Daily Archives: ಆಗಷ್ಟ್ 11, 2021

2 ನಾಡ ಪಿಸ್ತೂಲು, 5 ಜೀವಂತ ಗುಂಡು ವಶ : ನಾಲ್ವರ ಬಂಧನ

ಬೆಂಗಳೂರು,ಆ.11-ಬಿಹಾರ ರಾಜ್ಯದಿಂದ ಅಕ್ರಮವಾಗಿ ನಾಡಪಿಸ್ತೂಲುಗಳನ್ನು ಖರೀದಿ ಮಾಡಿಕೊಂಡು ಬಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿರುವ ಅಶೋಕನಗರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿ ಎರಡು ನಾಡಪಿಸ್ತೂಲು, 5 ಜೀವಂತ ಗುಂಡುಗಳು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಸೋನುಕುಮಾರ್(32), ಸುನೀಲ್‍ಕುಮಾರ್(32), ಇರ್ಫಾನ್(26) ಮತ್ತು ಆಂಧ್ರ ಪ್ರದೇಶದ ಮುರುಳಿ ವಿನೋದ್(47) ಬಂಧಿತ ಆರೋಪಿಗಳು. ಆಗಸ್ಟ್ 7ರಂದು ಹೊಸೂರು ರಸ್ತೆಯ ಸಿಮೆಂಟ್ರಿ ರಸ್ತೆಯಲ್ಲಿರುವ ಹಿಂದೂ ಸಿಮೆಂಟ್ರಿ ಬಳಿ ಮೂವರು ಯಾವುದೇ ಪರವಾನಗಿ ಇಲ್ಲದೆ ನಾಡಪಿಸ್ತೂಲಗಳನ್ನಿಟ್ಟುಕೊಂಡು …

Read More »

ಪ್ರೇಮ ವೈಫಲ್ಯ- ವಾಟ್ಸಪ್ ಸ್ಟೇಟಸ್ ಹಾಕಿ, ಪ್ರೇಮಿ ಆತ್ಮಹತ್ಯೆ

ದಾವಣಗೆರೆ: ಪ್ರೀತಿಸಿದ ಯುವತಿ ತನ್ನ ಜೊತೆ ಮದುವೆಯಾಗುವುದನ್ನು ನಿರಾಕರಿಸಿದ್ದಕ್ಕೆ ಪ್ರೇಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕರೂರು ಕೈಗಾರಿಕಾ ಪ್ರದೇಶದ ಬಳಿಯ ರೈಲ್ವೆ ಟ್ರ್ಯಾಕ್ ಬಳಿ ನಡೆದಿದೆ. ನಗರದ ಎಚ್‍ಕೆಆರ್ ವೃತ್ತದ ಲೆನಿನ್‍ನಗರದ ಹೊಸ ಬಡಾವಣೆ ನಿವಾಸಿ ಮಹಾಂತೇಶ್ (24) ಅತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ ಹಲವು ವರ್ಷಗಳಿಂದ ಕರೂರು ಕೈಗಾರಿಕಾ ಪ್ರದೇಶದಲ್ಲಿನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಾಂತೇಶ್, ಕುಟುಂಬಕ್ಕೆ ಆಧಾರವಾಗಿದ್ದ. ಇದೇ ಗಾರ್ಮೆಂಟ್ಸ್ ನಲ್ಲಿನ ಯುವತಿಯೊಬ್ಬಳ ಪರಿಚಯವಾಗಿ, …

Read More »

ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಸಿದ್ದೇಶ್ವರ ಜಾತ್ರೆಯನ್ನು ಶುಕ್ರವಾರ ದಿ. 13 ರಂದು ಸರಳವಾಗಿ ನೇರವೆರಿಸಲಾಗುವುದು

ಗೋಕಾಕ : ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಸಿದ್ದೇಶ್ವರ ಜಾತ್ರೆಯನ್ನು ಶುಕ್ರವಾರ ದಿ. 13 ರಂದು ಸರಳವಾಗಿ ನೇರವೆರಿಸಲಾಗುವುದು ಎಂದು ಶ್ರೀ ಸಿದ್ದೇಶ್ವರ ದೇವಸ್ಥಾನ (ಟ್ರಸ್ಟ್) ಜಾತ್ರಾ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .   ಕೊರೋನಾ ಮಹಾಮಾರಿ ತಡೆಗಟ್ಟಲು ಸರಕಾರದ ನಿಯಮಗಳನ್ನು ಪಾಲಿಸುವ ಸಲುವಾಗಿ ಈ ಸಲ ರಥೋತ್ಸವವನ್ನು ರದ್ದು ಗೋಳಿಸಲಾಗಿದ್ದು, ರಥೋತ್ಸವ ದಿನದಂದು ರಥದ ಸ್ಥಳದಲ್ಲೇ ಸಾಯಂಕಾಲ 4 ಘಂಟೆಗೆ ಪೂಜೆ ಮಾಡಲಾಗುವುದು. ದೇವರ ದರ್ಶನಕ್ಕೆ ಬರುವ …

Read More »

ಸಂದರ್ಶನ l ಕಿರಿಕಿರಿ ಆರೋಪ ಮುಕ್ತಿಗೆ ಹೊಸ ವ್ಯವಸ್ಥೆ -ಬಿ.ಆರ್. ರವಿಕಾಂತೇಗೌಡ

ಬೆಂಗಳೂರು: ‘ಸಂಚಾರ ಪೊಲೀಸರು ವಾಹನಗಳನ್ನು ವಿನಾಕಾರಣ ಅಡ್ಡಗಟ್ಟಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಆರೋಪಗಳು ಹಲವು ದಿನಗಳಿಂದಲೂ ಕೇಳಿಬರುತ್ತಿವೆ. ಇಂಥ ಆರೋಪಗಳಿಂದ ಮುಕ್ತಿ ಪಡೆಯಲು ಹೊಸ ವ್ಯವಸ್ಥೆಯನ್ನು ನಗರದಲ್ಲಿ ಜಾರಿಗೆ ತರಲು ಸಿದ್ಧತೆ ನಡೆದಿದೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಹೇಳಿದರು. ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ‘ನಿತ್ಯ ಸಂಚಾರ – ಸದಾ ಕಿರಿಕಿರಿ’ ಸರಣಿ ವರದಿಗಳಿಗೆ ಪ್ರತಿಕ್ರಿಯಿಸಿರುವ ಅವರು, ವಿಶೇಷ ಸಂದರ್ಶನ ನೀಡಿದ್ದಾರೆ. ಅದರ ವಿವರ ಇಲ್ಲಿದೆ. …

Read More »

ಪದೇಪದೆ ಪೆಟ್ರೋಲ್ ಬೆಲೆ ಬಗ್ಗೆ ಪ್ರಶ್ನಿಸಬೇಡಿ ಎಂದ ಜಿಎಂ ಸಿದ್ದೇಶ್ವರ್​ಗೆ ಪ್ರತಿಭಟನೆ ಬಿಸಿ; ಉಚಿತ ಪೆಟ್ರೋಲ್ ಕೊಡಲು ಆಗ್ರಹ

ದಾವಣಗೆರೆ: ಜಿಲ್ಲೆಯ ಜನರಿಗೆ ಉಚಿತವಾಗಿ ಪೆಟ್ರೋಲ್ ಕೊಡಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ಗೆ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹ ವ್ಯಕ್ತಪಡಿಸಿದ್ದಾರೆ. ಜಿ.ಎಂ. ಸಿದ್ದೇಶ್ವರ್ ಕಚೇರಿಯ ಬಳಿ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ದಾವಣಗೆರೆಯ ಪಿಬಿ ರಸ್ತೆ ಬಳಿ ಇರುವ ಸಿದ್ದೇಶ್ವರ್ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೆಟ್ರೋಲ್ ನೀಡುವಂತೆ ಆಗ್ರಹಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಉಚಿತವಾಗಿ ಲಸಿಕೆ ಕೊಡುತ್ತಿದ್ದಾರೆ. ಹೀಗಾಗಿ ಸಿದ್ದೇಶ್ವರ್ ಉಚಿತವಾಗಿ ಪೆಟ್ರೋಲ್ ಕೊಡಬೇಕು ಎಂದು ಹೇಳಿದ್ದಾರೆ. ಈ ಹಿಂದೆ ಪೆಟ್ರೋಲ್ ಏರಿಕೆ …

Read More »

ಸಂಸದೀಯ ಇಲಾಖೆಯ ಕಾರ್ಯದರ್ಶಿಯಾಗಿ ಜಿ. ಶ್ರೀಧರ್‌ ನೇಮಕ

ಬೆಂಗಳೂರು: ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಕಾರ್ಯದರ್ಶಿಯಾಗಿ ಜಿ. ಶ್ರೀಧರ್‌ ಅವರನ್ನು ನೇಮಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕಾರ್ಯದರ್ಶಿ ಹುದ್ದೆಯಲ್ಲಿದ್ದ ದ್ವಾರಕಾನಾಥ್ ಬಾಬು ಅವರ ಅವಧಿ ಜುಲೈ 31ರಂದು ಅಂತ್ಯವಾಗಿತ್ತು. 2018ರಿಂದ ಕಾರ್ಯದರ್ಶಿ ಹುದ್ದೆ ಖಾಲಿಯಿದ್ದು, ಈ ಹುದ್ದೆಯಿಂದ ನಿವೃತ್ತರಾಗಿದ್ದ ದ್ವಾರಕಾನಾಥ್ ಬಾಬುರನ್ನೇ ಮೊದಲಿಗೆ 2 ವರ್ಷ, ಬಳಿಕ 1 ವರ್ಷ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮುಂದುವರಿಸಲಾಗಿತ್ತು. ಈ ಹುದ್ದೆಗೆ ಅರ್ಹರು ಇದ್ದರೂ …

Read More »

ಎಣ್ಣೆ ಅಮಲಿನಲ್ಲಿ ಅಧಿಕಾರಿಗಳಿಗೆ ಆವಾಜ್ ಹಾಕಿದ ಯುವಕ

ಯಾದಗಿರಿ: ಎಣ್ಣೆ ಅಮಲಿನಲ್ಲಿ ಯುವಕನೋರ್ವ ಅಧಿಕಾರಿಗಳಿಗೆ ಆವಾಜ್ ಹಾಕಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಯಾದಗಿರಿ ನಿವಾಸಿ ಭೀಮರಡ್ಡಿ ಕುರಕುಂದಿ ಎಂಬ ಯುವಕ ಅಧಿಕಾರಿಗಳಿಗೆ ಆವಾಜ್ ಹಾಕಿದ್ದಾನೆ. ಯಾದಗಿರಿ ಜಿಲ್ಲೆಯಾದ್ಯಂತ ನೈಟ್ ಕರ್ಫ್ಯೂ ಜಾರಿಯಾಗಿದೆ. ಆದ್ರೆ ನೈಟ್ ಕರ್ಫ್ಯೂ ಉಲ್ಲಂಘಿಸಿ ಡಾಬಾ ತೆರೆದಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಡಾಬಾ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ಮಾಡಿ ದಂಡ ವಿಧಿಸಲು ಮುಂದಾದ ವೇಳೆ ಯುವಕ ಮತ್ತು ಅಧಿಕಾರಿಗಳ ಜೊತೆ ಗಲಾಟೆಯಾಗಿದೆ. ಎಸಿ ಪ್ರಶಾಂತ್, ನಗರಸಭೆ …

Read More »

ಕರ್ತವ್ಯಲೋಪ ಹಿನ್ನೆಲೆ ಐವರು ಪೊಲೀಸರನ್ನ ಅಮಾನತುಗೊಳಿಸಿದ ಎಸ್ಪಿ

ವಿಜಯಪುರ: ಕರ್ತವ್ಯಲೋಪ ಹಿನ್ನೆಲೆ ಐವರು ಪೊಲೀಸರ ಮೇಲೆ ಖಡಕ್​ ಕ್ರಮ ತೆಗೆದುಕೊಂಡಿರುವ ಎಸ್ಪಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದು ಜಿಲ್ಲೆಯಲ್ಲಿ ಭಾರೀ ಸಂಚಲನವನ್ನೇ ಮೂಡಿಸಿದೆ. ಜಿಲ್ಲೆಯ ಎಸ್ಪಿ ಆನಂದ್ ಕುಮಾರ್ ಕರ್ತವ್ಯ ಲೋಪ ಎಸಗಿದ ಪೊಲೀಸರ ಮೇಲೆ ಕಟ್ಟು ನಿಟ್ಟಿನ ಕ್ರಮ ಜರುಗಿಸಿದ್ದು, ಅಮಾನತು ಮಾಡಿದ್ದಾರೆ. ನಿಡಗುಂದಿ ಠಾಣೆಯ ಇಬ್ಬರು, ಬಸವನ ಬಾಗೇವಾಡಿಯ ಮೂವರು ಪೊಲೀಸ್​ ಅಧಿಕಾರಿಗಳನ್ನು ಅಮಾನತುಗೊಳಿಸಲು ಎಸ್ಪಿ ಆದೇಶ ನೀಡಿದ್ದಾರೆ. ನಿಡಗುಂದಿ ಠಾಣೆಯ ಎಸ್.ಸಿ. ರೆಡ್ಡಿ ಸಿಪಿಸಿ 496 …

Read More »

DGIGP & CM ಆದೇಶಕ್ಕೂ ಇಲ್ಲ ಕಿಮ್ಮತ್ತು? ಪೊಲೀಸರಿಂದಲೇ ಆದೇಶ ಉಲ್ಲಂಘಿಸಿ ಬರ್ತ್​​ಡೇ

ಹಾವೇರಿ: ಒಂದೆಡೆ ಮೂರನೇ ಕೊರೊನಾ ಅಲೆಯ ಭೀತಿ ಶುರುವಾಗಿದೆ.. ಈಗಾಗಲೇ ಕೊರೊನಾದಿಂದ ಬಳಲಿ ಬೆಂಡಾಗಿರುವ ರಾಜ್ಯದಲ್ಲಿ ಮತ್ತೆ ದೊಡ್ಡಮಟ್ಟದ ಅನಾಹುತ ಸೃಷ್ಟಿಯಾಗದಿರಲೆಂದು ಮುಂಜಾಗ್ರತಾ ಕ್ರಮವಾಗಿ ಕಾರ್ಯಕ್ರಮಗಳನ್ನ ನಡೆಸದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಡಿಜಿಐಜಿಪಿ ಆದೇಶ ಹೊರಡಿಸಿದ್ದರು. ದುರಂತ ಅಂದ್ರೆ ಸಿಎಂ ತವರು ಕ್ಷೇತ್ರದಲ್ಲೇ ಸಿಎಂ ಆದೇಶಕ್ಕೆ ಕ್ಯಾರೆ ಎನ್ನುತ್ತಿಲ್ಲ.. ಪೊಲೀಸ್ ಇಲಾಖೆಯೇ ಡಿಜಿಐಜಿಪಿ ಆದೇಶಕ್ಕೆ ಕಿಮ್ಮತ್ತು ನೀಡುತ್ತಿಲ್ಲ. ನಿನ್ನೆಯಷ್ಟೇ ಸಿಎಂ ಬಸವರಾಜ್ ಬೊಮ್ಮಾಯಿ ಕಾರ್ಯಕ್ರಮಗಳನ್ನು ನಡೆಸದಂತೆ ಆದೇಶ ನೀಡಿದ್ದರು.. …

Read More »

ರಾಜ್ಯದಲ್ಲಿಂದು ಕೊರೋನಾ ಮತ್ತೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಸೋಂಕು ಮತ್ತಷ್ಟು ಹೆಚ್ಚಳವಾಗಿದ್ದು, ಇಂದು ಹೊಸದಾಗಿ 1826 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವತ್ತು 33 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 1618 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 22,851 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ 1.09 ರಷ್ಟು ಇದೆ. ಇವತ್ತು 1,67,237 ಪರೀಕ್ಷೆ ನಡೆಸಲಾಗಿದೆ. ಬೆಂಗಳೂರಿನಲ್ಲಿಂದು 377 ಜನರಿಗೆ ಸೋಂಕು ತಗುಲಿದೆ. 280 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 5 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 8290 …

Read More »