Breaking News
Home / 2021 / ಮೇ / 22

Daily Archives: ಮೇ 22, 2021

ಕೊರೋನಾ ಸೋಂಕಿತರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಔಷಧ ಕಿಟ್ ವಿತರಣೆ

  ಮೂಡಲಗಿ: ಕೊರೋನಾ ಎರಡನೇ ಅಲೆಗೆ ಬ್ರೇಕ್ ನೀಡಲು ಸಂಕಲ್ಪ ತೊಟ್ಟಿರುವ ಕಹಾಮ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗೋಕಾಕ್ ಹಾಗೂ ಮೂಡಲಗಿ ತಾಲ್ಲೂಕಿನ ಸೋಂಕಿತರಿಗೆ ಔಷಧೀಯ ಕಿಟ್ ಗಳನ್ನು ವಿತರಿಸಲಾಯಿತು. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಕೊವಿಡ್ ಕಾಳಜಿ ಕೇಂದ್ರದಲ್ಲಿ ಶನಿವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಸಕರ ಪರವಾಗಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರು ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗೋಕಾಕ್ …

Read More »

ದೇಶಾದ್ಯಂತ ಕೊರೊನಾ 2ನೇ ಅಟ್ಟಹಾಸ 420 ವೈದ್ಯರು ಕೊರೊನಾಗೆ ಬಲಿ

ನವದೆಹಲಿ: ದೇಶಾದ್ಯಂತ ಕೊರೊನಾ 2ನೇ ಅಟ್ಟಹಾಸ ಹೆಚ್ಚುತ್ತಿದ್ದು, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರುಗಳೇ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಕೊರೊನಾ 2ನೇ ಅಲೆಯಲ್ಲಿ ದೇಶದಲ್ಲಿ ಈವರೆಗೆ ಬರೋಬ್ಬರಿ 420 ವೈದ್ಯರು ಸೋಂಕಿಗೆ ಸಾವನ್ನಪ್ಪಿದ್ದಾರೆ. ಇದರಲ್ಲಿ 100 ವೈದ್ಯರು ದೆಹಲಿಯೊಂದರಲ್ಲಿಯೇ ಮೃತಪಟ್ಟಿದ್ದಾರೆ ಎಂದು ಭಾರತೀಯ ವೈದ್ಯಕೀಯ ಮಂಡಳಿ (IMA) ಮಾಹಿತಿ ನೀಡಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಮಹಾಮಾರಿಗೆ ತುತ್ತಾಗುತ್ತಿರುವುದು ದುರಂತ.

Read More »

ಖಾಸಗಿ ವ್ಯಕ್ತಿಗಳೊಂದಿಗೆ ಸೇರಿ ಪೊಲೀಸನಿಂದ ಹಗಲು ದರೋಡೆ;

ಅಥಣಿ): ಖಾಸಗಿ ವ್ಯಕ್ತಿಗಳೊಂದಿಗೆ ಕಾರಲ್ಲಿ ಬಂದು ಬೈಕ್ ಸೀಜ್ ಮಾಡುವ ಬೆದರಿಕೆಯೊಡ್ಡಿ ರಸೀದಿ ನೀಡದೆ ಹಣ ಸುಲಿಗೆ ಮಾಡುತ್ತಿದ್ದ ಐಗಳಿ ಠಾಣೆಯ ಪೋಲಿಸ್ ಪೇದೆ ಸಂಗಪ್ಪ ನಾಯಕ ಇವರನ್ನು ಜನ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.       ಸಮೀಪದ ಕೊಟ್ಟಲಗಿ ಗ್ರಾಮದಲ್ಲಿ ಎರಡು ದಿನಗಳಿಂದ ಹಣ ವಸೂಲಿಗಿಳಿದಿದ್ದ ಪೋಲಿಸ್‍, ಶನಿವಾರ ಬೆಳಗ್ಗೆ ಹಾಲು ಹಾಕಲು ಬಂದಿದ್ದ ರೈತನೋರ್ವನಿಗೆ ಕೋಲಿನಿಂದ ಥಳಿಸಿದ್ದಾನೆ. ಮೊಣಕೈ …

Read More »

ಬೆಳಗಾವಿ: ಸಂಪೂರ್ಣ ಲಾಕ್‌ಡೌನ್: ಜನರಿಂದ ಉತ್ತಮ ಸ್ಪಂದನೆ

ಬೆಳಗಾವಿ: ಕೊರೊನಾ ಸೋಂಕಿನ ಸರಪಳಿ ತುಂಡರಿಸುವ ಉದ್ದೇಶದಿಂದ ಜಿಲ್ಲಾಡಳಿತ ಘೋಷಿಸಿರುವ ಸಂಪೂರ್ಣ ಲಾಕ್‌ಡೌನ್‌ಗೆ ಮೊದಲ ದಿನವಾದ ಶನಿವಾರ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಶನಿವಾರ ಬೆಳಿಗ್ಗೆ 6ರಿಂದ ಸೋಮವಾರ ಬೆಳಿಗ್ಗೆ 6ರವರೆಗೆ ಸಂಪೂರ್ಣ ಲಾಕ್‌ಡೌನ್ ಘೋಷಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ. ಅದರಂತೆ ಪೊಲೀಸರು ಅನುಷ್ಠಾನಕ್ಕೆ ಕ್ರಮ ಕೈಗೊಂಡರು. ಬ್ಯಾರಿಕೇಡ್‌ಗಳನ್ನು ಹೆಚ್ಚಿಸಿ ಸಂಚಾರ ನಿರ್ಬಂಧಿಸಿದರು. ಬಹುತೇಕರು ಮನೆಗಳಲ್ಲೇ ಉಳಿದು ಸಹಕರಿಸಿದ್ದರಿಂದ ಜಿಲ್ಲೆಯು ಸ್ತಬ್ಧವಾಗಿತ್ತು. ಆಸ್ಪತ್ರೆಗಳಿಗೆ, ಮೆಡಿಕಲ್ …

Read More »

ಧಾರವಾಡದಲ್ಲಿ ಎರಡು ದಿನದ ಸಂಪೂರ್ಣ ಲಾಕ್ ಡೌನ್: ಜನತೆಯಿಂದ ಉತ್ತಮ ಬೆಂಬಲ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಎರಡು ದಿನಗಳ ಸಂಪೂರ್ಣ ಲಾಕ್ ಡೌನ್ ಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.‌ ಜನರು ಮನೆಯಿಂದ ಹೊರ ಬರದೆ ಲಾಕ್ ಡೌನ್ ಗೆ ಬೆಂಬಲ ಸೂಚಿಸಿದ್ದು, ಅಗತ್ಯವಿರುವ ವಾಹನಗಳ ಸಂಚಾರ ಯಥಾವತ್ತಾಗಿ ನಡೆದಿದೆ.‌ ಡಿಸಿಪಿ ಕೆ.ರಾಮರಾಜನ್ ಅವರು ನಗರ ಪ್ರದಕ್ಷಿಣೆ ಹಾಕುತ್ತಿದ್ದು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತಿದ್ದಾರೆ. ನಗರದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಪೊಲೀಸ್ ತಪಾಸಣೆ ಬಿಗಿ ಗೊಳಿಸಲಾಗಿದ್ದು ಅನಗತ್ಯ ಹಾಗೂ ಸುಳ್ಳು …

Read More »

ಕಂಗನಾ ರಣಾವತ್​ ಬಾಡಿಗಾರ್ಡ್​ ಎನ್ನಲಾದ ಕರ್ನಾಟಕ ಮೂಲದವನ ಮೇಲೆ ರೇಪ್​ ಆರೋಪ; 50 ಸಾವಿರ ಹಣದೊಂದಿಗೆ ಪರಾರಿ

ಕಂಗನಾ ರಣಾವತ್​ ಇದ್ದಲ್ಲಿ ಕಿರಿಕ್​ ಇದ್ದೇ ಇರುತ್ತದೆ ಎಂಬಷ್ಟರಮಟ್ಟಿಗೆ ಅವರು ಈಗಾಗಲೇ ವಿವಾದಗಳನ್ನು ಮಾಡಿಕೊಂಡಿದ್ದಾರೆ. ಈಗ ರೇಪ್​ ಪ್ರಕರಣವೊಂದರ ಕಾರಣಕ್ಕಾಗಿ ಕಂಗನಾ ರಣಾವತ್​ ಅವರ ಬಾಡಿ ಗಾರ್ಡ್​ ಎಂದು ಹೇಳಲಾದ ವ್ಯಕ್ತಿ ಸುದ್ದಿಯಾಗುತ್ತಿದ್ದಾನೆ. ಆತ ಕಂಗನಾಗೆ ಬಾಡಿ ಗಾರ್ಡ್​ ಆಗಿದ್ದ ಎಂಬ ಕಾರಣಕ್ಕೆ ಈ ಪ್ರಕರಣ ಹೆಚ್ಚು ಹೈಲೈಟ್​ ಆಗುತ್ತಿದೆ. ಮುಂಬೈನ ಡಿಎನ್​ ನಗರ್​ ಪೊಲೀಸ್​ ಠಾಣೆಯಲ್ಲಿ ಕುಮಾರ್​ ಹೆಗಡೆ ಎಂಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್​ …

Read More »

ಕೋವಿಡ್ ಕೇರ್ ಸೆಂಟರ್‌ನಿಂದ ಸೋಂಕಿತ ವ್ಯಕ್ತಿ ಪರಾರಿ: ಸ್ಥಳೀಯರಿಗೆ ಆತಂಕ

ಗದಗ: ಜಿಲ್ಲೆಯ ವರವಿ ಗ್ರಾಮದಲ್ಲಿ ಜಿಲ್ಲಾಡಳಿತ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್‌ನಿಂದ ಸೋಂಕಿತ ವ್ಯಕ್ತಿಯೊಬ್ಬರು ಪರಾರಿಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಉತ್ತರ ಪ್ರದೇಶ ವಿಷ್ಣುಪುರ ಜಿಲ್ಲೆ ದೊರಿಯಾ ಗ್ರಾಮದ ಆಜಾದ್ ಚವ್ಹಾಣ್ (28 ವ) ಎಂಬಾತನಿಗೆ ಇತ್ತೀಚೆಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಸೋಂಕಿತ ವ್ಯಕ್ತಿ ಸ್ಥಳೀಯ ರಸ್ತೆ ಕಾಮಗಾರಿಯಲ್ಲಿ ಕಾರ್ಮಿನಾಗಿದ್ದರಿಂದ ಸೂಕ್ತ ವಸತಿ, ಪೌಷ್ಠಿಕ ಆಹಾರ ಮತ್ತು ವೈದ್ಯಕೀಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಮೇ 20 ರಂದು ಕೇರ್ ಸೆಂಟರ್‌ಗೆ …

Read More »

ಮಂಡ್ಯ: ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿ ಆದೇಶ

ಮಂಡ್ಯ: ಜಿಲ್ಲೆಯಾದ್ಯಂತ ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿ ಎಸ್.ಅಶ್ವಥಿ ಆದೇಶ ಹೊರಡಿಸಿದ್ದಾರೆ. ಭಾನುವಾರ, ಸೋಮವಾರ, ಗುರುವಾರ ಬೆಳಿಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಎಂದಿನಂತೆ ಅವಕಾಶ ಇರಲಿದೆ. ಉಳಿದಂತೆ ಮಂಗಳವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರ ಸಂಪೂರ್ಣ ಲಾಕ್ ಡೌನ್ ಇರಲಿದೆ. ಅಂದು ಹೋಟೆಲ್ ಪಾರ್ಸೆಲ್ ಗೆ ಮಾತ್ರ ಅವಕಾಶ ಕಲ್ಪಿಸಿ ಆದೇಶಿಸಿದ್ದಾರೆ.

Read More »

ಕೋವಿಡ್ ಲಸಿಕೆಯ 2ನೇ ಡೋಸ್ ನೀಡಲು ತರ್ಕಬದ್ಧ ನೀತಿ ಜಾರಿಗೊಳಿಸಿ: ಹೈಕೋರ್ಟ್

ಬೆಂಗಳೂರು, ಮೇ 21: ರಾಜ್ಯದಲ್ಲಿ ಕೋವಿಡ್ ಲಸಿಕೆಯ ಎರಡನೇ ಡೋಸ್ ನೀಡಲು ತರ್ಕಬದ್ಧ ನೀತಿಯನ್ನು ಜಾರಿಗೊಳಿಸಿ ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠವು ಮೇ 25ರಂದು ತರ್ಕಬದ್ಧವಾದ ಲಸಿಕೆ ನೀತಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ರಾಜ್ಯದಲ್ಲಿ ಕೋವಿಡ್‌ ಲಸಿಕೆಯ ವ್ಯಾಪಕ ಕೊರತೆಯಿದೆ ಎಂಬ ವಿಚಾರವನ್ನು ಮನಗಂಡ ಮೇಲೆ ನ್ಯಾಯಾಲಯವು …

Read More »

ಸಾಲಗಾರರ ಪರವಾಗಿ ಜಾಮೀನು ನೀಡಿದವರು ಸಾಲಕ್ಕೆ ಹೊಣೆಗಾರರು: ಸುಪ್ರೀಂಕೋರ್ಟ್

ನವದೆಹಲಿ : ಸಾಲ ಹಾಗೂ ಅದರ ವಸೂಲಿಯ ಕುರಿತು ಮಹತ್ವದ ತೀರ್ಪನ್ನು ನೀಡಿರುವ ಸುಪ್ರೀಂಕೋರ್ಟ್. ಸಾಲ ಮರುಪಾವತಿಸದವರ ಪರವಾಗಿ ಜಾಮೀನು ನೀಡಿದವರು ಸಾಲಕ್ಕೆ ಹೊಣೆಗಾರರು ಎಂದ ಸುಪ್ರೀಂಕೋರ್ಟ್. ಸಾಲ ತೆಗೆದುಕೊಂಡವರು ಅದನ್ನು ಮರು ಪಾವತಿಸದಿದ್ದರೆ ಅದಕ್ಕೆ ಜಾಮೀನು ನೀಡಿದವರು ಕೂಡ ಹೊಣೆಗಾರರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ . ಈ ಸಂಬಂಧ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಎತ್ತಿ …

Read More »