Breaking News

ಸರಳ #ವಿವಾಹದೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ #ಚೇತನ್_ಹಾಗು_ಮೇಘ ದಂಪತಿ.

Spread the love

ಬೆಂಗಳೂರು: ನಟ ಚೇತನ್ ಅವರು ತನ್ನ ಬಾಳ ಸಂಗಾತಿ ಮೇಘ ಅವರೊಂದಿಗೆ ಗಾಂಧಿನಗರದ ಉಪ ರಿಜಿಸ್ಟ್ರಾರ್ ಕಛೇರಿಯಲ್ಲಿ ಇಂದು ಸರಳ ವಿವಾಹದ ಮೂಲಕ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಬಸವಣ್ಣ, ಪೆರಿಯಾರ್ ಮತ್ತು ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳಿಗೆ ಬದ್ದರಾಗಿ, ಸಿನಿಮಾದ ಜೊತೆ ಜೊತೆಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ನಟ ಚೇತನ್ ಅವರು, ಆಡಂಬರದ ಮದುವೆಯ ಗೋಜಿಗೆ ಹೋಗದೆ ಸಂಬಂಧಿಕರು, ಆತ್ಮೀಯ ಒಡನಾಡಿಗಳು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ರಿಜಿಸ್ಟರ್ ಮದುವೆಯಾಗಿದ್ದಾರೆ.

ಫೆಬ್ರವರಿ 2 ರಂದು ಕುಮಾರ ಉದ್ಯಾನದ ವಿನೋಭಭವೇ ಆಶ್ರಮದಲ್ಲಿ ಸಮಾರಂಭ ನಡೆಯಲಿದ್ದು, ನಂತರ ಭೋಜನ, ಸ್ವಾಗತಕ್ಕೆ ಸಿದ್ದತೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ