Breaking News
Home / ರಾಷ್ಟ್ರೀಯ / ಕಂಗನಾ ರಣಾವತ್​ ಬಾಡಿಗಾರ್ಡ್​ ಎನ್ನಲಾದ ಕರ್ನಾಟಕ ಮೂಲದವನ ಮೇಲೆ ರೇಪ್​ ಆರೋಪ; 50 ಸಾವಿರ ಹಣದೊಂದಿಗೆ ಪರಾರಿ

ಕಂಗನಾ ರಣಾವತ್​ ಬಾಡಿಗಾರ್ಡ್​ ಎನ್ನಲಾದ ಕರ್ನಾಟಕ ಮೂಲದವನ ಮೇಲೆ ರೇಪ್​ ಆರೋಪ; 50 ಸಾವಿರ ಹಣದೊಂದಿಗೆ ಪರಾರಿ

Spread the love

ಕಂಗನಾ ರಣಾವತ್​ ಇದ್ದಲ್ಲಿ ಕಿರಿಕ್​ ಇದ್ದೇ ಇರುತ್ತದೆ ಎಂಬಷ್ಟರಮಟ್ಟಿಗೆ ಅವರು ಈಗಾಗಲೇ ವಿವಾದಗಳನ್ನು ಮಾಡಿಕೊಂಡಿದ್ದಾರೆ. ಈಗ ರೇಪ್​ ಪ್ರಕರಣವೊಂದರ ಕಾರಣಕ್ಕಾಗಿ ಕಂಗನಾ ರಣಾವತ್​ ಅವರ ಬಾಡಿ ಗಾರ್ಡ್​ ಎಂದು ಹೇಳಲಾದ ವ್ಯಕ್ತಿ ಸುದ್ದಿಯಾಗುತ್ತಿದ್ದಾನೆ. ಆತ ಕಂಗನಾಗೆ ಬಾಡಿ ಗಾರ್ಡ್​ ಆಗಿದ್ದ ಎಂಬ ಕಾರಣಕ್ಕೆ ಈ ಪ್ರಕರಣ ಹೆಚ್ಚು ಹೈಲೈಟ್​ ಆಗುತ್ತಿದೆ. ಮುಂಬೈನ ಡಿಎನ್​ ನಗರ್​ ಪೊಲೀಸ್​ ಠಾಣೆಯಲ್ಲಿ ಕುಮಾರ್​ ಹೆಗಡೆ ಎಂಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಐಪಿಸಿ ಸೆಕ್ಷನ್​ 376 ಮತ್ತು 377ರ ಅಡಿಯಲ್ಲಿ ಕುಮಾರ್​ ಹೆಗಡೆ ವಿರುದ್ಧ ದೂರು ದಾಖಲಾಗಿದೆ. ಯುವತಿಯೊಬ್ಬಳ ಜೊತೆ ಲಿವ್​ ಇನ್​ ರಿಲೇಷನ್​ಶಿಪ್​ನಲ್ಲಿ ಇದ್ದ ಆತ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಎಂಬ ಆರೋಪ ಕೂಡ ಕೇಳಿಬಂದಿದೆ. ಇತ್ತೀಚೆಗೆ ಇಬ್ಬರ ನಡುವೆ ಬ್ರೇಕಪ್​ ಆಗಿತ್ತು ಎಂಬ ಮಾಹಿತಿ ಇದೆ.

ಇಂಥ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಕುಮಾರ್​ ಹೆಗಡೆ ಎಂಬಾತನು ಬಾಲಿವುಡ್​ ನಟಿ ಕಂಗನಾ ರಣಾವತ್​ಗೆ ಪರ್ಸನಲ್​ ಬಾಡಿಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದ ಎಂಬ ಸುದ್ದಿ ಹರಡಿದೆ. ಆದರೆ ಈ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಕುಮಾರ್​ ಹೆಗಡೆ ಹಿನ್ನೆಲೆ ಬಗ್ಗೆ ಇನ್ನಷ್ಟೇ ತನಿಖೆ ನಡೆಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಂತ್ರಸ್ತ ಯುವತಿಯ ಜೊತೆ ಕುಮಾರ್​ ಹೆಗಡೆಗೆ ಕಳೆದ 8 ವರ್ಷಗಳ ಹಿಂದೆ ಪರಿಚಯ ಬೆಳೆದಿತ್ತು. ಕಳೆದ ವರ್ಷ ಜೂನ್​ನಲ್ಲಿ ಆತ ಮದುವೆ ಪ್ರಪೋಸ್​ ಕೂಡ ಮಾಡಿದ್ದ. ಅದಕ್ಕೆ ಯುವತಿಯಿಂದ ಸಮ್ಮತಿ ಸಿಕ್ಕಿತ್ತು. ಬಳಿಕ ಆತ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಲು ಶುರುಮಾಡಿದ್ದ. ಏ.27ರಂದು ಅವನು ತನ್ನ ತಾಯಿ ನಿಧನರಾಗಿದ್ದಾರೆ ಎಂದು ಹೇಳಿ ಯುವತಿಯಿಂದ 50 ಸಾವಿರ ರೂ. ಹಣ ಪಡೆದು ಅಪಾರ್ಟ್​ಮೆಂಟ್​ನಿಂದ ಪರಾರಿ ಆಗಿದ್ದ. ಮೂಲತಃ ಕರ್ನಾಟಕದವನಾದ ಕುಮಾರ್​ ಹೆಗಡೆ ತನ್ನ ಊರು ತಲುಪಿದ ಬಳಿಕ ಫೋನ್​ ಸ್ವಿಚ್​ ಆಫ್​ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಯುವತಿ ಹೇಳಿಕೆ ನೀಡಿದ್ದಾಳೆಂದು ಹಲವೆಡೆ ವರದಿ ಆಗಿದೆ.

ಕಂಗನಾ ರಣಾವತ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಸದಾಕಾಲ ಆಯಕ್ಟೀವ್​ ಆಗಿರುತ್ತಾರೆ. ತಮಗೆ ಸಂಬಂಧ ಇರಲಿ, ಇಲ್ಲದಿರಲಿ ಅನೇಕ ವಿಚಾರಗಳ ಬಗ್ಗೆ ಅವರು ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಆದರೆ ಅವರ ಬಾಡಿ ಗಾರ್ಡ್​ ಎಂದು ಹೇಳಲಾದ ವ್ಯಕ್ತಿಯ ಬಗ್ಗೆ ಇಂಥ ದೊಡ್ಡ ಆರೋಪ ಕೇಳಿಬಂದಿದ್ದರೂ ಕೂಡ ಅವರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆತ ತಮ್ಮ ಬಾಡಿ ಗಾರ್ಡ್​ ಹೌದೋ ಅಲ್ಲವೋ ಎಂಬುದನ್ನೂ ಅವರು ಈವರಗೆ ಖಚಿತಪಡಿಸಿಲ್ಲ.


Spread the love

About Laxminews 24x7

Check Also

ರಾಜ್ಯದ ನರೇಗಾ ಕಾರ್ಮಿಕರಿಗೆ ಮೋದಿ ಸರ್ಕಾರ ವೇತನ ನೀಡುವುದು ಯಾವಾಗ: ಪ್ರಧಾನಿಗೆ ಕಾಂಗ್ರೆಸ್ ಪ್ರಶ್ನೆ

Spread the loveಬೆಂಗಳೂರು: ಕರ್ನಾಟಕದಲ್ಲಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ