Breaking News
Home / Uncategorized / ಚಲಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನಿಂದ ಪೆಪ್ಪರ್​ ಸ್ಪ್ರೇ

ಚಲಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನಿಂದ ಪೆಪ್ಪರ್​ ಸ್ಪ್ರೇ

Spread the love

ಇನ್ನೇನು ಟೇಕಾಫ್​ ಆಗಲಿದ್ದ ವಿಮಾನದೊಳಗೆ ಆಸೀನನಾಗಿದ್ದ ಪ್ರಯಾಣಿಕ ಅಕಸ್ಮಾತ್ಗಿ ಆ ಪೆಪ್ಪರ್​ ಸ್ಪ್ರೇಯನ್ನ ಒತ್ತಿದ ಕಾರಣ ಫ್ಲೈಟ್​​ನಲ್ಲಿದ್ದ ಪ್ರತಿಯೊಬ್ಬರು ಕೆಮ್ಮಿನಿಂದ ಬಳಲಿದ ಘಟನೆ ನಡೆಸಿದೆ. ಫ್ಲೋರಿಡಾದಿಂದ ನ್ಯೂ ಜೆರ್ಸಿಗೆ ಸಂಚರಿಸುತ್ತಿದ್ದ ವಿಮಾನ ಈ ಘಟನೆ ಬಳಿಕ ವಿಳಂಬವಾಗಿ ನಿಲ್ದಾಣ ತಲುಪಿದೆ.

ಯುನೈಟೆಡ್​ ಫ್ಲೈಟ್​ 1061 ಈಶಾನ್ಯ ಫ್ಲೋರಿಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್​​​ ಆಗಲು ತಯಾರಾಗುತ್ತಿತ್ತು.ಆದರೆ ಈ ವೇಳೆ ಪ್ರಯಾಣಿಕರೊಬ್ಬರು ಪೆಪ್ಪರ್​ ಸ್ಪ್ರೇಯನ್ನ ಅಚಾನಕ್​ ಆಗಿ ಪ್ರೆಸ್​ ಮಾಡಿದ್ದಾರೆ.

ಚಲಾವಣೆಯಲ್ಲಿದ್ದ ವಿಮಾನದ ಒಳಗಿದ್ದ ಪ್ರಯಾಣಿಕರೆಲ್ಲರೂ ಕೆಮ್ಮೋಕೆ ಶುರು ಮಾಡಿದ್ರು. ಅಲ್ಲದೇ ಇದು ಕೋವಿಡ್​ ಕಾಲವಾಗಿರೋದ್ರಿಂದ ಎಲ್ಲರೂ ಒಬ್ಬರ ಮುಖ ಒಬ್ಬರು ನೋಡೋಕೆ ಆರಂಭಿಸಿದ್ವಿ. ನಾನಂತೂ ಮಾಸ್ಕ್ ಹಾಕಿಕೊಂಡೆ ಎಂದು ಪ್ರಯಾಣಿಕ ಜೋಸೆಫ್​ ಗ್ರ್ಯಾಂಡೆ ಎಂಬವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಎಲ್ಲರೂ ಕೆಮ್ಮೋಕೆ ಆರಂಭಿಸಿದ ಬಳಿಕ ಅಲ್ಲೇ ಇದ್ದ ಪ್ರಯಾಣಿಕನೊಬ್ಬ ಅಯ್ಯೋ…ನಾನು ಅಕಸ್ಮಾತ್​ ಆಗಿ ಪೆಪ್ಪರ್​ ಸ್ಪ್ರೇಯನ್ನು ಪ್ರೆಸ್​ ಮಾಡಿದೆ. ಅದು ನನ್ನ ಕೀ ಚೈನ್​​ನಲ್ಲಿತ್ತು ಎಂದು ಹೇಳಿಕೊಂಡಿದ್ದರು ಅಂತಾ ಗ್ರ್ಯಾಂಡೆ ಹೇಳಿದ್ದಾರೆ.

ವಿಮಾನದಿಂದ ಕೆಳಗಿಳಿದು ಹೋಗಲು ಅವಕಾಶ ನೀಡಲಾಯ್ತು. ನನ್ನ ಸಂಗಾತಿಗೆ ಅಸ್ತಮಾ ಸಮಸ್ಯೆ ಇದ್ದಿದ್ದರಿಂದ ನಮಗೆ ವಿಮಾನದಿಂದ ಕೆಳಗೆ ಇಳಿಯದೇ ಬೇರೆ ದಾರಿ ಇರಲಿಲ್ಲ ಎಂದು ಗ್ರ್ಯಾಂಡೆ ಹೇಳಿದ್ರು.


Spread the love

About Laxminews 24x7

Check Also

ಗಣೇಶವಾಡಿ ಗ್ರಾಮದ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ, ಯುವ ನಾಯಕರಾದ ರಾಹುಲ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ

Spread the love  ಘಟಪ್ರಭಾ : ಪ್ರಾಚೀನ ಕಾಲದಿಂದಲೂ ನಾವು ದೈವ ಭಕ್ತರು. ದೇವರನ್ನು ನಂಬಿ ಬದುಕುತ್ತಿರುವವರು. ದೇವರಿಂದಲೇ ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ