Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಅಂತೂ ಈಡೇರಿತು ಜಾರಕಿಹೊಳಿ ಕುಟುಂಬದ ಆಸೆ..!!

ಅಂತೂ ಈಡೇರಿತು ಜಾರಕಿಹೊಳಿ ಕುಟುಂಬದ ಆಸೆ..!!

Spread the love

ಅಂತೂ ಈಡೇರಿತು ಜಾರಕಿಹೊಳಿ ಕುಟುಂಬದ ಆಸೆ..!!

ಜಾರಕಿಹೊಳಿ ಕುಟುಂಬದಲ್ಲಿ ಮನೆ ಮಾಡಿತು ಸಂಭ್ರಮ/ಸಂತೋಷ ಜಾರಕಿಹೊಳಿ ಅವರ ಮನೆಗೆ ಗಂಡು ಮಗುವಿನ ಆಗಮನ/ತಂದೆಯಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಮಗನ ಜನನ

ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ರಾಜ್ಯಾದ್ಯಂತ ಹೆಸರುವಾಸಿಯಾದ ಜಾರಕಿಹೊಳಿ ಕುಟುಂಬದಲ್ಲಿ ಈಗ ಸಂಭ್ರಮ ಮನೆ ಮಾಡಿದೆ.ದಿ.ಶ್ರೀ ಲಕ್ಷ್ಮಣ ಜಾರಕಿಹೊಳಿ ಅವರ ಹಿರಿಯ ಮೊಮ್ಮಗ ಸಂತೋಷ ರಮೇಶ ಜಾರಕಿಹೊಳಿ ಅವರ ಮನೆಗೆ ಇಂದು ಗಂಡು ಮಗುವಿನ ಆಗಮನವಾಗಿದೆ‌.

ಇಂದು ಸಂಜೆ ಸುಮಾರು 4:30 ಕ್ಕೆ ಗೋಕಾಕ ನಗರದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಸಂತೋಷ ಜಾರಕಿಹೊಳಿ ಅವರ ಶ್ರೀಮತಿ ಅಂಬಿಕಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ತಾತನ ಮೇಲೆ ಅಪಾರ ಪ್ರೀತಿ ಹೊಂದಿದ್ದ ಸಂತೋಷ ಜಾರಕಿಹೊಳಿ ಅವರು ಗಂಡು ಮಗು ಆದರೆ ಅಜ್ಜ ದಿ.ಶ್ರೀ ಲಕ್ಷ್ಮಣ ಜಾರಕಿಹೊಳಿ ಅವರು ಹುಟ್ಟಿ ಬಂದರು ಎಂದು ಭಾವಿಸುತ್ತೆನೆಂದು ತಮ್ಮ ಸಂಭಂದಿಕರಲ್ಲಿ ಹೇಳಿಕೊಂಡಿದ್ದರು.ಇದೀಗ ಅವರ ನಿರೀಕ್ಷೆಯಂತೆ ಗಂಡು ಮಗುವಿಗೆ ತಂದೆ ಆಗಿದ್ದಾರೆ.ಸದ್ಯ ಆಸ್ಪತ್ರೆಯಲ್ಲಿರುವ ತಾಯಿ ಶ್ರೀಮತಿ ಅಂಭಿಕಾ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ.


ಇನ್ನು ಈ ಸುದ್ದಿ ಜಾರಕಿಹೊಳಿ ಕುಟುಂಬದಲ್ಲಿ ಹರಡುತ್ತಿದ್ದಂತೆ ರಮೇಶ ಜಾರಕಿಹೊಳಿ ಅವರ ಶ್ರೀಮತಿ ಜಯಶ್ರೀ ರಮೇಶ ಜಾರಕಿಹೊಳಿ ಹಾಗೂ ಕುಟುಂಬದ ಸದಸ್ಯರು ಮತ್ತು ಸಂಭಂದಿಕರಾದ ಹೊಳೆವ್ವ ಸಿದ್ದಲಿಂಗಪ್ಪ ಸಾಯನ್ನವರ,ಸೇರಿದಂತೆ ಮಕ್ಕಳಾದ ಬಸವರಾಜ ಸಾಯನ್ನವರ,ಮತ್ತು ಅಶೋಕ ಸಾಯನ್ನವರ ಅವರು ತಮ್ಮ ಕುಟುಂಬ ಸಮೇತ ಆಸ್ಪತ್ರೆಗೆ ತೆರಳಿ ಪುಟ್ಟ ಕಂದಮ್ಮನನ್ನು ನೊಡಿ ಅಜ್ಜನ ಆಗಮನ ಆಗಿದೆ ಎಂದು ಫುಲ್ ಖುಷಿಯಾಗಿದ್ದಾರೆ.ಈ ಸಂದರ್ಭದಲ್ಲಿ ಸಂತೋಷ ಅವರ ಪತ್ನಿ ಅಂಭಿಕಾ ಅವರ ತಂದೆ ಶ್ರೀಧರ ನಾಯಿಕ ಹಾಗೂ ತಾಯಿ ಜಯಶ್ರೀ ನಾಯಿಕ,ಹಿರಿಯ ಸಹೋದರ ವಿರೇಶ ಅವರು ಕೂಡ ಉಪಸ್ಥಿತರಿದ್ದರು.

ಸರ್ಕಾರಿ ಆಸ್ಪತ್ರೆಯಲ್ಲೇ ತಂದೆಯಂತೆ ಮಗನ ಜನನ:

ರಮೇಶ ಜಾರಕಿಹೊಳಿ ಅವರು ಗೋಕಾಕ ಕ್ಷೇತ್ರದ ಶಾಸಕರಾಗಿದ್ದಾಗ ಅವರ ಹಿರಿಯ ಪುತ್ರ ಸಂತೋಷ ಜಾರಕಿಹೊಳಿ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟಿದ್ದರು.ಈಗ ಅವರ ಮಗ ಕೂಡ ಸರ್ಕಾರಿ ಆಸ್ಪತ್ರೆಯಲ್ಲಿ ಜನ್ಮ ತಾಳಿದ್ದಾನೆ.ಇದರಿಂದ ಜಾರಕಿಹೊಳಿ ಕುಟುಂಬದ ಸರಳತೆ ಎದ್ದು ಕಾಣುತ್ತಿದೆ.ಒಂದು ಕಡೆ ಜಾರಕಿಹೊಳಿ ಅಭಿಮಾನಿಗಳ ಮನಸ್ಸಿನಲ್ಲಿ ಖುಸಿ ಮನೆ ಮಾಡಿದರೆ ಮತ್ತೊಂದೆಡೆ ಅವರ ಸರಳತೆ ಅಭಿಮಾನಿಗಳಿಗೆ ಆದರ್ಶವಾಗಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ