Breaking News
Home / 2021 / ಆಗಷ್ಟ್ / 11 (page 4)

Daily Archives: ಆಗಷ್ಟ್ 11, 2021

ಬೆಳಗಾವಿ, ಹುಬ್ಬಳ್ಳಿ -ಧಾರವಾಡ ಹಾಗೂ ಕಲಬುರಗಿ ಪಾಲಿಕೆಗಳ ಚುನಾವಣೆ ದಿನಾಂಕ ಘೋಷಣೆ

ಬೆಂಗಳೂರು – ಬೆಳಗಾವಿ ಸೇರಿದಂತೆ 3 ಮಹಾನಗರ ಪಾಲಿಕೆಗಳ ಚುನಾವಣೆ ಘೋಷಣೆಯಾಗಿದೆ. ಬೆಳಗಾವಿ, ಹುಬ್ಬಳ್ಳಿ -ಧಾರವಾಡ ಹಾಗೂ ಕಲಬುರಗಿ ಪಾಲಿಕೆಗಳ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಸೆಪ್ಟಂಬರ್ 3ರಂದು ಚುನಾವಣೆ ನಡೆಯಲಿದ್ದು, ಸೆಪ್ಟಂಬರ್ 6ರಂದು ಫಲಿತಾಂಶ ಪ್ರಕಟವಾಗಲಿದೆ.

Read More »

ಜೊಲ್ಲೆ ನನ್ನ ಸಿಸ್ಟರ್ ಇದ್ದ ಹಾಗೆ, ಅವರ ಬಗ್ಗೆ ತನಿಖೆ ಅಗತ್ಯವಿಲ್ಲ ಎಂದ ಈಶ್ವರಪ್ಪ

ಬೆಳಗಾವಿ – ಶಶಿಕಲಾ ಜೊಲ್ಲೆ ನನ್ನ ಸಿಸ್ಟರ್ ಇದ್ದಹಾಗೆ. ಅವರ ಬಗ್ಗೆ ನೂರಕ್ಕೆ ನೂರು ವಿಶ್ವಾಸವಿದೆ. ಯಾರೋ ಹೇಳಿದ ತಕ್ಷಣ ಅದನ್ನೆಲ್ಲ ತನಿಖೆ ಮಾಡುವುದಕ್ಕಾಗುವುದಿಲ್ಲ. ಅವರ ಬಗ್ಗೆ ತನಿಖೆ ಅಗತ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.     ಬೆಳಗಾವಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜೊಲ್ಲೆಯವರ ಬಗ್ಗೆ ಬಂದಿರುವ ಆರೋಪಗಳಲ್ಲಿ ಹುರುಳಿಲ್ಲ. ಅದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಸುಮ್ಮನೇ ಯಾರೋ ಹೇಳುತ್ತಾರೆಂದು ಎಲ್ಲವನ್ನೂ ತನಿಖೆಗೊಳಪಡಿಸಲು ಸಾಧ್ಯವಿಲ್ಲ. …

Read More »

ಕೊಲೆ ಪ್ರಕರಣ : ಎಂಟು ಜನರಿಗೆ ಜೀವಾವಧಿ ಶಿಕ್ಷೆ.

ಗೋಕಾಕ : ಎರಡು ಕುಟುಂಬಗಳ ನಡುವಿನ ಭೂ ವಿವಾದದ ವೈಷಮ್ಯದ ಹಿನ್ನೆಲೆಯಲ್ಲಿ ಗೋಕಾಕ ತಾಲ್ಲೂಕಿನ ಕುಂದರಗಿ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 25 ಸಾವಿರ ರೂಪಾಯಿ ದಂಡ ವಿಧಿಸಿ ಇಲ್ಲಿನ 12ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ. ಆರೋಪಿಗಳೆಲ್ಲರೂ ಕುಂದರಗಿ ಗ್ರಾಮದವರಾಗಿದ್ದಾರೆ. ಮಹಮ್ಮದಹನೀಪ ದೇಸಾಯಿ(50) ಸಹೋದರರಾದ ಮೆಹಬೂಬ ದೇಸಾಯಿ(47) ಹಾಗೂ ಹಸನಸಾಬ ದೇಸಾಯಿ(57), ಪುತ್ರ ಸೋಹೆಲ್ ದೇಸಾಯಿ(21), …

Read More »

ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ತಮ್ಮನ್ನು ಭೇಟಿಯಾಗುವಂತೆ ಸಚಿವ ಆನಂದ್​ ಸಿಂಗ್​ಗೆ ಸೂಚನೆ ನೀಡಿದ್ದಾರೆ​.

ಬೆಂಗಳೂರು: ಸಚಿವ ಸ್ಥಾನಕ್ಕೆ ಆನಂದ್ ಸಿಂಗ್​ ರಾಜೀನಾಮೆ ನೀಡುತ್ತಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ, ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ತಮ್ಮನ್ನು ಭೇಟಿಯಾಗುವಂತೆ ಸಚಿವ ಆನಂದ್​ ಸಿಂಗ್​ಗೆ ಸೂಚನೆ ನೀಡಿದ್ದಾರೆ​.   ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ರಚನೆಯಾಗುತ್ತಿದ್ದಂತೆ ಅನೇಕ ಸಚಿವರು ತಮಗೆ ನೀಡಿದ ಖಾತೆಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಆನಂದ್​ ಸಿಂಗ್​ ಕೂಡ ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದು, ಇಂಧನ ಹಾಗೂ ಅರಣ್ಯ ಖಾತೆ ನೀಡುವಂತೆ ವರಿಷ್ಠರ …

Read More »

ಕಾಂಗ್ರೆಸ್ ನಾಯಕರ ವಿರುದ್ಧ ಕೆ.ಎಸ್.ಈಶ್ವರಪ್ಪ ಅವಾಚ್ಯ ಶಬ್ದ ಬಳಕೆ ವಿಚಾರ. laxminews

ಬೆಳಗಾವಿ: ಕಾಂಗ್ರೆಸ್ ನಾಯಕರ ವಿರುದ್ಧ ಸಿಟ್ಟಿನ ಭರದಲ್ಲಿ ಆಡಿದ್ದ ‘ಆ ಮಾತನ್ನು’ ವಾಪಸ್ ಪಡೆದಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಸಿಟ್ಟಿನ ಭರದಲ್ಲಿ ನಾನು ಆ ರೀತಿಯಾಗಿ ಹೇಳಿಕೆ ನೀಡಿದ್ದೇನೆ. ನಾನು ಆ ಪದವನ್ನು ವಾಪಸ್ ಪಡೆಯುತ್ತೇನೆ ಎಂದು ಅವರು ಬೆಳಗಾವಿಯಲ್ಲಿ ತಿಳಿಸಿದರು.   ಇತ್ತೀಚೆಗಷ್ಟೇ ಬಿಜೆಪಿಯ ಒಬ್ಬನೇ ಒಬ್ಬ ಕಾರ್ಯಕರ್ತನ ಮೈಮುಟ್ಟಿ ನೋಡಲಿ, ಅದರ ಪರಿಣಾಮವೇ ಬೇರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಕೆ …

Read More »

ಪಿಯುಸಿ ಪಾಸಾದರೂ ಕೇದನೂರ ಯುವಕ ಆತ್ಮಹತ್ಯೆ ..! ಆತ್ಮಹತ್ಯೆಗೆ ಬೇರೊಂದು ಕಾರಣದ ವಾಸನೆ..?

ಬೆಳಗಾವಿ: ಬೆಳಗಾವಿ ತಾಲೂಕಿನ ಕೇದನೂರ ಗ್ರಾಮದ ಹೊರವಲಯದಲ್ಲಿರುವ ರಾಜಾಯಿ ಗಲ್ಲಿಯ 19 ವರ್ಷದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಶಾಲ ಮುರಾರಿ ರಾಜಾಯಿ ಆತ್ಮಹತ್ಯೆ ಮಾಡಿಕೊಂಡ ಯುವಕ. ಒಬ್ಬನೇ ಗಂಡು ಮಗನಾಗಿದ್ದ ವಿಶಾಲ ಇತ್ತೀಚಿಗೆ ಪಿಯುಸಿ ಪಾಸಾಗಿದ್ದನು. ಮುಂದಿನ ವಿದ್ಯಾಭ್ಯಾಸಕ್ಕಾಗಿ ತಯಾರಿ ನಡೆಸಿದ್ದನು. ಆದರೆ ಈ ಮದ್ಯೆ ಹಲವು ದಿನಗಳಿಂದ ಏಕಾಂಗಿಯಾಗಿ ಇರುತ್ತಿದ್ದ. ಆತ್ಮಹತ್ಯೆಗೆ ಖಿನ್ನತೆಯೇ ಕಾರಣವೇಂದು ಮೃತರ ತಂದೆ ಕಾಕತಿ ಪೋಲೀಸರಿಗೆ ನೀಡಿರುವ ದೂರದಲ್ಲಿ ತಿಳಿಸಿದ್ದಾರೆ. ಆದರೆ ಆತ್ಮಹತ್ಯೆಗೆ ಬೇರಾವುದೋ …

Read More »

ಬಿಜೆಪಿ ಆದಾಯ ಒಟ್ಟು 3,623 ಕೋಟಿ ರು. ಗಳಿಸಿದೆ.

ನವದೆಹಲಿ(ಆ.11): 2019-20ನೇ ಸಾಲಿನಲ್ಲಿ ಬಿಜೆಪಿ ಒಟ್ಟು 3,623 ಕೋಟಿ ರು. ಆದಾಯ ಗಳಿಸಿದೆ. ಇದರಲ್ಲಿ ಚುನಾವಣಾ ಬಾಂಡ್‌ಗಳ ಮಾರಾಟದಿಂದ 2,555 ಕೋಟಿ ರು. ಗಳಿಸಿದೆ. 2018-18ನೇ ಸಾಲಿಗೆ ಹೋಲಿಸಿದರೆ ಬಿಜೆಪಿಯ ಗಳಿಕೆ ಶೇ. 50ರಷ್ಟುಏರಿಕೆಯಾಗಿದೆ.   ಚುನಾವಣೆ ಮತ್ತು ಪ್ರಚಾರಕ್ಕೆ ಬಿಜೆಪಿ 2019-20ನೇ ಸಾಲಿನಲ್ಲಿ 1651 ಕೋಟಿ ರು.ಗಳನ್ನು ಖರ್ಚು ಮಾಡಿದೆ. ಇದರಲ್ಲಿ 2019ರಲ್ಲಿ ನಡೆದ ಲೋಕಸಭಾ ಚುನಾವಣೆಗೆ 1352 ಕೋಟಿ ರು. ಖರ್ಚು ಮಾಡಿದೆ. ಕಳೆದ ಸಾಲಿಗೆ ಹೋಲಿಸಿದರೆ …

Read More »

ಸುಲಭ ಶೌಚಾಲಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಡಬೇಕು ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿಕೆಯಿಂದ ನನಗೆ ಸಿಟ್ಟು ಬಂತು.

ಬೆಳಗಾವಿ: ‘ಸುಲಭ ಶೌಚಾಲಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಡಬೇಕು ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿಕೆಯಿಂದ ನನಗೆ ಸಿಟ್ಟು ಬಂತು. ಅದರ ಭರದಲ್ಲಿ ‘ಆ ಪದ’ ಬಳಸಿದ್ದು ತಪ್ಪೇ. ಕೂಡಲೇ ಆ ಮಾತನ್ನು ಹಿಂಪಡೆದಿದ್ದೇನೆ’ ಎಂದು ಪಂಚಾಯತ್‌ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.   ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಾತನಾಡಿದ ಅವರು, ‘ಹರಿಪ್ರಸಾದ್ ಹೇಳಿಕೆಯನ್ನು ಕಾಂಗ್ರೆಸ್‌ನವರು ಒಪ್ಪುತ್ತಾರೆಯೇ?’ ಎಂದು ಕೇಳಿದರು.   ‘ನನ್ನ …

Read More »

ಜಿಲ್ಲೆಯಲ್ಲಿ ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಸುರಿದ ಮಳೆಯಿಂದಾಗಿ 506 ಶಾಲೆಗಳ 1,373 ಕೊಠಡಿಗಳು ಹಾಳಾಗಿವೆ.

ಹುಬ್ಬಳ್ಳಿ: ಜಿಲ್ಲೆಯಲ್ಲಿ ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಸುರಿದ ಮಳೆಯಿಂದಾಗಿ 506 ಶಾಲೆಗಳ 1,373 ಕೊಠಡಿಗಳು ಹಾಳಾಗಿವೆ. ನವಲಗುಂದ ತಾಲ್ಲೂಕಿನಲ್ಲಿ ಹಾನಿ ಪ್ರಮಾಣ ಹೆಚ್ಚಿದೆ. 2019ರಲ್ಲಿ ಜಿಲ್ಲೆಯಲ್ಲಿ ವಿಪರೀತ ಮಳೆಯಾಗಿತ್ತು. ಮನೆ ಹಾಗೂ ಕೆಲ ತಾಲ್ಲೂಕುಗಳಲ್ಲಿ ಶಾಲೆಗಳಿಗೆ ನೀರು ನುಗ್ಗಿತು. ಮೇಲಿಂದ ಮೇಲೆ ಸುರಿದ ಮಳೆಯಿಂದಾಗಿ ಹಳೇ ಶಾಲೆಗಳ ಕೊಠಡಿಗಳು ಬಿರುಕು ಬಿಟ್ಟು ಬಿದ್ದಿದ್ದವು. ಆ ವರ್ಷ 199 ಶಾಲೆಗಳ 444 ಕೊಠಡಿಗಳಿಗೆ ಹಾನಿಯಾಗಿತ್ತು. ದುರಸ್ತಿಗೆ ಕಾದಿದ್ದ ಎಲ್ಲ 444 …

Read More »

ಸಮಾಜದಲ್ಲಿ ಜೂಜು, ಡಾರ್ಕ್‌ ವೆಬ್‌ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಬೇಕು.

ಬೆಂಗಳೂರು: ಸಮಾಜದಲ್ಲಿ ಜೂಜು, ಡಾರ್ಕ್‌ ವೆಬ್‌ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಬೇಕು. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವಂತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೊಲೀಸ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ರಾಜ್ಯದ ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ರಾಜ್ಯದಲ್ಲಿ ಅತ್ಯುತ್ತಮ ಪೊಲೀಸ್‌ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸುತ್ತಿದ್ದು, ಪೊಲೀಸರು ಜನರು ಶಾಂತಿ ನೆಮ್ಮದಿಯ ಜೀವನ ನಡೆಸುವ ವಾತಾವರಣ ಸೃಷ್ಟಿಸಬೇಕು ಎಂದು …

Read More »