Breaking News
Home / 2021 / ಜೂನ್ / 22 (page 2)

Daily Archives: ಜೂನ್ 22, 2021

ಜೈಲಲ್ಲಿರುವ ರೌಡಿಯ ಪತ್ನಿಯ ಜತೆ ಅಕ್ರಮ ಸಂಬಂಧ: ರೌಡಿಶೀಟರ್‌ನ ಕುತ್ತಿಗೆ ಸೀಳಿ ಬರ್ಬರ ಕೊಲೆ!

ಬೆಂಗಳೂರು: ರಶೀದ್ ಮಲಬಾರಿ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದವನ ಕುಖ್ಯಾತ ರೌಡಿ ಶೀಟರ್‌ ಸೈಯದ್ ಕರೀಂ ಅಲಿ ಎಂಬಾತನನ್ನು ನಗರದಲ್ಲಿ ಕೊಲೆ ಮಾಡಲಾಗಿದೆ. ಬೇರೊಬ್ಬನ ಪತ್ನಿಯ ಜತೆ ಈತ ಅಕ್ರಮ ಸಂಬಂಧ ಹೊಂದಿದ್ದು ಅದೇ ಈ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಇಂದು ಬೆಳಗ್ಗೆ ಸೈಯದ್‌ನನ್ನು ಚಾಕುವಿನಿಂದ ಚುಚ್ಚಿ, ಕುತ್ತಿಗೆ ಸೀಳಿ ಹತ್ಯೆ ಮಾಡಲಾಗಿದೆ. ಬೆಂಗಳೂರಿನ ಗೋವಿಂದ ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸೈಯದ್‌ ಇನ್ನೋರ್ಚ ರೌಡಿ ಅನೀಸ್ ಎಂಬಾತನ …

Read More »

NCB ಅಧಿಕಾರಿಗಳಿಂದ ಭರ್ಜರಿ ಬೇಟೆ: 2 ಟನ್​ಗೂ ಹೆಚ್ಚು ಗಾಂಜಾ ವಶಕ್ಕೆ

ಬೆಂಗಳೂರು: ಬೆಂಗಳೂರು ವಲಯ ಎನ್​ಸಿಬಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ ₹15 ಕೋಟಿ ಬೆಲೆಬಾಳುವ ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ. ಹೈದರಾಬಾದ್​ನ ಪೆದ್ದ ಅಂಬರ್​ಪೇಟ್ ಟೋಲ್ ಪ್ಲಾಜಾ ಬಳಿ ಟ್ರಕ್​ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಲಾಗಿದ್ದು 2 ಟನ್​ಗಿಂತಲೂ ಹೆಚ್ಚಿನ ಗಾಂಜಾವನ್ನ ಸೀಜ್ ಮಾಡಲಾಗಿದೆ. ಒಟ್ಟು 1,080 ಪ್ಯಾಕೆಟ್​ಗಳಲ್ಲಿ ಗಾಂಜಾವನ್ನ ಸಾಗಾಟ ಮಾಡಲಾಗ್ತಿತ್ತು.. ಒಂದೊಂದು ಪ್ಯಾಕೆಟ್​ನಲ್ಲಿ 2 ಕೆ.ಜಿ ಗಾಂಜಾ ಶೇಖರಿಸಲಾಗಿತ್ತು ಎನ್ನಲಾಗಿದೆ. ಹೈದರಾಬಾದ್​ನಿಂದ …

Read More »

ಹಂತ ಹಂತವಾಗಿ ಶಾಲಾ ಕಾಲೇಜು ತೆರೆಯಲು ತಜ್ಞರ ಸಮಿತಿ ಸೂಚನೆ: ಸಿಎಂ ಬಿಎಸ್ ವೈ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಶಾಲೆ- ಕಾಲೇಜು ತೆರೆಯಲು ತಜ್ಞರ ಸಮಿತಿ ಸಲಹೆ ನೀಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ತಜ್ಞರ ಸಮಿತಿಯ ಸಭೆಯ ಬಳಿಕ ಮಾತನಾಡಿದ ಸಿಎಂ, ಕೊವಿಡ್ ನಂತರ ಆರೊಗ್ಯ ಸಮಸ್ಯೆ ಕಡೆಗೆ ಗಮನ ಹರಿಸಬೇಕು. 18 ವರ್ಷಕ್ಕಿಂತ ಹಿರಿಯ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಿ ನಂತರ ಹಂತ ಹಂತವಾಗಿ ಕಾಲೇಜು ತೆರೆಯಲು ಸೂಚನೆ ನೀಡಿದ್ದಾರೆ ಎಂದರು. ಕೋವಿಡ್ ಮೂರನೇ ಅಲೆ …

Read More »

ಡ್ರೋನ್ ಗಳಲ್ಲಿ ಔಷಧಿ ವಿತರಣೆ ಕಾರ್ಯ ಕರ್ನಾಟಕದಲ್ಲಿ ಮೊದಲ ಬಾರಿಗೆ ಪ್ರಾರಂಭ

ಚಿಕ್ಕಬಳ್ಳಾಪುರ:ಭಾರತದಲ್ಲಿ ವೈದ್ಯಕೀಯ ಸೇವೆಗಳಿಗೆ ಬದಲಾವಣೆ ತರಲು ಸಾಬೀತುಪಡಿಸುವ ಈ ಕ್ರಮದಲ್ಲಿ, ಡ್ರೋನ್ ಮೂಲಕ ಔಷಧಿ ವಿತರಣೆಯ ಪ್ರಯೋಗವನ್ನು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಶಂಬುಕಾ ನಗರದಲ್ಲಿ ಪ್ರಾರಂಭಿಸಲಾಗಿದೆ. ಮುಂದಿನ 40 ರಿಂದ 45 ದಿನಗಳವರೆಗೆ ಬೆಂಗಳೂರು ಮೂಲದ ಥ್ರೊಟಲ್ ಏರೋಸ್ಪೇಸ್ ಸಿಸ್ಟಮ್ಸ್ (ಟಿಎಎಸ್) ಪ್ರಯೋಗಗಳನ್ನು ನಡೆಸಲಿದೆ. ಚಿಕ್ಕಬಳ್ಳಾಪುರದಲ್ಲಿ ಈ ಪ್ರಯೋಗಕ್ಕಾಗಿ ಎರಡು ಮೆಡಿಕಾಪ್ಟರ್ ಡ್ರೋನ್‌ಗಳನ್ನು ಬಳಸಲಾಗುತ್ತಿದೆ.ಮೊದಲ ಡ್ರೋನ್ 15 ಕಿ.ಮೀ ವ್ಯಾಪ್ತಿಯೊಂದಿಗೆ 1 ಕೆ.ಜಿ ವರೆಗೆ ತಲುಪಿಸುವ ಸಾಮರ್ಥ್ಯವನ್ನು …

Read More »

ಕೋವಿಡ್‌ 3ನೇ ಅಲೆ- ಮಕ್ಕಳಿಗಾಗಿಯೇ ಪ್ರತ್ಯೇಕ ಆಸ್ಪತ್ರೆಗೆ ಚಿಂತನೆ: ಶಶಿಕಲಾ ಜೊಲ್ಲೆ

ಬೆಂಗಳೂರು: ಕೊರೋನಾ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಆತಂಕ ಇರುವುದರಿಂದ ಬೆಂಗಳೂರಿನಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕ ಕೋವಿಡ್ ಆಸ್ಪತ್ರೆ ನಿರ್ಮಿಸುವಂತೆ ಸಲಹೆ ಬಂದಿದೆ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ‘ಈ ಕುರಿತು ಮುಖ್ಯಮಂತ್ರಿಯನ್ನು ಶೀಘ್ರದಲ್ಲೇ ಭೇಟಿ ಮಾಡಿ ಮಾತುಕತೆ ನಡೆಸಲಿದ್ದು, ಅವರ ಅಂತಿಮ ಆದೇಶದಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಸಮುದಾಯ ಕೇಂದ್ರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ …

Read More »

ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಲ್ಲಿ ಸಮಸ್ಯೆ: ಅಧಿಕಾರಿಗಳೊಂದಿಗೆ ಶಾಸಕ ಸತೀಶ ಜಾರಕಿಹೊಳಿ ಸಭೆ

ಬೆಳಗಾವಿ ಜಿಲ್ಲೆ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿಯುವ ನೀರು, ವಿದ್ಯುಚ್ಚಕ್ತಿ ಪೂರೈಕೆ, ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಆಗಿರುವ ಸಮಸ್ಯೆಗಳ ಕುರಿತು ಚರ್ಚಿಸಲು ತಾಲೂಕು ಪಂಚಾಯಿತಿಯಲ್ಲಿ ಶಾಸಕ ಸತೀಶ ಜಾರಕಿಹೊಳಿ ಅಧಿಕಾರಿಗಳ ಸಭೆ ನಡೆಸಿ, ಸಲಹೆ ಸೂಚನೆ ನೀಡಿದರು. ಯಮಕನಮರಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರು, ವಿದ್ಯುಚ್ಚಕ್ತಿ ಪೂರೈಕೆ, ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಆಗಿರುವ ಸಮಸ್ಯೆಗಳ ಕುರಿತು ಗ್ರಾಮಗಳ ಜನರು ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಕುರಿತು ಚರ್ಚಿಸಲು ತಾಲೂಕು …

Read More »

ಗೋಕಾಕ ಸಾರ್ವಜನಿಕರ ಗಮನಕ್ಕೆ,ನಗರದಲ್ಲಿ ನಾಲ್ಕು ಕೇಂದ್ರಗಳಲ್ಲಿ ಅಂದರೆ.

ಗೋಕಾಕ ಸಾರ್ವಜನಿಕರ ಗಮನಕ್ಕೆ, ದಿನಾಂಕ: 22.06.2021 ರಂದು ಮಾತ್ರ ಗೋಕಾಕ ನಗರದಲ್ಲಿ ನಾಲ್ಕು ಕೇಂದ್ರಗಳಲ್ಲಿ ಅಂದರೆ 1. ಮಯೂರ್ ಸ್ಕೂಲ್ 2. ಅಕ್ಕಮಹಾದೇವಿ ದೇವಸ್ಥಾನ ಬಣಗಾರ್ ಗಲ್ಲಿ 3. ಸಿಟಿ PHC, ಗೊಂಬಿ ಗುಡಿ ಹತ್ತಿರ 4. ನ್ಯೂ ಇಂಗ್ಲಿಷ್ ಸ್ಕೂಲ್ ( ಸರಕಾರಿ ಆಸ್ಪತ್ರೆ ಬದಲಾಗಿ) ಗಳಲ್ಲಿ ಮಾತ್ರ ಲಸಿಕಾ ಮೇಳ (vaccin camp) ನಡೆಯಲಿದ್ದು, ಇವನ್ನು ಹೊರತು ಪಡಿಸಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹಾಗು ಇತರ ಕಡೆಗಳಲ್ಲಿ …

Read More »

₹ 2 ಲಕ್ಷ ಮೌಲ್ಯದ ಮೊಬೈಲ್‌ಗಳು ವಶ

ಹಾವೇರಿ: ‘ತಿಳವಳ್ಳಿ ಗ್ರಾಮದ ಹರ್ಡೇಕಲ್‌ ಸರ್ಕಲ್‌ ಬಳಿ ಭಾನುವಾರ ಪೊಲೀಸರು ದಾಳಿ ನಡೆಸಿ, ₹2 ಲಕ್ಷ ಮೌಲ್ಯದ 50 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಒಬ್ಬ ಆರೋಪಿಯನ್ನು ಬಂಧಿಸಿದ್ದು, ಮತ್ತೊಬ್ಬ ನಾಪತ್ತೆಯಾಗಿದ್ದಾನೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೊಬೈಲ್‌ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದರು. ಹಾನಗಲ್‌ ತಾಲ್ಲೂಕು ಹುಲಗಿನಕೊಪ್ಪ ಗ್ರಾಮದ ನಿತಿನ್‌ ಗೌಂಡಿ ಬಂಧಿತ ಆರೋಪಿ. ಅದೇ …

Read More »

ಮಹಿಳೆ ಹೆಸರಲ್ಲಿ ಅಶ್ಲೀಲ ಚಾಟಿಂಗ್‌ ; ಥಳಿಸಿ ಪೋಲೀಸರಿಗೆ ಒಪ್ಪಿಸಿದ ಮಹಿಳೆ

ಮಡಿಕೇರಿ : ಯುವತಿಯ ಹೆಸರನ್ನು ಹಾಕಿಕೊಂಡು ನಕಲಿ ಪ್ರೊಪೈಲ್‌ ಮಾಡಿ ಫೇಸ್​ಬುಕ್​ನಲ್ಲಿ ಮಹಿಳೆಯೊಂದಿಗೆ ಅಶ್ಲೀಲವಾಗಿ ಮೆಸೇಜ್​ ಮಾಡುತಿದ್ದ ಯುವಕನನ್ನು ಉಪಾಯವಾಗಿ ಕರೆಸಿಕೊಂಡು ಥಳಿಸಿ, ನಂತರ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಇಲ್ಲಿಗೆ ಸಮೀಪದ ಹಾಕತ್ತೂರಿನ ಅಶ್ರಫ್‌ ಎಂಬ ಯುವಕ ಕಳೆದ 15 ದಿನಗಳಿಂದ ಅರುಣಾ ಎಂಬ ಯುವತಿಯ ಹೆಸರಿನ ಮೂಲಕ ಮಹಿಳೆಯೊಬ್ಬರೊಂದಿಗೆ ಅಶ್ಲೀಲವಾಗಿ ಚಾಟಿಂಗ್​ ಮಾಡುತ್ತಿದ್ದ. ಮಹಿಳೆಯು ಈ ರೀತಿ ಚಾಟಿಂಗ್‌ ಮಾಡಬಾರದೆಂದು ಎಚ್ಚರಿಕೆ ನೀಡಿದ್ದರೂ ಈ …

Read More »

ಮನೆ ದರೋಡೆ ; ಸರ್ಕಾರಿ ಶಿಕ್ಷಕ, ಗ್ರಾಪಂ ಸದಸ್ಯ ಸೇರಿ ಐವರ ಬಂಧನ

ಬಳ್ಳಾರಿ: ಕೊಟ್ಟೂರು ತಾಲೂಕಿನ ಬಸವೇಶ್ವರ ಬಡಾವಣೆಯ ಉದ್ಯಮಿ ಮಲ್ಲೇಶಪ್ಪ ಅವರ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಸರ್ಕಾರಿ ಶಾಲಾ ಶಿಕ್ಷಕ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಸೇರಿದಂತೆ ಒಟ್ಟು ಐದು ಜನರನ್ನು ಪೊಲೀಸರು ಬಂಧನಮಾಡಿದ್ದಾರೆ. ಉದ್ಯಮಿ ಮಲ್ಲೇಶ್ ಅವರ ಮನೆಯಲ್ಲಿ ಏ.11ರಂದು ಹತ್ತು ಜನರ ತಂಡ ರಾತ್ರಿ ಏಕಾಏಕಿ ನುಗ್ಗಿ ಮನೆಯಲ್ಲಿ ಇದ್ದ ಗಂಡ ಹೆಂಡತಿಯನ್ನು ಹೆದರಿಸಿ ಮನೆಯಲ್ಲಿದ್ದ 30 ಲಕ್ಷ ರೂ. ನಗದು …

Read More »