Breaking News

ಗೋವಾದಲ್ಲಿ ಮತ್ತೊಂದು ದುರಂತ : ಆಕ್ಸಿಜನ್ ಕೊರತೆಯಿಂದ 15 ಮಂದಿ ಸಾವು

Spread the love

ಪಣಜಿ: ಗೋವಾದಲ್ಲಿ ಕೋವಿಡ್ ರಣಕೇಕೆ ಹಾಕುತ್ತಿದೆ. ಕಳೆದ 2 ದಿನಗಳ ಹಿಂದೆ ಆಕ್ಸಿಜನ್ ಕೊತೆಯಿಂದ ಬರೋಬ್ಬರಿ 26 ಮಂದಿ ಸಾವನ್ನಪ್ಪಿದ್ದರು. ಇದರ ನೆನಪು ಮಾಸುವ ಮುನ್ನವೇ ಗೋವಾ ಖಾಸಗಿ ಆಸ್ಪತ್ರೆಯಲ್ಲಿ ಮತ್ತೆ 15 ಕೋವಿಡ್ ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆ.

ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 15 ಸೋಂಕಿತರು ಸಾವನ್ನಪ್ಪಿದ್ದಾರೆ. ಕಳೆದ 2 ದಿನಗಳ ಹಿಂದೆ ಇದೇ ಗೋವಾ ವೈದ್ಯಕೀಯ ಕಾಲೇಜ್​ನಲ್ಲಿ 26 ರೋಗಿಗಳು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದರು.

ಗೋವದಲ್ಲಿ ಆಕ್ಸಿಜನ್ ಕೊರತೆಯಿಂದ ಸಾಯುವವರ ಸಂಖ್ಯೆ ಜಾಸ್ತಿಯಾಗಿದೆ. ಗೋವಾ ಸರ್ಕಾರಕ್ಕೆ ಇದೀಗ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಮತ್ತೆ ಈ ರೀತಿಯ ದುರಂತ ಜರುಗದಂತೆ ಕ್ರಮ ವಹಿಸಬೇಕು ಎಂದಿದೆ.

ಮೃತರ ಸಂಬಂಧಿಕರು ಇದೀಗ ಆಸ್ಪತ್ರೆ ಮೇಲೆ ಆರೋಪ ಮಾಡುತ್ತಿದ್ದು, ಆಕ್ಸಿಜನ್ ಸರಿಯಾದ ಸರಬರಾಜು ಮಾಡದ ಕಾರಣದಿಂದಲೇ ಪ್ರಕರಣ ಜರುಗಿದೆ ಎಂದಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ