Breaking News
Home / Uncategorized / ಪಿಯುಸಿ ಪಾಸಾದರೂ ಕೇದನೂರ ಯುವಕ ಆತ್ಮಹತ್ಯೆ ..! ಆತ್ಮಹತ್ಯೆಗೆ ಬೇರೊಂದು ಕಾರಣದ ವಾಸನೆ..?

ಪಿಯುಸಿ ಪಾಸಾದರೂ ಕೇದನೂರ ಯುವಕ ಆತ್ಮಹತ್ಯೆ ..! ಆತ್ಮಹತ್ಯೆಗೆ ಬೇರೊಂದು ಕಾರಣದ ವಾಸನೆ..?

Spread the love

ಬೆಳಗಾವಿ: ಬೆಳಗಾವಿ ತಾಲೂಕಿನ ಕೇದನೂರ ಗ್ರಾಮದ ಹೊರವಲಯದಲ್ಲಿರುವ ರಾಜಾಯಿ ಗಲ್ಲಿಯ 19 ವರ್ಷದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಶಾಲ ಮುರಾರಿ ರಾಜಾಯಿ ಆತ್ಮಹತ್ಯೆ ಮಾಡಿಕೊಂಡ ಯುವಕ.

ಒಬ್ಬನೇ ಗಂಡು ಮಗನಾಗಿದ್ದ ವಿಶಾಲ ಇತ್ತೀಚಿಗೆ ಪಿಯುಸಿ ಪಾಸಾಗಿದ್ದನು. ಮುಂದಿನ ವಿದ್ಯಾಭ್ಯಾಸಕ್ಕಾಗಿ ತಯಾರಿ ನಡೆಸಿದ್ದನು. ಆದರೆ ಈ ಮದ್ಯೆ ಹಲವು ದಿನಗಳಿಂದ ಏಕಾಂಗಿಯಾಗಿ ಇರುತ್ತಿದ್ದ. ಆತ್ಮಹತ್ಯೆಗೆ ಖಿನ್ನತೆಯೇ ಕಾರಣವೇಂದು ಮೃತರ ತಂದೆ ಕಾಕತಿ ಪೋಲೀಸರಿಗೆ ನೀಡಿರುವ ದೂರದಲ್ಲಿ ತಿಳಿಸಿದ್ದಾರೆ.

ಆದರೆ ಆತ್ಮಹತ್ಯೆಗೆ ಬೇರಾವುದೋ ಕಾರಣವಿದೆ ಎಂದು ಗ್ರಾಮದ ಜನ ಗಾಳಿ ಸುದ್ದಿ ಹಬ್ಬಿಸಿದ್ದಾರೆ. ನಿಖರವಾದ ಕಾರಣ ತಿಳಿಯಬೇಕಾದರೇ ಪೋಲೀಸರಿಂದ ಹೆಚ್ಚಿನ ತನಿಖೆ ನಡೆಯಬೇಕಾಗಿದೆ.

ಕಾಕತಿ ಪೋಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸ್ಥಳಕ್ಕೆ ಎಎಸ್ ಐ ನಾರಾಯಣ ಪಟವರ್ಧನ್ ಸಿಬ್ಬಂದಿ ಹೊಂಡಪ್ಪನವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ಬಿಯರ್’ ಕೊರತೆಯ ನಡುವೆಯೂ ಬೆಂಗಳೂರಿನಲ್ಲಿ ಮದ್ಯದ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ:?

Spread the loveಬೆಂಗಳೂರು:ನಗರದಲ್ಲಿ ನೀರಿನ ಬಿಕ್ಕಟ್ಟಿನ ನಂತರ, ಬೆಂಗಳೂರು ಈಗ ಬಿಯರ್ ಕೊರತೆಯನ್ನು ಎದುರಿಸುತ್ತಿದೆ, ಏಕೆಂದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ