ದರಿಂದ ಸ್ಟೇಷಿನರಿ ಅಂಗಡಿ ಮತ್ತು ಸರ್ವೇಯರ್ ಆಗಿ ಕೆಲಸ ಮಾಡಿ ತಮ್ಮ ಖರ್ಚನ್ನು ನೀಗಿಸಿಕೊಳ್ಳುತ್ತಿದ್ದರು . ಕೆಲವು ಜನರ ಸಲಹೆಗಳಿಂದ ಮತ್ತು ತಮ್ಮ ಪ್ರಯತ್ನಗಳಿಂದ ಇವರು ಪೊಲೀಸ ಆದರು. ಹೋರಾಟಗಳು ಅವರನ್ನು ಬಲವಾದ ಮತ್ತು ಧೈರ್ಯಶಾಲಿ ಮಹಿಳೆಯನ್ನಾಗಿ ಮಾಡಿತು ಮತ್ತು ಜೀವನವು ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಒಂದು ಅವಕಾಶವನ್ನು ನೀಡಿತು.

ಶ್ರೀಮತಿ ಕೃಷ್ಣವೇಣಿ ಅವರು ಮಹೇಶ ಫೌಂಡೇಶನ’ನ ಎಲ್ಲಾ ಮಕ್ಕಳು ಮತ್ತು ತಂಡದ ಸದಸ್ಯರನ್ನು ತಮ್ಮ ಪ್ರೇರಕ ಮಾತುಗಳಿಂದ ಪ್ರೇರೇಪಿಸಿದರು. ನಮ್ಮ ತಂಡದ ವತಿಯಿಂದ ಶ್ರೀಮತಿ ಕೃಷ್ಣವೇಣಿ ಅವರಿಗೆ ಧನ್ಯವಾದಗಳನ್ನು ಕೋರುತ್ತೇವೆ.


Spread the love

About Laxminews 24x7

Check Also

ಚಿಕ್ಕೋಡಿ: ಎಂದೂ ಬತ್ತದ ರಾಮಲಿಂಗೇಶ್ವರ ಬಾವಿ

Spread the love ಚಿಕ್ಕೋಡಿ: ತಾಲ್ಲೂಕಿನ ಉಮರಾಣಿ ಹೊರವಲಯದಲ್ಲಿರುವ ರಾಮಲಿಂಗ ದೇವಸ್ಥಾನ ಪೌರಾಣಿಕ ಹಾಗೂ ಐತಿಹಾಸಿಕ ಮಹತ್ವ ಹೊಂದಿದೆ. ಇಡೀ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ