Breaking News
Home / ರಾಜಕೀಯ / ಪತ್ನಿಗೆ ವಿಚ್ಚೇದನ ನೀಡಬಹುದು ಮಕ್ಕಳಿಗಲ್ಲ ಎಂದ ಸುಪ್ರೀಂ ಕೋರ್ಟ್‌

ಪತ್ನಿಗೆ ವಿಚ್ಚೇದನ ನೀಡಬಹುದು ಮಕ್ಕಳಿಗಲ್ಲ ಎಂದ ಸುಪ್ರೀಂ ಕೋರ್ಟ್‌

Spread the love

ನವದೆಹಲಿ, ;ಪತ್ನಿಗೆ ವಿಚ್ಛೇದನ ನೀಡಬಹುದು. ಆದರೆ, ಮಕ್ಕಳಿಗೆ ವಿಚ್ಛೇದನ ನೀಡುವುದು ಸಾಧ್ಯವಿಲ್ಲ ಎಂದು ವಿಚ್ಛೇದನ ಪ್ರಕರಣವೊಂದರ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ಸಂವಿಧಾನ ವಿಧಿ-142ರಡಿ ದಂಪತಿಗೆ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ನೀಡಿದ ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಬಿ.ವೈ.ಚಂದ್ರಚೂಡ್ ಮತ್ತು ಎಂ.ಆರ್.ಶಾ ಅವರನ್ನೊಳಗೊಂಡ ನ್ಯಾಯಪೀಠ ಒಪ್ಪಂದದ ದಂಪತಿಗಳು ಪರಿಹಾರದ ಷರತ್ತುಗಳಿಗೆ ಬದ್ಧರಾಗಿರಬೇಕು.

ಮಕ್ಕಳ ಉಸ್ತುವಾರಿ, ಆರೈಕೆಗೆ ಆರು ವಾರಗಳೊಳಗಾಗಿ 4 ಕೋಟಿ ಪರಿಹಾರವನ್ನು ಪತಿ ಪತ್ನಿಗೆ ನೀಡಬೇಕು ಎಂದು ಹೇಳಿದೆ. ವಿಚಾರಣೆ ವೇಳೆ ಪತಿ ಪರ ವಕೀಲ ಸಂಧಾನ ಪ್ರಕ್ರಿಯೆ ಎರಡೂ ಹಂತಗಳಲ್ಲಿ ಎರಡೂ ಕಡೆಯ ಮಧ್ಯೆ ಒಪ್ಪಿಗೆಗೆ ಬರಲಾಗಿದ್ದು, ಪತ್ನಿಗೆ ಪರಿಹಾರವಾಗಿ 4 ಕೋಟಿ ರೂ. ನೀಡಲು ಸಮಯಾವಕಾಶ ಬೇಕು.

ಕೋವಿಡ್ ಸಾಂಕ್ರಾಮಿಕದಿಂದ ವ್ಯಾಪಾರ-ವಹಿವಾಟಿನ ಮೇಲೆ ಹೊಡೆತ ಬಿದ್ದಿದೆ ಎಂದು ಪತಿ ಪರ ವಕೀಲ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ವಿವಾಹ ವಿಚ್ಛೇದನ ಇತ್ಯರ್ಥದ ಸಮಯದಲ್ಲಿ ಪರಿಹಾರ ನೀಡುವುದಾಗಿ ಈ ಹಿಂದೆ ತಾವು ಒಪ್ಪಿಕೊಂಡಿದ್ದೀರಿ. ಈಗ ನೀವು 4 ಕೋಟಿ ರೂ. ಪರಿಹಾರ ನೀಡಲೇಬೇಕು. ಸಮಯಾವಕಾಶ ಕೇಳುತ್ತಿರುವುದು ಸರಿಯಲ್ಲ ಎಂದು ನ್ಯಾಯಪೀಠ ಹೇಳಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ