Breaking News
Home / 2021 / ಸೆಪ್ಟೆಂಬರ್ (page 4)

Monthly Archives: ಸೆಪ್ಟೆಂಬರ್ 2021

ಅಡವಿಟ್ಟ ಮಾಂಗಲ್ಯ ಸರ ಬಿಡಿಸಿಕೊಳ್ಳಲು ಬಂದಾಗ ನಕಲಿ ಚಿನ್ನವೆಂದ ಬ್ಯಾಂಕ್ ಮ್ಯಾನೇಜರ್! ಮಹಿಳೆಯ ಕಣ್ಣೀರು

ಹಾಸನ: ಅಡವಿಡುವಾಗ ಅಸಲಿ ಬಂಗಾರವಾಗಿದ್ದ ಮಾಂಗಲ್ಯ ಸರ, ಇದೀಗ ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಬಂದಾಗ ನಕಲಿ ಚಿನ್ನ ಎನ್ನುತ್ತಿರುವ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಂಗಲ್ಯ ಸರ ಬಿಡಿಸಿಕೊಳ್ಳಲು ಬಂದ ಚನ್ನರಾಯಪಟ್ಟಣದ ಹಿರೇಹಳ್ಲಿ ಗ್ರಾಮದ ಜಯಮ್ಮ ಎಂಬಾಕೆ ಬ್ಯಾಂಕ್ ಮ್ಯಾನೇಜರ್ ಹೇಳಿದ್ದನ್ನು ಕೇಳಿ ಕಂಗಾಲಾಗಿದ್ದಾಳೆ. ಮಗನ ಕಾಯಿಲೆಗೆಂದು ವರ್ಷದ ಹಿಂದೆ ಜಯಮ್ಮ 30 ಗ್ರಾಂ ಮಾಂಗಲ್ಯದ ಸರವನ್ನು ಒಂದು ಲಕ್ಷದ ಮೂವತ್ತು ಸಾವಿರಕ್ಕೆ ಅಡವಿಟ್ಟಿದ್ದರು. ಇದೀಗ ಅಡವಿಟ್ಟಿದ್ದ …

Read More »

ದೇಶದಲ್ಲಿ ಇಂದು ಮತ್ತೆ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಏರಿಕೆ

ದೇಶದಲ್ಲಿ ಇಂದು ಮತ್ತೆ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಪೆಟ್ರೋಲ್ ದರ ಪ್ರತಿ ಲೀಟರ್ ಗೆ 24 ರಿಂದ 25 ಪೈಸೆಯಷ್ಟು ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 30 ರಿಂದ 35 ಪೈಸೆಯಷ್ಟು ಹೆಚ್ಚಳ ಕಂಡಿದೆ. ದೆಹಲಿ: ಲೀಟರ್ ಪೆಟ್ರೋಲ್ ದರ 101.64 ರೂ. ಆಗಿದ್ದು, ಡೀಸೆಲ್ ದರ 89.87 ರೂ. ತಲುಪಿದೆ. ಮಹಾರಾಷ್ಟ್ರ: ಲೀಟರ್ ಪೆಟ್ರೋಲ್ ದರ 107.71 ರೂ. ಆಗಿದ್ದು, ಡೀಸೆಲ್ ದರ 97.52 …

Read More »

ಶಾಹೀನ್ ಚಂಡಮಾರುತ- ಅ.3ರ ವರೆಗೆ ರಾಜ್ಯದಲ್ಲಿ ಭಾರೀ ಮಳೆ

ಬೆಂಗಳೂರು: ಶಾಹೀನ್ ಚಂಡಮಾರುತ ಹಿನ್ನೆಲೆ ಇಂದಿನಿಂದ ಅಕ್ಟೋಬರ್ 3 ರವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಾಳೆ ಶಾಹೀನ್ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಇಂದಿನಿಂದ ಕರ್ನಾಟಕದಲ್ಲೂ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಅ.3ರ ವರೆಗೂ ಕರ್ನಾಟಕದ ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.   ಇಂದಿನಿಂದ ಅ.3 ರವರೆಗೆ ಉಡುಪಿ, ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, …

Read More »

ಪಾರ್ಕಿನಲ್ಲಿ ಆಟ ಆಡುವಾಗ ವಿದ್ಯುತ್ ತಗುಲಿ ಬಾಲಕ ಸಾವು

ಕಲಬುರಗಿ: ಪಾರ್ಕ್ ನಲ್ಲಿ ಆಟ ಆಡುತ್ತಿರುವಾಗ ವಿದ್ಯುತ್ ತಂತಿ ತಗುಲಿ ಬಾಲಕ ಸಾವನ್ನಪ್ಪಿದ ಆಘಾತಕಾರಿ ಘಟನೆ ನಗರದ ಎನ್.ಜಿ.ಓ. ಕಾಲೋನಿಯ ಹನುಮಾನ್ ಮಂದಿರದ ಉದ್ಯಾನವನದಲ್ಲಿ ನಡೆದಿದೆ. ನಗರದ ಎನ್.ಜಿ.ಓ. ಕಾಲೋನಿಯ ಮಹಾದೇವಿ ಸುರೇಶ ದಂಪತಿ ಪುತ್ರ 6 ವರ್ಷದ ಸಿದ್ದು ಮೃತ ಬಾಲಕ. ವಿದ್ಯುತ್ ತಂತಿ ತಗಲಿ ಮೃತಪಟ್ಟಿದ್ದಾನೆ. ಹನುಮಾನ್ ಮಂದಿರದ ಉದ್ಯಾನವನದಲ್ಲಿನ ಹೈ ಮಾಸ್ಕ್ ದೀಪದ ವಿದ್ಯುತ್ ವೈರ್ ಕಟ್ ಆಗಿ ಬಿದ್ದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ. …

Read More »

ವಿದ್ಯಾರ್ಥಿಗಳು ತರಗತಿಗೆ ಚಕ್ಕರ್, ರೊಮ್ಯಾನ್ಸ್​ಗೆ ಹಾಜರ್

ಕೊಪ್ಪಳ: ಆತ ಪ್ರೇಮಿಯೇ ಇರಲಿ, ಪತಿಯೇ ಆಗಿರಲಿ. ತನ್ನ ಹೊರತಾಗಿ ಬೇರೊಂದು ಹೆಣ್ಣನ್ನು ಕಣ್ಣೆತ್ತಿ ನೋಡಿದ್ರೂ ಸಿಡಿಮಿಡಿಗೊಳ್ಳುವುದು ಭಾರತೀಯ ಹೆಣ್ಣು ಮಕ್ಕಳ ಹುಟ್ಟುಗುಣ. ಆದರೆ ಇಲ್ಲೊಂದು ಕಡೆ ಅಕ್ಕ ಪಕ್ಕ ಕುಳಿತು ಇಬ್ಬರು ಯುವತಿಯರನ್ನು ಒಬ್ಬನೇ ಮುದ್ದಾಡುವ ದೃಶ್ಯ ಸಾಮಾನ್ಯವಾಗಿದ್ದು, ಇದು ಸ್ವಾತಂತ್ರ್ಯನಾ? ಸ್ವೇಚ್ಚಾಚಾರವೇ ಎಂಬ ಪ್ರಶ್ನೆ ಮೂಡಿದೆ. ಕೊಪ್ಪಳದ ಗಂಗಾವತಿಯ ನ್ಯಾಯಾಧೀಶರ ನಿವಾಸ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹಿಂದಿನ ಜಾಗವನ್ನು ಕಾಲೇಜ್ ವಿದ್ಯಾರ್ಥಿಗಳು ಪ್ರಣಯದ ಅಡ್ಡ ಮಾಡಿಕೊಂಡಿದ್ದಾರೆ. …

Read More »

ಶಿಕ್ಷಣ ಕೇಂದ್ರಗಳೇ ಈಗ ಕೊರೊನಾ ಹಬ್..? ಒಂದೇ ಕಾಲೇಜಿನ 28 ವಿದ್ಯಾರ್ಥಿನಿಯರಿಗೆ ಪಾಸಿಟಿವ್..!

ಮಂಡ್ಯ: ಕೊರೊನಾದ ಮೂರನೇ ಅಲೆ ಆತಂಕದ ಮಧ್ಯೆ ಒಂದನೇ ತರಗತಿಯಿಂದ ಶಾಲೆ ಆರಂಭಿಸಲು ಸರ್ಕಾರ ಚರ್ಚೆ ನಡೆಸುತ್ತಿದೆ. ಆತಂಕದ ಬೆಳವಣಿಗೆ ಏನಂದರೆ ಕೆಲವೊಂದು ಶಾಲಾ-ಕಾಲೇಜುಗಳು ಕೊರೊನಾ ಹಾಟ್​ಸ್ಪಾಟ್ ಕೇಂದ್ರವಾಗುತ್ತಿವೆಯಾ ಅನ್ನೋ ಅನುಮಾನ ಶುರುವಾಗಿದೆ. ಇದೀಗ ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ 28 ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಕಾಲೇಜಿನ 412 ವಿಧ್ಯಾರ್ಥಿಗಳ ಪೈಕಿ 28 ಮಂದಿಗೆ ಸೋಂಕು ದೃಢವಾಗಿದೆ. ಸೋಂಕಿತರಿಗೆ ನಾಗಮಂಗಲ ಪಟ್ಟಣದ …

Read More »

₹13,165 ಕೋಟಿ ರಕ್ಷಣಾ ಉಪಕರಣಗಳ ಖರೀದಿಗೆ ರಾಜನಾಥ್​​ ಸಿಂಗ್​​ ಅನುಮೋದನೆ

ನವದೆಹಲಿ: ಸೇನಾ ಪಡೆಗಳಿಗೆ ಮತ್ತಷ್ಟು ಶಕ್ತಿ ತುಂಬಲು ರಕ್ಷಣಾ ಸ್ವಾಧೀನ ಮಂಡಳಿ ಮುಂದಾಗಿದೆ. ಹೀಗಾಗಿಯೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್​​ ಸಿಂಗ್​​​​ ಅಧ್ಯಕ್ಷತೆಯಲ್ಲಿ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ₹13,165 ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಉಪಕರಣಗಳನ್ನು ಖರೀದಿಸಲು ಅನುಮತಿ ನೀಡಿದೆ. ಭಾರತೀಯ ಮೂರು ಸೇನಾ ಪಡೆಗಳಿಗೂ ಎಎಲ್‌ಎಚ್‌ ಹೆಲಿಕಾಪ್ಟರ್‌ ಸೇರಿದಂತೆ ಹಲವು ರಕ್ಷಣಾ ಉಪಕರಣಗಳನ್ನು ಈ ಯೋಜನೆಯಡಿ ಖರೀದಿಸಲಾಗುತ್ತದೆ. ಈ ಕ್ರಮದಿಂದಾಗಿ ಸ್ಥಳೀಯವಾಗಿ ಅವಲಂಬನೆಯಾಗುವ ಮೂಲಕ ಆತ್ಮ ನಿರ್ಭರ …

Read More »

ಮೈಸೂರಲ್ಲಿ ದಸರಾ ಸಂಭ್ರಮ.. ರಾತ್ರಿ ಕಟ್ಟುನಿಟ್ಟಿನ ನೈಟ್ ಬೀಟ್​​ಗೆ DCP ಪಾಠ​..!

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಖಾಕಿ ಪಡೆ ಹೈ-ಅಲರ್ಟ್ ಆಗಿದೆ. ರಾತ್ರಿ ವೇಳೆ ಗಸ್ತು ಹೆಚ್ಚಿಸಿ, ಅಪರಾಧ ಪ್ರಕರಣಗಳ ಕಡಿವಾಣಕ್ಕೆ ಮುಂದಾಗಿದೆ. ನಗರದಲ್ಲಿ ಕಟ್ಟುನಿಟ್ಟಿನ ನೈಟ್ ಬೀಟ್ ಕಾರ್ಯಾಚರಣೆ ನಡೆಯುತ್ತಿದ್ದು, ಸಾರ್ವಜನಿಕರಿಗೆ ಮೈಸೂರು ಪೊಲೀಸರು ಅಭಯ ನೀಡುತ್ತಿದ್ದಾರೆ. ಜೊತೆಗೆ ನೈಟ್ ಬೀಟ್ ಸಂಬಂಧ ವಿವಿಧ ಠಾಣಾ ಸಿಬ್ಬಂದಿಗೆ ಡಿಸಿಪಿ ಮಾರ್ಗದರ್ಶನ ನೀಡಿದ್ದಾರೆ. ಸಾರ್ವಜನಿಕವಾಗಿ ರಸ್ತೆಯಲ್ಲೇ ಸಿಬ್ಬಂದಿಗೆ ಮಾರ್ಗದರ್ಶನವನ್ನ ಡಿಸಿಪಿ ಗೀತಾಪ್ರಸನ್ನ ನೀಡಿದ್ದಾರೆ. ರಾತ್ರಿ …

Read More »

ಮಹಾರಾಷ್ಟ್ರದಲ್ಲಿ ಮತ್ತೆ ಮಹಾ ಮಳೆ 13 ಸಾವು; 560ಕ್ಕೂ ಹೆಚ್ಚು ಮಂದಿಯ ರಕ್ಷಣೆ

ಮುಂಬೈ: ಗುಲಾಬ್​ ಚಂಡಮಾರುತದ ಪ್ರಭಾವದಿಂದ ಮಹಾರಾಷ್ಟ್ರದ ಹಲವೆಡೆ ಸುರಿದ ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು, ಈವರೆಗೆ ಒಟ್ಟು 13 ಜನ ಸಾವನ್ನಪ್ಪಿದ್ದಾರೆ. ಮರಾಠವಾಡ, ಮಹಾರಾಷ್ಟ್ರದ ಉತ್ತರ ಭಾಗಗಳಲ್ಲಿ ಮಳೆಗೆ ಅಪಾರ ಹಾನಿ ಉಂಟಾಗಿದೆ. ಎನ್​ಡಿಆರ್​ಎಫ್ ಪಡೆ ಸಂಕಷ್ಟದಲ್ಲಿ ಸಿಲುಕಿದ್ದ 560 ಮಂದಿಯನ್ನ ರಕ್ಷಣೆ ಮಾಡಿದೆ. 200ಕ್ಕೂ ಹೆಚ್ಚು ರಾಸುಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ಕೆಲವು ಮನೆಗಳಿಗೂ ಹಾನಿಯಾಗಿದೆ. ಭಾರೀ ಮಳೆ …

Read More »

ಯಡಿಯೂರಪ್ಪ ಆಪ್ತರಿಗೆ ಆಯಕಟ್ಟಿನ ಸ್ಥಾನಮಾನ: ಮುಖ್ಯಮಂತ್ರಿ ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿಗಳಾಗಿ ಇಬ್ಬರ ನೇಮಕ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಬ್ಬ ಮಾಜಿ ಶಾಸಕ ಮತ್ತು ಒಬ್ಬ ಹಾಲಿ ಶಾಸಕರನ್ನು ತಮ್ಮ ರಾಜಕೀಯ ಕಾರ್ಯದರ್ಶಿಗಳಾಗಿ ನೇಮಕ ಮಾಡಿಕೊಂಡಿದ್ದಾರೆ. ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತು ಶೃಂಗೇರಿ ಮಾಜಿ ಶಾಸಕ ಡಿ.ಎನ್. ಜೀವರಾಜ್ ಸಿಎಂ ರಾಜಕೀಯ ಕಾರ್ಯದರ್ಶಿಗಳಾಗಿ ನೇಮಕವಾಗಿದ್ದಾರೆ. ಇಬ್ಬರಿಗೂ ಸಂಪುಟ ದರ್ಜೆ ಸ್ಥಾನಮಾನ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಎಂ.ಪಿ. ರೇಣುಕಾಚಾರ್ಯ ಮತ್ತು ಡಿ.ಎನ್. ಜೀವರಾಜ್ ಅವರು ಈ ಹಿಂದೆ ಬಿ ಎಸ್‌ ಯಡಿಯೂರಪ್ಪ …

Read More »