Breaking News
Home / 2021 / ಸೆಪ್ಟೆಂಬರ್ (page 11)

Monthly Archives: ಸೆಪ್ಟೆಂಬರ್ 2021

ಪೆಟ್ರೋಲ್ ಡೀಸೆಲ್ ದರ ಇಂದು ಮತ್ತೆ ಏರಿಕೆಯತ್ತ ಮುಖ ಮಾಡಿದೆ.

ನವದೆಹಲಿ, ಸೆಪ್ಟೆಂಬರ್ 28: ಸತತ ಮೂರು ವಾರಗಳಿಂದ ಯಥಾಸ್ಥಿತಿ ಕಾಪಾಡಿಕೊಂಡಿದ್ದ ಪೆಟ್ರೋಲ್ ದರವನ್ನು ಇಂದು (ಸೆ.28) ಏರಿಕೆ ಮಾಡಲಾಗಿದ್ದು, ಅದೇ ರೀತಿ ಡೀಸೆಲ್ ದರ ಇಂದು ಮತ್ತೆ ಏರಿಕೆ ಕಂಡಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂದು ಲೀಟರ್ ಪೆಟ್ರೋಲ್ ಬೆಲೆಯಲ್ಲಿ 20ರಿಂದ 25 ಪೈಸೆ ಹೆಚ್ಚಳ ಮಾಡಿದ್ದರೆ, ಕಳೆದ ಐದು ದಿನಗಳಲ್ಲಿ ನಾಲ್ಕನೇ ಬಾರಿಗೆ ಏರಿಕೆ ಕಾಣುತ್ತಿರುವ ಲೀಟರ್ ಡೀಸೆಲ್ ದರ 75 ಪೈಸೆ ಹೆಚ್ಚಳವಾಗಿದೆ. ಮಂಗಳವಾರದ ಇಂಧನ …

Read More »

ಬಡ್ಡಿ ಹಣ ಕೊಡಲಿಲ್ಲ ಎಂದು ಆಟೋ ಚಾಲಕನ ಕೊಲೆ

ಹುಬ್ಬಳ್ಳಿ: ಸಾಲ ನೀಡಿದ್ದ ಹಣಕ್ಕೆ ಸರಿಯಾಗಿ ಬಡ್ಡಿ ನೀಡಿಲ್ಲ ಅಂತ ಆಟೋ ಚಾಲಕನನ್ನು ಕೊಲೆಗೈದಿರುವ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ. ಲೋಕೇಶ್ ಹತ್ಯೆಯಾದ ಆಟೋ ಚಾಲಕರಾಗಿದ್ದು, ಕೆಲ ದಿನಗಳ ಹಿಂದೆ ಲೋಕೇಶ್​​, ಮಾರುತಿ ಎನ್ನುವವನಿಂದ 5 ರೂಪಾಯಿ ಸಾಲ ಪಡೆದುಕೊಂಡಿದ್ದ. ಆದರೆ ಸಾಲದ ಬಡ್ಡಿ ಜೊತೆಗೆ ಆಟೋದ ನಿತ್ಯ 200 ರೂಪಾಯಿ ಕೊಡುವಂತೆ ಮಾರುತಿ ಪಿಡುಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಇದೇ ವಿಚಾರಕ್ಕೆ ನಿನ್ನೆ ಸಂಜೆ ಮಾರುತಿ …

Read More »

ದಲ್ಲಾಳಿಯ ಪುತ್ರನಿಗೆ ಹಿಗ್ಗಾಮುಗ್ಗ ಥಳಿಸಿದ ವ್ಯಾಪಾರಿಗಳು

ಗದಗ: ಕ್ಷುಲ್ಲಕ ಕಾರಣಕ್ಕಾಗಿ ದಲ್ಲಾಳಿ ಹಾಗೂ ತರಕಾರಿ ಮಾರಾಟಗಾರರ ನಡುವೆ ಮಾರಾಮಾರಿ ನಡೆದಿದ್ದು ಗದಗ ಎಪಿಎಂಸಿ ಆವರಣ ರಣಾಂಗಣವಾಗಿ ಮಾರ್ಪಟ್ಟ ಘಟನೆ ನಡೆದಿದೆ. ಗದಗ ಎಪಿಎಂಸಿ ತರಕಾರಿ ಹೋಲ್ ಸೇಲ್ ಮಾರ್ಕೆಟ್​ನಲ್ಲಿ ಘಟನೆ ನಡೆದಿದ್ದು ದಲ್ಲಾಳಿ ಅಂಗಡಿಗೆ ನುಗ್ಗಿ ದಲ್ಲಾಳಿ ಪುತ್ರನಿಗೆ ವ್ಯಾಪಾರಿಗಳು ಹಿಗ್ಗಾಮುಗ್ಗ ಥಳಿಸಿದ್ದಾರೆ. ರೈತರ ತರಕಾರಿ ಖರೀದಿ ವಿಷಯದಲ್ಲಿ ದಲ್ಲಾಳಿ ಹಾಗೂ ವ್ಯಾಪಾರಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಾಗ್ವಾದ ವಿಕೋಪಕ್ಕೆ ತಿರುಗಿ ಹೊಎದಾಟ ನಡೆದಿದೆ …

Read More »

ಬಹುಮಹಡಿ ಕಟ್ಟಡ ಕುಸಿತ; ಮನೆ ಮಾಲೀಕನ ವಿರುದ್ಧ ದಾಖಲಾಯ್ತು FIR

ಬೆಂಗಳೂರು: BBMP ವ್ಯಾಪ್ತಿಯ ದಕ್ಷಿಣ ವಲಯದ ಲಕ್ಕಸಂದ್ರದಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ ಸಂಬಂಧ ಕಟ್ಟಡ ಮಾಲೀಕನ ವಿರುದ್ಧ ದೂರು ದಾಖಲು ಮಾಡಲಾಗಿದೆ.   ಲಕ್ಕಸಂದ್ರದ 7ನೇ ಮುಖ್ಯರಸ್ತೆ, 14ನೇ ಕ್ರಾಸ್​ನಲ್ಲಿನ ಈ ಮೂರು ಅಂತಸ್ತಿನ ಕಟ್ಟಡವನ್ನು 1974ರಲ್ಲಿ ನಿರ್ಮಿಸಲಾಗಿತ್ತು. ಸುರೇಶ್‌ ಎಂಬ ವ್ಯಕ್ತಿಗೆ ಈ ನಿವಾಸ ಸೇರಿದ್ದಾಗಿದೆ, ಶಿಥಿಲಾವ್ಯವಸ್ಥೆಯಲ್ಲಿದ್ದ ಕಟ್ಟಡದ ಬಗ್ಗೆ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದೇ ಮಾಲೀಕರು ನಿರ್ಲಕ್ಷ್ಯ ವಹಿಸಿದ್ದರು ಅನ್ನೋ ಆರೋಪ ಕೇಳಿಬಂದಿತ್ತು. ಹೀಗಾಗಿ …

Read More »

ತಾಳಿಕೋಟೆ ಬಳಿ ಡೋಣಿ ಸೇತುವೆ ಕುಸಿತ : ಸಂಚಾರ ಬಂದ್, ಪ್ರಯಾಣಿಕರ ಪರದಾಟ

ಮುದ್ದೇಬಿಹಾಳ: ಮಿಣಜಗಿ, ಹೂವಿನ ಹಿಪ್ಪರಗಿ ಭಾಗದಿಂದ ತಾಳಿಕೋಟೆ ಪ್ರವೇಶಿಸುವ ಡೋಣಿ ನದಿಯ ಮೇಲಿನ ದಶಕಗಳಷ್ಟು ಹಳೇಯದಾದ ಸೇತುವೆಯ ಅಂದಾಜು 15 ಮೀಟರ್ನಷ್ಟು ಭಾಗ ಕುಸಿಯತೊಡಗಿದ್ದು, ಅದರ ಮುಂದಿನ ಭಾಗವೂ ನಿಧಾನವಾಗಿ ಕುಸಿಯತೊಡಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸಂಭವನೀಯ ಅನಾಹುತ ತಪ್ಪಿಸಲು ಸೇತುವೆಯ ಮೇಲೆ ಸಂಚಾರವನ್ನು ಸೋಮವಾರ ಸಂಜೆಯಿಂದಲೇ ಬಂದ್ ಮಾಡಲಾಗಿದೆ. ಇದರಿಂದಾಗಿ ಮುದ್ದೇಬಿಹಾಳ, ಹೂವಿನ ಹಿಪ್ಪರಗಿ ಮತ್ತು ಮಿಣಜಗಿ ಭಾಗದಿಂದ ತಾಳಿಕೋಟೆ ಪ್ರವೇಶ ಬಂದ್ ಆಗಿದೆ. ಸ್ಥಳಕ್ಕೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ …

Read More »

ಪಿಯು ಉಪನ್ಯಾಸಕರ ವರ್ಗಾವಣೆ ಈ ವರ್ಷವೂ ಅನುಮಾನ?

ಬೆಂಗಳೂರು : ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಕಾಯ್ದೆ ತಿದ್ದುಪಡಿ ವಿಧೇಯಕ ಅಧಿವೇಶನದಲ್ಲಿ ಮಂಡನೇ ಆಗದೆ ಇರುವುದರಿಂದ ಈ ವರ್ಷ ವರ್ಗಾವಣೆ ಪ್ರಕ್ರಿಯೆ ನಡೆಯುವುದು ಕಷ್ಟವಿದೆ. ಉಪನ್ಯಾಸಕರ ವರ್ಗಾವಣೆಗೆ ಸಂಬಂಧಿಸಿದಂತೆ ಕಾಯ್ದೆಗೆ ತಿದ್ದುಪಡಿ ತರಬೇಕು ಮತ್ತು ವರ್ಗಾವಣೆ ಪ್ರಮಾಣ ಹೆಚ್ಚಿಸಬೇಕು ಎಂದು ಆಗ್ರಹಿ ಇತ್ತೀಚೆಗೆ ರಾಜ್ಯ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕರ ಸಂಘದಿಂದ ಇಲಾಖೆಯ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಿದ್ದರು. ಹಳೇ ಕಾಯ್ದೆ ಹಾಗೂ ನಿಯಮದಡಿ ವರ್ಗಾವಣೆ ನಡೆಸಲು …

Read More »

ಕೆಪಿಸಿಸಿ ಪಟ್ಟಿ : ಹೈಕಮಾಂಡ್‌ ಜತೆ ಇಂದು ಡಿಕೆಶಿ ಚರ್ಚೆ

ಬೆಂಗಳೂರು: ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಮಂಗಳವಾರ ಹೈಕಮಾಂಡ್‌ ನಾಯಕರ ಜತೆ ಚರ್ಚಿಸುವ ನಿರೀಕ್ಷೆಯಿದೆ. ರವಿವಾರ ದಿಲ್ಲಿಗೆ ತೆರಳಿರುವ ಡಿಕೆಶಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಭೇಟಿಗೆ ಕಾಲಾವಕಾಶ ಕೋರಿದ್ದಾರೆ. ಪಂಜಾಬ್‌ ಪ್ರವಾಸದಲ್ಲಿರುವ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಮಂಗಳವಾರ ದಿಲ್ಲಿಗೆ ಆಗಮಿಸಲಿದ್ದು ಡಿಕೆಶಿ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ. ಕೆಪಿಸಿಸಿ ಪದಾಧಿಕಾರಿಗಳa ಪಟ್ಟಿ, ಹಿಂದುಳಿದ, …

Read More »

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್: ಹೆಸ್ಕಾಂನಿಂದ 200 ಹುದ್ದೆಗಳಿಗೆ ಅರ್ಜಿ ಆಹ್ವಾನ

ಹುಬ್ಬಳ್ಳಿ ವಿದ್ಯುತ್​ ಸರಬರಾಜು ನಿಗಮವು 2021ನೇ ಸಾಲಿನಲ್ಲಿ ಅಪ್ರೆಂಟಿಸ್​ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಹೆಸ್ಕಾಂ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು ಅಕ್ಟೋಬರ್​ 20 ಕೊನೆಯ ದಿನಾಂಕವಾಗಿದೆ.‌ ಒಟ್ಟು 200 ಹುದ್ದೆಗಳಿಗೆ ಹೆಸ್ಕಾಂ ಅರ್ಜಿ ಆಹ್ವಾನ ಮಾಡಿದೆ. ಆಸಕ್ತ ಅಭ್ಯರ್ಥಿಗಳು hescom.co.in ಹಾಗೂ mhrdnats.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು ಇಚ್ಛಿಸುವವರು ಇಂಜಿನಿಯರಿಂಗ್​, ಬಿಇ ಅಥವಾ ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿರಬೇಕು. 2019, 2020 ಹಾಗೂ 2021ನೇ ಸಾಲಿನಲ್ಲಿ …

Read More »

ಹಣಕಿತ್ತು ಪರಾರಿಯಾಗುತ್ತಿದ್ ಯುವಕನನ್ನು ಸಾರ್ವಜನಿಕರು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. videovirel….

ಬೆಳಗಾವಿ ನಗರದ ಟೆಂಗಿನಕೇರಿ ಗಲ್ಲಿಯಲ್ಲಿ ವೃದ್ಧನೋರ್ವನಿಂದ ಹಣಕಿತ್ತು ಪರಾರಿಯಾಗುತ್ತಿದ್ದ ಅಪ್ರಾಪ್ತ ಯುವಕನನ್ನು ಸಾರ್ವಜನಿಕರು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ರಸ್ತೆಯಲ್ಲಿ ಹೋಗುತ್ತಿದ್ದ ವೃದ್ಧನನ್ನು ಥಳಿಸಿ ಅವನಿಂದ 4000 ರೂಪಾಯಿ ಹಣವನ್ನು ಕಿತ್ತು ಪರಾರಿಯಾಗುತ್ತಿದ್ದ ನಾಲ್ವರ ಪೈಕಿ ಓರ್ವ ಅಪ್ರಾಪ್ತ ಯುವಕನನ್ನು ಸಾರ್ವಜನಿಕರೇ ಹಿಡಿದಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.   ದಾರಿಯಲ್ಲಿ ಹೋಗುತ್ತಿದ್ದ ವೃದ್ಧ ವ್ಯಕ್ತಿಗೆ ಈ ನಾಲ್ವರು ಗಾಂಜಾ ಕೊಡುವಂತೆ ಕೇಳಿ ಅವನ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ನೋಡುತ್ತಿದ್ದ …

Read More »

ಬೆಳಗಾವಿಯ ಕೆಎಲ್‍ಎಸ್ ಸಂಸ್ಥೆಯ ಗೋಗಟೆ ತಾಂತಿಕ ವಿದ್ಯಾಲಯದಲ್ಲಿ ಇಂಜನೀಯರಿಂಗ್ ಜಾಗ್ರತಿ ಕಾರ್ಯಕ್ರಮ

ಬೆಳಗಾವಿಯ ಕೆಎಲ್‍ಎಸ್ ಸಂಸ್ಥೆಯ ಗೋಗಟೆ ತಾಂತಿಕ ವಿದ್ಯಾಲಯದಲ್ಲಿ ಇಂಜನೀಯರಿಂಗ್ ಜಾಗ್ರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ಕೆಎಲ್‍ಎಸ್ ಸಂಸ್ಥೆಯ ಗೋಗಟೆ ತಾಂತ್ರಿಕ ವಿದ್ಯಾಲಯದಲ್ಲಿ ದಿನಾಂಕ 26 ರಂದು ರವಿವಾರ ಪಿಯು ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಎಂಜನೀಯರಿಂಗ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಕೆಎಲ್‍ಎಸ್ ಗೋಗಟೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಂತ ಕಿತ್ತೂರ್ ಅಭಿಯಂತರರಿರುವುದೇ ಸಮಸ್ಯೆಗಳನ್ನು ಪರಿಹಾರ ಮಾಡಲು. ಸಮಾಜಕ್ಕೆ ಉತ್ತಮ ಸುಲಭ ಜೀವನ ನೀಡಲು. ಹಾಗಾಗಿ ವಿದ್ಯಾರ್ಥಿಗಳು ಉತ್ತಮ …

Read More »