Breaking News

Daily Archives: ಸೆಪ್ಟೆಂಬರ್ 23, 2021

ನಾಡಹಬ್ಬ ದಸರಾ ಉದ್ಘಾಟನೆಗೆ ಇಬ್ಬರ ಹೆಸರು ಶಿಫಾರಸು

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದ್ದು ದಸರಾ ಉದ್ಘಾಟಕರ ಆಯ್ಕೆಗೆ ಮೈಸೂರಿನ ಇಬ್ಬರ ಹೆಸರನ್ನು ಶಿಫಾರಸು ಮಾಡಲಾಗಿದೆ. ರಾಷ್ಟ್ರಕವಿ ಕುವೆಂಪು ಅವರ ಅಳಿಯ ಹಾಗೂ ಶಿವಮೊಗ್ಗ ಕುವೆಂಪು ವಿವಿ ವಿಶ್ರಾಂತ ಕುಲಪತಿಯಾದ ಪ್ರೊ.ಕೆ.ಚಿದಾನಂದ‌ಗೌಡ ಮತ್ತು ಸುಧರ್ಮ ಸಂಸ್ಕೃತ ಪತ್ರಿಕೆ ಸಂಪಾದಕಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಜಯಲಕ್ಷ್ಮಿ ಹೆಸರನ್ನ ಶಿಫಾರಸು ಮಾಡಲಾಗಿದೆ. ಮೈಸೂರಿನ ಸಂಘ ಸಂಸ್ಥೆಗಳು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ಗೆ ಶಿಫಾರಸು ಮಾಡಿವೆ. ಈ ಕುರಿತು ಸಚಿವ ಎಸ್.ಟಿ.ಸೋಮಶೇಖರ್ …

Read More »

ನಿಪ್ಪಾಣಿ ಗಾಂಜಾ ಮಾರಾಟ – ಇಬ್ಬರು ಯುವಕರ ಬಂಧನ

  ನಿಪ್ಪಾಣಿ: ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಸ್ಥಳೀಯ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ನಿಪ್ಪಾಣಿ ಪಟ್ಟಣದ ಬಾದಲ್ ಪ್ಲಾಟ್‍ನ ಸೋಹೆಲ್ ಶಬ್ಬೀರ ದೇಸಾಯಿ(26) ಹಾಗೂ ಶಿವಾಜಿನಗರ ಹಮೀದ ಸಲಮಾನ ಶೇಖ(21) ಬಂಧಿತ ಯುವಕರು. ಬಂಧಿತರಿಂದ ಸುಮಾರು 15 ಸಾವಿರ ಮೌಲ್ಯದ ಒಂದು ಕೆ.ಜಿ ಗೂ ಅಧಿಕ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.   ಇನ್ನೊಬ್ಬ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಶೋಧ ನಡೆಸಿದ್ದಾರೆ. ನ್ಯಾಯಾಂಗ ಬಂಧನಕ್ಕಾಗಿ ಇಬ್ಬರನ್ನೂ ಸ್ಥಳೀಯ …

Read More »

ಸವದತ್ತಿ ಯಲ್ಲಮ್ಮ ದೇಗುಲದ ದರ್ಶನಕ್ಕೆ ಸೆಪ್ಟೆಂಬರ್ 28 ರಿಂದ ಅವಕಾಶ

ಬೆಳಗಾವಿ: ಸೆಪ್ಟೆಂಬರ್ 28 ರಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತಾದಿಗಳ ದರ್ಶನಕ್ಕೆ ಅನುಮತಿ ನೀಡಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶಿಸಿದ್ದಾರೆ. ಕಳೆದ 17ತಿಂಗಳಿಂದ ಕೊವಿಡ್ ಹಿನ್ನೆಲೆಯಲ್ಲಿ ದೇವಿ ದರ್ಶನಕ್ಕೆ ಅವಕಾಶವನ್ನು ಸ್ಥಗಿತಗೊಳಿಸಲಾಗಿತ್ತು. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯಲ್ಲಮ್ಮ ಗುಡ್ಡದಲ್ಲಿರುವ ದೇವಸ್ಥಾನಕ್ಕೆ ಮಹಾರಾಷ್ಟ್ರದಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ದರ್ಶನಕ್ಕೆ ಅನುಮತಿ ನೀಡಲಾಗಿದ್ದರೂ, ಜನಸಂದಣಿ ಆಗುವಂತಹ ಉತ್ಸವ, ಜಾತ್ರೆ ಕಾರ್ಯಕ್ರಮ ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ. ಕಡ್ಡಾಯವಾಗಿ ಕೊವಿಡ್ ನಿಯಮ …

Read More »

ಬೆಳಗಾವಿ: ತೋಟದಲ್ಲಿ ಕೆಲಸಕ್ಕಿದ್ದ ಮಹಿಳೆ ಮೇಲೆ ಅತ್ಯಾಚಾರ; ಮಾಲೀಕ ಅರೆಸ್ಟ್

ಬೆಳಗಾವಿ: ರಾಜ್ಯದಲ್ಲಿ ಹೆಣ್ಣಿಗೆ ರಕ್ಷಣೆ ಇಲ್ಲದಂತಾಗಿದೆ. ದಿನಕ್ಕೊಂದು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬೆಳಗಾವಿಯ ಜಿಲ್ಲೆಯ ತೋಟದಲ್ಲಿ ಕೆಲಸಕ್ಕಿದ್ದ ಮಹಿಳೆ ಮೇಲೆ ಮಾಲೀಕ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ಗೋಕಾಕ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 17ರಂದು ರಾತ್ರಿ ವೇಳೆ ಮಾಲೀಕ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆ ಆರೋಪಿಯ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಳು. ಆರೋಪಿ ಮನೆಯ ಎದುರು ಶೆಡ್​ನಲ್ಲಿ ಆಕೆಯ …

Read More »

ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​ನ್ನು ಇಂದು ಭೇಟಿಯಾಗಲಿದ್ದಾರೆ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರುವಾರ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ಅವರನ್ನು ಭೇಟಿ ಮಾಡಲಿದ್ದಾರೆ. ಉಭಯ ನಾಯಕರ ನಡುವಿನ ಮೊದಲ ವೈಯಕ್ತಿಕ ಭೇಟಿ ಇದಾಗಿದೆ.  ಕಮಲಾ  ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೊದಲ ಭಾರತೀಯ ಮೂಲದ ವ್ಯಕ್ತಿ. ಈ ಹಿಂದೆ, ಇಬ್ಬರು ನಾಯಕರು ಕೊವಿಡ್ -19  (Covid -19) ಬಿಕ್ಕಟ್ಟಿನ ಸಂದರ್ಭದಲ್ಲಿ ದೂರವಾಣಿ ಮೂಲಕ ಮಾತನಾಡಿದ್ದರು.  ಪ್ರಧಾನಿ ಮೋದಿ ಬುಧವಾರ ಅಮೆರಿಕಕ್ಕೆ …

Read More »

ಭೋಜನ ಕೂಟದಲ್ಲೂ ಆಪರೇಷನ್ ಹಸ್ತದ ಬಗ್ಗೆ ಎಚ್ಚರಿಕೆ ನೀಡಿದ ಬಿಎಸ್‍ವೈ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ರೇಸ್ ವೀವ್ ಕಾಟೇಜ್ ನಿವಾಸದಲ್ಲಿ ನಿನ್ನೆ ರಾತ್ರಿ ಭೋಜನ ಕೂಟ ಏರ್ಪಡಿಸಲಾಗಿತ್ತು. ಈ ವೇಳೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಕಾಂಗ್ರೆಸ್ ನಮ್ಮ ಶಾಸಕರನ್ನು ಸೆಳೆಯಲು ಗಾಳ ಹಾಕಿದೆ ಎಚ್ಚರದಿಂದಿರಿ. ಯಾರೂ ಕಾಂಗ್ರೆಸ್ ಪ್ರಲೋಭನೆಗೆ ಒಳಗಾಗುವುದು ಬೇಡ ಎಂದು ಕಿವಿಮಾತು ನೀಡಿದ್ದಾರೆ. ಶಾಸಕರೊಂದಿಗೆ ಚರ್ಚಿಸಿದ ಬಿಎಸ್‍ವೈ, ಯಾರಾದರೂ ಕಾಂಗ್ರೆಸ್ ನಾಯಕರು ನಮ್ಮ ಶಾಸಕರ ಸಂಪರ್ಕಿಸಿದರೆ ನಾಯಕರ ಗಮನಕ್ಕೆ ತನ್ನಿ. ಶಾಸಕರ ಬೇಕು ಬೇಡಗಳನ್ನು ಈಡೇರಿಸಲು …

Read More »

ಬೆಚ್ಚಿಬಿದ್ದ ಕಲಬುರಗಿ: ಕಟ್ಟಿಗೆಯಿಂದ ಹೊಡೆದು ಪತ್ನಿ-ಮಗಳ ಕೊಂದ ಪಾಪಿ ಪತಿ..!

ಕಲಬುರಗಿ: ಕಟ್ಟಿಗೆಯಿಂದ ಹೊಡೆದು ಪತ್ನಿ ಮತ್ತು ಮಗಳನ್ನ ಕೊಲೆ ಮಾಡಿರುವ ಘಟನೆ ಸೇಡಂ ಪಟ್ಟಣದ ಈಶ್ವರ್ ನಗರದಲ್ಲಿ ನಡೆದಿದೆ. ದಿಗಂಬರ್ 46 ಅನ್ನೋ ವ್ಯಕ್ತಿಯಿಂದ ಪತ್ನಿ ಮತ್ತು ಮಗಳನ್ನ ಕಗ್ಗೊಲೆ ಮಾಡಿದ್ದಾನೆ. ಜಗದೀಶ್ವರಿ 45, ಪ್ರಿಯಾಂಕಾ 11 ಕೊಲೆಯಾದ ದುರ್ದೈವಿಗಳು. ಮಧ್ಯರಾತ್ರಿ ಮನೆಯಲ್ಲಿ ಜಗಳ ತೆಗೆದು ಕೊಲೆ ಮಾಡಿದ್ದಾರೆ. ಪತ್ನಿ ಶೀಲ ಶಂಕಿಸಿ ಕೊಲೆ ಮಾಡಿರೋ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿದ್ದಾರೆ. ಆರೋಪಿ ದಿಗಂಬರ್​ನನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸೇಡಂ ಪೊಲೀಸ್ …

Read More »

ಕೇಂದ್ರದ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮ ಸೆ.26ರಂದು

ಬೆಳಗಾವಿ – ಕೇಂದ್ರದ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮ ಸೆ.26ರಂದು ನಡೆಯಲಿದೆ. ಅಂದು ಬೆಳಗ್ಗೆ 10.30ಕ್ಕೆ ಸುರೇಶ ಅಂಗಡಿ ಎಜುಕೇಶನ್ ಇನ್ ಸ್ಟಿಟ್ಯೂಟ್ ಆವರಣದಲ್ಲಿ ಪುತ್ಥಳಿ ಅನಾವರಣಗೊಳ್ಳಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್ ಸೇರಿದಂತೆ ಹಲವಾರು ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಸುರೇಶ ಅಂಗಡಿ ಕೇಂದ್ರದ ರೈಲ್ವೆ ಸಚಿವರಾಗಿ ಕೆಲಸ ಮಾಡುತ್ತಿರುವಾಗಲೇ, 2020ರ ಸೆಪ್ಟಂಬರ್ 23ರಂದು …

Read More »

‘ನಮ್ಮನೆ ಯುವರಾಣಿ’ ಅಂಕಿತಾಗೆ ಹೊಗಳಿಕೆಯೋ ಹೊಗಳಿಕೆ

ಎಸ್​.ಪಿ. ಬಾಲಸುಬ್ರಹ್ಮಣ್ಯಂ​ ಅವರು ಜಡ್ಜ್​​ ಆಗಿ ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಸಾಕಷ್ಟು ಟ್ಯಾಲೆಂಟ್​ಗಳಿಗೆ ಇದು ವೇದಿಕೆ ಆಗಿತ್ತು. ‘ನಮ್ಮನೆ ಯುವರಾಣಿ’ ಧಾರಾವಾಹಿ ಮೂಲಕ ಹೆಚ್ಚು ಮನೆ ಮಾತಾದವರು ಅಂಕಿತಾ. ಮೀರಾ ಪಾತ್ರದಲ್ಲಿ ನಟಿಸುವ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿಕೊಂಡರು. ಈಗ ಅವರನ್ನು ಅಭಿಮಾನಿಗಳು ಬಾಯ್ತುಂಬ ಹೊಗಳುತ್ತಿದ್ದಾರೆ. ಹಾಗಂತ ಇದು ನಟನೆ ವಿಚಾರಕ್ಕಲ್ಲ. ಹಾಗಾದರೆ ಮತ್ತಿನ್ನೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ. ಎಸ್​.ಪಿ. ಬಾಲಸುಬ್ರಹ್ಮಣ್ಯಂ​ …

Read More »

ದಲಿತ ಸಮುದಾಯದ ಮಗು ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಂಡ ಕೇಸ್; ಐವರನ್ನ ಬಂಧಿಸಿದ ಪೊಲೀಸ್

ಕೊಪ್ಪಳ: ಮಕ್ಕಳು ದೇವರ ಸಮಾನ ಅಂತಾರೆ. ಆದ್ರೆ, ಇಲ್ಲೊಂದು ದಲಿತ ಸಮುದಾಯದ ಮಗು ತನ್ನ ಹುಟ್ಟು ಹಬ್ಬದ ಸಂತಸದಲ್ಲಿ ಗ್ರಾಮದ ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ಬಾಲಕನಿಗೆ ದಂಡವಿಧಿಸಿ ಅಮಾನವೀಯವಾಗಿ ನಡೆದಿಕೊಂಡಿದ್ದಾರೆ. ಗ್ರಾಮಸ್ಥರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮಕೈಗೊಂಡಿದೆ. ಗ್ರಾಮದಲ್ಲಿ ಡಿಸಿ, ಎಸ್​ಪಿ, ಎಸಿ ಸಭೆ ನಡೆಸಿದ್ದು, ಅಸ್ಪೃಶ್ಯತೆ ಆಚರಿಸಿದ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಐದು ಜನರು ಬಂಧಿಸಿದ್ದಾರೆ.   ಸೆಪ್ಟೆಂಬರ್ 4 ರಂದು ಚಂದ್ರಶೇಖರ ಚೆನ್ನದಾಸರ ಅವರ ಪುತ್ರ …

Read More »