Breaking News
Home / 2021 / ಮೇ (page 61)

Monthly Archives: ಮೇ 2021

ಕರ್ತವ್ಯನಿರತ ಪೊಲೀಸರ ಮೇಲೆ ಹರಿದ ಲಾರಿ; ಇಬ್ಬರು ಸಾವು

ವಿಜಯವಾಡ: ಲಾರಿ ಹರಿದು ಕರ್ತವ್ಯನಿರತ ಪೊಲೀಸರಿಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.ಮುಖ್ಯ ಪೊಲೀಸ್​ ಪೇದೆ ಸತ್ಯನಾರಾಯಣ ಮತ್ತು ಹೋಮ್​ ಗಾರ್ಡ್​ ಎನ್​. ಎಸ್​. ರೆಡ್ಡಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಕಾಕಿನಾಡದ ತಿಮ್ಮಾಪುರಂ ಪೊಲೀಸ್​ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ವಿಜಯವಾಡದಿಂದ ಬರುತ್ತಿದ್ದ ಲಸಿಕಾ ವಾಹನದ ಬೆಂಗಾವಲು ಸೇವೆಯಲ್ಲಿದ್ದರು. ಗುರುವಾರ ತಡರಾತ್ರಿ 2 ಗಂಟೆ ಸುಮಾರಿಗೆ ಇಬ್ಬರ ಮೇಲೆ ಹರಿದಿದ್ದು, ಸ್ಥಳದಲ್ಲೇ ಲಾರಿ ನಿಲ್ಲಿಸಿ ಚಾಲಕ ಮತ್ತು ಕ್ಲೀನರ್​ …

Read More »

ಪತಿ – ಮಗನಿಗೆ ಕೋವಿಡ್ ಪಾಸಿಟಿವ್ : ಮನನೊಂದ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ

ಕಲಬುರಗಿ: ಪತಿ ಹಾಗೂ ಮಗನಿಗೆ ಕೊರೊನಾ ಸೊಂಕು ತಗುಲಿದ್ದನ್ನು ನೊಂದುಕೊಂಡ‌ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಲಬುರಗಿ ನಗರದ ಜಗತ್ ವೃತ್ತದ ಬಳಿಯಿರೋ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದುಮತಿ (56 ) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಪತಿ ಹಾಗೂ ಮಗನಿಗೆ ಕೊರೊನಾ ಸೊಂಕು ತಗುಲಿದೆ. ಇದರಿಂದ ಮಹಿಳೆ ನೊಂದುಕೊಂಡಿದ್ದಳು. ಇಂದುಮತಿ, ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ನಿವಾಸಿಯಾಗಿದ್ದು, ಪತಿ ಮತ್ತು ಮಗನಿಗೆ ಸೋಂಕು ದೃಢವಾಗಿದ್ದರಿಂದ …

Read More »

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಇಲ್ಲ : ಜಿಲ್ಲಾಧಿಕಾರಿ ಸ್ಪಷ್ಟನೆ

ಮಂಗಳೂರು : ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆತಂದಿದ್ದು ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ವಾರಾಂತ್ಯದ ಕರ್ಫ್ಯೂ ಇರುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಸರಣದ ಸರಪಳಿಯನ್ನು ತುಂಡರಿಸಲು ಮೇ 9 ರಂದು ಹೊರಡಿಸಿದ ಪರಿಷ್ಕೃತ ಮಾರ್ಗ ಸೂಚಿಗಳು ಮೇ 10 ರ ಬೆಳಗ್ಗೆ 6 ರಿಂದ ಮೇ 24 ರ ಬೆಳಗ್ಗೆ 6 ಗಂಟೆ ತನಕ ಕಟ್ಟು ನಿಟ್ಟಾಗಿ …

Read More »

ಗೋವಾದಲ್ಲಿ ಮತ್ತೊಂದು ದುರಂತ : ಆಕ್ಸಿಜನ್ ಕೊರತೆಯಿಂದ 15 ಮಂದಿ ಸಾವು

ಪಣಜಿ: ಗೋವಾದಲ್ಲಿ ಕೋವಿಡ್ ರಣಕೇಕೆ ಹಾಕುತ್ತಿದೆ. ಕಳೆದ 2 ದಿನಗಳ ಹಿಂದೆ ಆಕ್ಸಿಜನ್ ಕೊತೆಯಿಂದ ಬರೋಬ್ಬರಿ 26 ಮಂದಿ ಸಾವನ್ನಪ್ಪಿದ್ದರು. ಇದರ ನೆನಪು ಮಾಸುವ ಮುನ್ನವೇ ಗೋವಾ ಖಾಸಗಿ ಆಸ್ಪತ್ರೆಯಲ್ಲಿ ಮತ್ತೆ 15 ಕೋವಿಡ್ ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆ. ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 15 ಸೋಂಕಿತರು ಸಾವನ್ನಪ್ಪಿದ್ದಾರೆ. ಕಳೆದ 2 ದಿನಗಳ ಹಿಂದೆ ಇದೇ ಗೋವಾ ವೈದ್ಯಕೀಯ ಕಾಲೇಜ್​ನಲ್ಲಿ 26 ರೋಗಿಗಳು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದರು. …

Read More »

ಲಸಿಕೆ ಸ್ಲಾಟ್‌ ಪಡೆಯಲು ಅಲರ್ಟ್‌ ಮೆಸೇಜ್‌ ಪಡೆಯಿರಿ

ಹೊಸದಿಲ್ಲಿ: ದೇಶದಲ್ಲಿ ಲಸಿಕೆಗಾಗಿ ಕೋವಿನ್‌ ಪೋರ್ಟಲ್‌ನಲ್ಲಿ ನೋಂದಣಿಗೆ ಇಂಟರ್‌ನೆಟ್‌ ಲಭ್ಯವಿಲ್ಲದ ಸ್ಥಳದಲ್ಲಿ ಅಡಚಣೆ ಉಂಟಾಗುತ್ತಿದೆ. ಅದಕ್ಕಾಗಿ ಚೆನ್ನೈಯಲ್ಲಿ ಬ್ಯುಸಿನೆಸ್‌ ಅನಾಲಿಸ್ಟ್‌ ವೃತ್ತಿಯಲ್ಲಿರುವ ಬ್ರೆಟಿ ಥಾಮಸ್‌ (35) ಎಂಬುವರು ಲಸಿಕೆ ಹಾಕಿಸಲು ಸ್ಲಾಟ್‌ಗಳು ಯಾವಾಗ ಲಭ್ಯವಾಗುತ್ತವೆ ಎಂಬ ಬಗ್ಗೆ ಹೊಸ ತಂತ್ರಾಂಶ ಕಂಡುಹಿಡಿದಿದ್ದಾರೆ. ಅದಕ್ಕೆ ಟೆಲಿಗ್ರಾಂ ಮೂಲಕ ಸದಸ್ಯತ್ವ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅದರಲ್ಲಿ ಸುಮಾರು 4 ಲಕ್ಷ ಮಂದಿ ಸದಸ್ಯರು ಈಗ ಇದ್ದಾರೆ. “ಹೆಚ್ಚಿನ ನಗರ ಮತ್ತು ಪಟ್ಟಣಗಳನ್ನು ಕೇಂದ್ರೀಕರಿಸಿ …

Read More »

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಅಭಾವಕ್ಕೆ ಇಲ್ಲಿದೆ ಸಾಕ್ಷ್ಯ

ನವದೆಹಲಿ, ಮೇ 14: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಅಭಾವ ಸೃಷ್ಟಿಯಾಗಿರುವುದು ಅಂಕಿ-ಅಂಶಗಳ ಸಹಿತ ಸಾಬೀತಾಗಿದೆ. ದಿನದಿಂದ ದಿನಕ್ಕೆ ಕೊವಿಡ್-19 ಲಸಿಕೆ ವಿತರಣೆ ಪ್ರಮಾಣ ಇಳಿಮುಖ ಆಗುತ್ತಿರುವುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಒಂದು ದಿನದಲ್ಲಿ 30 ಲಕ್ಷಕ್ಕಿಂತ ಹೆಚ್ಚು ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡುತ್ತಿದ್ದ ಸಂಖ್ಯೆ ಇದೀಗ ಅರ್ಧಕ್ಕರ್ಧ ತಗ್ಗಿದೆ. ಕೊವಿಡ್-19 ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 118 ದಿನಗಳಲ್ಲಿ 17,91,77,029 ಜನರಿಗೆ ಲಸಿಕೆ ನೀಡಲಾಗಿದೆ. ಗುರುವಾರ ರಾತ್ರಿ 8 ಗಂಟೆ …

Read More »

ರಾಜ್ಯಕ್ಕೆ ಲಭ್ಯವಾದ ಆಮ್ಲಜನಕ ಎಷ್ಟು? ಎಚ್‌ಡಿಕೆ -ತೇಜಸ್ವಿ ಸೂರ್ಯ ಟ್ವೀಟ್‌ ಜಗಳ

ಬೆಂಗಳೂರು: ರಾಜ್ಯಕ್ಕೆ ಕೇಂದ್ರ ಸರ್ಕಾರ ಎಷ್ಟು ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆ ಮಾಡಿದೆ ಎಂಬ ಬಗ್ಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಂಸದ ತೇಜಸ್ವಿ ಸೂರ್ಯ ಅವರ ಮಧ್ಯೆ ಟ್ವೀಟ್‌ ಸಮರ ನಡೆಸಿದೆ. ‘ಕರ್ನಾಟಕಕ್ಕೆ ಪ್ರತಿ ನಿತ್ಯದ 1,200 ಟನ್‌ ಆಮ್ಲಜನಕ ಪೂರೈಸಬೇಕು ಎಂಬ ನ್ಯಾಯಾಲಯದ ಆದೇಶ ನಂತರವೂ ಕೇಂದ್ರ ಸರ್ಕಾರ ಕೇವಲ 120 ಟನ್‌ ಆಮ್ಲಜನಕ ಪೂರೈಕೆ ಮಾಡಿದೆ. ಆದರೆ, ಉತ್ತರ ಪ್ರದೇಶಕ್ಕೆ 1,680 ಟನ್‌ ಆಮ್ಲಜನಕ …

Read More »

ಮೇ ಅಂತ್ಯದ ತನಕ ಲಸಿಕೆ ಸಿಗಲ್ಲ; ಸುಪ್ರೀಂಗೆ 9 ರಾಜ್ಯಗಳ ಅಫಿಡೆವಿಟ್

ನವದೆಹಲಿ, ಮೇ 13; ಮೇ ಅಂತ್ಯದ ವೇಳೆಗೆ ನಾವು ಬೇಡಿಕೆ ಇಟ್ಟಿರುವ ಕೋವಿಡ್ ಲಸಿಕೆ ಉತ್ಪಾದಕರಿಂದ ರಾಜ್ಯಕ್ಕೆ ತಲುಪಬಹುದು ಎಂದು 9 ರಾಜ್ಯಗಳು ಸುಪ್ರೀಂಕೋರ್ಟ್‌ಗೆ ಹೇಳಿಕೆ ನೀಡಿವೆ. ಸುಪ್ರೀಂಕೋರ್ಟ್ ಕೋವಿಡ್ ಲಸಿಕೆ ಪೂರೈಕೆ ಬಗ್ಗೆ ಸ್ವಯಂ ಪ್ರೇರಿತ ಅರ್ಜಿಯನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಲಸಿಕೆ ಬರುವ ತನಕ 18-44 ವರ್ಷದವಿಗೆ ಲಸಿಕೆ ನೀಡುವುದು ಕಷ್ಟಸಾಧ್ಯವಾಗಲಿದೆ ಎಂದು ರಾಜ್ಯಗಳು ಹೇಳಿವೆ. ಪಂಜಾಬ್, ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ, ಜಾರ್ಖಂಡ್, ಹಿಮಾಚಲ ಪ್ರದೇಶ, …

Read More »

ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ

ಬೆಂಗಳೂರು, ಮೇ 13; ಕೋವಿಡ್ ಪಿಡುಗು ತೀವ್ರವಾಗಿದ್ದು, ಇಡೀ ರಾಜ್ಯ ಚಿಂತಾಜನಕ ಸ್ಥಿತಿಯಲ್ಲಿದೆ. ಹೀಗಾಗಿ ಈ ಬಾರಿ ಯಾರೂ ನನ್ನ ಜನ್ಮದಿನ ಆಚರಿಸಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ. ಗುರುವಾರ ಪತ್ರಿಕಾ ಪ್ರಕಟಣೆ ಮೂಲಕ ಅವರು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳಿಗೆ ಈ ಕುರಿತು ಮನವಿ ಮಾಡಿದ್ದಾರೆ. ಮೇ 15ರಂದು ಡಿ. ಕೆ. ಶಿವಕುಮಾರ್ 59ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆದರೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. …

Read More »

ಟ್ರಾಯ್: 4ಜಿ ಡೌನ್‌ಲೋಡ್‌ ಸ್ಪೀಡ್‌ನಲ್ಲಿ ರಿಲಯನ್ಸ್ ಜಿಯೋ ಎಲ್ಲರಿಗಿಂತ ಮುಂದೆ

ನವದೆಹಲಿ, ಮೇ 13: ರಿಲಯನ್ಸ್ ಜಿಯೋ, ಪ್ರತಿ ಸೆಕೆಂಡ್‌ಗೆ 20.1 ಮೆಗಾಬೈಟ್ ಡೇಟಾ ಡೌನ್‌ಲೋಡ್‌ ಪ್ರಮಾಣದಲ್ಲಿ 4ಜಿ ಸ್ಪೀಡ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಏಪ್ರಿಲ್ ತಿಂಗಳ ಅಪ್‌ಲೋಡ್ ವೇಗದ ವಿಭಾಗದಲ್ಲಿ ವೊಡಾಫೋನ್ 6.7 Mbpsನೊಂದಿಗೆ ಇತರೆ ಕಂಪೆನಿಗಳಿಗಿಂತ ಮುಂಚೂಣಿಯಲ್ಲಿದೆ ಎಂದು ದೂರಸಂಪರ್ಕ ನಿಯಂತ್ರಕ ಸಂಸ್ಥೆ ಟ್ರಾಯ್‌ನ ಇತ್ತೀಚಿನ ಮಾಹಿತಿ ತಿಳಿಸಿದೆ. ತನ್ನ ಅತ್ಯಂತ ನಿಕಟ ಸ್ಪರ್ಧಿ ವೊಡಾಫೋನ್‌ಗಿಂತಲೂ ಮೂರು ಪಟ್ಟು ಅಧಿಕ ಡೌಲ್‌ಲೋಡ್ ವೇಗವನ್ನು ರಿಲಯನ್ಸ್ ಜಿಯೋ ಹೊಂದಿದೆ. …

Read More »