Breaking News
Home / 2021 / ಮೇ (page 52)

Monthly Archives: ಮೇ 2021

ಕ್ಷಮೆ ಕೇಳಲಿ ಎಂದ ರೋಹಿಣಿ ಸಿಂಧೂರಿಗೆ ಪ್ರಶ್ನೆಗಳ ಸುರಿಮಳೆಗೈದ ಶಾಸಕ ಸಾರಾ ಮಹೇಶ್!

ಮೈಸೂರು: ಚಾಮರಾಜನಗರ ಆಕ್ಸಿಜನ್​ ದುರಂತ ನಡೆದಾಗ ನನ್ನ ವಿರುದ್ಧ ಆರೋಪ ಮಾಡಿದವರು ಕ್ಷಮೆ ಕೇಳಲಿ ಎಂಬ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿಕೆಗೆ ಮಾಜಿ ಸಚಿವ ಸಾ.ರಾ. ಮಹೇಶ್ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ​ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಾ.ರಾ. ಮಹೇಶ್​, ಒಬ್ಬ ಕನ್ನಡಿಗ ದಲಿತ ಡಿಸಿಯನ್ನು ಕೇವಲ 28 ದಿನಕ್ಕೆ ವರ್ಗಾವಣೆ ಮಾಡಿಸಿದ್ದು ಸುಳ್ಳಾ? ಎಂದು ಪ್ರಶ್ನೆಯನ್ನು ಆರಂಭಿಸಿದರು. ಪ್ರಶ್ನೆಗಳ ಸವಾಲನ್ನು ಮುಂದುವರಿಸಿದ ಸಾ.ರಾ.ಮಹೇಶ್​, ಹಾಸನದ ಪ್ರಕರಣದಲ್ಲಿ ತಕ್ಷಣ ನಿಮ್ಮ ಪರ …

Read More »

”ನಿಮ್ಮ ಶಂಖದಿಂದಲೇ ತೀರ್ಥ ಬಂದಿದೆ, ಇನ್ನಾದರೂ ವಾಸ್ತವ ಅರಿತು ಕೆಲಸ ಮಾಡಿ”

ಬೆಂಗಳೂರು, ಮೇ 16: ಕೋವಿಡ್ ಮೊದಲ ಅಲೆಯ ನಂತರ ಜನರು, ಸರಕಾರದಿಂದ ನಿರ್ಲಕ್ಷ್ಯ ಉಂಟಾಯಿತು ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ದು, ಇದನ್ನು ಉಲ್ಲೇಖಿಸಿದ ರಾಜ್ಯ ಕಾಂಗ್ರೆಸ್ ‘ಈಗ ನಿಮ್ಮ ಶಂಖದಿಂದಲೇ ತೀರ್ಥ ಬಂದಿದೆ. ಇನ್ನಾದರೂ ವಾಸ್ತವ ಅರಿತು ಕೆಲಸ ಮಾಡಿ’ ಎಂದು ರಾಜ್ಯ ಸರಕಾರವನ್ನು ಕುಟುಕಿದೆ. ಕೊರೋನ ಸಾಂಕ್ರಾಮಿ ರೋಗದ ಮೊದಲ ಅಲೆಯ ನಂತರ ರಾಷ್ಟ್ರದ ಎಲ್ಲಾ ವರ್ಗದವರು ತೋರಿಸಿರುವ ನಿರ್ಲಕ್ಷ್ಯವು ದೇಶಾದ್ಯಂತ ಈಗ ತಲೆದೋರಿರುವ …

Read More »

BIG NEWS: ಸಾಯೋರು ಎಲ್ಲಾದರೂ ಸಾಯಲಿ; ಬಿಜೆಪಿ ಶಾಸಕನ ದರ್ಪಕ್ಕೆ ಅವಾಕ್ಕಾದ ಆರೋಗ್ಯಾಧಿಕಾರಿ

ಚಿತ್ರದುರ್ಗ: ಆಕ್ಸಿಜನ್ ಬೆಡ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ, ಆರೋಗ್ಯಾಧಿಕಾರಿ ವಿರುದ್ಧ ದರ್ಪದಿಂದ ಮಾತನಾಡಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪ್ರವಾಸಿ ಮಂದಿರದ ಬಳಿ 50 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ವಾರ್ಡ್ ನಿರ್ಮಿಸಲಾಗಿದ್ದು, ಈ ಬಗ್ಗೆ ಶಾಸಕ ಎಂ.ಚಂದ್ರಪ್ಪ ಅವರಿಗೆ ಮಾಹಿತಿ ನೀಡಿದ ಆರೋಗ್ಯಾಧಿಕಾರಿ ಪಾಲಾಕ್ಷ, 50 ಬೆಡ್ ಗಳಲ್ಲಿ 10 ಬೆಡ್ ಗಳಿಗೆ ಮಾತ್ರ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. …

Read More »

ಕೆಸರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಆನೆಯನ್ನು ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಚಾಮರಾಜನಗರ: ಇಲ್ಲಿನ ಬಂಡೀಪುರ ಹುಲಿ ರಕ್ಷಿತಾರಣ್ಯದ ಮೊಳೆಯೂರು ವಲಯದ ಮೀನಕಟ್ಟೆಯ ಅರಣ್ಯದಲ್ಲಿ ಕೆಸರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಹೆಣ್ಣಾನೆಯೊಂದನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಶನಿವಾರ ರಕ್ಷಿಸುವಲ್ಲಿ ಯಶಸ್ವಿ ಆಗಿದ್ದಾರೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೆರೆಯಲ್ಲಿ ಕೆಸರು ಉಂಟಾಗಿತ್ತು. ಕೆರೆಗೆ ನೀರು ಕುಡಿಯು ಬಂದಿದ್ದ ಕಾಡಾನೆಯೊಂದು ಕೆಸರಿನಲ್ಲಿ ಸಿಲುಕಿ ಮೇಲೇಳಲಾಗದೇ ಗಂಟೆಗಟ್ಟಲೆ ಕಷ್ಟ ಪಡುತಿತ್ತು. ಇದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಜೆಸಿಬಿ ಯೊಂದಿಗೆ ತೆರಳಿ ಆನೆಗೆ ತೊಂದರೆ ಆಗದಂತೆ …

Read More »

ವಾಹನಗಳ ಮಾಲೀಕರಿಗೆ ಗುಡ್ ನ್ಯೂಸ್: ಲಾಕ್ಡೌನ್ ಕಾರಣ ಉಚಿತ ಸರ್ವಿಸ್, ವಾರಂಟಿ ಅವಧಿ ವಿಸ್ತರಣೆ

ನವದೆಹಲಿ: ಕೊರೋನಾ ಸೋಂಕು ತಡೆಗೆ ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ಸೇರಿದಂತೆ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿರುವ ಕಾರಣ ವಾಹನಗಳ ವಾರಂಟಿ ಮತ್ತು ಉಚಿತ ಸೇವಾ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಪ್ರಮುಖ ವಾಹನ ತಯಾರಿಕಾ ಕಂಪನಿಗಳ ಉಚಿತ ಸೇವೆ ಮತ್ತು ವಾರಂಟಿ ಅವಧಿ ವಿಸ್ತರಣೆ ಮಾಡಲಾಗಿದ್ದು, ಮಾರುತಿ ಸುಜುಕಿ ಇಂಡಿಯಾ ಉಚಿತ ಸೇವೆ ಮತ್ತು ವಾರಂಟಿ ಅವಧಿಯನ್ನು ಜೂನ್ 30 ರವರೆಗೆ ವಿಸ್ತರಣೆ ಮಾಡಲಾಗಿದೆ. 2021 ರ ಮಾರ್ಚ್ 15 ರಿಂದ …

Read More »

ಕೊರೋನಾ ಸಂತ್ರಸ್ತೆಯ ಮೇಲೆ ಆಯಂಬುಲೆನ್ಸ್ ಸಹಾಯಕನಿಂದ ಲೈಂಗಿಕ ದೌರ್ಜನ್ಯ

ಕೊಚ್ಚಿ : ಕೊರೋನಾ ಸೋಂಕಿಗೆ ತುತ್ತಾಗಿ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯ ಮೇಲೆ ಆಯಂಬುಲೆನ್ಸ್ ಸಹಾಯಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಕೇರಳದ ಮಲ್ಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ. ಏಪ್ರಿಲ್ 27 ರಂದು ಈ ಘಟನೆ ನಡೆದಿದ್ದು, ಕೊರೋನಾ ಸೋಂಕಿಗೆ ತುತ್ತಾಗಿದ್ದ ರೋಗಿ ಚೇತರಿಸಿಕೊಂಡ ಬಳಿಕ ವೈದ್ಯರಿಗೆ ಈ ಸಂಬಂಧ ಮಾಹಿತಿ ನೀಡಿದ್ದಾರೆ . ಪ್ರಕರಣ ದಾಖಲಾದ ನಂತರ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ. ಕಳೆದ ವರ್ಷ ಕೂಡ ಕೇರಳದ ಇದೇ …

Read More »

ಮಕ್ಕಳಿಗಾಗಿ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಹಾಸಿಗೆ ಕಾಯ್ದಿರಿಸಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಮನವಿ

ಬೆಂಗಳೂರು : ಕೊರೋನಾ 2ನೇ ಅಲೆಯು ಯುವಕರ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಆನಂಕ್ರ ಕೊರೋನಾ 3ನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. ಹೀಗಾಗಿ ರಾಜ್ಯದ ಪ್ರತಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಪೀಡಿಯಾಟ್ರಿಕ್ಸ್ ವಿಭಾಗದಲ್ಲಿ ಸೋಂಕಿತ ಮಕ್ಕಳಿಗಾಗಿ ಹಾಸಿಗೆ ಕಾಯ್ದಿರಿಸುವಂತೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ಈ ಕುರಿತಂತೆ …

Read More »

ಬೆಳಗಾವಿ: ಕೆಎಲ್‌ಇ ಮಹಿಳಾ ಘಟಕದಿಂದ ಐಸೊಲೇಷನ್‌ ಕೇಂದ್

ಬೆಳಗಾವಿ: ಕೊರೊನಾ ಸೋಂಕಿನ ವಿರುದ್ಧದ ಸಮರಕ್ಕೆ ಇಲ್ಲಿನ ಕೆಎಲ್‌ಇ ಸಂಸ್ಥೆಯ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕವು ಕೈ ಜೋಡಿಸಿದ್ದು, ಕೋವಿಡ್ ರೋಗಿಗಳ ಆರೈಕೆಗಾಗಿ ನಗರದ ಲಿಂಗರಾಜ ಕಾಲೇಜು ಕ್ಯಾಂಪಸ್‌ನಲ್ಲಿ ಐಸೊಲೇಷನ್‌ ಕೇಂದ್ರ ತೆರೆದಿದೆ. ‘ಜಿಲ್ಲೆಯಲ್ಲಿ ಕೋವಿಡ್ ಉಲ್ಬಣಗೊಂಡಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆ ಅಭಾವ ಕಾಡುತ್ತಿದೆ. ಸೋಂಕಿನ ಕಡಿಮೆ ಗುಣಲಕ್ಷಣವುಳ್ಳವರನ್ನು ಐಸೊಲೇಷನ್‌ಗೆ ಒಳಪಡಿಸಲು (ಪ್ರತ್ಯೇಕವಾಗಿ ಇರಿಸಲು) ಕೂಡ ಸಮಸ್ಯೆ ಆಗುತ್ತದೆ. ಇದನ್ನು ಮನಗಂಡು ಘಟಕವು 50 ಹಾಸಿಗೆಗಳ ಕೇಂದ್ರ ಪ್ರಾರಂಭಿಸಿದೆ’ ಎಂದು ಪ್ರಕಟಣೆ …

Read More »

ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಬದ್ಧ

ಬೆಳಗಾವಿ: ಕೋವಿಡ್‌-19 ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶನಿವಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೋವಿಡ್‌ ಚಿಕಿತ್ಸೆಯಲ್ಲಿ ನಿರತ ವೈದ್ಯರ ಜೊತೆ ವರ್ಚುವಲ್‌ ಸಭೆ ಮೂಲಕ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಕಾರ್ಯದ ಒತ್ತಡದ ಮಧ್ಯೆಯೂ ನಿರಂತರವಾಗಿ ಕೆಲಸ ಮಾಡುತ್ತಿರುವ ವೈದ್ಯರು, ನರ್ಸ್‌ ಸೇರಿದಂತೆ ಎಲ್ಲ ವೈದ್ಯಕೀಯ ಸಿಬ್ಬಂದಿ ನಮ್ಮ ಅಮೂಲ್ಯ ಆಸ್ತಿ. ಇಂತಹ ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಸರ್ಕಾರ …

Read More »

ನಕಲಿ ವೈದ್ಯರಿಂದ ಊರು ತುಂಬಾ ಹರಡಿತು ಕೊರೋನ ಸೋಂಕು!!!

ವಿಜಯನಗರ: ಕರೊನಾ ನಗರಗಳಿಗೆ ಮಾತ್ರ ಸೀಮಿತವಾಗದೆ ಹಳ್ಳಿ ಹಳ್ಳಿಗೂ ಹಬ್ಬಲಾರಂಭಿಸಿದೆ. ಇದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಕೆಲವರು ವೈದ್ಯರಂತೆ ನಾಟಕವಾಡಿ ಜನಸಾಮಾನ್ಯರಿಂದ ಹಣ ಲೂಟಿ ಮಾಡುವ ಕೆಲಸಕ್ಕೂ ಮುಂದಾಗಿದ್ದಾರೆ. ಅದೇ ರೀತಿಯ ಘಟನೆ ವಿಜಯನಗರ ಜಿಲ್ಲೆಯಲ್ಲೂ ನಡೆದಿದ್ದು, ಗ್ರಾಮವನ್ನೇ ಸೀಲ್​ಡೌನ್​ ಮಾಡುವಂತಹ ಸ್ಥಿತಿ ಬಂದೊದಗಿದೆ. ಹೌದು! ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಇಂತಹ ಘಟನೆ ನಡೆದಿದೆ. ಈ ಗ್ರಾಮದಲ್ಲಿ ಕೆಲ ನಕಲಿ ಡಾಕ್ಟರ್​ಗಳು ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಕರೊನಾ ಲಕ್ಷಣವಿರುವ …

Read More »