Breaking News
Home / ಜಿಲ್ಲೆ / ಚಿತ್ರದುರ್ಗ / BIG NEWS: ಸಾಯೋರು ಎಲ್ಲಾದರೂ ಸಾಯಲಿ; ಬಿಜೆಪಿ ಶಾಸಕನ ದರ್ಪಕ್ಕೆ ಅವಾಕ್ಕಾದ ಆರೋಗ್ಯಾಧಿಕಾರಿ

BIG NEWS: ಸಾಯೋರು ಎಲ್ಲಾದರೂ ಸಾಯಲಿ; ಬಿಜೆಪಿ ಶಾಸಕನ ದರ್ಪಕ್ಕೆ ಅವಾಕ್ಕಾದ ಆರೋಗ್ಯಾಧಿಕಾರಿ

Spread the love

ಚಿತ್ರದುರ್ಗ: ಆಕ್ಸಿಜನ್ ಬೆಡ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ, ಆರೋಗ್ಯಾಧಿಕಾರಿ ವಿರುದ್ಧ ದರ್ಪದಿಂದ ಮಾತನಾಡಿರುವ ಘಟನೆ ನಡೆದಿದೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪ್ರವಾಸಿ ಮಂದಿರದ ಬಳಿ 50 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ವಾರ್ಡ್ ನಿರ್ಮಿಸಲಾಗಿದ್ದು, ಈ ಬಗ್ಗೆ ಶಾಸಕ ಎಂ.ಚಂದ್ರಪ್ಪ ಅವರಿಗೆ ಮಾಹಿತಿ ನೀಡಿದ ಆರೋಗ್ಯಾಧಿಕಾರಿ ಪಾಲಾಕ್ಷ, 50 ಬೆಡ್ ಗಳಲ್ಲಿ 10 ಬೆಡ್ ಗಳಿಗೆ ಮಾತ್ರ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಈ ವೇಳೆ ಕಿಡಿಕಾರಿದ ಶಾಸಕರು ಮಾಡುವುದಿದ್ದರೆ 50 ಆಕ್ಸಿಜನ್ ಬೆಡ್ ನಿರ್ಮಿಸಿ ಇಲ್ಲವಾದರೆ ಇಲ್ಲ. ನಾನು ಇಲ್ಲಿ ಆಸ್ಪತ್ರೆ ಮಾಡಲ್ಲ ನನಗೆ ಅದರ ಅವಶ್ಯಕತೆ ಇಲ್ಲ. ಸಾಯುವವರು ಎಲ್ಲಿಯಾದರೂ ಸಾಯಲಿ ಎಂದು ಗುಡುಗಿದ್ದಾರೆ.

ಬಿಜೆಪಿ ಶಾಸಕರ ಉಡಾಫೆ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.


Spread the love

About Laxminews 24x7

Check Also

BREAKING NEWS: ಸ್ವಾಮೀಜಿಗಳಾಯ್ತು ಈಗ ಶಾಸಕರ ಸರದಿ; ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಗೆ ಯತ್ನ!

Spread the loveಚಿತ್ರದುರ್ಗ: ಇತ್ತೀಚಿನ ದಿನಗಳಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಬಸವಲಿಂಗ ಸ್ವಾಮೀಜಿ ಪ್ರಕರಣ ಬೆನ್ನಲ್ಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ