Breaking News
Home / Uncategorized / ಗಾಯಗೊಂಡ ಆಟಗಾರನನ್ನು ಔಟ್ ಮಾಡದೆ ಕ್ರೀಡಾ ಸ್ಪೂರ್ತಿ ಮೆರೆದ ಜೋ ರೂಟ್ ಪಡೆ

ಗಾಯಗೊಂಡ ಆಟಗಾರನನ್ನು ಔಟ್ ಮಾಡದೆ ಕ್ರೀಡಾ ಸ್ಪೂರ್ತಿ ಮೆರೆದ ಜೋ ರೂಟ್ ಪಡೆ

Spread the love

ಲಂಡನ್: ಇಂಗ್ಲೆಂಡ್ ಕೌಂಟಿಯ ಟಿ20 ಬ್ಲಾಸ್ಟ್ ಕೂಟದಲ್ಲಿ ಕ್ರೀಡಾ ಸ್ಪೂರ್ತಿ ಮೆರೆದ ಘಟನೆಯೊಂದು ಯಾರ್ಕ್ ಶೈರ್ ಮತ್ತು ಲ್ಯಾಂಕ್ ಶೈರ್ ನಡುವಿನ ಪಂದ್ಯದಲ್ಲಿ ನಡೆದಿದೆ. ಓಡುವಾಗ ಗಾಯಗೊಂಡ ಬಿದ್ದ ಆಟಗಾರನನ್ನು ರನ್ ಔಟ್ ಮಾಡದ ಜೋ ರೂಟ್ ಬಳಗದ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಓಲ್ಡ್ ಟ್ರಾಫರ್ಡ್ ನಲ್ಲಿ ನಡೆದ ಪಂದ್ಯದಲ್ಲಿ ಈ ಘಟನೆ ನಡೆಯುತ್ತಿತ್ತು. ಲ್ಯಾಂಕ್ ಶೈರ್ ತಂಡಕ್ಕೆ ಗೆಲುವಿಗೆ 18 ಎಸೆತಗಳಲ್ಲಿ 15 ರನ್ ಅಗತ್ಯವಿತ್ತು. ಲ್ಯೂಕ್ ವೆಲ್ಸ್ ಮಿಡ್ ಆನ್ ಗೆ ಚೆಂಡನ್ನು ಬಾರಿಸಿ ಒಂಟಿ ರನ್ ಗೆ ಓಡಿದರು. ನಾನ್ ಸ್ಟ್ರೈಕ್ ನಲ್ಲಿದ್ದ ಸ್ಟೀವನ್ ಕ್ರಾಫ್ಟ್ ಓಡುವಾಗ ಬಿದ್ದರು. ನೋವಿನಿಂದ ಚೀರುತ್ತಿದ್ದ ಕ್ರಾಫ್ಟ್ ಗೆ ಎದ್ದು ಓಡಲಾಗಲಿಲ್ಲ.

ಕ್ರಾಫ್ಟ್ ಪಿಚ್ ಮಧ್ಯೆವೇ ಬಿದ್ದಿದ್ದರು. ಅವರನ್ನು ರನ್ ಔಟ್ ಮಾಡುವ ಅವಕಾಶ ಯಾರ್ಕ್ ಶೈರ್ ಆಟಗಾರರಿಗಿತ್ತು. ಆದರೆ ಕ್ರೀಡಾ ಸ್ಪೂರ್ತಿ ಮೆರೆದ ಯಾರ್ಕ್ ಶೈರ್ ಆಟಗಾರರು ಔಟ್ ಮಾಡಲಿಲ್ಲ. ಬದಲಾಗಿ ಬಿದ್ದಿದ್ದ ಕ್ರಾಫ್ಟ್ ಬಳಿಗೆ ಓಡಿ ಆರೋಗ್ಯ ವಿಚಾರಿಸಿದರು. ಜೋ ರೂಟ್ ನಾಯಕತ್ವದ ಯಾರ್ಕ್ ಶೈರ್ ಆಟಗಾರರ ನಡೆಗೆ ಅಪಾರ ಮೆಚ್ಚುಗೆ ಪಾತ್ರವಾಗಿದೆ.

ಅಂತ್ಯದಲ್ಲಿ ಲ್ಯಾಂಕ್ ಶೈರ್ ಒಂದು ಓವರ್ ಉಳಿದಿರುವಂತೆ ಗುರಿ ಬೆನ್ನಟ್ಟಿ ಜಯ ಸಾಧಿಸಿತು.

 


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ