Breaking News

Daily Archives: ಜೂನ್ 22, 2021

ರಾಜಾಪೂರ ಕೊಲೆ ಪ್ರಕರಣ ಭೇದಿಸಿದ ಘಟಪ್ರಭಾ ಪೋಲಿಸರು, ಮೂವರು ಆರೋಪಿಗಳ ಬಂಧನ

ಘಟಪ್ರಭಾ: ಜೂನ್ 10 ರಂದು ರಾಜಾಪೂರ ಗ್ರಾಮದಲ್ಲಿ ನಡೆದ ಮಹಾಯುದ್ಧ ಯೂಟ್ಯೂಬ ಚಾನಲ್ ಸಂಪಾದಕ ಶಿವಾನಂದ ಬಸಪ್ಪಾ ಕಾಚಾಗೋಳ (27) ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಮೂವರು ಆರೋಪಿಗಳನ್ನು ಘಟಪ್ರಭಾ ಪೊಲೀಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತರಾದ ಜೋತೆಪ್ಪಾ ವಿಠ್ಠಲ ಮಗದುಮ್ (27) , ಬೀರಪ್ಪಾ ನಿಂಗಪ್ಪಾ ಬಾನಸಿ (27) , ವಸಂತ ಬಮ್ಮಪ್ಪಾ ಬಮ್ಮವ್ವಗೋಳ (27) ಮೂವರು ರಾಜಾಪೂರ ಗ್ರಾಮದ ನಿವಾಸಿಯಾಗಿದ್ದು, ಕೊಲೆಯಾದ ಶಿವಾನಂದನ ಪರಿಚಯಸ್ಥರಾಗಿದ್ದಾರೆ. ಕೊಲೆಗೆ ನಿಖರವಾರದ ಕಾರಣ …

Read More »

ಕೋವಿಡ್ ನಿರ್ವಹಣೆ ಕುಳಿತು ಡಿಸಿಎಂ ಗೋವಿ ಕಾರಜೋಳ ಚರ್ಚೆ

ಚುನಾವಣೆಗೆ ಇನ್ನೂ ಒಂದು ಮುಕ್ಕಾಲುವರ್ಷವಿದೆ. ಈಗಲೇ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಜಂಗಿಕುಸ್ತಿ ಆರಂಭವಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜಗಳದ ಮಧ್ಯೆ ಡಾ.ಜಿ ಪರಮೇಶ್ವರ್ ಇಣುಕಿ ನೋಡುತ್ತಿದ್ದಾರೆ. ಅವರು ಕಷ್ಟದ ದಿನಗಳಲ್ಲಿ ಅಧ್ಯಕ್ಷರಾಗಿದ್ದರು. ಇನ್ನೇನು ಸಿಎಂ ಆಗಬೇಕು ಎನ್ನುವಷ್ಟರಲ್ಲಿ ಅವರನ್ನು ಸೋಲಿಸಿದ್ದರು. ಈಗ ಪರಮೇಶ್ವರ್ ಕೂಡ ಮುಖ್ಯಮಂತ್ರಿಯಾಗಬೇಕು ಎಂಬ ಚಿಂತನೆಯಲ್ಲಿದ್ದಾರೆ ಹಾಗಾಗಿ ಇಬ್ಬರ ಜಗಳದ ನಡುವೆ ಇವರು ಇಣುಕು ನೋಡುತ್ತಿದ್ದಾರೆ …

Read More »

ಅಕ್ರಮ ಸಂಗ್ರಹ: 2261 ಚೀಲ ರಸಗೊಬ್ಬರ ಪತ್ತೆ

ಬಾಗಲಕೋಟೆ: ಹುನಗುಂದ ತಾಲ್ಲೂಕಿನ ಕಮತಗಿಯಲ್ಲಿ ಅಕ್ರಮವಾಗಿ ದಾಸ್ತಾನು ಇಡಲಾಗಿದ್ದ ₹11.05 ಲಕ್ಷ ಮೌಲ್ಯದ 2261 ಚೀಲ ವಿವಿಧ ಬಗೆಯ ರಸಗೊಬ್ಬರವನ್ನು ಕೃಷಿ ಇಲಾಖೆಯ ವಿಚಕ್ಷಣಾ ತಂಡದವರು ಸೋಮವಾರ ವಶಪಡಿಸಿಕೊಂಡಿದ್ದಾರೆ ಕಮತಗಿಯ ವಿನಾಯಕ ಕೃಷಿ ಕೇಂದ್ರ ಹಾಗೂ ಅನ್ನದಾನೇಶ್ವರಿ ಕೃಷಿ ಸೇವಾ ಕೇಂದ್ರಗಳ ಹೆಸರಿನ ಉಗ್ರಾಣಗಳಲ್ಲಿ ರಸಗೊಬ್ಬರದ ಚೀಲಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ವಿಚಕ್ಷಣಾ ತಂಡದ ಸಹಾಯಕ ನಿರ್ದೇಶಕರಾದ ಬಿ.ಜಿ.ಮಾಳೇದ, …

Read More »

ಟಿಆರ್‌ಪಿ ಹಗರಣ: ಅರ್ನಬ್ ಆರೋಪಿ

ಮುಂಬೈ: ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯಕ್ಕೆ ಮುಂಬೈ ಪೊಲೀಸರು ಮಂಗಳವಾರ ಎರಡನೇ ಚಾರ್ಜ್‌ಶೀಟ್‌ ಸಲ್ಲಿಸಿದ್ದು, ರಿಪಬ್ಲಿಕ್‌ ಟಿವಿಯ ಪ್ರಧಾನ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರನ್ನು ಆರೋಪಿಯನ್ನಾಗಿ ಉಲ್ಲೇಖಿಸಲಾಗಿದೆ. ಹಗರಣ ಕುರಿತು ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್‌ನ ಕ್ರೈಂ ಇಂಟೆಲಿಜೆನ್ಸ್‌ ಯುನಿಟ್‌ (ಸಿಐಯು) ಈ ಚಾರ್ಜ್‌ಶೀಟನ್ನು ಸಲ್ಲಿಸಿದೆ. ‘ಚಾರ್ಜ್‌ಶೀಟ್‌ನಲ್ಲಿ ಹಲವು ಆರೋಪಿಗಳ ಹೆಸರುಗಳಿದ್ದು, ಅರ್ನಬ್‌ ಗೋಸ್ವಾಮಿ ಹಾಗೂ ಎಆರ್‌ಜಿ ಔಟ್‌ಲಿಯರ್ ಸಂಸ್ಥೆಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ’ ಎಂದು ಗೋಸ್ವಾಮಿ ಪರ …

Read More »

ರಾಹುಲ್ ಗಾಂಧಿ ಭೇಟಿ ಮಾಡಿದ ಡಿ.ಕೆ.ಶಿ

ಹೊಸದಿಲ್ಲಿ/ ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ನಾಯಕತ್ವ ಕುರಿತಂತೆ ಚರ್ಚೆ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇದು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಪ್ರಸ್ತುತ ರಾಜಕೀಯ ವಿದ್ಯಮಾನಗಳು, ಕೆಪಿಸಿಸಿ ಪದಾಧಿಕಾರಿಗಳ ನೇಮಕ, ಜಿಲ್ಲಾಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸೋಮವಾರ ದೆಹಲಿಯಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್, ಪದಾಧಿಕಾರಿಗಳ ನೇಮಕ ಹಾಗೂ ಕೆಲವು ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಲಾಗುವುದು. ನಾನು ಕಳೆದ ಒಂದು ವರ್ಷದಿಂದ …

Read More »

ಹೈಕಮಾಂಡ್ ಗೆ ವರದಿ ಸಲ್ಲಿಸಿದ ಅರುಣ್ ಸಿಂಗ್; ಸಿ.ಟಿ. ರವಿ ವಿರುದ್ಧ ದೂರು ನೀಡಿದ್ರಾ ಬಿಜೆಪಿ ರಾಜ್ಯ ಉಸ್ತುವಾರಿ.?

ನವದೆಹಲಿ: ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ 3 ದಿನಗಳ ರಾಜ್ಯ ಭೇಟಿಗೆ ಆಗಮಿಸಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ವರದಿ ಸಲ್ಲಿಸಿದ್ದು, ಸಿಎಂ ಬಿ.ಎಸ್.ವೈ. ಪರ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅರುಣ್ ಸಿಂಗ್, ಓರ್ವ ಸಚಿವ, ಇಬ್ಬರು ಶಾಸಕರಿಂದ ಮಾತ್ರ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಸಿ.ಪಿ. ಯೋಗೇಶ್ವರ್, ಶಾಸಕ ಅರವಿಂದ್ ಬೆಲ್ಲದ್, …

Read More »

ತಡರಾತ್ರಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಆತ್ಮಹತ್ಯೆ! ಮುದ್ದಾದ ಯುವತಿ ಬಾಳಿಗೆ ಕೊಳ್ಳಿ ಇಟ್ಟಿದ್ಯಾರು?

ಕೋಲಾರ: ಗ್ರಾಮ ಪಂಚಾಯಿತಿ ಕಾರ್ಯದರ್ಶಿಯೊಬ್ಬರು ಸೋಮವಾರ ರಾತ್ರಿ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ. ಕಾವ್ಯ ಮೃತ ದುರ್ದೈವಿ. 23 ವರ್ಷದ ಯುವತಿ ಕಾವ್ಯಾ, ಕೋಲಾರ ತಾಲೂಕು ಬೆಗ್ಲಿಹೊಸಹಳ್ಳಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಆಗಿದ್ದರು. ಕೋಲಾರ ನಗರದ ಕೋಲಾರಮ್ಮ ಬಡಾವಣೆಯಲ್ಲಿ ವಾಸವಿದ್ದ ಕಾವ್ಯಾ, ನಿನ್ನೆ ರಾತ್ರಿ ನೇಣಿಗೆ ಕೊರಳೊಡ್ಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೋಡೋಕೆ ಸುಂದರವಾಗಿದ್ದು, ಒಳ್ಳೆಯ ಕೆಲವೂ ಗಿಟ್ಟಿಸಿಕೊಂಡಿದ್ದ ಯುವತಿ ದುರಂತ …

Read More »

ಹೆಂಡತಿ ಮೇಲೇ ಅನುಮಾನ; ಕತ್ತು ಕೊಯ್ದು ಕೊಲೆ ಮಾಡಿದ ಪತಿರಾಯ!

ಬೆಂಗಳೂರು: ಹೆಂಡತಿ ಅಕ್ರಮ ಸಂಬಂಧ ಹೊಂದಿರಬಹುದು ಎನ್ನುವ ಅನುಮಾನದಿಂದಾಗಿ ಗಂಡ, ಆಕೆಯ ಕತ್ತನ್ನೇ ಕೊಯ್ದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಮಿಳುನಾಡು ಮೂಲದ ಮಣಿ (36) ಬೆಂಗಳೂರಿನ ಅರಕೆರೆ ಬಳಿಯ ಬಿಟಿಎಸ್ ಲೇಔಟ್ ಮಾಸವಿದ್ದ. ಹೆಂಡತಿ ಆಶಾ (32) ಜತೆ ಸೇರಿಕೊಂಡು ಪ್ರತಿನಿತ್ಯ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದರೆ ಆತನಿಗೆ ಇತ್ತೀಚೆಗೆ ಹೆಂಡತಿಯ ಮೇಲೆ ಅನುಮಾನ ಶುರುವಾಗಿದೆ. ಆಕೆ ಅಕ್ರಮ …

Read More »

ಶೀಲ ಶಂಕಿಸಿ ಪತ್ನಿ ಹತ್ಯೆ

ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಪತಿ ತನ್ನ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ನಗರದ ಹುಳಿಮಾವು ಸಮೀಪದ ಅರಕೆರೆ ಬಿಟಿಎಸ್ ಲೇಔಟ್ ನಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಆಶಾ ಎಂದು ಗುರುತಿಸಲಾಗಿದ್ದು, ಆರೋಪಿ ಮಣಿ ತನ್ನ ಪತ್ನಿಯನ್ನು ಕೊಂದ ಪತಿರಾಯ. ಆಶಾ ಹಾಗೂ ಮಣಿ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಅದೇ ರೀತಿ ನಿನ್ನೆ ರಾತ್ರಿಯೂ ಪತಿ, ಪತ್ನಿ ನಡುವೆ ಗಲಾಟೆಯಾಗಿದೆ. ಮಣಿ ಇತ್ತೀಚೆಗೆ ವಿಪರೀತ ಮದ್ಯ ಕುಡಿಯಲು …

Read More »

‘KPSC’ ಗೆ ಇಬ್ಬರು ಸದಸ್ಯರುಗಳನ್ನು ನೇಮಿಸಿ ರಾಜ್ಯಪಾಲ ವಜೂಭಾಯಿ ವಾಲಾ ಆದೇಶ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿಯಿರುವ ಸದಸ್ಯರುಗಳ ಸ್ಥಾನಕ್ಕೆ ಇಬ್ಬರನ್ನು ನೇಮಿಸಿ ರಾಜ್ಯಪಾಲ ವಜೂಭಾಯಿ ವಾಲಾ ಆದೇಶ ಹೊರಡಿಸಿದ್ದಾರೆ. ಅಧಿಕಾರಿ ಸದಸ್ಯರಾಗಿ ಡಾ. ಶಾಂತಾ ಹೊಸಮನಿ, ರಕ್ತನಿಧಿ ವೈದ್ಯಾಧಿಕಾರಿ, ಕೆ ಸಿ ಜನರಲ್ ಆಸ್ಪತ್ರೆ ಇವರನ್ನು, ಅಧಿಕಾರೇತರ ಸದಸ್ಯರಾಗಿ ಡಾ. ಹೆಚ್ ಎಸ್ ನರೇಂದ್ರ ಇವರನ್ನು ನೇಮಕಗೊಳಿಸಿ ರಾಜ್ಯಪಾಲ ವಜುಭಾಯಿ ವಾಲಾ ಆದೇಶ ಹೊರಡಿಸಿದ್ದಾರೆ. ಈ ಕುರಿತು ರಾಜ್ಯ ಸರ್ಕಾರದ ಉಪ ಕಾರ್ಯದರ್ಶಿ ಡಾ, ಆನಂದ್ ಕೆ ಸುತ್ತೋಲೆ …

Read More »