Breaking News

ಗಾಜಿನ ಮನೆಯಲ್ಲಿ ಕುಳಿತು ಬಿಜೆಪಿ ಬೇರೊಂದು ಪಕ್ಷದತ್ತ ಕಲ್ಲು ಎಸೆಯುವುದು ಬೇಡ – ಸುದರ್ಶನ್

Spread the love

ಕೋಲಾರ ಜ.22 (ಹಿ.ಸ): ಭಾರತೀಯ ಜನತಾ ಪಕ್ಷ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುವ ಬದಲು ಅವರ ಪಕ್ಷದ ಆಂತರಿಕ ವಿಷಯಗಳನ್ನು ಸರಿಪಡಿಸಿಕೊಳ್ಳಲು ಗಾಜಿನ ಮನೆಯಲ್ಲಿ ಕುಳಿತು ಇತರರ ಮೇಲೆ ಕಲ್ಲು ಎಸೆದರೆ ಕಲ್ಲು ಎಸೆದವರಿಗೆ ನಷ್ಠ. ಮತ್ತೊಂದು ಪಕ್ಷವನ್ನು ಟೀಕಿಸುವ ಮೊದಲು ಬಿಜೆಪಿ ತನ್ನ ಬಗ್ಗೆ ಗಮನಿಸಲಿ ಎಂದು ವಿಧಾನ ಪರಿಷತ್ ಮಾಜಜಿ ಉಪ ಸಭಾಪತಿ ವಿ.ಆರ್.ಸುದರ್ಶನ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.

ಕೋಲಾರ ತಾಲ್ಲೂಕಿನ ವೇಮಗಲ್‍ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಕಚೇರಿಯಲ್ಲಿ ಏನೇ ಬೆಳೆವಣಿಗೆಯಾದಾಗ ಅದು ಅಂತರಿಕ ವಿಚಾರ, ಸರ್ಕಾರದ ಮಂತ್ರಿ ಮಂಡಳಿ ಸಾರ್ವಜನಿಕರ ಹಿತಾಸಕ್ತಿಗೆ ಒಳಪಟ್ಟಿದೆ. ಆಡಳಿತ, ಅಭಿವೃದ್ಧಿ, ಸರ್ಕಾರಕ್ಕೆ ಒಳಪಟ್ಟದು, ಖಾತೆಗಳನ್ನು ಹಂಚಿಕೆ ಮಾಡುವ ಪರಮಾಧಿಕಾರ ಮುಖ್ಯಮಂತ್ರಿಗಳಿಗೆ ಇದೆ, ಅದನ್ನು ವಿವೇಚನೆಯಿಂದ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸನ್ನೇ ಗುರಿಯಾಗಿಸಿಕೊಂಡು ಕುಟುಂಬದ ರಾಜಕಾರಣ ಮಾಡುವುದು ಸರಿಯಲ್ಲ, ನೆಹರು, ರಾಜೀವ್‍ಗಾಂಧಿ ಮನೆಯವು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ, ಒಂದು ಕುಟುಂಬದ ರಾಜಕಾರಣದ ಬಗ್ಗೆ ಮಾತನಾಡುವುದು ಬೇಜವಬ್ದಾರಿತನ, ಸಾಮಾಜಿಕ, ರಾಜಕೀಯವಾಗಿ ದೊಡ್ಡ ಜವಾಬ್ದಾರಿಯಿದೆ, ಅದನ್ನು ವ್ಯಂಗ್ಯ ಮಾಡುವುದು ಸರಿಯಲ್ಲ, ಗಜಿನ ಮನೆಯಲ್ಲಿ ಕುಳಿತುಕೊಂಡು ಯಾರಿಗೆ ಕಲ್ಲು ಹೋಡೆಯುತ್ತಿದ್ದಾರೆ, ಪ್ರಾದೇಶಿಕ ಪಕ್ಷಗಳು ಈಗ ಯಾವ ಮಟ್ಟದಲ್ಲಿ ಇದೆ, ತಾವು ಗಾಜಿನ ಮನೆಯಲ್ಲಿ ಕುಳಿತುಕೊಂಡು ಕಲ್ಲು ಹೊಡೆಯುವುದನ್ನು ಬಿಡಬೇಕು, ಮತ್ತೊಂದು ಪಕ್ಷದ ನಾಯಕರ ಮೇಲೆ ಆರೋಪ ಮಾಡುವ ಮೊದಲು ನಿಮ್ಮ ಮನೆಯಲ್ಲಿನ ವ್ಯತ್ಯಾಸಗಳನ್ನು ಸರಿ ಮಾಡಿಕೊಳ್ಳಿ ಎಂದು ತಿರುಗೇಟು ನೀಡಿದರು.

ರಾಜ್ಯದಲ್ಲಿ ಈಗಾಗಲೇ ಆಡಳಿತ ಕುಸಿದಿದೆ, ಅಭಿವೃದ್ಧಿ ಕುಂಠಿತಗೊಂಡಿದೆ, ಖಾತೆಗಳನ್ನು ಹಂಚಿಕೆ ಮಾಡಿರುವುದು ನಗೆ ಪಾಟಲಿಗೆ ಒಳಗಾಗಿದೆ, ಯಾವುದೇ ಒಂದು ಸಚಿವ ಒಂದು ಇಲಾಖೆಗೆ ಸಿಮಿತವಾಗಿರುವುದಿಲ್ಲ, ಇಲಾಖೆ ಜತೆಗೆ ಇಡೀ ರಾಜ್ಯದಲ್ಲಿನ ಅಗುಹೋಗುಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬೇಕು, ಸರ್ಕಾರವನ್ನು ಸರಿ ದಾರಿಗೆ ತೆಗೆದು ಹೋಗಲು ಅವಕಾಶಗಳು ಇವೆ ಎಂದರು.

ಇದು ಹೀಗೆ ಮುಂದುವರೆದರೆ ಸರ್ಕಾರವನ್ನು ವಿಸರ್ಜಿಸುವುದುರದ್ದುಗೊಳಿಸುವುದು ಉತ್ತಮ, ಜನಕ್ಕೆ ಈಗಾಗಲೇ ಸರ್ಕಾರದ ಮೇಲೆ ವಿಶ್ವಾಸವಿಲ್ಲ, ಹೊಸ ಜನ ದೇಶವನ್ನು ಪಡೆದುಕೊಳ್ಳಲು ಜನಕ್ಕೆ ಅವಕಾಶ ನೀಡೊಣ, ದೀರ್ಘಕಾಲ ವಿರೋಧ ಪಕ್ಷದಲ್ಲಿದ್ದು ಕೆಲಸ ಮಾಡಿದ್ದಾರೆ, ಹೋರಾಟ ಮಾಡಿಯೇ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ, ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

 


Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ