Breaking News
Home / 2021 / ಏಪ್ರಿಲ್ / 13 (page 2)

Daily Archives: ಏಪ್ರಿಲ್ 13, 2021

ಯುಗಾದಿ ಹಬ್ಬದಂದೆ ಸಚಿವೆ ಶಶಿಕಲಾ ಜೊಲ್ಲೆಗೆ ಮಾತೃ ವಿಯೋಗ.

ಬೆಳಗಾವಿ: ಇಂದು ಯುಗಾದಿ ಹಬ್ಬ. ಹೊಸ ಯುಗದ ಆರಂಭ. ಎಲ್ಲರ ಮನೆಯಲ್ಲಿ ಸಂಭ್ರಮ ಮನೆ ಮಾಡಿರುತ್ತೆ. ಆದ್ರೆ ಇಂತಹ ಹಬ್ಬದ ದಿನದಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರ ತಾಯಿ ಮೃತಪಟ್ಟಿದ್ದಾರೆ. ವಯೋಸಹಜ ಕಾಯಿಲೆಯಿಂದ ಸೇವಂತಾ ಹರದಾರೆ(90) ಮಹಾರಾಷ್ಟ್ರದ ಕೊಲ್ಹಾಪುರ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಹಬ್ಬದ ದಿನದಂದೇ ಸಚಿವೆ ಶಶಿಕಲಾ ಜೊಲ್ಲೆಗೆ ಮಾತೃ ವಿಯೋಗ ಉಂಟಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಸೇವಂತಾ ಹರದಾರೆಯವರು ಕೆಲ ದಿನಗಳಿಂದ ಮಹಾರಾಷ್ಟ್ರದ …

Read More »

ಕಸಾಪ ಚುನಾವಣೆ: ಅಂತಿಮ ಕಣದಲ್ಲಿ 21 ಮಂದಿ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವರಲ್ಲಿ ಒಬ್ಬರು ನಾಮಪತ್ರ ಹಿಂಪಡೆದಿದ್ದಾರೆ. ಇದರಿಂದಾಗಿ ಅಂತಿಮ ಚುನಾವಣೆ ಕಣದಲ್ಲಿ 21 ಅಭ್ಯರ್ಥಿಗಳಿದ್ದಾರೆ. ಪರಿಷತ್ತಿನ ರಾಜ್ಯಾಧ್ಯಕ್ಷ, ಜಿಲ್ಲಾ ಘಟಕಗಳ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರ ಸ್ಥಾನಕ್ಕೆ ಮೇ 9ರಂದು ಚುನಾವಣೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕಡೆಯ ದಿನವಾಗಿತ್ತು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬೆಂಗಳೂರಿನ ಕೆ.ಎಂ. ರೇವಣ್ಣ ನಾಮಪತ್ರ ಹಿಂಪಡೆದಿದ್ದಾರೆ. ಕಣದಲ್ಲಿ ಮ.ಚಿ. ಕೃಷ್ಣ, ವ.ಚ. ಚನ್ನೇಗೌಡ, …

Read More »

ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಅವರು ಭಾವನಾತ್ಮಕವಾಗಿ ಮತ ಯಾಚನೆ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತದಾನ ದಿನ ಸಮೀಪಿಸುತ್ತಿದ್ದಂತೆಯೇ, ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಅವರು ಭಾವನಾತ್ಮಕವಾಗಿ ಮತ ಯಾಚನೆ ಮಾಡುತ್ತಿದ್ದಾರೆ. ‘ಅವರನ್ನ (ಪತಿ‌ ಸುರೇಶ ಅಂಗಡಿ) ಮಧ್ಯ ದಾರಿಯಲ್ಲೇ ದೇವರು ಕರೆಸಿಕೊಂಡ. ಅವರು ನನ್ನ ಬಿಟ್ಟು ಹೊರಟ್ರು. ಅವರು ಜೀವನ ಪೂರ್ತಿ ನಿಮಗಾಗಿ ದುಡಿದವರು, ನೀವು ನನ್ನ ಕೈ‌ ಬಿಡಬೇಡಿ’ ಎಂದು ಮತದಾರರನ್ನು ಕೋರುತ್ತಿದ್ದಾರೆ. ಹೀಗೊಂದು ಪೋಸ್ಟ್ ಅನ್ನು ಬಿಜೆಪಿಯು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದೆ. …

Read More »

ಉಪ ಚುನಾವಣೆ: ಬೆಳಗಾವಿಯಲ್ಲಿ ‌ಮುಖ್ಯಮಂತ್ರಿ‌ ಬಿ.ಎಸ್. ಯಡಿಯೂರಪ್ಪ ಠಿಕಾಣಿ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪರವಾಗಿ ಪ್ರಚಾರ ಮಾಡುವುದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಏ. 14 ಮತ್ತು 15ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಯಾಚಿಸಲಿದ್ದಾರೆ. 14ರಂದು ಮಧ್ಯಾಹ್ನ 1.15ಕ್ಕೆ ಮೂಡಲಗಿಯಲ್ಲಿ, ಸಂಜೆ 5.15ಕ್ಕೆ ಗೋಕಾಕದಲ್ಲಿ ನಡೆಯುವ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ 9ಕ್ಕೆ ಬೆಳಗಾವಿಗೆ ಬಂದು ತಂಗಲಿದ್ದಾರೆ. 15ರಂದು ನಗರದಲ್ಲಿ ಮುಖಂಡರ ಸರಣಿ ಸಭೆಗಳು …

Read More »

ಕೋವಿಡ್ ಪರಿಸ್ಥಿತಿ; ಸರ್ವಪಕ್ಷಗಳ ಸಭೆ ಕರೆದ ಯಡಿಯೂರಪ್ಪ

ಬೆಂಗಳೂರು, ಏಪ್ರಿಲ್ 13; “ಕೋವಿಡ್ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲು ಏಪ್ರಿಲ್ 18ರಂದು ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿದೆ. ಸದ್ಯಕ್ಕೆ ಲಾಕ್ ಡೌನ್ ಪ್ರಶ್ನೆಯೇ ಇಲ್ಲ” ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು. ಬಸವಕಲ್ಯಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ, “ಮೇ 2ರ ತನಕ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ತಾಂತ್ರಿಕ ಸಲಹಾ ಸಮಿತಿ ಹೇಳಿದೆ” ಎಂದರು. ತಾಂತ್ರಿಕ ಸಹಲಾ ಸಮಿತಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ …

Read More »

ಮೋದಿ ಅಂಗಡಿಯಲ್ಲಿ ಗ್ಯಾಸ್, ಗೊಬ್ಬರ ಸೇರಿ ಎಲ್ಲವೂ ಕಡಿಮೆ ದರದಲ್ಲಿ ಸಿಗುತ್ತಿದೆ. ಆ ಅಂಗಡಿ ಎಲ್ಲಿದೆ ಎಂಬುದನ್ನು ಜನರು ಹುಡುಕಬೇಕಿದೆ’: ಸತೀಶ್ ಜಾರಕಿಹೊಳಿ

ಸವದತ್ತಿ, ಏಪ್ರಿಲ್ 12: “ಪ್ರಧಾನಿ ನರೇಂದ್ರ ಮೋದಿ ಅಂಗಡಿಯಲ್ಲಿ ಗ್ಯಾಸ್, ಗೊಬ್ಬರ ಸೇರಿ ಎಲ್ಲವೂ ಕಡಿಮೆ ದರದಲ್ಲಿ ಸಿಗುತ್ತಿದೆ. ಆ ಅಂಗಡಿ ಎಲ್ಲಿದೆ ಎಂಬುದನ್ನು ಜನರು ಹುಡುಕಬೇಕಿದೆ’ ಎಂದು ಬೆಳಗಾವಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು. ಬೆಳಗಾವಿ ಜಿಲ್ಲೆಯ ಸವದತ್ತಿ ಮತ ಕ್ಷೇತ್ರದ ಕಡಬಿ, ಶಿವಾಪುರ, ಯರಝರ್ವಿ ಗ್ರಾಮಗಳಲ್ಲಿ ಸೋಮವಾರ ಬೆಳಗಾವಿ ಲೋಕಸಭಾ ಉಪ ಚುನಾವಣಾ ಪ್ರಚಾರ ನಡೆಸಿ, ಅವರು ಮಾತನಾಡಿದರು. “ಚುನಾವಣೆಗೂ ಮೊದಲು ಬಿಜೆಪಿಯವರು, ಪೆಟ್ರೋಲ್, …

Read More »

ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಭೀತಿಗೆ ಗುಳೆ ಹೋಗುತ್ತಿರುವ ಕಾರ್ಮಿಕರು!

ಲಕ್ನೋ : ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿನ ಹಾವಳಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅಲ್ಲದೇ, ಪ್ರತಿ ದಿನ 50 ಸಾವಿರದ ಗಡಿಯ ಆಸುಪಾಸಿನಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಹೀಗಾಗಿ ಅಲ್ಲಿ ಲಾಕ್ ಡೌನ್ ಘೋಷಣೆಯಾಗಬಹುದು ಎಂಬ ಭಯ ಜನರನ್ನು ಕಾಡುತ್ತಿದೆ. ಮುಂಬಯಿ ನಗರ ಸೇರಿದಂತೆ ವಿವಿಧ ನಗರದಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರು ಲಾಕ್ ಡೌನ್ ಘೋಷಣೆಯಾಗಬಹುದೆಂಬ ಆತಂಕದಿಂದ ಉತ್ತರ ಪ್ರದೇಶದ ರೈಲುಗಳನ್ನು ಹಿಡಿದು ಮರಳಿ ಹೋಗುತ್ತಿದ್ದಾರೆ. ಗೋರಖ್‌ ಪುರ, ವಾರಣಾಸಿ, ಪ್ರಯಾಗ್‌ …

Read More »

ಫ್ಲಿಪ್‌ ಕಾರ್ಟ್‌ ಹಾಗೂ ಅದಾನಿ ಗ್ರೂಪ್ ಒಪ್ಪಂದ : ಉಭಯ ಸಂಸ್ಥೆಗಳ ಮುಂದಿನ ಯೋಜನೆ ಏನು..?

ನವ ದೆಹಲಿ : ವಾಲ್‌ ಮಾರ್ಟ್‌ ಒಡೆತನದ ಫ್ಲಿಪ್‌ ಕಾರ್ಟ್‌ ಸಂಸ್ಥೆ ಅದಾನಿ ಗ್ರೂಪ್‌ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಲಾಜಿಸ್ಟಿಕ್ ಮತ್ತು ಡಾಟಾ ಸೆಂಟರ್‌ ಗಳ ಸಾಮರ್ಥ್ಯಗಳನ್ನು ಹೆಚ್ಚಿಸಲು ಹಾಗೂ 2,500ಕ್ಕೂ ಹೆಚ್ಚು ಹೊಸ ಉದ್ಯೋಗಗಳನ್ನು ಸೃಷ್ಟಿಸುವ ದೃಷ್ಟಿಯಲ್ಲಿ ಉಭಯ ಸಂಸ್ಥೆಗಳು ಒಪ್ಪಂದಕ್ಕೆ ಮುಂದಾಗಿವೆ ಎಂದು ವರದಿಯಾಗಿದೆ. ಈ ಪಾಲುದಾರಿಕೆಯ ಭಾಗವಾಗಿ, ಅದಾನಿ ಲಾಜಿಸ್ಟಿಕ್ಸ್ ಮುಂಬಯಿಯಲ್ಲಿರುವ ತನ್ನ ಮುಂಬರುವ ಲಾಜಿಸ್ಟಿಕ್ಸ್ 5,34,000 ಚದರ ಅಡಿ ಪೂರೈಸುವ ಕೇಂದ್ರವನ್ನು ನಿರ್ಮಿಸಲಿದ್ದು, ಪಶ್ಚಿಮ …

Read More »

ನೌಕರರ ಷರತ್ತು ಒಪ್ಪಿಕೊಳ್ಳಲು ಸಾಧ್ಯವಿಲ್ಲ- ಸಿಎಂ ಬಿಎಸ್ ವೈ

ಬೆಂಗಳೂರು : ಇಂದು ಯುಗಾದಿ ಹಬ್ಬದ ಹಿನ್ನಲೆಯಲ್ಲಿ ನಾಡಿನ ಸಮಸ್ತ ಜನರಿಗೆ ಸಿಎಂ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ. ಬಳಿಕ ನೌಕರರ ಮುಷ್ಕರದ ಬಗ್ಗೆ ಬಸವ ಕಲ್ಯಾಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನೌಕರರ ಷರತ್ತು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಬ್ಬಹರಿದಿನಗಳಲ್ಲಿ ಈ ರೀತಿ ಮಾಡೋದು ಸರಿಯಿಲ್ಲ. ಹಠವನ್ನು ಬಿಟ್ಟು ಕೆಲಸಕ್ಕೆ ಹಾಜರಾಗಬೇಕು. ಕೆಲಸಕ್ಕೆ ಹಾಜರಾಗದವರಿಗೆ ಸಂಬಳ ಕೊಡಲ್ಲ ಎಂದು ಹೇಳಿದ್ದಾರೆ. ಸದ್ಯಕ್ಕೆ ಲಾಕ್ ಡೌನ್ ಇಲ್ಲ. ಏ.18, 19ಕ್ಕೆ ಸರ್ವಪಕ್ಷದ ಸಭೆ …

Read More »

ಅಂಬೇಡ್ಕರ್ ಪ್ರತಿಮೆ ಅನಾವರಣ ನಾಳೆ

ಶಿರಾ: ನಗರದ ಪ್ರವಾಸಿ ಮಂದಿರದ ಬಳಿ ಇರುವ ಉದ್ಯಾನದಲ್ಲಿ ನಿರ್ಮಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯ ಅನಾವರಣವನ್ನು ಏ. 14ರಂದು ಹಮ್ಮಿಕೊಂಡಿದ್ದು ಸಾರ್ವಜನಿಕರಲ್ಲಿ‌ ಸಂತಸ ಮೂಡಿಸಿದೆ. ಕಳೆದ ಎರಡು ವರ್ಷದಿಂದ ಪ್ರತಿಮೆ ಅನಾವರಣ ಯಾವಾಗ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ‌ ಮೂಡಿತ್ತು. ಈ ಬಗ್ಗೆ ‘ಪ್ರಜಾವಾಣಿ’ ಮಾ‌ರ್ಚ್‌ 26ರಂದು ‘ಅಂಬೇಡ್ಕರ್ ಪ್ರತಿಮೆ ಅನಾವರಣ ಯಾವಾಗ?’ ಎನ್ನುವ ಲೇಖನ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅಧಿಕಾರಿಗಳು ಅಂಬೇಡ್ಕರ್ ಜಯಂತಿಗೆ ಪ್ರತಿಮೆ ಅನಾವರಣಗೊಳಿಸಲು …

Read More »