Breaking News
Home / 2021 / ಆಗಷ್ಟ್ / 19 (page 3)

Daily Archives: ಆಗಷ್ಟ್ 19, 2021

ಗೋವಾ ಗಡಿ ತೆರೆಯಲು ಆತುರು ಬೇಡ : ಕಾಂಗ್ರೆಸ್

ಪಣಜಿ : ಗೋವಾದಲ್ಲಿ ಕೋವಿಡ್ ಸೋಂಕಿತರು ಕಡಿಮೆಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗೋವಾ ಗಡಿಗಳನ್ನು ಓಪನ್ ಮಾಡಿ ಹೊರ ರಾಜ್ಯಗಳಿಂದ ಗೋವಾಕ್ಕೆ ಪ್ರವಾಸಿಗರು ಬರಮಾಡಿಕೊಳ್ಳಲು ಸರ್ಕಾರ ನೋಡುತ್ತಿದೆ. ಆದರೆ ಇದಕ್ಕೂ ಮುನ್ನ ಸರ್ಕಾರ ಗೋವಾದ ಎಲ್ಲಾ ಗಡಿಗಳಲ್ಲಿ ಸುಸಜ್ಜಿತ ಕೋವಿಡ್ ತಪಾಸಣಾ ಕೇಂದ್ರವನ್ನು ಸ್ಥಾಪನೆ ಮಾಡಬೇಕು, ನಂತರ ಗಡಿಗಳನ್ನು ತೆರೆಯಬೇಕು ಎಂದು ಗೋವಾ ಕಾಂಗ್ರೇಸ್ ಪಕ್ಷವು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಗೆ ಮನವಿ ಮಾಡಿದೆ. ಕಾಂಗ್ರೇಸ್ ಪ್ರದೇಶ ಸಮೀತಿಯ ಉಪಾಧ್ಯಕ್ಷ ಹಾಗೂ …

Read More »

ರಾಹುಲ್‌ರನ್ನು ಮೊದಲು ನೋಡಿದ್ದು ನಾನೇ

ವಯನಾಡ್‌/ನವದೆಹಲಿ:ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಯವರಿಗೆ ಜನ್ಮ ನೀಡುವಾಗ ಹೆರಿಗೆ ಮಾಡಿಸಿದ್ದ ನರ್ಸ್‌ ರಾಜಮ್ಮ ವವಾತಿಲ್‌ ಎಂಬುವರು ಅವರನ್ನು ಭೇಟಿಯಾಗಿದ್ದಾರೆ. ಜತೆಗೆ ಅವರಿಗೆ ಸಿಹಿ ಇರುವ ಬಾಕ್ಸ್‌ ನೀಡಿ, ತಾಯಿ ಸೋನಿಯಾ ಮತ್ತು ಕುಟುಂಬದ ಇತರ ಸದಸ್ಯರ ಆರೋಗ್ಯ ವಿಚಾರಿಸಿದ್ದಾರೆ.   ವಯನಾಡ್‌ ಸಂಸದರಾಗಿರುವ ರಾಹುಲ್‌ ಕ್ಷೇತ್ರ ಪ್ರವಾಸ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. “1970ರಲ್ಲಿ ನವದೆಹಲಿಯ ಹೋಲಿಸ್‌ ಫ್ಯಾಮಿಲಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದೆ. …

Read More »

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಅಪಸ್ವರ

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿ ನ ಕೋಡಿಹಳ್ಳಿ ಗ್ರಾಮದಲ್ಲಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೈಜ್ಞಾನಿಕವಾಗಿ ನಡೆಯುತ್ತಿಲ್ಲ. ಈ ಹಿಂದೆ ಸ್ಥಳ ವೀಕ್ಷಣೆ ಮಾಡಿ ಬಳಿಕ ನಿತಿನ್ ಗಡ್ಕರಿ ಅವರ ಗಮನಕ್ಕೂ ತರಲಾಗಿದೆ. ಮಂಡ್ಯ: ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಅಸಮಾಧಾನ ವ್ಯಕ್ತಪಡಿಸಿದ್ದು, ಸೈಂಟಿಫಿಕ್ ಆಗಿ ಹೆದ್ದಾರಿ ಕಾಮಗಾರಿ ಆಗ್ತಿಲ್ಲ. ಇದನ್ನು ಈ ಹಿಂದೆ ಸ್ಥಳ …

Read More »

ಅಫ್ಘಾನ್ ಪ್ರಜೆಗಳಿಗೆ ಭಯ ಬೇಡ: ಅರಗ ಜ್ಞಾನೇಂದ್ರ

ಬೆಂಗಳೂರು: ರಾಜ್ಯದಲ್ಲಿ 339 ಮಂದಿ ಅಫ್ಘಾನಿಸ್ತಾನದ ಪ್ರಜೆಗಳಿದ್ದಾರೆ. ಈ ಪೈಕಿ 192 ಮಂದಿ ವಿದ್ಯಾರ್ಥಿಗಳಿದ್ದಾರೆ. ಅಫ್ಘಾನ್ ಘಟನೆ ಸಂಬಂಧ ಯಾರು ಭಯ ಪಡುವ ಅಗತ್ಯವಿಲ್ಲ. ಮಾನವೀಯ ನೆಲೆಯಲ್ಲಿ ರಾಜ್ಯ ಸರ್ಕಾರ ನೆರವಿಗೆ ಬರಲಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು. ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಸಿಎಆರ್‌ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ನಗರ ಪೊಲೀಸರು ಪತ್ತೆ ಮಾಡಿದ 36 ಕೋಟಿ ರೂ. ಮೌಲ್ಯದ ಕಳವು ಮಾಲುಗಳ ಪ್ರದರ್ಶನ ಮತ್ತು ಮಾಲೀಕರಿಗೆ …

Read More »

86ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಬರೆದ ಮಾಜಿ ಸಿಎಂ

ಹರ್ಯಾಣದ ಮಾಜಿ ಸಿಎಂ ಮತ್ತು ಐಎನ್‌ಎಲ್‌ಡಿ ಮುಖ್ಯಸ್ಥ ಓಂ ಪ್ರಕಾಶ್ ಚೌಟಾಲಾ ಎಲ್ಲರ ಗಮನ ಸೆಳೆದಿದ್ದಾರೆ. ಅಪೂರ್ಣವಾಗಿದ್ದ 10 ನೇ ತರಗತಿಯನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ. ಬುಧವಾರ ಹತ್ತನೇ ಇಂಗ್ಲಿಷ್ ಪರೀಕ್ಷೆಗೆ ಹಾಜರಾಗಿದ್ದರು. ಹರಿಯಾಣದ ಸಿರ್ಸಾದ ಆರ್ಯ ಕನ್ಯಾ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಹರ್ಯಾಣ ಶಾಲಾ ಶಿಕ್ಷಣ ಮಂಡಳಿಯ ಹತ್ತನೇ ತರಗತಿ ಮರು ಪರೀಕ್ಷೆ ನಡೆಯುತ್ತಿದೆ. ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲಾ, ಬುಧವಾರ ಪರೀಕ್ಷಾ ಕೇಂದ್ರಕ್ಕೆ …

Read More »

ನೆಗೆಟಿವ್‌ ವರದಿಯೊಂದಿಗೆ ಬಂದಿದ್ದ 228 ವಿದ್ಯಾರ್ಥಿಗಳಿಗೆ ಪಾಸಿಟಿವ್‌ !

ಮಂಗಳೂರು, : ಕೇರಳ ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಇದೀಗ ದ.ಕ.ಜಿಲ್ಲೆಗೆ ಕೋವಿಡ್ ನೆಗೆಟಿವ್ ವರದಿಯೊಂದಿಗೆ ಬಂದಿದ್ದ ಕೇರಳದ 228 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿರುವುದು ಭೀತಿಗೆ ಕಾರಣವಾಗಿದೆ. ದ.ಕ.ಜಿಲ್ಲೆಯಲ್ಲಿನ ವಿವಿಧ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 228 ಮಂದಿ ಕೇರಳದ ವಿದ್ಯಾರ್ಥಿಗಳಿಗೆ ಕಳೆದ 10 ದಿನಗಳ ಒಳಗೆ ಸೋಂಕು ಕಾಣಿಸಿಕೊಂಡಿದೆ. ಪರೀಕ್ಷೆ ನಿಮಿತ್ತ ನೆಗೆಟಿವ್ ವರದಿಯೊಂದಿಗೆ ಜಿಲ್ಲೆಗೆ ವಿದ್ಯಾರ್ಥಿಗಳು ಆಗಮಿಸಿದ್ದರು. …

Read More »

ದ್ವಿತೀಯ ಪಿಯುಸಿ ಪರೀಕ್ಷೆ, ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ

ಬೆಂಗಳೂರು,- ಸೆ.3ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಬಸ್‍ನಲ್ಲಿ ಉಚಿತವಾಗಿ ಪ್ರಯಾಣಿಸಲು ಕೆಎಸ್‍ಆರ್‍ಟಿಸಿ ಅವಕಾಶ ಮಾಡಿಕೊಟ್ಟಿದೆ. ವಿದ್ಯಾರ್ಥಿಗಳು ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ ಮತ್ತು ಪರೀಕ್ಷಾ ಕೇಂದ್ರದಿಂದ ಮನೆಗೆ ಹಿಂದಿರುಗುವಾಗ ದ್ವಿತೀಯ ಪಿಯುಸಿ ಪ್ರವೇಶಪತ್ರವನ್ನು ತೋರಿಸಿ ಕೆಎಸ್‍ಆರ್‍ಟಿಸಿ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗಧೂತ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಂಬಂಧ ಕೆಎಸ್‍ಆರ್‍ಟಿಸಿಯ ಎಲ್ಲ ಚಾಲಕ, ನಿರ್ವಾಹಕರಿಗೆ ಸೂಕ್ತ ತಿಳುವಳಿಕೆ ನೀಡಲು ಎಲ್ಲ ಹಿರಿಯ ವಿಭಾಗೀಯ …

Read More »

ಸಚಿವೆ ಶಶಿಕಲಾಗೆ ಝೀರೋ ಟ್ರಾಫಿಕ್‌: ಹೈಕೋರ್ಟ್‌ಗೆ ಅರ್ಜಿ

ಬೆಂಗಳೂರು: ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನಕ್ಕೆ ಬರಲು ಶಶಿಕಲಾ ಜೊಲ್ಲೆ ಅವರಿಗೆ ಝೀರೋ ಟ್ರಾಫಿಕ್ (ತಡೆರಹಿತ ಸಂಚಾರ) ಸೌಲಭ್ಯ ಕಲ್ಪಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿ ನಗರದ ವಕೀಲ ಜಿ. ಬಾಲಾಜಿ ನಾಯ್ಡು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು …

Read More »

ಪತ್ನಿಗೆ ವಿಚ್ಚೇದನ ನೀಡಬಹುದು ಮಕ್ಕಳಿಗಲ್ಲ ಎಂದ ಸುಪ್ರೀಂ ಕೋರ್ಟ್‌

ನವದೆಹಲಿ, ;ಪತ್ನಿಗೆ ವಿಚ್ಛೇದನ ನೀಡಬಹುದು. ಆದರೆ, ಮಕ್ಕಳಿಗೆ ವಿಚ್ಛೇದನ ನೀಡುವುದು ಸಾಧ್ಯವಿಲ್ಲ ಎಂದು ವಿಚ್ಛೇದನ ಪ್ರಕರಣವೊಂದರ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ಸಂವಿಧಾನ ವಿಧಿ-142ರಡಿ ದಂಪತಿಗೆ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ನೀಡಿದ ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಬಿ.ವೈ.ಚಂದ್ರಚೂಡ್ ಮತ್ತು ಎಂ.ಆರ್.ಶಾ ಅವರನ್ನೊಳಗೊಂಡ ನ್ಯಾಯಪೀಠ ಒಪ್ಪಂದದ ದಂಪತಿಗಳು ಪರಿಹಾರದ ಷರತ್ತುಗಳಿಗೆ ಬದ್ಧರಾಗಿರಬೇಕು. ಮಕ್ಕಳ ಉಸ್ತುವಾರಿ, ಆರೈಕೆಗೆ ಆರು ವಾರಗಳೊಳಗಾಗಿ 4 ಕೋಟಿ ಪರಿಹಾರವನ್ನು ಪತಿ ಪತ್ನಿಗೆ ನೀಡಬೇಕು ಎಂದು ಹೇಳಿದೆ. …

Read More »

ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ಆಹಾರ ಕಿಟ್ ರವಾನೆ

ನಾಯಕನಹಟ್ಟಿ: ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ಆಹಾರದ ಕಿಟ್ ನೀಡಲು ಮುಂದಾಗಿರುವ ಮುಸ್ಲಿಂ ಸಮುದಾಯದ ಕಾರ್ಯ ಶ್ಲಾಘನೀಯ ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು. ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ಆಹಾರದ ಕಿಟ್ ರವಾನಿಸುವ ಕಾರ್ಯಕ್ಕೆ ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ಜಾಮಿಯಾ ಮಸೀದಿ ಅಧ್ಯಕ್ಷ ಸೈಯದ್‌ ಅನ್ವರ್ ಮಾತನಾಡಿ, ‘ಜಮೀಯತ್ ಉಲಮಾ-ಎ-ಹಿಂದ್ ಮತ್ತು ಜಾಮಿಯ ಮಸೀದಿ ಸಹಯೋಗದಲ್ಲಿ …

Read More »