Breaking News
Home / 2021 / ಸೆಪ್ಟೆಂಬರ್ (page 6)

Monthly Archives: ಸೆಪ್ಟೆಂಬರ್ 2021

ಮೋದಿ ಮೊದಲ ಬಾರಿಗೆ ಪ್ರಧಾನಿಯಾಗಿದ್ದಾಗ ನಡೆದ ಗಲಾಟೆ; ಶಾಸಕ ಯತ್ನಾಳ್ ಸೇರಿ ಎಲ್ಲ 134 ಜನರು ಖುಲಾಸೆ

ಬೆಂಗಳೂರು: ವಿಜಯಪುರ ನಗರದಲ್ಲಿ 2014 ಮೇ 26 ರಂದು ನಡೆದಿದ್ದ ಗಲಾಟೆ ಪ್ರಕರಣದ ತೀರ್ಪು ಪ್ರಕಟಗೊಂಡಿದ್ದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಎಲ್ಲ 134 ಜನರು ಖುಲಾಸೆಗೊಂಡಿದ್ದಾರೆ. ಪ್ರಚೋದನಕಾರಿ ಭಾಷಣ ಮತ್ತು ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೇಲಿತ್ತು. ನಗರದ ಗಾಂಧಿಚೌಕ್ ಪೊಲೀಸರು ದಾಖಲಿಸಿದ್ದ ಎರಡು ಪ್ರಕರಣಗಳಲ್ಲಿ‌ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಎಲ್ಲರೂ ನಿರಪರಾಧಿಗಳು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು …

Read More »

ಸರಣಿ ಹಂತಕ, ಅತ್ಯಾಚಾರಿ, ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ

ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಉಮೇಶ್ ರೆಡ್ಡಿ ತಾಯಿ ಸಲ್ಲಿಸಿದ್ದ ಅರ್ಜಿ 2013 ರಲ್ಲಿ ತಿರಸ್ಕರಿಸಲ್ಪಟ್ಟಿತ್ತು. ತದನಂತರ ಗಲ್ಲು ಶಿಕ್ಷೆ ಜೀವಾವಧಿಯಾಗಿ ಮಾರ್ಪಡಿಸಲು ಉಮೇಶ್ ರೆಡ್ಡಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ. ಬೆಂಗಳೂರು: ವಿಕೃತಕಾಮಿ ಉಮೇಶ್ ರೆಡ್ಡಿಗೆ ಇಂದು ಕರ್ನಾಟಕ ಹೈಕೋರ್ಟ್​ನಿಂದ ಶಿಕ್ಷೆ ಪ್ರಮಾಣ ಪ್ರಕಟವಾಗಿದ್ದು, ಗಲ್ಲು ಶಿಕ್ಷೆ ಖಾಯಂಗೊಳಿಸಿದೆ.ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸಲು ಹೈಕೋರ್ಟ್ಗೆ ಉಮೇಶ್ ರೆಡ್ಡಿ ವಕೀಲ ಬಿ.ಎನ್. ಜಗದೀಶ್ ಮೂಲಕ ಅರ್ಜಿ ಸಲ್ಲಿಸಿದ್ದ. 10 ವರ್ಷಗಳಿಂದ ತನ್ನನ್ನು ಒಂಟಿಸೆರೆಯಲ್ಲಿಡಲಾಗಿದೆ. …

Read More »

ಮದ್ಯ ಪ್ರಿಯರಿಗೆ ಸಿಹಿ ಸುದ್ದಿ: ಅ.3 ರಿಂದ ಕ್ಲಬ್ ಪಬ್ ಓಪನ್

ಬೆಂಗಳೂರು: ಕೊರೊನಾ ಹಾವಳಿ ಕಡಿಮೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೇರಲಾಗಿದ್ದ ಲಾಕ್ಡೌನ್​​​ ಸಡಿಲಗೊಳಿಸಿ ಸಿಎಂ ಬಸವರಾಜ್​​ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ಅದರಲ್ಲೂ ಮದ್ಯ ಪ್ರಿಯರಿಗೆ ಗುಡ್​​ನ್ಯೂಸ್​​ ನೀಡಲಾಗಿದೆ. ಹೌದು, ಅಕ್ಟೋಬರ್​​​ 3ನೇ ತಾರೀಕಿನಿಂದಲೇ ಕ್ಲಬ್​​​, ಪಬ್​​​​​ ತೆರೆಯಲು ಅನುಮತಿ ನೀಡಲಾಗಿದೆ. ಈ ಬಗ್ಗೆ ಸುದ್ದಿಗಾರರ ಜೊತೆಗೆ ಮಾತಾಡಿದ ಸಿಎಂ​​ ಬೊಮ್ಮಾಯಿ, ‘ರಾಜ್ಯದಲ್ಲಿ ಸರಾಸರಿ 0.66 ಕೋವಿಡ್ ಪ್ರಮಾಣ ಇದೆ. ಸದ್ಯ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ಪಾಸಿಟಿವಿ ರೇಟ್​​ ಶೇ.1 ಕ್ಕಿಂತ …

Read More »

ಕಳೆದ ಒಂದೂವರೆ ವರ್ಷದಲ್ಲಿ ವೈದ್ಯಕೀಯ ನಿರ್ಲಕ್ಷ್ಯದ 153 ದೂರು ದಾಖಲು

ಬೆಂಗಳೂರು: ಕಳೆದ ಒಂದೂವರೆ ವರ್ಷಗಳಲ್ಲಿ, ಕರ್ನಾಟಕ ವೈದ್ಯಕೀಯ ಮಂಡಳಿ (ಕೆಎಂಸಿ) ವೈದ್ಯಕೀಯ ನಿರ್ಲಕ್ಷ್ಯ ಮತ್ತು ವೃತ್ತಿಪರ ದುರ್ನಡತೆಗೆ ಸಂಬಂಧಿಸಿದಂತೆ 153 ದೂರುಗಳನ್ನು ಸ್ವೀಕರಿಸಿದೆ ಎಂದು ತಿಳಿದುಬಂದಿದೆ. 2020 ರಲ್ಲಿ 88 ದೂರುಗಳನ್ನು ಸ್ವೀಕರಿಸಿದ್ದು, 2021 ರಲ್ಲಿ 65 ದೂರುಗಳನ್ನು ಆಗಸ್ಟ್ ತಿಂಗಳವರೆಗೆ ದಾಖಲಿಸಿಕೊಳ್ಳಲಾಗಿದೆ. ಅಂತೆಯೇ ಹೊಸ ದೂರುಗಳ ಕುರಿತು 84 ಪ್ರತಿವಾದಿಗಳು ಅಥವಾ ಆಸ್ಪತ್ರೆಗಳಿಂದ ಪ್ರಾಥಮಿಕ ವಿವರಣೆಗಳನ್ನು ಕೇಳಲಾಗಿದೆ. ಆದಾಗ್ಯೂ, ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಲಾದ ಕೌನ್ಸಿಲ್ ಚುನಾವಣೆ ರಿಟ್ ಅರ್ಜಿಯ ಕಾರಣದಿಂದಾಗಿ ಎಲ್ಲಾ …

Read More »

ಇಂಜಿನಿಯರಿಂಗ್ ಕೋರ್ಸ್ ಶುಲ್ಕ ಹೆಚ್ಚಳ ಇಲ್ಲ: ಸಚಿವ ಅಶ್ವತ್ಥನಾರಾಯಣ

ಬೆಂಗಳೂರು, ಸೆಪ್ಟಂಬರ್ 29: ಈ ಬಾರಿ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಶುಲ್ಕ ಹೆಚ್ಚಳ ಮಾಡದಂತೆ ನಿರ್ದೇಶನ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು. ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಶೇ.15ರಿಂದ ಶೇ.20 ರಷ್ಟು ಶುಲ್ಕ ಹೆಚ್ಚಳಕ್ಕೆ ಮನವಿ ಮಾಡಿವೆ. ಆದರೆ, ಕೊರೋನಾ ಮತ್ತು ಲಾಕ್‌ಡೌನ್‌ಗಳಿಂದಾಗಿ ಪೋಷಕರು ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ. ಈ ಸಂದರ್ಭದಲ್ಲಿ ಶುಲ್ಕ ಹೆಚ್ಚಳ ಮಾಡುವ ನಿರ್ಧಾರ ಸರಿಯಲ್ಲ. ಈ ಸಂಬಂಧ ಖಾಸಗಿ …

Read More »

ಶಿರೂರು ಮಠಕ್ಕೆ ಬಾಲ ಪೀಠಾಧಿಪತಿ ನೇಮಕ ವಿವಾದ: ಪಿಐಎಲ್ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು, ಸೆ.26: ಉಡುಪಿ ಶಿರೂರು ಮಠಕ್ಕೆ ಪೀಠಾಧಿಪತಿಯಾಗಿ ಅಪ್ರಾಪ್ತರ ವಯಸ್ಸಿನ ಬಾಲಕನನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಅಪ್ರಾಪ್ತ ಬಾಲಕನನ್ನು ಪೀಠಾಧಿಪತಿಯಾಗಿ ನೇಮಿಸಿರುವ ಕ್ರಮ ಪ್ರಶ್ನಿಸಿ ಮಠದ ಭಕ್ತ ಸಮಿತಿಯ ಕಾರ್ಯದರ್ಶಿ ಪಿ.ಲಾತವ್ಯ ಆಚಾರ್ಯ ಹಾಗೂ ಇತರ 4 ಮಂದಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ಚಂದ್ರ ಶರ್ಮಾ ಬುಧವಾರ ಪ್ರಕಟಿಸಿದ್ದಾರೆ. ಪೀಠಾಧಿಪತಿ ನೇಮಕ ವಿಚಾರದಲ್ಲಿ …

Read More »

ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ಯ ವಾರ್ಡ ನಂ. 29 ರಲ್ಲಿ “ಕಸ ವಿಂಗಡನೆ ಅಮೃತ ದಿನ” ಕಾರ್ಯಕ್ರಮದಲ್ಲಿ ಬಸವರಾಜ ದೇಶನೂರ ಮಾತನಾಡುತ್ತಿರುವುದು. 

ಗೋಕಾಕ  ;- ನಗರಸಭೆಯಿಂದ “ಸ್ವಚ್ಛ ಭಾರತ ಮಿಷಣ್’ ಯೋಜನೆಯಡಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ಯ ವಾರ್ಡ ನಂ. 29 ರಲ್ಲಿ ಬುಧವಾರದಂದು “ಕಸ ವಿಂಗಡನೆ ಅಮೃತ ದಿನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ದೇಶನೂರ ಅವರು ಮಾತನಾಡಿ, ನಗರವನ್ನು ಸ್ವಚ್ಛವಾಗಿಡುವ ಉದ್ದೇಶದಿಂದ ನಗರಸಭೆಯವರು ಕಸ ವಿಲೇವಾರಿ ಮಾಡುತ್ತಿದ್ದಾರೆ. ಈ ಕಾರ್ಯಕ್ಕೆ ಜನತೆಯು ನಗರಸಭೆಯವರು ತಿಳಿಸಿದಂತೆ ಒಣಕಸ, ಹಸಿಕಸ ಹಾಗೂ ಹಾನಿಕಾರಕ ಕಸವನ್ನು ಪ್ರತ್ಯೇಕಿಸಿ ನಗರಸಭೆಯ ವಾಹನಗಳಿಗೆ ನೀಡಬೇಕು. …

Read More »

: ನಮಗ್ಯಾಕೆ ಟಿಕೆಟ್ ಕೊಡಲ್ಲ? ನಮಗೆ ಯೋಗ್ಯತೆ ಇಲ್ವಾ? ಗಂಡಸ್ತನ‌ ಇಲ್ವಾ?: ಮಾನೆ ವಿರುದ್ಧ ತಹಶಿಲ್ದಾರ ವಾಗ್ದಾಳಿ

ಬೆಂಗಳೂರು : ನಮಗ್ಯಾಕೆ ಟಿಕೆಟ್ ಕೊಡಲ್ಲ? ನಮಗೆ ಯೋಗ್ಯತೆ ಇಲ್ವಾ? ಗಂಡಸ್ತನ‌ ಇಲ್ವಾ? ನಮಗೆ ಅರ್ಹತೆ ಇಲ್ವಾ? ಎಂದು 2018ರಲ್ಲಿ ಹಾನಗಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಶ್ರೀನಿವಾಸ್ ಮಾನೆ ವಿರುದ್ಧ ಮನೋಹರ್ ತಹಶಿಲ್ದಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮತ್ತೆ ಹಾನಗಲ್ ಕಾಂಗ್ರೆಸ್ ಟಿಕೆಟ್ ಕದನ ತಾರಕಕ್ಕೇರಿದ್ದು, ನಾಯಕರು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮಾನೆಗೆ ಟಿಕೆಟ್ ಕೊಡಬಾರದು ಎಂದು ತಹಶಿಲ್ದಾರ ಆಕ್ರೋಶ ಹೊರ ಹಾಕಿದ್ದರು. ಮಾನೆಗೆ ಟಿಕೆಟ್ ಕೊಟ್ಟರೆ ಚುನಾವಣೆಗೆ …

Read More »

ರಾಯಚೂರು: ಕೌಟುಂಬಿಕ ಕಲಹ; ಒಂದೇ ಮನೆಯ ಮೂವರ ಬರ್ಬರ ಕೊಲೆ‌‌

ರಾಯಚೂರು: ಸಮೀಪದ ಯರಮರಸ್ ಕ್ಯಾಂಪ್ ನಲ್ಲಿ ಕೌಟುಂಬಿಕ ಕಲಹದಿಂದ ಮೂವರ ಕೊಲೆಯಾದ ಧಾರುಣ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಒಂದೇ ಕುಟುಂಬದ ಸಂತೋಷಿ(45) ವೈಷ್ಣವಿ(18) ಮತ್ತು ಆರತಿ(16)ಎಂಬುವವರ ಕೊಲೆಯಾಗಿದೆ. ಅಳಿಯ ಸಾಯಿ ಎಂಬಾತನೆ ಅತ್ತೆ ಹೆಂಡತಿ ಹಾಗೂ ಸೊಸೆಯನ್ನು ಕೊಂದಿರಬಹುದು ಎಂದು ಶಂಕಿಸಲಾಗಿದೆ. ಕಳೆದ ಆರು ತಿಂಗಳ ಹಿಂದೆಯಷ್ಟೇ ಮಗಳು ವೈಷ್ಣವಿ ಮದುವೆ ಜರುಗಿತ್ತು. ಆದರೆ, ಅಳಿಯ ಮಗಳ ನಡುವೆ ಹೊಂದಾಣಿಕೆ ಇರಲಿಲ್ಲ. ಪದೇಪದೆ ಜಗಳ ಆಡುತ್ತಿದ್ದರು. ಕಳೆದ ಒಂದು ತಿಂಗಳ …

Read More »

ನಟನೆಯ ಕನಸು ಕಾಣುತ್ತಿದ್ದ ಮೌನಿ ರಾಯ್ ಇದಕ್ಕಾಗಿ ಮಾಡಿದ್ದೇನು ಗೊತ್ತಾ..?

ಬಾಲಿವುಡ್ ಕನಸು ಬೆನ್ನತ್ತಿ ಕಾಲೇಜು ವ್ಯಾಸಂಗಕ್ಕೆ ತಿಲಾಂಜಲಿ ಬಿಟ್ಟಿದ್ದ ಮೌನಿ ರಾಯ್ ಅಕ್ಷಯ್‌ ಕುಮಾರ್‌ ಜೊತೆಗೆ ‘ಗೋಲ್ಡ್’ ಚಿತ್ರದ ಮೂಲಕ ಬಾಲಿವುಡ್‌ಗೆ ಭರ್ಜರಿ ಎಂಟ್ರಿ ಕೊಟ್ಟು ಚಿತ್ರರಂಗದಲ್ಲಿ ಇದುವರೆಗೂ ಬಹು ದೂರ ಸಾಗಿ ಬಂದಿದ್ದಾರೆ. ಚಿತ್ರೋದ್ಯಮದಲ್ಲಿ ತಮ್ಮದೇ ಛಾಪು ಹೊಂದಿರುವ ಮೌನಿ, ಬಾಲಿವುಡ್‌ಗೆ ಬರಬೇಕಾದರೆ ತಾವೆಂತೆಂಥಾ ತ್ಯಾಗಗಳನ್ನು ಮಾಡಿದ್ದಾರೆ ಎಂಬ ಸಂಗತಿಯನ್ನು ಹಂಚಿಕೊಂಡಿದ್ದಾರೆ.   ನಟನೆಯ ಕನಸು ಕಾಣುತ್ತಿದ್ದ ಮೌನಿ, ಇದಕ್ಕಾಗಿ ತಮ್ಮ ಕಾಲೇಜು ವ್ಯಾಸಂಗ ತ್ಯಜಿಸಿ ಕನಸಿನ ನಗರಿಗೆ …

Read More »