Breaking News
Home / 2021 / ಫೆಬ್ರವರಿ (page 3)

Monthly Archives: ಫೆಬ್ರವರಿ 2021

ಪೌರಕಾರ್ಮಿಕ ಆತ್ಮಹತ್ಯೆ: ₹10 ಲಕ್ಷ ಪರಿಹಾರ ನೀಡಲು ಆಗ್ರಹ

ಬೆಂಗಳೂರು: ಮಲ ಸ್ವಚ್ಛಗೊಳಿಸಲು ಪುರಸಭೆ ಅಧಿಕಾರಿಗಳು ನೀಡಿದ ಒತ್ತಡದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಮದ್ದೂರಿನ ಪೌರಕಾರ್ಮಿಕ ನಾರಾಯಣ ಅವರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಹಾಗೂ ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ವಜಾಗೊಳಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಸದಸ್ಯರು ವಿಶ್ವೇಶ್ವರಯ್ಯ ಟವರ್‌ ಬಳಿಯ ಪೌರಾಡಳಿತ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಇತ್ತೀಚೆಗಷ್ಟೇ ಮದ್ದೂರಿನ ಪೌರಕಾರ್ಮಿಕ ನಾರಾಯಣ (40) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ‘ಪುರಸಭೆ ಅಧಿಕಾರಿಗಳು ಬಲವಂತವಾಗಿ ಮಲಸ್ವಚ್ಛಗೊಳಿಸಲು ಒತ್ತಡ …

Read More »

ಆಕ್ಟಿವಾ ಸ್ಕೂಟರ್ ನಲ್ಲಿ ಬಂದು ಮರಳು ಲಾರಿ ಹಿಡಿದ ಕಮೀಷನರ್ – ಡಿಸಿಪಿ

ಮಂಗಳೂರು: ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಮ್ ಅವರು ಸ್ಕೂಟರ್ ನಲ್ಲಿ ಬಂದು ವಶಕ್ಕೆ ಪಡೆದಿದ್ದಾರೆ. ಮರಳು ಸಾಗಾಟದ ಲಾರಿಯನ್ನು ತಲಪಾಡಿ ಟೋಲ್ ಗೇಟಿನಲ್ಲಿ ಅಡ್ಡ ಹಾಕಿದ ಅಧಿಕಾರಿಗಳು, ಲಾರಿ ಚಾಲಕನನ್ನು ವಶಕ್ಕೆ ಪಡೆದರು. ಸೋಮೇಶ್ವರ ಸಮುದ್ರ ತೀರದಿಂದ ಮರಳು ಸಾಗಾಟ ನಡೆಸುತ್ತಿದ್ದ ಲಾರಿಗೆ ಎಸ್ಕಾರ್ಟ್ ನೀಡುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿದ್ದು, ಎಸ್ಕಾರ್ಟ್ ನಡೆಸುತ್ತಿದ್ದ ಚಂದ್ರ ಎಂಬುವನನ್ನು ವಶಕ್ಕೆ ಪಡೆದಿದ್ದಾರೆ.

Read More »

ಮನೆ ಕಳ್ಳತನ ಹಾಗೂ ದೇವಸ್ಥಾನ ಕಳ್ಳತನ ಪ್ರಕರಣವನ್ನು ಭೇದಿಸಿರುವ ಯಮಕನಮರಡಿ ಪೊಲೀಸರು

ಬೆಳಗಾವಿ: ಮನೆ ಕಳ್ಳತನ ಹಾಗೂ ದೇವಸ್ಥಾನ ಕಳ್ಳತನ ಪ್ರಕರಣವನ್ನು ಭೇದಿಸಿರುವ ಯಮಕನಮರಡಿ ಪೊಲೀಸರು ಮೂವರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಗೋಕಾಕ್ ನ ಅರಬಾವಿ ಗ್ರಾಮದ ಸಂತೋಷ್ ಗಂಗಾರಾಮ ವಡ್ಡರ, ವಿಶಾಲ ನರಸಿಂಗ ಹಾಗೂ ಚಿನ್ನದ ವ್ಯಾಪಾರಿ ಚಂದ್ರಕಾಂತ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 18,59,776/-ರೂ ಮೌಲ್ಯದ ಚಿನ್ನಾಭರಣ ಹಾಗೂ ಕಳ್ಳತನಕ್ಕೆ ಬಳಸಲಾಗಿದ್ದ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳಗಾವಿಯ ಕಿತ್ತೂರು ಠಾಣೆ ವ್ಯಾಪ್ತಿಯ 13 ಮನೆ, ಮಾರಿಹಾಳ ಠಾಣಾ ವ್ಯಾಪ್ತಿಯ 2 …

Read More »

ಮಹಿಳೆಯನ್ನು ಕಟ್ಟಿಹಾಕಿ ಹಾಡಹಗಲೇ ದರೋಡೆಗೆ ಯತ್ನ: ಸಿನಿಮೀಯಾ ರೀತಿಯಲ್ಲಿ ನಡೆಯಿತು ಚೇಸಿಂಗ್

ಚಿಕ್ಕಮಗಳೂರು: ಇಬ್ಬರು ದರೋಡೆಕೋರರಿಂದ ಹಾಡಹಗಲೇ ದರೋಡೆಗೆ ಯತ್ನಿಸಿದ ಘಟನೆ ಶನಿವಾರ ನಗರ ಎಐಟಿ ಸರ್ಕಲ್ ನಲ್ಲಿ ನಡೆದಿದೆ. ಎಐಟಿ ಸರ್ಕಲ್ ನಲ್ಲಿರುವ ಸಿಡಿಎ ಮಾಜಿ ಅಧ್ಯಕ್ಷ ಚಂದ್ರೇಗೌಡ ಎಂಬವರ ಮನೆ ಬಳಿ ಪಲ್ಸರ್ ಬೈಕ್ ನಲ್ಲಿ ಆಗಮಿಸಿದ ಇಬ್ಬರು ಯುವಕರು ತಲೆಗೆ ಹೆಲ್ಮೆಟ್ ಧರಿಸಿ ಕೈಯಲ್ಲಿ ಚಾಕು ಹಿಡಿದು ಮನೆಯೊಳಗೆ ಪ್ರವೇಶಿಸಿದ್ದಾರೆ. ಮನೆಯಲ್ಲಿ ಚಂದ್ರೇಗೌಡ ಪತ್ನಿ ಒಬ್ಬರೇ ಇದ್ದಿದ್ದು, ಅವರ ಕೈ ಬಾಯಿಗೆ ವೇಲ್ ನಿಂದ ಕಟ್ಟಿ ದರೋಡೆಗೆ ಯತ್ನಿಸಿದ್ದಾರೆ. …

Read More »

ಮಹಾರಾಷ್ಟ್ರದಲ್ಲಿ 10,12ನೇ ತರಗತಿಗಳಿಗೆ ಪರೀಕ್ಷಾ ದಿನಾಂಕ ಪ್ರಕಟ

ಪುಣೆ,ಫೆಬ್ರವರಿ 27: ಮಹಾರಾಷ್ಟ್ರದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ.ಹಾಗಿದ್ದರೂ ಪ್ರೌಢಶಿಕ್ಷಣ ಮಂಡಳಿ 10 ಹಾಗೂ 12ನೇ ತರಗತಿಗಳಿಗೆ ಪರೀಕ್ಷಾ ದಿನಾಂಕವನ್ನು ಘೋಷಣೆ ಮಾಡಿದೆ. ಮಹಾರಾಷ್ಟ್ರ ಪ್ರೌಢ ಶಿಕ್ಷಣ ಮಂಡಳಿಯ 10 (ಎಸ್‌ಎಸ್‌ಸಿ) ಹಾಗೂ 12ನೇ ತರಗತಿ (ಎಚ್‌ಎಸ್‌ಸಿ) ಪರೀಕ್ಷೆಗಳು ಏ. 23ರಿಂದ ಮೇ 21ರ ವರೆಗೆ ನಡೆಯಲಿವೆ ಎಂದು ಮಂಡಳಿಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.   ನಾವು ಫೆಬ್ರವರಿ 16 ರಂದು ಪರೀಕ್ಷೆಯ ಪ್ರಸ್ತಾವಿತ ದಿನಾಂಕಗಳನ್ನು ಘೋಷಿಸಿದ್ದೆವು ಮತ್ತು ತಜ್ಞರಿಂದ …

Read More »

ಕಂಗನಾ-ಹೃತಿಕ್​ ಕೇಸ್​: ವಿಚಾರಣೆಗೆ ಹಾಜರಾದ ‘ಕ್ರಿಶ್’ ಹೀರೋ

ಮಹಾರಾಷ್ಟ್ರ: 5 ವರ್ಷ ಹಳೆಯ ಕೇಸ್​​ ಒಂದರಲ್ಲಿ ಹೃತಿಕ್ ರೋಷನ್ ಇಂದು ಮುಂಬೈ ಪೊಲೀಸ್ ಸ್ಟೇಷನ್​​ಗೆ ಬಂದು ಕ್ರೈಂ ಬ್ರಾಂಚ್ ಅಧಿಕಾರಿಗಳ ಮುಂದೆ ಹೇಳಿಕೆ ದಾಖಲಿಸಿದ್ಧಾರೆ. 2016ರಲ್ಲಿ ನಟ ಹೃತಿಕ್ ರೋಷನ್ ಮುಂಬೈ ಪೊಲೀಸ್ ಠಾಣೆಯಲ್ಲಿ ಒಂದು ದೂರು ದಾಖಲಿಸಿದ್ರು. 2013ರಿಂದ 2014ರವರೆಗೆ ನನ್ನ ಹೆಸರಲ್ಲಿ ನಕಲಿ ಇ-ಮೇಲ್ ಐಡಿ ರಚಿಸಿ, ಕಂಗನಾ ಜೊತೆ ಯಾರೋ ಮಾತನಾಡ್ತಿದ್ಧಾರೆ ಅಂತ ದೂರಿದ್ದರು. ಆದ್ರೆ ಕಂಗನಾ ಮಾತ್ರ ಹೃತಿಕ್ ನನ್ನ ಜೊತೆ ಪ್ರೀತಿಯ …

Read More »

ಜೂನ್ ನಲ್ಲಿ ನಡೆಯಲಿದೆ ಎನ್‍ಐಒಎಸ್ ಪರೀಕ್ಷೆಗಳು

ಬೆಂಗಳೂರು, ಫೆ.27- ರಾಷ್ಟ್ರೀಯ ಮುಕ್ತ ಶಿಕ್ಷಣ ಇಲಾಖೆ (ಎನ್‍ಐಒಎಸ್) ವತಿಯಿಂದ ಮಾರ್ಚ್-ಏಪ್ರಿಲ್-2021ನೆ ಸಾಲಿನ ಸೆಕೆಂಡರಿ (10ನೇ ತರಗತಿ) ಮತ್ತು ಸೀನಿಯರ್ ಸೆಕೆಂಡರಿ (ದ್ವಿತೀಯ ಪಿಯುಸಿ) ಪರೀಕ್ಷೆಗಳನ್ನು ಜೂನ್ ತಿಂಗಳಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಆನ್‍ಲೈನ್ ಮೂಲಕ ಪರೀಕ್ಷಾ ಶುಲ್ಕ ಪಾವತಿಸಲು ಸೂಚಿಸಲಾಗಿದೆ. ಮಾರ್ಚ್ 1ರಿಂದ 31ರ ವರೆಗೆ ಪರೀಕ್ಷಾ ಶುಲ್ಕ ಪಾವತಿಸಬಹುದಾಗಿದೆ. ಏಪ್ರಿಲ್ 1ರಿಂದ 13ರ ವರೆಗೆ ವಿಳಂಬ ಶುಲ್ಕ ಸಹಿತ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಳ್ಳಬಹುದಾಗಿದೆ. ಜನವರಿ, ಫೆಬ್ರವರಿ 2021ರ ಪರೀಕ್ಷೆಯಲ್ಲಿ …

Read More »

ಫಾಸ್ಟ್‌ಟ್ಯಾಗ್ ಟೋಲ್ ಕಲೆಕ್ಷನ್: ಒಂದು ದಿನಕ್ಕೆ 104 ಕೋಟಿ ರೂಪಾಯಿ

ಫಾಸ್ಟ್‌ಟ್ಯಾಗ್‌ ಮೂಲಕ ತನ್ನ ದೈನಂದಿನ ಟೋಲ್ ಸಂಗ್ರಹವು ಶುಕ್ರವಾರ (ಫೆ. 26) ಸುಮಾರು 104 ಕೋಟಿ ರೂ. ತಲುಪಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತಿಳಿಸಿದೆ. ಫೆಬ್ರವರಿ 16, 2021 ರಿಂದ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್‌ ಮೂಲಕ ಬಳಕೆದಾರರ ಶುಲ್ಕವನ್ನು ಕಡ್ಡಾಯಗೊಳಿಸಿದ ನಂತರ, ಫಾಸ್ಟ್‌ಟ್ಯಾಗ್‌ ಮೂಲಕ ಟೋಲ್ ಸಂಗ್ರಹವು ಸ್ಥಿರವಾದ ಬೆಳವಣಿಗೆಯನ್ನು ಕಂಡಿದೆ ಎಂದು ಅದು ಹೇಳಿದೆ. “ಈ ವಾರದಲ್ಲಿ ಟೋಲ್ ಸಂಗ್ರಹವು ಪ್ರತಿದಿನ 100 ಕೋಟಿ ರೂ.ಗಳಿಗಿಂತ …

Read More »

ಚಲಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನಿಂದ ಪೆಪ್ಪರ್​ ಸ್ಪ್ರೇ

ಇನ್ನೇನು ಟೇಕಾಫ್​ ಆಗಲಿದ್ದ ವಿಮಾನದೊಳಗೆ ಆಸೀನನಾಗಿದ್ದ ಪ್ರಯಾಣಿಕ ಅಕಸ್ಮಾತ್ಗಿ ಆ ಪೆಪ್ಪರ್​ ಸ್ಪ್ರೇಯನ್ನ ಒತ್ತಿದ ಕಾರಣ ಫ್ಲೈಟ್​​ನಲ್ಲಿದ್ದ ಪ್ರತಿಯೊಬ್ಬರು ಕೆಮ್ಮಿನಿಂದ ಬಳಲಿದ ಘಟನೆ ನಡೆಸಿದೆ. ಫ್ಲೋರಿಡಾದಿಂದ ನ್ಯೂ ಜೆರ್ಸಿಗೆ ಸಂಚರಿಸುತ್ತಿದ್ದ ವಿಮಾನ ಈ ಘಟನೆ ಬಳಿಕ ವಿಳಂಬವಾಗಿ ನಿಲ್ದಾಣ ತಲುಪಿದೆ. ಯುನೈಟೆಡ್​ ಫ್ಲೈಟ್​ 1061 ಈಶಾನ್ಯ ಫ್ಲೋರಿಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್​​​ ಆಗಲು ತಯಾರಾಗುತ್ತಿತ್ತು.ಆದರೆ ಈ ವೇಳೆ ಪ್ರಯಾಣಿಕರೊಬ್ಬರು ಪೆಪ್ಪರ್​ ಸ್ಪ್ರೇಯನ್ನ ಅಚಾನಕ್​ ಆಗಿ ಪ್ರೆಸ್​ ಮಾಡಿದ್ದಾರೆ. ಚಲಾವಣೆಯಲ್ಲಿದ್ದ …

Read More »

ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಯಾನ ಸಂಚಾರ ನಿಷೇಧ

ನವದೆಹಲಿ: ಮಾರ್ಚ್ 31ರ ತನಕ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಯಾನ ಸಂಚಾರ ನಿಷೇಧಿಸಿ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಆದೇಶಿಸಿದೆ. ಕಳೆದ ವರ್ಷ ಮಾರ್ಚ್ 23ರ ಬಳಿಕ ಅಂತಾರಾಷ್ಟ್ರೀಯ ವಿಮಾನಯಾನ ಸಂಚಾರವನ್ನು ಕೋವಿಡ್-19 ಹಿನ್ನೆಲೆಯಲ್ಲಿ ನಿಲ್ಲಿಸಲಾಗಿತ್ತು. ಇದನ್ನು ಈಗ ಮಾರ್ಚ್ 31ರ ತನಕ ಮುಂದುವರಿಸಿದೆ ಎಂದು ಡಿಜಿಸಿಎ ತಿಳಿಸಿದೆ. ವಿಶೇಷ ವಿಮಾನ ಹಾಗೂ ಸರಕು ಸಾಗಾಣೆಗೆ ಈ ನಿಷೇಧ ಅನ್ವಯ ಆಗಲ್ಲ. ನಿಗದಿತ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಡಿಜಿಸಿಎ …

Read More »