Breaking News
Home / 2021 / ಸೆಪ್ಟೆಂಬರ್ (page 12)

Monthly Archives: ಸೆಪ್ಟೆಂಬರ್ 2021

ಗೋಕಾಕದಲ್ಲಿ ಪ್ರವಾಹ ಪೀಡಿತ ಸಂಬಂಧ ಗೋಕಾಕ ಹಾಗೂ ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ

  ಗೋಕಾಕ : ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಧನವನ್ನು ವಿತರಿಸುವಂತೆ ಕೆಎಂಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ರವಿವಾರ ರಾತ್ರಿ ತಮ್ಮ ಗೃಹ ಕಛೇರಿ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ಅಧಿಕಾರಿಗಳ ಸಭೆ ನಡೆಸಿದ …

Read More »

16 ಸಾವಿರ ಪೊಲೀಸ್ ಪೇದೆ ಹಾಗೂ ಸಬ್ ಇನ್ಸ್‌ಪೆಕ್ಟರುಗಳ ನೇಮಕಾತಿ : ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಪೊಲೀಸ್ ಅಪರಾಧ ಪ್ರಕರಣಗಳ ತ್ವರಿತ ಪತ್ತೆ ಮತ್ತು ತನಿಖೆಯ ವೇಗ ಹೆಚ್ಚಿಸಲು ರಾಜ್ಯದ ಕಲಬುರ್ಗಿ,  ಹುಬ್ಬಳ್ಳಿ-ಧಾರವಾಡ, ಮೈಸೂರು ಹಾಗೂ ಇತರ ಪ್ರಮುಖ ನಗರಗಳಲ್ಲಿ ಒಟ್ಟು ಆರು ವಿಧಿವಿಜ್ಞಾನ (ಎಫ್ ಎಸ್ ಎಲ್) ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅವರು ಇಂದು ಹುಬ್ಬಳ್ಳಿಯ ಬಾಣತಿಕಟ್ಟೆಯಲ್ಲಿ ಕಸಬಾ ಪೇಟೆ ಪೊಲೀಸ್ ಠಾಣೆ, ದಕ್ಷಿಣ ಸಂಚಾರಿ ಠಾಣೆ, ಆಳ್ನಾವರ ಪೊಲೀಸ್ ಠಾಣೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆಡಳಿತ …

Read More »

ತಪ್ಪು ಕಲ್ಪನೆಗಳಿಂದ ಭಾರತ ಬಂದ್ ಮಾಡಲಾಗಿದೆ: ಲಕ್ಷ್ಮಣ್ ಸವದಿ

ಚಿಕ್ಕೋಡಿ: ತಪ್ಪು ಕಲ್ಪನೆಗಳಿಂದ ಭಾರತ ಬಂದ್ ಮಾಡಲಾಗಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಬೆಳಗಾವಿಯಲ್ಲಿ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೃಷಿ ಕಾನೂನು ರೈತರಿಗೆ ಅನುಕೂಲ ಮಾಡಲೆಂದು ಸರ್ಕಾರ ರೂಪಿಸಿದೆ. ದಲ್ಲಾಳಿಗಳಿಗೆ ಬಾರಿ ನಷ್ಟವಾಗುತ್ತಿರುವ ಕಾರಣ ರೈತರಿಗೆ ತಪ್ಪು ಸಂದೇಶ ಸಾರುತ್ತಿದ್ದಾರೆ. 2008ರಿಂದ ಕರ್ನಾಟಕದಲ್ಲಿ ಈ ಕಾನೂನು ಜಾರಿ ಇದೆ. ಕೇಂದ್ರ ಸರ್ಕಾರ ಈಗಷ್ಟೇ ಕಾನೂನು ತಿದ್ದುಪಡಿ ಮಾಡಿದೆ ಎಂದಿದ್ದಾರೆ. ಹರಿಯಾಣ, …

Read More »

ಈ ಸರ್ಕಾರದಲ್ಲಿ ರೈತರ ಮಾತುಗಳನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ- ಸಾಹಿತಿ ಕುಂವೀ ಬೇಸರ

ಧಾರವಾಡ: ಜಿಲ್ಲೆಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಾದಂಬರಿಕಾರ ಕುಂ. ವೀರಭದ್ರಪ್ಪ ಭಾರತ್ ಬಂದ್ ವಿಚಾರವಾಗಿ ಕಳಕಳಿ ವ್ಯಕ್ತಪಡಿಸಿದ್ದಾರೆ. ನಾಳೆ ರೈತರು ಬಂದ್ ಮಾಡುತ್ತಿದ್ದಾರೆ, ರೈತರ ಮಾತುಗಳನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ. ರೈತರು, ಕಾರ್ಮಿಕರು, ಶಿಕ್ಷಕರ ಮಾತುಗಳನ್ನು ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ. ಈ ಸರ್ಕಾರದಲ್ಲಿ ಶೇ. 72ರಷ್ಟು ಕ್ರಿಮಿನಲ್‌ಗಳಿದ್ದಾರೆ, ಅವರು ಚುನಾಯಿತ ಪ್ರತಿನಿಧಿಗಳಿದ್ದಾರೆ. ಅವರು ಈ ದೇಶವನ್ನು ಆಳುತ್ತಿದ್ದಾರೆ, ಕೋಟ್ಯಾಧೀಶರು ಆಳುತ್ತಿದ್ದಾರೆ. ಅವರಿಂದ ಬಡವರ ಆಕ್ರಂದನ, ನೋವು, ನಲಿವಿಗೆ ಪರಿಹಾರ …

Read More »

ಜೆಡಿಎಸ್​ ತೊರೆದು ಕಾಂಗ್ರೆಸ್ ಸೇರಲು ಮುಂದಾದ್ರಾ ಕೋನರೆಡ್ಡಿ..?

ಧಾರವಾಡ: ಜೆಡಿಎಸ್​ ನವಲಗುಂದ ಶಾಸಕ ಕೋನರೆಡ್ಡಿ ಜೆಡಿಎಸ್ ತೊರೆದು ಕೈ ಪಡೆ ಸೇರ್ತಾರಾ ಎಂಬ ಚರ್ಚೆ ಶುರುವಾಗಿದೆ. ಕೋನರಡ್ಡಿ ಜೆಡಿಎಸ್​ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಮೊನ್ನೆಯಷ್ಟೇ ನಡೆದ ಹು-ಧಾ ಪಾಲಿಕೆ ಚುನಾವಣೆ ಸೋಲು ಹಿನ್ನೆಲೆ ಹೊಣೆ ಹೊತ್ತು ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಬೆನ್ನಲ್ಲೇ 2023 ಚುನಾವಣೆಗೆ ಕೋನರಡ್ಡಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಕೈ ನಾಯಕರ ಜೊತೆ ಕೋನರೆಡ್ಡಿ ಒಂದು ಸುತ್ತು ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ.. …

Read More »

ಮೋದಿ‌ ಸರ್ಕಾರದಲ್ಲಿ ಕಳೆದ 7 ವರ್ಷದಲ್ಲಿ ಬೆಲೆ ಏರಿಕೆ ಆಗಿಲ್ಲ- ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ.. ಚೆನ್ನಮ್ಮ ವೃತ್ತದಲ್ಲಿ ಫ್ಲೈಓವರ್ ನಿರ್ಮಾಣದ ಕುರಿತು ಇಂದು ಸ್ಥಳೀಯರ ಸಲಹೆ ಸೂಚನೆಗಳನ್ನ ಪಡೆದಿದ್ದೇವೆ. ಫ್ಲೈ ಓವರ್‌ ನಿರ್ಮಾಣದ ಕುರಿತು ಸ್ಥಳೀಯರು ತಜ್ಞರ ಸಲಹೆ ಪಡೆಯಲಾಗಿದೆ. ಶಾಸಕ ಅರವಿಂದ ಬೆಲ್ಲದ್ ಹಾಗೂ ತಜ್ಞರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುವುದು. ಸ್ಥಳೀಯರ ಸಲಹೆ, ದೂರುಗಳಿದ್ರೆ ಅವುಗಳನ್ನ ಪರಿಗಣಿಸಲಾಗುವುದು ಎಂದಿದ್ದಾರೆ. ಭಾರತ ಬಂದ್ ಕರೆಗೆ ಜೋಶಿ ಆಕ್ರೋಶ ವ್ಯಕ್ತಪಡಿಸಿ.. ಬಹಳಷ್ಟು ಬಾರಿ ಭಾರತ ಬಂದ್​ಗೆ …

Read More »

ದಯಮಾಡಿ ಬಂದ್​​ಗೆ ಸಹಕಾರ ನೀಡಿ ಸ್ವಾಮಿ- ಆಟೋ ಚಾಲಕನ ಕಾಲಿಗೆ ಬಿದ್ದ ರೈತ

ಧಾರವಾಡ: ‘ಭಾರತ್ ಬಂದ್’ ಹಿನ್ನೆಲೆ ನಗರದ ಆಲೂರು ವೆಂಕಟರಾವ್ ವೃತ್ತದಲ್ಲಿ ಬಸ್ ತೆಡೆದು ಪ್ರತಿಭಟನೆ ನಡೆಸಲಾಗುತ್ತಿದ್ದು, ಪ್ರತಿಭಟನಾಕಾರರು ಬೀದಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಭಾರತ ಬಂದ್ ಗೆ ಬೆಂಬಲ ನೀಡಲು ರೈತನೋರ್ವ ಆಟೋ ಚಾಲಕನ ಕಾಲಿಗೆ ಬಿದ್ದು ಮನವಿ ಮಾಡಿದ ಘಟನೆ ಆಲೂರು ವೆಂಕಟರಾವ್ ವೃತ್ತದಲ್ಲಿ ನಡೆದಿದೆ. ಜನರ ಪರವಾಗಿ ಹೋರಾಟ ಮಾಡುತ್ತಿದ್ದೇವೆ ದಯಮಾಡಿ ನಮಗೆ ಬೆಂಬಲ ನೀಡಿ ಎಂದು ರೈತ …

Read More »

ಪ್ರತಿಭಟನೆ ವೇಳೆ ಸಿಂಘು ಗಡಿಯಲ್ಲಿ ಮೃತಪಟ್ಟ ರೈತ: ʼಹೃದಯಾಘಾತʼ ಎಂದ ಪೊಲೀಸರು

ಹೊಸದಿಲ್ಲಿ: ಇಂದು ದೇಶಾದ್ಯಂತ ರೈತ ಸಂಘಟನೆಗಳು ಬಂದ್‌ ಗೆ ಕರೆ ನೀಡಿವೆ. ಹಲವಾರು ಕಡೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆ ಹರ್ಯಾಣದ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ರೈತನೋರ್ವ ಮೃತಪಟ್ಟಿದ್ದು, ಇದು ಹೃದಯಾಘಾತದಿಂದ ಸಂಭವಿಸಿದ ಸಾವು ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ ಎಂದು indiatoday ವರದಿ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಹೆಚ್ಚಿನ ವಿವರಗಳನ್ನು ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ …

Read More »

ಪ್ರತಿಭಟನೆ ವೇಳೆ ಡಿಸಿಪಿ ಧರ್ಮೇಂದ್ರ ಕುಮಾರ್ ಕಾಲಿನ ಮೇಲೆ ಹರಿದ ಕಾರು..!

ಬೆಂಗಳೂರು: ಭಾರತ್ ಬಂದ್ ಪ್ರತಿಭಟನೆ ವೇಳೆ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರು ದೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೈತ ಸಂಘಟನೆಗಳಿಂದ ಬಂದ್​ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದ ಗೊರಗುಂಟೆ ಪಾಳ್ಯ ಜಂಕ್ಷನ್​​ನಲ್ಲಿ ಪ್ರತಿಭಟನಾ ಜಾಥಾ ನಡೆಯುತ್ತಿತ್ತು. ಈ ವೇಳೆ ಕೆಲವು ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಈ ವೇಳೆ ರೈತ ಮುಖಂಡನ ಕಾರನ್ನ ಅಡ್ಡ ಹಾಕಲು ಡಿಸಿಪಿ ಧರ್ಮೇಂದ್ರ ಕುಮಾರ್​​ ಮುಂದಾಗಿದ್ದಾರೆ. ಆಗ ಕಾರು ಚಾಲಕ ಗಾಡಿಯನ್ನ …

Read More »

ಸಕಾಲಕ್ಕೆ ಬಾರದ ಆಂಬ್ಯುಲೆನ್ಸ್.. ಫುಟ್​ಪಾತ್​ನಲ್ಲಿಯೇ ಮಲಗಿದ ರೋಗಿ..!

ರಾಯಚೂರು: ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಾರದೆ ರೋಗಿಯೋರ್ವ ಆಸ್ಪತ್ರೆ ಆವರಣದಲ್ಲಿಯೇ ಮಲಗಿ ಪರದಾಡಿದ ಘಟನೆ ಜಿಲ್ಲೆಯ ರಿಮ್ಸ್ ಆಸ್ಪತ್ರೆ ಬಳಿ ನಡೆದಿದೆ. ಯಾದಗಿರಿ ಜಿಲ್ಲೆಯಿಂದ ಆಸ್ಪತ್ರೆಗೆ ಬಂದಿದ್ದ ರೋಗಿಗೆ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸೂಚಿಸಿದ್ದರು ಎನ್ನಲಾಗಿದೆ. ಅರ್ಧ ಗಂಟೆಯಿಂದ ಆಂಬ್ಯುಲೆನ್ಸ್​ಗಾಗಿ ಕಾದರೂ ಬಾರದ ಆಂಬ್ಯುಲೆನ್ಸ್ ನಿಂದ ಕಂಗಾಲಾದ ರೋಗಿ ಆಸ್ಪತ್ರೆ ಫುಟ್​ಪಾತ್​ ಮೇಲೆಯೇ ಮಲಗಿದ್ದಾನೆ. ಫುಟ್​ಪಾತ್​ ಮೇಲೆ ಮಲಗಿದ ಸಾಕಷ್ಟು ಹೊತ್ತಿನ ಬಳಿಕ ಆಂಬ್ಯುಲೆನ್ಸ್ ಆಗಮಿಸಿದ್ದು …

Read More »