Breaking News

ಕಂಗನಾ-ಹೃತಿಕ್​ ಕೇಸ್​: ವಿಚಾರಣೆಗೆ ಹಾಜರಾದ ‘ಕ್ರಿಶ್’ ಹೀರೋ

Spread the love

ಮಹಾರಾಷ್ಟ್ರ: 5 ವರ್ಷ ಹಳೆಯ ಕೇಸ್​​ ಒಂದರಲ್ಲಿ ಹೃತಿಕ್ ರೋಷನ್ ಇಂದು ಮುಂಬೈ ಪೊಲೀಸ್ ಸ್ಟೇಷನ್​​ಗೆ ಬಂದು ಕ್ರೈಂ ಬ್ರಾಂಚ್ ಅಧಿಕಾರಿಗಳ ಮುಂದೆ ಹೇಳಿಕೆ ದಾಖಲಿಸಿದ್ಧಾರೆ. 2016ರಲ್ಲಿ ನಟ ಹೃತಿಕ್ ರೋಷನ್ ಮುಂಬೈ ಪೊಲೀಸ್ ಠಾಣೆಯಲ್ಲಿ ಒಂದು ದೂರು ದಾಖಲಿಸಿದ್ರು. 2013ರಿಂದ 2014ರವರೆಗೆ ನನ್ನ ಹೆಸರಲ್ಲಿ ನಕಲಿ ಇ-ಮೇಲ್ ಐಡಿ ರಚಿಸಿ, ಕಂಗನಾ ಜೊತೆ ಯಾರೋ ಮಾತನಾಡ್ತಿದ್ಧಾರೆ ಅಂತ ದೂರಿದ್ದರು. ಆದ್ರೆ ಕಂಗನಾ ಮಾತ್ರ ಹೃತಿಕ್ ನನ್ನ ಜೊತೆ ಪ್ರೀತಿಯ ನಾಟಕವಾಡಿ, ಮೋಸ ಮಾಡಿದ್ದಾರೆ ಅಂತ ಆರೋಪಿಸಿದ್ದರು.

ಇವರಿಬ್ಬರ ನಡುವಿನ ಆರೋಪ-ಪ್ರತ್ಯಾರೋಪಗಳ ಬಗ್ಗೆ ಆರಂಭದಲ್ಲಿ ಮುಂಬೈ ಪೊಲೀಸ್​​ನ ಸೈಬಲ್ ಸೆಲ್ ತನಿಖೆ ಆರಂಭಿಸಿತ್ತು. ನಂತರದಲ್ಲಿ 2020ರ ಡಿಸೆಂಬರ್​ನಲ್ಲಿ ಕ್ರಿಮಿನಲ್ ಇಂಟೆಲಿಜೆನ್ಸ್​ ಯುನಿಟ್​​​ಗೆ ತನಿಖೆಯನ್ನು ವರ್ಗಾಯಿಸಲಾಗಿತ್ತು. ಇದೀಗ ಇದೇ ಪ್ರಕರಣದಲ್ಲಿ ಹೃತಿಕ್ ರೋಷನ್​​ ವಿಚಾರಣೆಗೆ ಸಮನ್ಸ್ ನೀಡಲಾಗಿತ್ತು. ಅದರಂತೆ ಹೃತಿಕ್ ವಿಚಾರಣೆಗೆ ಹಾಜರಾಗಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ