Breaking News
Home / ರಾಜಕೀಯ / ಟ್ರಾಯ್: 4ಜಿ ಡೌನ್‌ಲೋಡ್‌ ಸ್ಪೀಡ್‌ನಲ್ಲಿ ರಿಲಯನ್ಸ್ ಜಿಯೋ ಎಲ್ಲರಿಗಿಂತ ಮುಂದೆ

ಟ್ರಾಯ್: 4ಜಿ ಡೌನ್‌ಲೋಡ್‌ ಸ್ಪೀಡ್‌ನಲ್ಲಿ ರಿಲಯನ್ಸ್ ಜಿಯೋ ಎಲ್ಲರಿಗಿಂತ ಮುಂದೆ

Spread the love

ನವದೆಹಲಿ, ಮೇ 13: ರಿಲಯನ್ಸ್ ಜಿಯೋ, ಪ್ರತಿ ಸೆಕೆಂಡ್‌ಗೆ 20.1 ಮೆಗಾಬೈಟ್ ಡೇಟಾ ಡೌನ್‌ಲೋಡ್‌ ಪ್ರಮಾಣದಲ್ಲಿ 4ಜಿ ಸ್ಪೀಡ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಏಪ್ರಿಲ್ ತಿಂಗಳ ಅಪ್‌ಲೋಡ್ ವೇಗದ ವಿಭಾಗದಲ್ಲಿ ವೊಡಾಫೋನ್ 6.7 Mbpsನೊಂದಿಗೆ ಇತರೆ ಕಂಪೆನಿಗಳಿಗಿಂತ ಮುಂಚೂಣಿಯಲ್ಲಿದೆ ಎಂದು ದೂರಸಂಪರ್ಕ ನಿಯಂತ್ರಕ ಸಂಸ್ಥೆ ಟ್ರಾಯ್‌ನ ಇತ್ತೀಚಿನ ಮಾಹಿತಿ ತಿಳಿಸಿದೆ.

ತನ್ನ ಅತ್ಯಂತ ನಿಕಟ ಸ್ಪರ್ಧಿ ವೊಡಾಫೋನ್‌ಗಿಂತಲೂ ಮೂರು ಪಟ್ಟು ಅಧಿಕ ಡೌಲ್‌ಲೋಡ್ ವೇಗವನ್ನು ರಿಲಯನ್ಸ್ ಜಿಯೋ ಹೊಂದಿದೆ.

ವೊಡಾಫೋನ್ ಮತ್ತು ಐಡಿಯಾ ಸೆಲ್ಯುಲರ್‌ಗಳು ತಮ್ಮ ಮೊಬೈಲ್ ಉದ್ಯಮಗಳನ್ನು ವೊಡಾಫೋನ್ ಐಡಿಯಾ ಲಿಮಿಟೆಡ್ ಎಂಬ ಹೆಸರಿನಲ್ಲಿ ವಿಲೀನಗೊಳಿಸಿದ್ದರೂ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಿ (ಟ್ರಾಯ್) ಈಗಲೂ ಎರಡೂ ಸಂಸ್ಥೆಗಳ ಪ್ರತ್ಯೇಕ ನೆಟ್‌ವರ್ಕ್ ವೇಗದ ದತ್ತಾಂಶಗಳನ್ನು ಬಿಡುಗಡೆ ಮಾಡುತ್ತಿದೆ.

ಏಪ್ರಿಲ್‌ನಲ್ಲಿ ವೊಡಾಫೋನ್ 7Mbps ಡೌನ್‌ಲೋಡ್ ವೇಗವನ್ನು ದಾಖಲಿಸಿದೆ ಎಂದು ಟ್ರಾಯ್ ಮೇ 11ರಂದು ನೀಡಿರುವ ಮಾಹಿತಿ ತಿಳಿಸಿದೆ. ಇದರ ಬಳಿಕ ಐಡಿಯಾ 5.8 Mbps ಮತ್ತು ಏರ್‌ಟೆಲ್ 5Mbps ಡೌನ್‌ಲೋಡ್ ವೇಗದೊಂದಿಗೆ ನಂತರದ ಸ್ಥಾನಗಳಲ್ಲಿವೆ.

ಅಪ್‌ಲೋಡ್ ವಿಭಾಗದಲ್ಲಿ 6.7 Mbpsನೊಂದಿಗೆ ವೊಡಾಫೋನ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ 6.1 Mbps ಇರುವ ಐಡಿಯಾ ಇದೆ. ಜಿಯೋ 4.2 Mbps ಮತ್ತು ಏರ್‌ಟೆಲ್ 3.9 Mbps ಹೊಂದಿವೆ.

ಡೌನ್‌ಲೋಡ್ ವೇಗವು ಗ್ರಾಹಕರು ಅಂತರ್ಜಾಲದಿಂದ ಮಾಹಿತಿಗಳನ್ನು ಪಡೆದುಕೊಳ್ಳಲು ನೆರವಾಗುತ್ತದೆ. ಅಪ್‌ಲೋಡ್ ವೇಗವು ತಮ್ಮ ಸಂಪರ್ಕದಲ್ಲಿರುವವರಿಗೆ ಚಿತ್ರಗಳು ಮತ್ತು ವಿಡಿಯೋಗಳನ್ನು ತ್ವರಿತವಾಗಿ ರವಾನಿಸಲು ನೆರವಾಗುತ್ತದೆ.

ಮೈಸ್ಪೀಡ್ ಆಪ್‌ನ ಸಹಾಯದೊಂದಿಗೆ ದೇಶಾದ್ಯಂತ ರಿಯಲ್ ಟೈಮ್ ಆಧಾರದಲ್ಲಿ ದತ್ತಾಂಶಗಳನ್ನು ಸಂಗ್ರಹಿಸುವ ಟ್ರಾಯ್, ಅದರ ಮೂಲಕ ಸರಾಸರಿ ವೇಗವನ್ನು ಲೆಕ್ಕ ಹಾಕುತ್ತದೆ.


Spread the love

About Laxminews 24x7

Check Also

ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Spread the love ಬೆನಕಟ್ಟಿ: ಗ್ರಾಮಕ್ಕೆ ಆಗಮಿಸಿದ ಮಾಜಿ ಕೇಂದ್ರ ಸಚಿವ ದಿ. ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ