Breaking News
Home / Uncategorized / ಜೂನ್ ನಲ್ಲಿ ನಡೆಯಲಿದೆ ಎನ್‍ಐಒಎಸ್ ಪರೀಕ್ಷೆಗಳು

ಜೂನ್ ನಲ್ಲಿ ನಡೆಯಲಿದೆ ಎನ್‍ಐಒಎಸ್ ಪರೀಕ್ಷೆಗಳು

Spread the love

ಬೆಂಗಳೂರು, ಫೆ.27- ರಾಷ್ಟ್ರೀಯ ಮುಕ್ತ ಶಿಕ್ಷಣ ಇಲಾಖೆ (ಎನ್‍ಐಒಎಸ್) ವತಿಯಿಂದ ಮಾರ್ಚ್-ಏಪ್ರಿಲ್-2021ನೆ ಸಾಲಿನ ಸೆಕೆಂಡರಿ (10ನೇ ತರಗತಿ) ಮತ್ತು ಸೀನಿಯರ್ ಸೆಕೆಂಡರಿ (ದ್ವಿತೀಯ ಪಿಯುಸಿ) ಪರೀಕ್ಷೆಗಳನ್ನು ಜೂನ್ ತಿಂಗಳಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಆನ್‍ಲೈನ್ ಮೂಲಕ ಪರೀಕ್ಷಾ ಶುಲ್ಕ ಪಾವತಿಸಲು ಸೂಚಿಸಲಾಗಿದೆ.

ಮಾರ್ಚ್ 1ರಿಂದ 31ರ ವರೆಗೆ ಪರೀಕ್ಷಾ ಶುಲ್ಕ ಪಾವತಿಸಬಹುದಾಗಿದೆ. ಏಪ್ರಿಲ್ 1ರಿಂದ 13ರ ವರೆಗೆ ವಿಳಂಬ ಶುಲ್ಕ ಸಹಿತ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಳ್ಳಬಹುದಾಗಿದೆ. ಜನವರಿ, ಫೆಬ್ರವರಿ 2021ರ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೋಂದಣಿ ಮತ್ತು ಶುಲ್ಕ ಪಾವತಿಗೆ ಮಾರ್ಚ್ 17ರಿಂದ ಮಾರ್ಚ್ 31ರ ವರೆಗೆ ಸಮಯಾವಕಾಶವಿರುತ್ತದೆ.

ಆನ್‍ಲೈನ್ ಮೂಲಕ ಶುಲ್ಕ ಪಾವತಿಸಬೇಕಾದ ಖಾತೆ ವಿಳಾಸ ಈ ಕೆಳಕಂಡಂತಿದೆ: nios.ac.in ಹಾಗೂ sdmis.nios.ac.in ಸೆಕೆಂಡರಿ ಹಾಗೂ ಸೀನಿಯರ್ ಸೆಕೆಂಡರಿ ತರಗತಿಗಳಿಗೆ ಕೋರಿಕೆ ಆಧಾರಿತ ಮೇರೆಗೆ ಪರೀಕ್ಷೆಗಳನ್ನು ಮಾರ್ಚ್ 15 ರಿಂದ ನಡೆಸಲಾಗುತ್ತದೆ.

ತತ್ಸಂಬದ್ಧ ನೋಂದಣಿ ಹಾಗೂ ಪರೀಕ್ಷಾ ಶುಲ್ಕ ಪಾವತಿಗೆ ಎನ್‍ಐಒಎಸ್‍ನ ವೆಬ್ ಪೋರ್ಟಲ್‍ನಲ್ಲಿ ಮಾರ್ಚ್ 1ರಿಂದ ಅವಕಾಶವಿರುತ್ತದೆ. ವೆಬ್‍ಪೋರ್ಟಲ್ ವಿಳಾಸ: www.nios.ac.in http://sdmis.nios.ac.in.


Spread the love

About Laxminews 24x7

Check Also

ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Spread the love ಧಾರವಾಡ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವಿರುದ್ದ ತೊಡೆ ತಟ್ಟಿರುವ ಶಿರಹಟ್ಟಿ ಮಠದ ದಿಂಗಾಲೇಶ್ವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ