Breaking News

Daily Archives: ಸೆಪ್ಟೆಂಬರ್ 23, 2021

ದೇವರ ಮೂರ್ತಿ ಮೇಲೆ ಚಪ್ಪಲಿ ಧರಿಸಿ ಕಾಲಿಟ್ಟಿದ್ದ ಯುವಕನಿಗೆ ಥಳಿತ!

ತುಮಕೂರು: ದೇವರ ಮೂರ್ತಿ ಮೇಲೆ ಚಪ್ಪಲಿ ಧರಿಸಿ ಕಾಲಿಟ್ಟಿದ್ದ ಆರೋಪದಡಿ ಯುವಕನನ್ನು ಹಿಡಿದು ಗ್ರಾಮಸ್ಥರು ಥಳಿಸಿದ ಘಟನೆ ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಶ್ರೀಸ್ವಾಮಿ ಕೋಟೆ ಕಲ್ಲಪ್ಪನ ಮೂರ್ತಿ ಮೇಲೆ ಚಪ್ಪಲಿ ಧರಿಸಿ ಯುವಕ ಕಾಲಿಟ್ಟಿದ್ದ ವಿಡಿಯೊ ಸೋಷಿಯಲ್‍ ಮೀಡಿಯಾದಲ್ಲಿ ವೈರಲ್‍ ಆಗಿತ್ತು. ಯುವಕನ ವರ್ತನೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಯುವಕನ ವಿರುದ್ಧ ಮಧುಗಿರಿ ಠಾಣೆಗೆ ಗ್ರಾಮಸ್ಥರು ದೂರು ಸಲ್ಲಿಸಿದ್ದರು. …

Read More »

ಅಕ್ರಮ ಗಾಂಜಾ ಬೆಳೆ ಜಪ್ತಿ: ಓರ್ವನ ಬಂಧನ

ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪೊಲೀಸ್ ಠಾಣೆ ವ್ಯಾಪ್ತಿಯ ತೇರದಾಳ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ 13 ಗಾಂಜಾ ಗಿಡಗಳನ್ನು ಜಪ್ತಿ ಮಾಡಿಕೊಂಡಿರುವ ತೇರದಾಳ ಪೊಲೀಸರು ಓರ್ವ ಜಮೀನು ಸಾಗುವಳಿದಾರನನ್ನು ಬಂಧಿಸಿರುವ ಘಟನೆ ತೇರದಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜುಗಲಾಸಾರ, ಜಮಖಂಡಿ ಡಿವಾಯ್ ಎಸ್ ಪಿ ಎಂ. ಪಾಂಡುರಂಗಯ್ಯ ಅವರ ಮಾರ್ಗದರ್ಶನದಲ್ಲಿ ರಬಕವಿ-ಬನಹಟ್ಟಿ ತಹಶಿಲ್ದಾರರ ಸಂಜಯ ಇಂಗಳೆ …

Read More »

ಮಗುವನ್ನ ಶಾಲೆಗೆ ಸೇರಿಸಲು ಬಂದ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡ ಹೆಡ್ ಮಾಸ್ಟರ್

ಬೆಂಗಳೂರು: ನಗರದ ಕೋದಂಡರಾಮಪುರ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯ ಲೋಕೇಶಪ್ಪ ಎಂಬಾತ ಮಗುವಿನ ದಾಖಲಾತಿಗೆಂದು ಬಂದ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡ ಘಟನೆ ನಡೆದಿದೆ. ಸದ್ಯ ಲೋಕೇಶಪ್ಪನನ್ನ ಸೇವೆಯಿಂದ ಅಮಾನತು ಮಾಡಲಾಗಿದೆ. ಕೋದಂಡರಾಮಪುರ ಪ್ರೌಢಶಾಲೆಗೆ ತಮ್ಮ ಮಗುವನ್ನ ದಾಖಲು ಮಾಡಲೆಂದು ಮಹಿಳೆಯೋರ್ವರು ಶಾಲೆಗೆ ಬಂದರೆ ಆ ಮಹಿಳೆಯಿಂದಲೇ ಹೆಡ್ ಮಾಸ್ಟರ್ ಲೋಕೇಶಪ್ಪ ಮಸಾಜ್ ಮಾಡಿಸಿಕೊಂಡಿದ್ದಾನೆ. ಈ ಸಂಬಂಧ ಸಿಸಿಟಿವಿ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಚಾರವಾಗಿ ಪ್ರಶ್ನಿಸಿದಾಗ ತಾನು ಮಸಾಜ್ ಮಾಡಿಸಿಕೊಂಡಿದ್ದಾಗಿ …

Read More »

ಇನ್ಮುಂದೆ ಕ್ರಿಕೆಟ್​ನಲ್ಲಿ ‘ಬ್ಯಾಟ್ಸ್​ಮನ್’​ ಎನ್ನುವಂತಿಲ್ಲ: ಲಿಂಗ ಸಮಾನತೆಗಾಗಿ ‘ಬ್ಯಾಟರ್’ ಪದ ಬಳಕೆಗೆ ಆದೇಶ

ಕ್ರಿಕೆಟ್ ಆಟದಲ್ಲಿ ಇನ್ನು ಬ್ಯಾಟಿಂಗ್ ಮಾಡುವವರನ್ನು “ಬ್ಯಾಟ್ಸ್‌ಮನ್” (Batsman) ಎಂದು ಕರೆಯಲಾಗುವುದಿಲ್ಲ. ಕ್ರಿಕೆಟ್ ​ಅನ್ನು ಅಂತರ್ಗತ ಆಟವಾಗಿ ಬಲಪಡಿಸುವ ಪ್ರಯತ್ನವಾಗಿ ಬ್ಯಾಟ್ಸ್​ಮನ್​ ಎಂಬ ಪದದ ಬದಲು ಇನ್ನು ಮುಂದೆ ಲಿಂಗ ತಟಸ್ಥ ಪದ “ಬ್ಯಾಟರ್”​ (Batter) ಎಂಬ ಪದವನ್ನು ಕ್ರಿಕೆಟ್ ನಿಯಮಾವಳಿಯಲ್ಲಿ ಅಳವಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ನಿಯಮ ರೂಪಿಸಲಾಗಿದ್ದು ಬದಲಾವಣೆ ತಕ್ಷಣದಿಂದ ಜಾರಿಯಾಗಿದೆ ಎಂದು ಮೆರಿಲ್‌ಬಾರ್ನ್‌ ಕ್ರಿಕೆಟ್ ಕ್ಲಬ್‌ (MCC) ತಿಳಿಸಿದೆ. ಎಂಸಿಸಿ ಕ್ರಿಕೆಟ್ ನಿಯಮಗಳ ರಕ್ಷಕನಾಗಿದ್ದು, ಐಸಿಸಿ (ICC) …

Read More »

ಕಣ್ಣೀರಿಡುತ್ತಾ ಸದನದಿಂದ ಹೊರ ಬಂದ ಅಂಜಲಿ ನಿಂಬಾಳ್ಕರ್

ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಇತ್ತೀಚೆಗೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರ ಪ್ರತಿಧ್ವನಿಸಿತು. ಈ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಭಾವುಕರಾದ ಸನ್ನಿವೇಶಕ್ಕೆ ಸದನದ ಸದಸ್ಯರು ಸಾಕ್ಷಿಯಾದರು. ರೇಪ್ ಪ್ರಕರಣದ ಚರ್ಚೆ ವೇಳೆ ಕಣ್ಣೀರಿಡುತ್ತಾ ಸದನದಿಂದ ಹೊರ ಬಂದ ಅಂಜಲಿ ನಿಂಬಾಳ್ಕರ್ ಗ್ಯಾಂಗ್ ರೇಪ್ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಶಾಸಕಿ ರೂಪ ಶಶಿಧರ್ ಮಾತನಾಡುವಾಗ.. ಕಣ್ಣೀರಿಡುತ್ತಾ ಸದನದಿಂದ ಮೊಗಸಾಲೆಗೆ ಹೋದ ಅಂಜಲಿ ನಿಂಬಾಳ್ಕರ್ ನಂತರ ಕಣ್ಣೀರು ಒರೆಸಿಕೊಂಡು, …

Read More »

ಹೈ-ಎಂಡ್ ಬೈಕ್ ಯಾಕೆ? ನಮಗೆ ಈ ಹೋರಿನೇ ಸಾಕು..!

ಬಾಗಲಕೋಟೆ: ಹದಿನೆಂಟು ತಿಂಗಳ ಕಿಲಾರಿ ಹೋರಿಯೊಂದು ದಾಖಲೆಯ ಮೊತ್ತಕ್ಕೆ ಮಾರಾಟವಾಗುವ ಮೂಲಕ ಅಚ್ಚರಿ ಹುಟ್ಟಿಸಿದೆ. ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ತೇರದಾಳ ಪಟ್ಟಣದ ನಾಲ್ಕನೇ ಕಿನಾಲ್ ತೋಟದ ವಸತಿ ಪ್ರದೇಶದ ಭೀಮಪ್ಪ ಬರಡಗಿ ಎಂಬುವರ ಹೋರಿ ಬರೋಬ್ಬರಿ 3 ಲಕ್ಷ 25 ಸಾವಿರ ರೂಪಾಯಿಗಳಿಗೆ ಮಾರಾಟವಾಗಿದೆ. ಅಶೋಕ‌ ಕುರಿ ಎಂಬುವರು 3 ಲಕ್ಷ 25 ಸಾವಿರಕ್ಕೆ ಖರೀದಿ ಮಾಡಿದ್ದಾರೆ. ಜಾನುವಾರು ಪ್ರದರ್ಶನದಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದ ಹೋರಿ ನೋಡೋದಕ್ಕೆ ಬಾರಿ ಮೈಮಾಟ …

Read More »

ರಾಜ್ಯದಲ್ಲಿ ಇನ್ಮುಂದೆ ಭಾನುವಾರ ಕೊರೊನಾ ಲಸಿಕೆ ಸಿಗಲ್ಲ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಭಾನುವಾರ ರಜೆ ದಿನ

ಬೆಂಗಳೂರು: ರಾಜ್ಯದಲ್ಲಿ ಇನ್ಮುಂದೆ ಭಾನುವಾರ ಕೊರೊನಾ ಲಸಿಕೆ ಹಾಕದಿರಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ. ಇಡೀ ದೇಶವನ್ನು ಕೊರೊನಾ ಮುಕ್ತ ಮಾಡಲು ಮಕ್ಕಳು ಹೊರೆತು ಪಡಿಸಿ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆಯನ್ನು ಹಾಕಲಾಗುತ್ತಿತ್ತು. ವಾರದ 7 ದಿನವೂ ಲಸಿಕೆ ಹಾಕುವ ಅಭಿಯಾನ ನಡೆಯುತ್ತಿತ್ತು. ಆದ್ರೆ ಈಗ ಭಾನುವಾರ ಕೊರೊನಾ ಲಸಿಕೆ ಹಾಕದಿರಲು ಆರೋಗ್ಯ ಇಲಾಖೆ ಮುಂದಾಗಿದೆ. ಯಾವುದೇ ರಜೆ ಇಲ್ಲದೇ, ನಿರಂತರವಾಗಿ ಆರೋಗ್ಯ ಸಿಬ್ಬಂದಿ ಕೆಲಸ ಮಾಡ್ತಾ ಇದ್ದರು. …

Read More »

ವಿಧಾನಸಭೆ: ಕೇಂದ್ರ ಸಚಿವರನ್ನು ಕರೆದು ಯಾಕೆ ಅಪಮಾನ ಮಾಡ್ತೀರಿ?

 ಇದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ ಯತ್ನಾಳ್‌ ಅವರು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರಿಗೆ ಕೊಟ್ಟ ಟಾಂಗ್‌. ಪ್ರಶ್ನೋತ್ತರ ವೇಳೆಯಲ್ಲಿ ಬೇಲೂರು ಶಾಸಕ ಕೆ.ಎಸ್‌.ಲಿಂಗೇಶ್‌ ಅವರು ಮುಖ್ಯಮಂತ್ರಿಗಳ ಅಮೃತ ಗ್ರಾಮಪಂಚಾಯಿತಿ ಯೋಜನೆಯನ್ನು ಪ್ರಸ್ತಾಪಿಸಿ ಗ್ರಾಮ ಪಂಚಾಯಿತಿಯೊಂದಕ್ಕೆ 25 ಲಕ್ಷ ರೂ. ಕೊಡುವುದಾಗಿ ಹೇಳಲಾಗಿದೆ. ಆದರೆ, ಹಣ ಬಿಡುಗಡೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದು ಗಮನಸೆಳೆದರು. ಜೆಡಿಎಸ್‌ ಸದಸ್ಯ ಬಂಡೆಪ್ಪ ಕಾಶೆಂಪೂರ ಈ ಪ್ರಶ್ನೆಗೆ ಪೂರಕವಾಗಿ ಮಾತಾಡಿದರು. ಆಗ ಸಚಿವ ಈಶ್ವರಪ್ಪ ಉತ್ತರಿಸಿ, ಗ್ರಾಪಂಗಳಿಗೆ …

Read More »

ಅಬುಧಾಬಿಯಲ್ಲಿಂದು ಹೈವೋಲ್ಟೇಜ್ ಪಂದ್ಯ: ಮುಂಬೈ-ಕೋಲ್ಕತ್ತಾ ನಡುವೆ ಯಾರಿಗೆ ವಿಜಯ?

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯಲ್ಲಿಂದು (IPL 2021) 34ನೇ ಪಂದ್ಯ ನಡೆಯಲಿದ್ದು ರೋಹಿತ್ ಶರ್ಮಾ (Rohit Sharma) ನಾಯಕತ್ವದ ಮುಂಬೈ ಇಂಡಿಯನ್ಸ್ ಮತ್ತು ಇಯಾನ್ ಮಾರ್ಗನ್ (Eion Morgan) ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (MIvsKKR) ತಂಡಗಳು ಮುಖಾಮುಖಿ ಆಗುತ್ತಿವೆ. ಮುಂಬೈ ತಂಡ ಈ ಬಾರಿಯ ಟೂರ್ನಿಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಕಂಡಿದೆ. ಆಡಿದ ಎಂಟು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ನಾಲ್ಕರಲ್ಲಿ ಸೋಲು ಅನುಭವಿಸಿದೆ. ಇತ್ತ ಕೆಕೆಆರ್ ತಂಡ ಆಡಿದ …

Read More »

ಬೆಂಕಿ ಅವಘಡ: ಪ್ರಾಣ ಉಳಿಸುವಂತೆ ಅಳಿಯನ ಬಳಿ ಅಂಗಲಾಚಿದ್ದ ಮೃತ ಮಹಿಳೆ

ಬೆಂಗಳೂರು: ‘ಕೊಠಡಿಯಲ್ಲಿ ಬೆಂಕಿ ಬಿದ್ದಿದೆ. ಬೇಗ ಬಂದು ಕಾಪಾಡಪ್ಪ. ಬೇಗ ಬಾ…’ ದೇವರಚಿಕ್ಕನಹಳ್ಳಿಯ ವಸತಿ ಸಮುಚ್ಚಯದಲ್ಲಿ ಮಂಗಳವಾರ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಸಜೀವ ದಹನವಾದ ಭಾಗ್ಯರೇಖಾ ಅವರು ತಮ್ಮ ಅಳಿಯ ಸಂದೀಪ್‌ ಬಳಿ ರಕ್ಷಣೆಗಾಗಿ ಅಂಗಲಾಚಿದ್ದ ಪರಿ ಇದು. ಸಂದೀಪ್‌-ಪ್ರೀತಿ ದಂಪತಿ ಪ್ರೀತಿಯ ಅವರ ತಾಯಿ ಭಾಗ್ಯರೇಖಾ ವಾಸವಿದ್ದ ಫ್ಲ್ಯಾಟ್‌ನ ಪಕ್ಕದಲ್ಲೇ (ಫ್ಲ್ಯಾಟ್‌ ನಂಬರ್‌ 211) ನೆಲೆಸಿದ್ದರು. ಅತ್ತೆ ಕರೆ ಮಾಡಿ ಹೇಳಿದ ಬಳಿಕವಷ್ಟೇ ಸಂದೀಪ್‌ಗೆ ಅಗ್ನಿ ಅವಘಡದ ವಿಷಯ …

Read More »