Breaking News
Home / 2021 / ಜನವರಿ / 23 (page 4)

Daily Archives: ಜನವರಿ 23, 2021

ಅಗ್ನಿ ಅವಘಡದಿಂದ ರೂ.1 ಸಾವಿರ ಕೋಟಿ ನಷ್ಟ ಉಂಟಾಗಿದೆ: ಕೊರೋನಾ ಲಸಿಕಾ ತಯಾರಿಕಾ ಸಂಸ್ಥೆ ಸೀರಮ್ ಹೇಳಿಕೆ!

ಪುಣೆ: ಜಗತ್ತಿನ ಅತೀದೊಡ್ಡ ಲಸಿಕ ತಯಾರಿಕೆ ಸಂಸ್ಥೆಯಾಗಿರುವ ಹಾಗೂ ಕೊರೋನಾ ವೈರಸ್’ಗೆ ದೊಡ್ಡ ಪ್ರಮಾಣದಲ್ಲಿ ಕೋವಿಶೀಲ್ಡ್ ಲಸಿಕೆ ತಯಾರಿಸುವ ಮೂಲಕ ಜಗತ್ತಿನ ಗಮನ ಸೆಳೆದಿರುವ ಮಹಾರಾಷ್ಟ್ರದ ಪುಣೆಯಲ್ಲಿನ ಸೀರಮ್ ಕಂಪನಿಯಲ್ಲಿ ಗುರುವಾರ ಸಂಭವಿಸಿದ ಭಾರೀ ಅಗ್ನಿ ಅವಘಡದಿಂದ ರೂ.1 ಕೋಟಿ ನಷ್ಟ ಎದುರಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಗುರುವಾರ ನಿರ್ಮಾಣ ಹಂತದ 5 ಮಹಡಿಯ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 5 ಕಟ್ಟಡ ಕಾರ್ಮಿಕರು ಮೃತಪಟ್ಟಿದ್ದರು. ಅದೃಷ್ಟವಶಾತ್ ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ …

Read More »

ಗಾಜಿನ ಮನೆಯಲ್ಲಿ ಕುಳಿತು ಬಿಜೆಪಿ ಬೇರೊಂದು ಪಕ್ಷದತ್ತ ಕಲ್ಲು ಎಸೆಯುವುದು ಬೇಡ – ಸುದರ್ಶನ್

ಕೋಲಾರ ಜ.22 (ಹಿ.ಸ): ಭಾರತೀಯ ಜನತಾ ಪಕ್ಷ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುವ ಬದಲು ಅವರ ಪಕ್ಷದ ಆಂತರಿಕ ವಿಷಯಗಳನ್ನು ಸರಿಪಡಿಸಿಕೊಳ್ಳಲು ಗಾಜಿನ ಮನೆಯಲ್ಲಿ ಕುಳಿತು ಇತರರ ಮೇಲೆ ಕಲ್ಲು ಎಸೆದರೆ ಕಲ್ಲು ಎಸೆದವರಿಗೆ ನಷ್ಠ. ಮತ್ತೊಂದು ಪಕ್ಷವನ್ನು ಟೀಕಿಸುವ ಮೊದಲು ಬಿಜೆಪಿ ತನ್ನ ಬಗ್ಗೆ ಗಮನಿಸಲಿ ಎಂದು ವಿಧಾನ ಪರಿಷತ್ ಮಾಜಜಿ ಉಪ ಸಭಾಪತಿ ವಿ.ಆರ್.ಸುದರ್ಶನ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು. ಕೋಲಾರ ತಾಲ್ಲೂಕಿನ ವೇಮಗಲ್‍ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, …

Read More »

ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ: ಉಮೇಶ್ ಕತ್ತಿ

ತುಮಕೂರು: ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ ಎಂದು ನೂತನ ಸಚಿವ ಉಮೇಶ್ ಕತ್ತಿಯವರು ಹೇಳಿಕೊಂಡಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿಯಲ್ಲಿ 75 ವರ್ಷದವರೆಗೂ ಮುಖ್ಯಮಂತ್ರಿಯಾಗುವ ಅವಕಾಶ ಇದೆ. ಎಲ್ಲರಿಗೂ ಮುಖ್ಯಮಂತ್ರಿಯಾಗುವ ಆಸೆ ಇರುವ ಹಾಗೆ ನನಗೂ ಇದೆ ಎಂದು ಹೇಳಿದ್ದಾರೆ. ನಾನೂ ಯತ್ನಾಳ್ ಇಬ್ಬರು ಹಿರಿಯರಿದ್ದೀವಿ. ಆದರೆ, ಯತ್ನಾಳ್ ಗಿಂತ ನಾನು ಸೀನಿಯರ್ ಎಂದ ಅವರು ಸದ್ಯ …

Read More »

ಅಪ್ಪ ಕೊಡಿಸಿದ ಸೈಕಲ್‌ನಲ್ಲೇ ಊರು ಸುತ್ತುವ ರವೀಂದ್ರ ಕುಮಾರ್‌ :36 ವರ್ಷಗಳಿಂದ ಸೈಕಲೇ ಆಧಾರ

ಕಾರ್ಕಳ: ಪೋಸ್ಟ್‌ ಮ್ಯಾನ್‌ ಎಂದರೆ ನಡೆದುಕೊಂಡು, ಸೈಕಲ್‌ನಲ್ಲೇ ಹೋಗುತ್ತಿದ್ದ ಕಾಲವಿತ್ತು. ಆದರೆ ಈಗ ಸೈಕಲ್‌ನಲ್ಲಿ ಹೋಗುವವರು ಇಲ್ಲವೇ ಇಲ್ಲ ಎಂದು ಹೇಳಬಹುದು. ಮೋಟಾರು ವಾಹನಗಳ ಭರಾಟೆಯ ಈ ದಿನಗಳಲ್ಲಿ ಅಪ್ಪನ ಮೇಲಿನ ಪ್ರೀತಿಗೆ, ಅವರೇ ತೆಗೆಸಿಕೊಟ್ಟ ಸೈಕಲನ್ನು ಏರಿ ಕಳೆದ 36 ವರ್ಷಗಳಿಂದ ಅಂಚೆ ಬಟೆವಾಡೆ ಮಾಡುವ ಪೋಸ್ಟ್‌ಮ್ಯಾನ್‌ ಒಬ್ಬರು ಬೈಲೂರಿನಲ್ಲಿದ್ದಾರೆ. ನಿಟ್ಟೆ ನಿವಾಸಿ ರವೀಂದ್ರ ಕುಮಾರ್‌ ಅವರು. ಬೈಲೂರಿನ ಅಂಚೆ ಕಚೇರಿಯಲ್ಲಿ ಪೋಸ್ಟ್‌ ಮ್ಯಾನ್‌. ವಯಸ್ಸು 58. 1984ರಲ್ಲಿ …

Read More »

ಊಟದ ಪ್ಲೇಟು ತೊಳೆಯಲು ಹೋದಾಗ ಕಾಲು ಜಾರಿ ನೀರುಪಾಲಾದ ಬಾಲಕ

ರಾಮದುರ್ಗ: ರಾಮದುರ್ಗ ತಾಲೂಕಿನ ಸುರೇಬಾನದ ಹತ್ತಿರ ಕೊಳಚಿ ಕೆನಾಲ್ ನಲ್ಲಿ ಕಾಲು ಜಾರಿಬಿದ್ದು ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಮಹಾಂತೇಶಗೌಡ ಪಾಟೀಲ (11) ಮೃತ ಬಾಲಕ. ಈತ ಸುರೇಬಾನದ ಪ್ರಗತಿ ವಿದ್ಯಾಲಯದಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದ. ಶುಕ್ರವಾರ ಬೆಳಿಗ್ಗೆ ವಿದ್ಯಾಗಮ ತರಗತಿಗೆ ಹಾಜರಾಗಿ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಕೆನಾಲ್ ಹತ್ತಿರ ಇರುವ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತಂದೆ ಹಾಗೂ ಚಿಕ್ಕಪ್ಪನಿಗೆ ಮನೆಯಿಂದ ಊಟ ತೆಗೆದುಕೊಂಡು ಬಂದಿದ್ದಾನೆ. …

Read More »

ಸಿಸಿಬಿಗೆ ಪೊಲೀಸ್ ಠಾಣೆಯ ಸ್ಥಾನಮಾನವಿಲ್ಲ : ಆದೇಶ ನೀಡಿದ ಹೈಕೋರ್ಟ್‌ ಏಕಸದಸ್ಯ ಪೀಠ

ಬೆಂಗಳೂರು: ಸಿಸಿಬಿಗೆ ಪೊಲೀಸ್ ಠಾಣೆಯ ಸ್ಥಾನಮಾನವಿಲ್ಲ ಎಂದು ಹೈಕೋರ್ಟ್‌ ಏಕಸದಸ್ಯ ಪೀಠ ಆದೇಶ ನೀಡಿದೆ. ಜೊತೆಗೆ, ಸಿಸಿಬಿಗ ಚಾರ್ಜ್‌ಶೀಟ್‌ ಆಧರಿಸಿದ್ದ ವಿಚಾರಣೆಯನ್ನು ಸಹ ಕೋರ್ಟ್​ ರದ್ದುಪಡಿಸಿದೆ. ಎಂಬಿಬಿಎಸ್ ಪ್ರವೇಶಕ್ಕೆ ಡೊನೇಷನ್ ಸಂಗ್ರಹ ಆರೋಪದಡಿ ಕೆ. ಆರ್. ಚೌಧರಿ ಎಂಬುವವರ ದೂರು ಆಧರಿಸಿ ಚಾರ್ಜ್‌ಶೀಟ್‌ ದಾಖಲಾಗಿತ್ತು. ಸಿಸಿಬಿ ಪೊಲೀಸರು ಒಕ್ಕಲಿಗರ ಸಂಘದ ಡಾ.ಎಂ.ಜಿ.ಗೋಪಾಲ್, ಡಾ.ಅಪ್ಪಾಜಿ ಗೌಡ ಮತ್ತು ಡಾ.ನಿಸರ್ಗ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ್ದರು.ಇದೀಗ, ನ್ಯಾ.ಬಿ.ಎ.ಪಾಟೀಲ್‌ರವರಿದ್ದ ಏಕಸದಸ್ಯ ಪೀಠ ಆದೇಶ ಒಕ್ಕಲಿಗರ ಸಂಘದ …

Read More »