Breaking News
Home / 2021 / ಜುಲೈ / 18 (page 3)

Daily Archives: ಜುಲೈ 18, 2021

ಅಂಗಡಿಗಳ ಮೇಲೆ ದಾಳಿ: ಪ್ರಕರಣ ದಾಖಲು

ದಾವಣಗೆರೆ: ಜಿಲ್ಲೆಯ ತಂಬಾಕು ನಿಯಂತ್ರಣ ತನಿಖಾ ದಳವು ಶುಕ್ರವಾರ ಜಿಲ್ಲೆಯ ಜಗಳೂರು ತಾಲೂಕಿನ ಬಿದರಕೆರೆಯ ಬಳಿ ಇರುವ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ 16 ಪ್ರಕರಣಗಳನ್ನುದಾಖಲಿಸಿ, 2,800 ರೂ. ದಂಡ ಸಂಗ್ರಹಿಸಿದೆ. ತಂಡವು ಜಗಳೂರು ತಾಲೂಕಿನ ಬಿದರಕೆರೆಯಹೋಟೆಲ್‌, ಬಾರ್‌, ಪಾನ್‌ಶಾಪ್‌, ಬಸ್‌ ನಿಲ್ದಾಣ ಇತ್ಯಾದಿ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿತಂಬಾಕು ಉತ್ಪನ್ನಗಳನ್ನು ಮಾರುವವರು ಹಾಗೂಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನುಸೇವಿಸುವವರಿಗೆ ಸ್ಥಳದಲ್ಲಿಯೇ ದಂಡ ಹಾಕುವ ಮೂಲಕ ಜಾಗೃತಿ ಮೂಡಿಸಿದರು. ಪ್ರಾಥಮಿಕ ಆರೋಗ್ಯ …

Read More »

ಒಂದೇ ಶ್ವಾನದಿಂದ 2 ಗಂಟೆ ಅವಧಿಯಲ್ಲಿ 15 ಜನರ ಮೇಲೆ ದಾಳಿ.. ಬೆಚ್ಚಿಬಿದ್ದ ಜನರು

ಬೆಳಗಾವಿ: ಒಂದೇ ನಾಯಿಯಿಂದ 15 ಜನರ ಮೇಲೆ ದಾಳಿ ನಡೆದಿರೋ ಘಟನೆ ಸವದತ್ತಿ ತಾಲೂಕಿನ ಮೂರು ಗ್ರಾಮಗಳಲ್ಲಿ ನಡೆದಿದೆ. ಎರಡು ಗಂಟೆ ಅವಧಿಯಲ್ಲಿ ಮೂರು ಗ್ರಾಮಗಳ 15ಜನರ ಮೇಲೆ ದಾಳಿ ನಡೆದಿದೆ. ಯರಝರವಿ, ಮಳಗಲಿ, ಹೊಸೂರ ಗ್ರಾಮಗಳಲ್ಲಿ ಹುಚ್ಚುನಾಯಿಯ ದಾಳಿ ನಡೆದಿದ್ದು.. ಮಲ್ಲವ್ವ, ಬಾಳಯ್ಯ, ಲಲಿತಾ, ಮಲ್ಲಯ್ಯ, ಸಿದ್ಧಪ್ಪ, ಸವಿತಾ ಎಂಬುವವರಿಗೆ ನಾಚಿ ಕಚ್ಚಿದೆ. ಗಾಯಗೊಂಡವರಿಗೆ ಯರಗಟ್ಟಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಹುಚ್ಚು ನಾಯಿಯ ದಾಳಿಯಿಂದ ಗ್ರಾಮಸ್ಥರು …

Read More »

ಶಾಸಕಾಂಗ ಸಭೆ ರದ್ದು ಮಾಡಿ, ಪಕ್ಷದ ಶಾಸಕರಿಗೆ ಔತಣಕೂಟ ಆಯೋಜಿಸಿದ ಸಿಎಂ ಬಿಎಸ್ ವೈ!

ಬೆಂಗಳೂರು: ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿ ಬೆಂಗಳೂರಿಗೆ ಬಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡೆ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಜುಲೈ 26 ಕ್ಕೆ ಶಾಸಕಾಂಗ ಸಭೆ ಕರೆದಿರುವುದಾಗಿ ಈ ಹಿಂದೆ ತಿಳಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಇದೀಗ ತಮ್ಮ ಯೋಜನೆಯನ್ನು ದಿಢೀರ್ ಬದಲಿಸಿದ್ದಾರೆ. ಜುಲೈ 26ಕ್ಕೆ ಬಿ ಎಸ್ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿ ಎರಡು ವರ್ಷವಾಗುತ್ತದೆ. ಸದ್ಯ ಶಾಸಕಾಂಗ ಸಭೆಯನ್ನು ರದ್ದು ಮಾಡಿರುವ ಸಿಎಂ ಬಿಎಸ್ ವೈ ಜುಲೈ 25 ರಂದು ಸಂಜೆ ಪಕ್ಷದ …

Read More »

ಭಾರತದ ಮೊದಲ ತಂಡ ಟೋಕಿಯೊದತ್ತ ; 88 ಸದಸ್ಯರಿಗೆ ಬೀಳ್ಕೊಡುಗೆ

ಹೊಸದಿಲ್ಲಿ: ದೇಶದ ಕ್ರೀಡಾಭಿಮಾನಿಗಳ ನಿರೀಕ್ಷೆ, ಕನಸನ್ನು ಹೊತ್ತ ಭಾರತದ ಒಲಿಂಪಿಕ್ಸ್‌ ಸದ ಸ್ಯರ ಮೊದಲ ತಂಡ ಶನಿವಾರ ರಾತ್ರಿ ಟೋಕಿಯೊಗೆ ಪ್ರಯಾಣ ಬೆಳೆಸಿತು. ಇಲ್ಲಿನ “ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ದಲ್ಲಿ ಇವರಿಗೆ ಯಶಸ್ಸು ಕೋರಿ ಬೀಳ್ಕೊಡಲಾಯಿತು. ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌, ಸಹಾಯಕ ಸಚಿವ ನಿಶಿತ್‌ ಪ್ರಾಮಾಣಿಕ್‌, ಐಒಎ ಅಧ್ಯಕ್ಷ ನರೀಂದರ್‌ ಬಾತ್ರಾ, ಕಾರ್ಯದರ್ಶಿ ರಾಜೀವ್‌ ಮೆಹ್ತಾ, ನಿರ್ದೇಶಕ ಸಂದೀಪ್‌ ಪ್ರಧಾನ್‌ ಮೊದಲಾ ದವರು ಈ ಸಂದರ್ಭದಲ್ಲಿ …

Read More »

ಒಲಿಂಪಿಕ್ಸ್‌ ಆರಂಭಕ್ಕೆ ಐದು ದಿನ ಬಾಕಿ ಒಟ್ಟು 44 ಮಂದಿಗೆ COVID ಸೋಂಕು

ಟೋಕಿಯೊ: ಜಾಗತಿಕ ಕ್ರೀಡಾ ಕೂಟವಾದ ಒಲಿಂಪಿಕ್ಸ್‌ ಆರಂಭಕ್ಕೆ ಐದು ದಿನ ಬಾಕಿ ಉಳಿದಿರುವಂತೆ ಒಲಿಂಪಿಕ್ಸ್‌ ಕ್ರೀಡಾ ಗ್ರಾಮದಲ್ಲಿ ಮೊದಲ ಕೋವಿಡ್‌ ಪ್ರಕರಣ ದಾಖಲಾಗಿದೆ. ಶನಿವಾರ ಕೂಟದ ಸಂಘಟಕರು ಈ ಕುರಿತು ಮಾಹಿತಿ ನೀಡಿದ್ದಾರೆ. “ಕ್ರೀಡಾ ಗ್ರಾಮದಲ್ಲಿ ಒಬ್ಬ ವ್ಯಕ್ತಿಗೆ ಸ್ಕ್ರೀನಿಂಗ್‌ ಪರೀಕ್ಷೆ ವೇಳೆ ಕೋವಿಡ್‌ ದೃಢಪಟ್ಟಿದೆ. ಇದು ಇಲ್ಲಿ ಪತ್ತೆಯಾದ ಮೊದಲ ಪ್ರಕರಣವಾಗಿದೆ’ ಎಂದು ಟೋಕಿಯೊ ಒಲಿಂಪಿಕ್ಸ್‌ ಸಂಘಟನಾ ಸಮಿತಿಯ ವಕ್ತಾರ, ಮಾಸ ಟಕಾಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸೋಂಕಿತ ವ್ಯಕ್ತಿಯ …

Read More »

ಡ್ರೋನ್‌ ನಿಯಂತ್ರಣಕ್ಕೆ ಸ್ವದೇಶಿ ವ್ಯವಸ್ಥೆ : ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ

ಹೊಸದಿಲ್ಲಿ: ಜಮ್ಮು ವಿಮಾನ ನಿಲ್ದಾಣದ ವಾಯುನೆಲೆಯ ಮೇಲೆ ಪಾಕ್‌ ಪ್ರಾಯೋಜಿತ ಡ್ರೋನ್‌ ದಾಳಿಯನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಸ್ವದೇಶಿ ಡ್ರೋನ್‌ ಪ್ರತಿರೋಧ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. “ರುಸ್ತುಮ್‌ಜಿ ಸ್ಮಾರಕ ಉಪನ್ಯಾಸ’ದಲ್ಲಿ ಮಾತನಾಡಿದ ಅಮಿತ್‌ ಶಾ, ಡಿಆರ್‌ಡಿಒ ಅಥವಾ ಇತರ ಸಂಸ್ಥೆಗಳು ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿವೆ ಎಂದು ಮಾಹಿತಿ ನೀಡಿದ್ದಾರೆ. ನರೇಂದ್ರ ಮೋದಿ ಪ್ರಧಾನಿ ಆಗುವವರೆಗೆ ದೇಶಕ್ಕೆ ಸ್ವತಂತ್ರ ರಕ್ಷಣ ನೀತಿ ಇರಲಿಲ್ಲ. ಮೋದಿ ಚುಕ್ಕಾಣಿ ವಹಿಸಿದ ಬಳಿಕ …

Read More »

ಗಾಂಧಿನಗರ ಅಲೆದು ಚಪ್ಪಲಿ ಸವೆಸಿ ದಡ ಮುಟ್ಟಿದೆ ಎಂದರೆ ಆತ್ಮದ್ರೋಹ ಆಗುತ್ತದೆ’ : ನಟ ದರ್ಶನ್ ಗೆ ಜಗ್ಗೇಶ್ ಪರೋಕ್ಷ ಟಾಂಗ್!

ಬೆಂಗಳೂರು : ಗಾಂಧಿನಗರ ಅಲೆದು ಚಪ್ಪಲಿ ಸವೆಸಿ ದಡ ಮುಟ್ಟಿದೆ ಎಂದರೆ ಆತ್ಮದ್ರೋಹ ಆಗುತ್ತದೆ. ನಮ್ಮನ್ನು ದಡ ಮುಟ್ಟಿಸಿದ್ದು ಅಂದಿನ ನಿರ್ದೇಶಕರು, ನಿರ್ಮಾಪಕರು, ಮಾಧ್ಯಮ ಮಿತ್ರರು ಹಾಗೂ ವಿಶೇಷವಾಗಿ ಸ್ವಾಭಿಮಾನಿ ಕನ್ನಡಿಗರು ಎಂದು ನಟ ದರ್ಶನ್ ಗೆ ನವರಸ ನಾಯಕ ಜಗ್ಗೇಶ್ ಟಾಂಗ್ ಕೊಟ್ಟಿದ್ದಾರೆ.   ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾದ ಪೋಸ್ಟ್ ಹಾಕಿರುವ ಜಗ್ಗೇಶ್ ನಟ ದರ್ಶನ್ ಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ. ತುಮಕೂರು ಜಿಲ್ಲೆಯ, ತುರುವೇಕೆರೆ ತಾಲ್ಲೂಕಿನ, ಮಾಯಸಂದ್ರ …

Read More »

ತಮ್ಮನ್ನು ಪುಡುಂಗ ಎಂದಿರುವ ನಟ ದರ್ಶನ್ ಅವರಿಗೆ ನಿರ್ದೇಶಕ ಜೋಗಿ ಪ್ರೇಮ್ ಅವರ ಪ್ರತ್ಯುತ್ತರ

ಬೆಂಗಳೂರು: ತಮ್ಮನ್ನು ಪುಡುಂಗ ಎಂದಿರುವ ನಟ ದರ್ಶನ್ ಅವರಿಗೆ ನಿರ್ದೇಶಕ ಜೋಗಿ ಪ್ರೇಮ್ ಅವರು ಪ್ರತ್ಯುತ್ತರ ನೀಡಿದ್ದಾರೆ. ಇಂದು (ಜುಲೈ 17) ಫೇಸ್ ಬುಕ್ ನಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಪ್ರೇಮ್, ದಯವಿಟ್ಟು ಇನ್ನೊಬ್ರ ಬಗ್ಗೆ ಮಾತಾಡ್ಬೇಕಾದ್ರೆ ಯೋಚಿಸಿ ಮಾತಾಡಿ ದರ್ಶನ್ ಅವರೇ… Thank you for your kind words. ದೇವ್ರು ನಿಮಗೆ ಒಳ್ಳೇದ್ ಮಾಡ್ಲಿ ಎಂದಿದ್ದಾರೆ. ಪ್ರೇಮ್ ಹೇಳಿರುವ ಮಾತುಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ : ”ದರ್ಶನ್ …

Read More »

ಸಾಮಾಜಿಕ ಜಾಲತಾಣಗಳಲ್ಲಿ ಬೇಕಾ ಬಿಟ್ಟಿ ಪೋಸ್ಟ್ ಮಾಡುವ ಮುನ್ನ ಹುಷಾರ: ಬೆಳಗಾವಿ ಪೊಲೀಸ್

ಸಾಮಾಜಿಕ ಜಾಲತಾಣಗಳಲ್ಲಿ ಬೇಕಾ ಬಿಟ್ಟಿ ಪೋಸ್ಟ್ ಮಾಡುವ ಮುನ್ನ ಹುಷಾರಾಗಿರಿ. ಮನಬಂದಂತೆ ಪೋಸ್ಟ್ ಮಾಡಿದರೆ, ಬಂದಿದ್ದನ್ನೆಲ್ಲ ಫಾರ್ವರ್ಡ್ ಮಾಡಿದರೆ ಕಂಬಿ ಹಿಂದೆ ಹೋಗಬೇಕಾದೀತು. ಬೆಳಗಾವಿ ಪೊಲೀಸ್ ಇಲಾಖೆ ಎಲ್ಲ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವಾಗ ಎಚ್ಚರಿಕೆಯಿಂದಿರಿ ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

Read More »

ಎಸ್ಎಸ್ಎಲ್ ಸಿ ಪರೀಕ್ಷೆ ಪೂರ್ವಭಾವಿ ಸಭೆ ಮುಗಿಸಿ ಬೈಕ್ ನಲ್ಲಿ ತೆರಳುತ್ತಿದ್ದ ಶಿಕ್ಷಕರಿಬ್ಬರು ಭೀಕರ ಅಪಘಾತಕ್ಕೆ ಬಲಿ

ವಿಜಯಪುರ – ಎಸ್ಎಸ್ಎಲ್ ಸಿ ಪರೀಕ್ಷೆ ಪೂರ್ವಭಾವಿ ಸಭೆ ಮುಗಿಸಿ ಬೈಕ್ ನಲ್ಲಿ ತೆರಳುತ್ತಿದ್ದ ಶಿಕ್ಷಕರಿಬ್ಬರು ಭೀಕರ ಅಪಘಾತಕ್ಕೆ ಬಲಿಯಾಗಿದ್ದಾರೆ. ವಿಜಯಪುರದ ಹೊರವಲಯದ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಲಾರಿ ಮತ್ತು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದ್ದು, ದೇಹಗಳು ಛಿದ್ರವಾಗಿ ಬಿದ್ದಿದ್ದವು. ವಿಜಯಪುರ ಜಿಲ್ಲೆಯ ಬರಟಗಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕೆ.ಎಚ್.ಹುದ್ದಾರ (58) ಮತ್ತು ಸಹಶಿಕ್ಷಕ ಸಂಗನಗೌಡ ಪಾಟೀಲ ಮೃತರಾದವರು. ವಿಜಯಪುರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ …

Read More »