Breaking News

Daily Archives: ಜುಲೈ 18, 2021

ಇದೇ 26ರಿಂದ ಪದವಿ ಕಾಲೇಜುಗಳಆರಂಭ

ಇದೇ 26ರಿಂದ ಪದವಿ ಕಾಲೇಜುಗಳನ್ನು ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಭಾನುವಾರ ಬೆಳಿಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವರು ಮತ್ತು ಅಧಿಕಾರಿಗಳ ಉನ್ನತಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ರಾತ್ರಿ ಕರ್ಫ್ಯೂ ಅವಧಿಯನ್ನು ಪರಿಷ್ಕರಿಸಿದ್ದು, ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ಮಾತ್ರ ಕರ್ಫ್ಯೂ ಇರಲಿದೆ. ಚಿತ್ರಮಂದಿರಗಳು ಮತ್ತು ರಂಗಮಂದಿರಗಳಲ್ಲಿ ಶೇಕಡ 50ರಷ್ಟು ಆಸನಗಳ ಭರ್ತಿಯೊಂದಿಗೆ ಪ್ರದರ್ಶನ ಆರಂಭಿಸಲು ಅನುಮತಿ ನೀಡಲಾಗಿದೆ. ಇನ್ನು ಕೆಲವೊಂದು ಮಾರ್ಗಸೂಚಿಗಳೊಂದಿಗೆ ಈ ನಿರ್ಧಾರವನ್ನು …

Read More »

ನೂತನ ಶಾಲಾ ಕೊಠಡಿಗಳ ಅಡಿಗಲ್ಲು ಕಾರ್ಯಕ್ರಮಕ್ಕೆ ಭೂಮಿ ಪೂಜೆ

ಘಟಪ್ರಭಾ: ಸಮೀಪದ ಕೊಟಬಾಗಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕೊಠಡಿಯನ್ನು ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ಉದ್ಘಾಟಿಸಿದರು. ಎರಡು ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಅಡಿಗಲ್ಲು ಕಾರ್ಯಕ್ರಮಕ್ಕೆ ಎಸ್‍ಡಿಎಂಸಿ ಅಧ್ಯಕ್ಷ ರಾಜಕುಮಾರ ಪಾಟೀಲ ಭೂಮಿ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಬಿಇಒ ಮೋಹನ ದಂಡಿನ, ಬಿಸಿಯೂಟ ಸಹ ನಿರ್ದೇಶಕ ಹಿರೇಮಠ, ಸಿಆರ್‍ಪಿಗಳಾದ ವಿ.ಎಸ್.ರಜಪೂತ, ಪ್ರಧಾನ ಗುರು ಎಸ್.ಬಿ.ಹೊಳೆಪ್ಪಗೋಳ ಸೇರಿದಂತೆ ಎಸ್ ಡಿಎಂಸಿ ಸದಸ್ಯರು,ಶಿಕ್ಷಣ ಪ್ರೇಮಿಗಳು ಹಾಗೂ …

Read More »

50 ಲಕ್ಷ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡ ಹೊಂದುತ್ತಿರುವುದು ಪ್ರಶಂಸನೀಯ ಶಾಸಕ ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ : ಶತಮಾನೋತ್ಸವ ಆಚರಿಸಿರುವ ಕಲ್ಲೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಈ ಭಾಗದಲ್ಲಿ ರೈತರಿಗೆ ಸಿಗಬೇಕಿರುವ ಎಲ್ಲ ಸವಲತ್ತುಗಳನ್ನು ನೀಡುತ್ತ ಬರುತ್ತಿದೆ. ಈ ಹಿಂದೆ 8 ಕೋಟಿ ರೂ.ಗಳಷ್ಟಿದ್ದ ಪತ್ತನ್ನು 15 ಕೋಟಿ ರೂ.ಗಳವರೆಗೆ ಹೆಚ್ಚಿಸಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಶನಿವಾರದಂದು ಕಲ್ಲೋಳಿ ಪಿಕೆಪಿಎಸ್‍ಗೆ ಭೇಟಿ ನೀಡಿ ಮಾತನಾಡಿದ ಅವರು, ರೈತರ …

Read More »

ಗಾಯಗೊಂಡ ಆಟಗಾರನನ್ನು ಔಟ್ ಮಾಡದೆ ಕ್ರೀಡಾ ಸ್ಪೂರ್ತಿ ಮೆರೆದ ಜೋ ರೂಟ್ ಪಡೆ

ಲಂಡನ್: ಇಂಗ್ಲೆಂಡ್ ಕೌಂಟಿಯ ಟಿ20 ಬ್ಲಾಸ್ಟ್ ಕೂಟದಲ್ಲಿ ಕ್ರೀಡಾ ಸ್ಪೂರ್ತಿ ಮೆರೆದ ಘಟನೆಯೊಂದು ಯಾರ್ಕ್ ಶೈರ್ ಮತ್ತು ಲ್ಯಾಂಕ್ ಶೈರ್ ನಡುವಿನ ಪಂದ್ಯದಲ್ಲಿ ನಡೆದಿದೆ. ಓಡುವಾಗ ಗಾಯಗೊಂಡ ಬಿದ್ದ ಆಟಗಾರನನ್ನು ರನ್ ಔಟ್ ಮಾಡದ ಜೋ ರೂಟ್ ಬಳಗದ ನಡೆ ಮೆಚ್ಚುಗೆಗೆ ಪಾತ್ರವಾಗಿದೆ. ಓಲ್ಡ್ ಟ್ರಾಫರ್ಡ್ ನಲ್ಲಿ ನಡೆದ ಪಂದ್ಯದಲ್ಲಿ ಈ ಘಟನೆ ನಡೆಯುತ್ತಿತ್ತು. ಲ್ಯಾಂಕ್ ಶೈರ್ ತಂಡಕ್ಕೆ ಗೆಲುವಿಗೆ 18 ಎಸೆತಗಳಲ್ಲಿ 15 ರನ್ ಅಗತ್ಯವಿತ್ತು. ಲ್ಯೂಕ್ ವೆಲ್ಸ್ …

Read More »

56 ಇಂಚಿನ ಎದೆ ಇದ್ದರೆ ಸಾಲದು, ಆ ಎದೆಯಲ್ಲಿ ಬಡವರ ಕಷ್ಟಕ್ಕೆ ನೆರವಾಗುವ ಮಾತೃ ಹೃದಯ ಇರಬೇಕು : ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ: ಕೊರೊನಾ ಸಂದರ್ಭದಲ್ಲಿ ಬಡ ಜನರಿಗೆ ನೆರವಾಗಲು ಮೋದಿಗಿರುವಂತೆ 56 ಇಂಚಿನ ಎದೆ ಇದ್ದರೆ ಸಾಲದು, ಆ ಎದೆಯಲ್ಲಿ ಬಡವರ ಕಷ್ಟಕ್ಕೆ ನೆರವಾಗುವ ಮಾತೃ ಹೃದಯ ಇರಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ಗುಡುಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ, ಕೋವಿಡ್ ಎರಡನೇ ಅಲೆಯಲ್ಲಿ ಕ್ಷೇತ್ರದ ಶಾಸಕ ವೆಂಕಟರಮಣಯ್ಯ ಆಯೋಜಿಸಿದ್ದ ಕೊರೊನಾ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಆಟೋ ಹಾಗೂ …

Read More »

ಜೋಗ ಜಲಪಾತ ವೀಕ್ಷಣೆಗಾಗಿ KSRTC ವಿಶೇಷ ಪ್ರವಾಸ ಪ್ಯಾಕೇಜ್

ಬೆಂಗಳೂರು, ಜು.18- ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗಾಗಿ ಕೆಎಸ್‍ಆರ್‍ಟಿಸಿ ವಿಶೇಷ ಪ್ಯಾಕೇಜ್‍ಅನ್ನು ಪ್ರಕಟಿಸಿದೆ. ಪ್ರವಾಸಿಗರ ಅನುಕೂಲಕ್ಕಾಗಿ ವಾರಾಂತ್ಯದ ದಿನಗಳಲ್ಲಿ ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ವಿಶೇಷ ಪ್ಯಾಕೇಜ್ ಟೂರ್ ಆಯೋಜಿಸಿದೆ. ಜು.23ರಿಂದ ನಾನ್ ಎಸಿ ಸ್ಲೀಪರ್ ಬಸ್‍ನಲ್ಲಿ ಪ್ರವಾಸ ಆರಂಭವಾಗಲಿದೆ. ಶುಕ್ರವಾರ, ಶನಿವಾರ ಮಾತ್ರ ಪ್ರಯಾಣಕ್ಕೆ ಅವಕಾಶವಿದ್ದು, ವಯಸ್ಕರಿಗೆ 1900ರೂ., 6 ರಿಂದ 12 ವರ್ಷದ ಮಕ್ಕಳಿಗೆ 1700ರೂ. ನಿಗದಿಗೊಳಿಸಲಾಗಿದೆ.

Read More »

ರಾತ್ರಿ ಓಡಾಡುವವರು ವೇಶ್ಯೆಯರು, ರೇಪ್​ಗೆ​ ಅರ್ಹರು ಎಂದು ಭೀಕರ ಕೊಲೆ ಸಮರ್ಥಿಸಿಕೊಂಡ ಪಾದ್ರಿ!

ತಿರುವನಂತಪುರ: ಕೇರಳದ ವಿವಾದಾತ್ಮಕ ಇಸ್ಲಾಮಿಕ್ ಪಾದ್ರಿಯೊಬ್ಬರು ಇದೀಗ ಮಹಿಳೆಯರ ಕುರಿತಾಗಿ ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾತ್ರಿ 9 ಗಂಟೆಯ ನಂತರ ರಾತ್ರಿ ಹೊರಗೆ ಹೋಗುವ ಮಹಿಳೆಯರು ವೇಶ್ಯೆಯರು, ಅವರು ಅತ್ಯಾಚಾರ ಎಸಗಲು ಮಾತ್ರವಲ್ಲದೇ ಕೊಲೆ ಮಾಡಲು ಕೂಡ ಅರ್ಹರು ಎಂದಿದ್ದಾರೆ ಈ ಪಾದ್ರಿ. ಕೇರಳದ ಪ್ರಸಿದ್ಧ ಧರ್ಮಗುರು ಎಂದೇ ಹೆಸರಾಗಿರುವ ಮೌಲಾನಾ ಸ್ವಾಲಿಹ್ ಬಾಥೆರಿ ಇಂಥದ್ದೊಂದು ಹೇಳಿಕೆ ನೀಡಿದ್ದಾರೆ. ಹಚಿನ್ಸನ್-ಗಿಲ್ಫೋರ್ಡ್ ಪ್ರೊಜೆರಿಯಾ ಸಿಂಡ್ರೋಮ್ (ಎಚ್‌ಜಿಪಿಎಸ್) ಎಂಬ ಸಮಸ್ಯೆಯಿಂದ ಬಳಲುತ್ತಿರುವ …

Read More »

JIO: ಜಿಯೋದ ಕೇವಲ 98 ರೂ. ರಿಚಾರ್ಜ್ ಪ್ಲಾನ್​ನಲ್ಲಿ ಬರೋಬ್ಬರಿ 21GB ಡೇಟಾ

ಭಾರತೀಯ ಟಿಲಿಕಾಂ ಮಾರುಕಟ್ಟೆಯಲ್ಲಿ ರಿಲಯನ್ಸ್ (Reliance) ಒಡೆತನದ ಜಿಯೋ (Jio) ಅತ್ಯಂತ ಕಡಿಮೆ ಬೆಲೆಗೆ ಇಂಟರ್ನೆಟ್ ಸೇವೆ, ಆಫರ್​ಗಳನ್ನು ಪರಿಚಯಿಸಿ ಅಲ್ಪ ಅವದಿಯಲ್ಲಿ ಸಾಕಷ್ಟು ಹೆಸರು ಮಾಡಿದೆ. ಕೊರೊನಾ ಕಾಲದಲ್ಲಂತು ವರ್ಕ್ ಫ್ರಂ ಹೋಮ್ ಸೇರಿದಂತೆ ತನ್ನ ಗ್ರಾಹಕರಿಗೆ ವಿಶೇಷ ಆಫರ್ ಗಳನ್ನು ನೀಡುತ್ತಿದೆ. ಇದೇ ಕಾರಣಕ್ಕೆ ಜಿಯೋ ಈಗಲೂ ನಂಬರ್ ಒನ್ ಸ್ಥಾನ ಪಡೆದುಕೊಂಡಿರವುದು. ಏರ್ಟೆಲ್, ಬಿಎಸ್​ಎನ್​ಎಲ್, ವೋಡಾಫೋನ್- ಐಡಿಯಾಕ್ಕೆ ಹೋಲಿಸಿದರೆ ಜಿಯೋ ಟೆಲಿಕಾಂ ಕಂಪನಿಯ ಅಗ್ಗದ ರಿಚಾರ್ಜ್ …

Read More »

ರಾಜ್ಯಾದ್ಯಂತ ನಾಳೆಯಿಂದಲೇ ಚಿತ್ರಮಂದಿರಗಳು ಓಪನ್, ಜುಲೈ 26ರಿಂದ ಪದವಿ ಕಾಲೇಜು ತೆರೆಯಲು ಅವಕಾಶ

ಬೆಂಗಳೂರು: ಸುಮಾರು ಮೂರು ತಿಂಗಳಿನಿಂದ ಬಂದ್ ಆಗಿದ್ದ ಚಿತ್ರಮಂದಿರಗಳನ್ನು(Theatre) ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಶೇಕಡಾ 50ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿದ್ದು, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಜೊತೆಗೆ ಜುಲೈ 26ರಿಂದ ಪದವಿ ಕಾಲೇಜು ತೆರೆಯಲು ಅವಕಾಶ ನೀಡಲಾಗಿದ್ದು, ಆಫ್​ಲೈನ್​ ತರಗತಿಗೆ ಹಾಜರಾಗಲು ಲಸಿಕೆ ಪಡೆದಿರಬೇಕು. 1 ಡೋಸ್​ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪ ಇಂದು (ಜುಲೈ 18) ತಮ್ಮ …

Read More »

ಯಡಿಯೂರಪ್ಪ ರಾಜೀನಾಮೆ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬಿತ್ತೆ?

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜೀನಾಮೆಗೆ ಭಾರತೀಯ ಜನತಾ ಪಕ್ಷದ ವರಿಷ್ಠರು ಸೂಚಿಸಿದ್ದಾರೆ. ಆದರೆ, ಯಡಿಯೂರಪ್ಪ ತಮಗೆ ಕನಿಷ್ಟ ಒಂದು ತಿಂಗಳು ಕಾಲಾವಕಾಶ ನೀಡುವಂತೆ ಕೋರಿಕೊಂಡಿದ್ದಾರೆ! ಹೌದು, ಇಂತಹದ್ದೊಂದು ಸುದ್ದಿ ಇವತ್ತು ಮಧ್ಯಾಹ್ನದಿಂದ ಭಾರೀ ಸದ್ದು ಮಾಡುತ್ತಿದೆ. ತಮ್ಮ ಪುತ್ರ ಬಿ ವೈ ವಿಜಯೇಂದ್ರ ಮತ್ತು ಆಪ್ತ ಲೇಹರ್ ಸಿಂಗ್ ಜೊತೆ ದೆಹಲಿಗೆ ತೆರಳಿದ್ದ ಸಿಎಂ ಯಡಿಯೂರಪ್ಪ ಮೊದಲ ದಿನ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದರು. ಆ ಬಳಿಕ ಮಾರನೇ ದಿನ …

Read More »