Breaking News

ಕೋವಿಡ್ ನಿರ್ವಹಣೆ ಕುಳಿತು ಡಿಸಿಎಂ ಗೋವಿ ಕಾರಜೋಳ ಚರ್ಚೆ

Spread the love

ಚುನಾವಣೆಗೆ ಇನ್ನೂ ಒಂದು ಮುಕ್ಕಾಲುವರ್ಷವಿದೆ. ಈಗಲೇ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಜಂಗಿಕುಸ್ತಿ ಆರಂಭವಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜಗಳದ ಮಧ್ಯೆ ಡಾ.ಜಿ ಪರಮೇಶ್ವರ್ ಇಣುಕಿ ನೋಡುತ್ತಿದ್ದಾರೆ. ಅವರು ಕಷ್ಟದ ದಿನಗಳಲ್ಲಿ ಅಧ್ಯಕ್ಷರಾಗಿದ್ದರು. ಇನ್ನೇನು ಸಿಎಂ ಆಗಬೇಕು ಎನ್ನುವಷ್ಟರಲ್ಲಿ ಅವರನ್ನು ಸೋಲಿಸಿದ್ದರು. ಈಗ ಪರಮೇಶ್ವರ್ ಕೂಡ ಮುಖ್ಯಮಂತ್ರಿಯಾಗಬೇಕು ಎಂಬ ಚಿಂತನೆಯಲ್ಲಿದ್ದಾರೆ ಹಾಗಾಗಿ ಇಬ್ಬರ ಜಗಳದ ನಡುವೆ ಇವರು ಇಣುಕು ನೋಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ರಮೇಶ್ ಜಾರಕಿಹೊಳಿ ಮುಂಬೈ ಭೇಟಿ ಬಗ್ಗೆ ಮಾತನಾಡಿದ ಕಾರಜೋಳ, ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ರಮೇಶ್ ಜಾರಕಿಹೊಳಿಗೆ ಮೊದಲಿನಿಂದಲೂ ಪರಿಚಯ. ಆಗಾಗ ಭೇಟಿಯಾಗುತ್ತಾರೆ. ಬೆಳಗಾವಿಯಲ್ಲಿದ್ದವರಿಗೆ ಮಹಾರಾಷ್ಟ್ರ ಸಂಪರ್ಕ ಜಾಸ್ತಿ. ಹಾಗಾಗಿ ಬೆಳಗಾವಿ ನಾಯಕರು ಮಹಾರಾಷ್ಟ್ರ ನಾಯಕರು ಆಗಾಗ ಭೇಟಿಯಾಗುತ್ತಿರುತ್ತಾರೆ ಎಂದು ಸಮಜಾಯಿಷಿ ನೀಡಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ