Breaking News
Home / 2021 / ಮೇ / 15 (page 3)

Daily Archives: ಮೇ 15, 2021

“ಕೊಟ್ಟ ಕುದುರೆ ಏರಲಾಗದವನು ಧೀರನೂ ಅಲ್ಲ- ಶೂರನೂ ಅಲ್ಲ, ಅಧಿಕಾರ ಬಿಟ್ಟು ತೊಲಗಿ”

ಬೆಂಗಳೂರು, -ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರ ಆಶಯಕ್ಕೆ ತಕ್ಕಂತೆ ಬಿಜೆಪಿ ನಡೆದುಕೊಳ್ಳಬೇಕು. ಕೈಲಾಗದಿದ್ದರೆ ಅಧಿಕಾರ ಬಿಟ್ಟು ತೊಲಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ನಾವೇನ್‌ ನೋಟ್‌ ಪ್ರಿಂಟ್‌ ಮಾಡ್ತೀವಾ?, ಜಡ್ಜ್‌ಗಳು ಸರ್ವಜ್ಞರಲ್ಲ, ಕೊರೊನಾ ವೈರಸ್‌ಗಾಗಿ ಚೀನಾವನ್ನು ದೂಷಿಸಬೇಕು, ನೇಣು ಹಾಕಿಕೊಳ್ಳಲು ಆಗುತ್ತಾ?, ಕೋವಿಡ್‌ ಪ್ಯಾಕೇಜ್‌ ಕೊಡಲು ಆಗಲ್ಲ, ದೇಶದ ದುಸ್ಥಿತಿಗೆ ವಿರೋಧ ಪಕ್ಷಗಳು ಕಾರಣ ಎಂದು ಹೇಳಿರುವುದು ಧರೆಗೆ ಸ್ವರ್ಗ ಇಳಿಸುವ …

Read More »

ಸಾವಿನ ವಿಚಾರದಲ್ಲಿ ಸುಳ್ಳು ಹೇಳಿದ ಸಚಿವ ಸುಧಾಕರ್ ನನ್ನು ಸಂಪುಟದಿಂದ ವಜಾ ಮಾಡಿ: ಡಿಕೆಶಿ

ಬೆಂಗಳೂರು, ಮೇ 14-ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದವರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು, ಘಟನೆ ಬಗ್ಗೆ ಸುಳ್ಳು ಮಾಹಿತಿ ನೀಡಿದ ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು. ನಿರ್ಲಕ್ಷ್ಯದ ಕಾರಣಕ್ಕೆ ಮುಖ್ಯಮಂತ್ರಿ ಸೇರಿದಂತೆ ಸಂಬಂಧಿಸಿದ ಎಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸರ್ಕಾರದ ಆಡಳಿತ ವೈಪಲ್ಯಗಳನ್ನು ತರಾಟೆಗೆ …

Read More »

ದುಬಾರಿ ಬೆಲೆಗೆ ರೆಮಿಡಿಸಿವಿರ್ ಮಾರುತ್ತಿದ್ದ ವೈದ್ಯ ಸೇರಿದಂತೆ ಇಬ್ಬರ ಬಂಧನ

ಬೆಂಗಳೂರು,ಮೇ.14-ಕೊರೊನಾ ಸೋಂಕಿತನಿಗೆ ಹಂಚಿಕೆಯಾಗಿದ್ದ ರೆಮಿಡಿಸಿವಿರ್ ಔಷಧಿಯನ್ನು ರೋಗಿಗೆ ನೀಡದೆ ಬೇರೆಯವರಿಗೆ ದುಬಾರಿ ಬೆಲೆಗೆ ಮಾರಾಟ ಮಾಡಿಕೊಂಡಿದ್ದ ವೈದ್ಯಾಧಿಕಾರಿ ಹಾಗೂ ಆಸ್ಪತ್ರೆಯ ಹೌಸ್ ಕೀಪಿಂಗ್ ಮ್ಯಾನೇಜರ್‍ನನ್ನು ಬಂಧಿಸಿರುವ ಸಂಜಯನಗರ ಪೊಲೀಸರು ಎರಡು ರೆಮಿಡಿಸಿವಿರ್ ಚುಚ್ಚುಮದ್ದುಗಳು, ಒಂದು ದ್ವಿಚಕ್ರ ವಾಹನ, ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಹೊಸೂರು ರಸ್ತೆಯಲ್ಲಿರುವ ಮಾತೃ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಬಿಟಿಎಂ ಬಡಾವಣೆಯ ವೈದ್ಯ ಡಾ.ಸಾಗರ್ ಹಾಗೂ ಹೌಸ್ ಕೀಪಿಂಗ್ ಮ್ಯಾನೇಜರ್ ಕಾಮಾಕ್ಷಿಪಾಳ್ಯದ ನಿವಾಸಿ ಕೃಷ್ಣ ಬಂಧಿತ …

Read More »

ಕೋವಿಡ್ ಲಸಿಕೆ ಪೂರೈಕೆ; ಜೂನ್‌ನಿಂದ ಸುಧಾರಿಸಲಿದೆ ಪರಿಸ್ಥಿತಿ

ನವದೆಹಲಿ, ಮೇ 14; ಭಾರತದಲ್ಲಿ ಕೋವಿಡ್ 2ನೇ ಅಲೆ ಆತಂಕ ಮೂಡಿಸಿದೆ. ಸೋಂಕಿನ ವಿರುದ್ಧದ ಲಸಿಕೆ ಪಡೆಯಲು ಜನರು ತಯಾರಾಗಿದ್ದಾರೆ. ಆದರೆ ವಿವಿಧ ರಾಜ್ಯಗಳಲ್ಲಿ ಲಸಿಕೆಯ ಲಭ್ಯತೆಯೇ ಇಲ್ಲ. ಮೇ ತಿಂಗಳಿನಲ್ಲಿ 8.8 ಕೋಟಿ ಡೋಸ್ ಲಸಿಕೆ ದೇಶದಲ್ಲಿ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಜೂನ್ ತಿಂಗಳ ಬಳಿಕ ಲಸಿಕೆ ಉತ್ಪಾದನೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಅಂಕಿ ಅಂಶಗಳ ಪ್ರಕಾರ ಜೂನ್‌ನಲ್ಲಿ 15.81 ಕೋಟಿ ಡೋಸ್, ಆಗಸ್ಟ್‌ನಲ್ಲಿ 36.6 ಕೋಟಿ ಡೋಸ್, …

Read More »

ಕೊರೊನಾ ಹೆಚ್ಚಳ: ಕೇರಳದಲ್ಲಿ ಮೇ 23ರವರೆಗೆ ಲಾಕ್‌ಡೌನ್ ವಿಸ್ತರಣೆ

ತಿರುವನಂತಪುರಂ, ಮೇ 14: ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಮೇ 23ರವರೆಗೆ ಲಾಕ್‌ಡೌನ್ ವಿಸ್ತರಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಘೋಷಿಸಿದ್ದಾರೆ. ಕೇರಳದಲ್ಲಿ ಕಳೆದ ಕೆಲವು ವಾರಗಳಿಂದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ಗುರುವಾರ ಅಲ್ಲಿ 39,955 ಹೊಸ ಪ್ರಕರಣಗಳು ದಾಖಲಾಗಿದ್ದು, 97 ಮಂದಿ ಮೃತಪಟ್ಟಿದ್ದರು. ಕೊರೊನಾ ಬಿಕ್ಕಟ್ಟು ಉಲ್ಬಣಿಸಿದ್ದು, ರಾಜ್ಯದ ಆಸ್ಪತ್ರೆಗಳಲ್ಲಿ ಹಾಸಿಗೆ, ಆಮ್ಲಜನಕ ಕೊರತೆ ಎದುರಾಗಿರುವುದಾಗಿ ಇತ್ತೀಚೆಗಷ್ಟೇ ವರದಿಯಾಗಿತ್ತು.ಈ …

Read More »

ಕೊವ್ಯಾಕ್ಸಿನ್ 2, 3ನೇ ಹಂತದ ಪ್ರಯೋಗ; ಹೇಗೆ ನಡೆಯಲಿದೆ?

ಹೈದರಾಬಾದ್, ಮೇ 14; ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಯನ್ನು 2 ರಿಂದ 18 ವರ್ಷದೊಳಗಿನವರ ಮೇಲೆ ಎರಡು ಮತ್ತು 3ನೇ ಹಂತದಲ್ಲಿ ಕ್ಲಿನಿಕಲ್ ಪ್ರಯೋಗ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೆ ದೇಶದಲ್ಲಿ ಈ ಲಸಿಕೆ ನೀಡಲಾಗುತ್ತಿದೆ. ಕೋವಿಡ್ ಸೋಂಕಿನ ವಿರುದ್ಧ ಭಾರತದಲ್ಲಿ ಲಭ್ಯವಿರುವ ಲಸಿಕೆಯಲ್ಲಿ ಕೊವ್ಯಾಕ್ಸಿನ್ ಸಹ ಒಂದು. ಈ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗ ಮಾಡಲು ಭಾರತದ ಪ್ರಧಾನ ಔಷಧ …

Read More »

ಜಿಂದಾಲ್ ಗೆ 3667 ಎಕರೆ ಪರಭಾರೆ : ಸುಪ್ರೀಂ ಕೋರ್ಟ್ ಮೊರೆ ಹೋದ ಸಾಮಾಜಿಕ ಕಾರ್ಯಕರ್ತ

ಬೆಂಗಳೂರು, ಮೇ. 14 : ಕೊರೊನಾ ಕಷ್ಟ ಕಾಲದಲ್ಲಿ ಸಮರ್ಪಕ ರೀತಿಯಲ್ಲಿ ಆಕ್ಸಿಜನ್ ಪೂರೈಕೆ ಮಾಡದೇ ವಿವಾದಕ್ಕೆ ಈಡಾಗಿದ್ದ ಜಿಂದಾಲ್ ಸಂಸ್ಥೆಗೆ ಭೂಮಿ ನೀಡಲು ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಬಳ್ಳಾರಿಯಲ್ಲಿರುವ ಜೆಎಸ್‌ಡಬ್ಲೂ ಸಂಸ್ಥೆಗೆ 3667 ಎಕರೆ ಜಮೀನು ಮಾರಾಟ ಮಾಡಲು ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಸಾಮಾಜಿಕ ಕಾರ್ಯಕರ್ತ ಪೌಲ್ ಎಂಬುವರು ಸುಪ್ರೀಂಕೋರ್ಟ್ ಮುಖ್ಯ …

Read More »

ರಾಜ್ಯದ ಜನತೆಗೆ ಆದಷ್ಟು ಬೇಗ ಲಸಿಕೆ ಕೊಡಿಸಲು ಯತ್ನ: ಸಿಎಂ

ಬೆಂಗಳೂರು : ರಾಜ್ಯದ ಜನತೆಗೆ ಆದಷ್ಟು ಬೇಗ ಲಸಿಕೆ ಕೊಡಿಸಲು ಸರಕಾರ ಸರ್ವ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. ಬಸವ ಜಯಂತಿ ಅಂಗವಾಗಿ ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ರಾಜ್ಯಕ್ಕೆ ಅಗತ್ಯವಿರುವ ಲಸಿಕೆ ಪಡೆಯಲು ಗ್ಲೋಬಲ್‌ ಟೆಂಡರ್‌ ಕರೆಯಲಾಗಿದೆ. ಲಸಿಕೆ, ಆಮ್ಲಜನಕ ಹಾಗೂ ಔಷಧ ನೀಡುವಲ್ಲಿ ಕೇಂದ್ರ ಸರಕಾರ ಯಾವುದೇ ತಾರತಮ್ಯ ಮಾಡುತ್ತಿಲ್ಲ. ಈಗ ಎಲ್ಲರೂ ಒಟ್ಟಾಗಿ …

Read More »

ಯುವತಿಯ ಅನುಮಾನಾಸ್ಪದ ಸಾವು, ಕೊಲೆ ಶಂಕೆ : ಪೊಲೀಸರಿಂದ ತೀವ್ರ ವಿಚಾರಣೆ

ಬನಹಟ್ಟಿ : ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪೊಲೀಸ್ ಠಾಣೆ ವ್ಯಾಪ್ತಿಯ ರಬಕವಿಯ ವಿದ್ಯಾನಗರದಲ್ಲಿ ಗುರುವಾರ ಸಂಜೆ ಹೊತ್ತು ಯುವತಿಯೊಬ್ಬಳು ಮನೆಯಲ್ಲಿಯೇ ತೀವ್ರ ಅಸ್ವಸ್ಥಗೊಂಡ ಪರಿಣಾಮ ಖಾಸಗಿ ಆಸ್ಪತ್ರೆಗೆ ತೆರಳಿದಾಗ ಮೃತಪಟ್ಟಿರುವದಾಗಿ ತಿಳಿದುಬಂದಿದೆ. ರಬಕವಿಯ ರಶ್ಮಿ ಕಿರಣ ಜುಗಳಿ(28) ಮೃತಪಟ್ಟ ದುರ್ದೈವಿಯಾಗಿದ್ದಾಳೆ. ಯುವತಿಯನ್ನು ಹತ್ಯೆ ಮಾಡಿದ್ದು, ಕುತ್ತಿಗೆ ಭಾಗದಲ್ಲಿ ಬಲವಾದ ಕಲೆ ಇರುವದಾಗಿ ಮೃತಳ ತಂದೆ ಪೊಲೀಸರಿಗೆ ತಿಳಿಸಿದ್ದಾರೆ. ಗಂಡನ ಮನೆಯಲ್ಲಿ ಹಲವು ದಿನಗಳಿಂದ ವರದಕ್ಷಿಣೆಗಾಗಿ ಕಿರುಕುಳ ಹಾಗು ಇತರೆ ತೊಂದರೆ …

Read More »

ಬೆಳಗಾವಿ ಜಿಲ್ಲೆಯಲ್ಲಿ 1592 ಪಾಸಿಟಿವ್ ಪ್ರಕರಣ ಪತ್ತೆ : ಹೆಚ್ಚಿದ ಆತಂಕ

ಬೆಳಗಾವಿ: ಕೊರೊನಾ ಪಾಸಿಟಿವ್ ಸಂಖ್ಯೆ ಪ್ರಮಾಣದಲ್ಲಿ ಶುಕ್ರವಾರ ದಿಢೀರ್ ಏರಿಕೆ ಆಗಿದ್ದು, ಒಂದೇ ದಿನ 1592 ಜನರಿಗೆ ಸೋಂಕು ತಗುಲಿದೆ. ಕೆಲ ದಿನಗಳ ಹಿಂದೆ ಸಾವಿರ ಸಮೀಪ ಅಥವಾ ಸಾವಿರದೊಳಗೆ ಪಾಸಿಟಿವ್ ಬರುತ್ತಿದ್ದ ಜಿಲ್ಲೆಯಲ್ಲಿ ಈಗ ಒಂದೇ ದಿನ 1500 ದಾಟಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಒಟ್ಟು 43,557 ಜನರಿಗೆ ಸೋಂಕು ತಗುಲಿದಂತಾಗಿದೆ. ಸದ್ಯ 6583 ಸಕ್ರಿಯ ಪ್ರಕರಣಗಳು ಇವೆ. ಜಿಲ್ಲೆಯಾದ್ಯಂತ ಒಂದೇ ದಿನ 358 ಜನ ಗುಣಮುಖರಾಗಿದ್ದಾರೆ. ಈವರೆಗೆ …

Read More »