Breaking News
Home / 2021 / ಜನವರಿ / 22 (page 3)

Daily Archives: ಜನವರಿ 22, 2021

ಶಾಸಕ ರೇಣಕಾಚಾರ್ಯ ಜೊತೆ ರಮೇಶ್ ಜಾರಕಿಹೊಳಿ ಎನ್ ಮಾತಾಡಿದ್ರು ಗೊತ್ತಾ..?

ಲೈವ್ ಪಿಕ್ಸ್ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ‌ ಅವರ ಸದಾಶಿವ ನಗರದ ಗೃಹಕಚೇರಿಯಲ್ಲಿ ಶಾಸಕರ ಸಭೆ. ಶಾಸಕರಾದ‌ ಡಾ ಶಿವರಾಜ್ ಪಾಟೀಲ್, ಮಹೇಶ್ ಕುಮಠಳ್ಳಿ, ರೇಣುಕಾಚಾರ್ಯ, ರಾಜುಗೌಡರ ಜೊತೆ ಮಾತುಕತೆ. ಹೊನ್ನಾಳಿಯ ಏತ ನೀರಾವರಿ ಯೋಜನೆಗೆ ಇಂದಿನ ಸಚಿವ ಸಂಪುಟದ ಸಭೆಯಲ್ಲಿ ಅನುದಾನ ಕೊಡಿಸಿರುವುದಕ್ಕೆ ಸಚಿವರನ್ನು ಅಭಿನಂದಿಸಿದ ರೇಣುಕಾಚಾರ್ಯ.

Read More »

ಆನ್‌ಲೈನ್ ಮೂಲಕ ವಿದ್ಯಾರ್ಥಿ ಬಸ್‌ಪಾಸ್

ಬೆಂಗಳೂರು,ಜನವರಿ 22: ಆನ್‌ಲೈನ್ ಮೂಲಕ ವಿದ್ಯಾರ್ಥಿ ಬಸ್‌ಪಾಸ್ ಪಡೆಯಿರಿ ಎಂದು ಬಿಎಂಟಿಸಿ ಹೇಳಿದೆ. ಪ್ರಸಕ್ತ ಸಾಲಿನ ವಿದ್ಯಾರ್ಥಿ ಬಸ್‌ಪಾಸ್‌ಗೆ ಅರ್ಜಿ ಸಲ್ಲಿಸಲು ಜನವರಿ 31 ಅಂತಿಮ ದಿನಾಂಕವಾಗಿದೆ. ಕೊರೊನಾ ಲಾಕ್‌ಡೌನ್ ಮುಗಿದು ಶಾಲೆ, ಕಾಲೇಜುಗಳ ಆರಂಭವಾದ ಕೆಲವು ದಿನಗಳು ಕಳೆದ ವರ್ಷದ ಬಿಎಂಟಿಸಿ ಬಸ್‌ ಪಾಸ್ ಅಥವಾ ಕಾಲೇಜಿನ ಶುಲ್ಕ ರಶೀದಿ ಅಥವಾ ಕಾಲೇಜು ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದು ಎಂದು ಹೇಳಿತ್ತು. ಇದೀಗ ಆನ್‌ಲೈನ್ ಮೂಲಕ ಬಸ್ ಪಾಸ್ …

Read More »

ಅನಾರೋಗ್ಯಕ್ಕೆ ಒಳಗಾದ ಶಶಿಕಲಾಗೆ ಕೋವಿಡ್ ಸೋಂಕು ಪತ್ತೆ

ಬೆಂಗಳೂರು, ಜನವರಿ 21: ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆಪ್ತೆ ಮತ್ತು ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರು ಕೋವಿಡ್-19 ಸೋಂಕಿಗೆ ಒಳಗಾಗಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಶಶಿಕಲಾ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಗುರುವಾರ ರಾತ್ರಿ ಅವರ ಕೋವಿಡ್ ಪರೀಕ್ಷೆ ವರದಿ ಬಂದಿದ್ದು, ಅವರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಕೋವಿಡ್ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ …

Read More »

ಪುಣೆ ಸೆರಂ ಇನ್ ಸ್ಟಿಟ್ಯೂಟ್ ಬೆಂಕಿ ಅವಘಡ; ಐವರು ಕಾರ್ಮಿಕರ ದುರ್ಮರಣ

ಪುಣೆ, ಜನವರಿ 21: ಕೊರೊನಾ ವೈರಸ್ ಲಸಿಕೆ ಕೋವಿಶೀಲ್ಡ್ ಸೇರಿದಂತೆ ಅನೇಕ ಪ್ರಮುಖ ಲಸಿಕೆಗಳನ್ನು ಉತ್ಪಾದಿಸುತ್ತಿರುವ ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಘಟಕದಲ್ಲಿ ಭಾರಿ ಬೆಂಕಿ ಅನಾಹುತ ಸಂಭವಿಸಿ ಐವರು ಮೃತಪಟ್ಟ ಘಟನೆಯ ಬಳಿಕ ಮತ್ತೊಮ್ಮೆ ಬೆಂಕಿ ಕಾಣಿಸಿಕೊಂಡಿದೆ. ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಗುರುವಾರ ಬೆಂಕಿ ಅವಘಡ ಉಂಟಾಗಿತ್ತು. ಘಟನೆಯಲ್ಲಿ ಐವರು ದಹನವಾಗಿದ್ದರೆ, ಉಳಿದ ಅನೇಕರನ್ನು ರಕ್ಷಿಸಲಾಗಿತ್ತು. ಈ ಘಟನೆಯು ಕೋವಿಶೀಲ್ಡ್ ಲಸಿಕೆಯ ಉತ್ಪಾದನೆಗೆ ಯಾವುದೇ ತೊಡಕು ಉಂಟುಮಾಡುವುದಿಲ್ಲ …

Read More »

ವಾಟ್ಸ್‌ಆಯಪ್‌ ಹೊಸ ನೀತಿ: ಕಳವಳ ವ್ಯಕ್ತಪಡಿಸಿದ ಸಂಸದೀಯ ಸಮಿತಿ

ನವದೆಹಲಿ: ವಾಟ್ಸ್‌ ಆಯಪ್ ನೀತಿಯಲ್ಲಿ ಖಾಸಗಿತನಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪ್ರಸ್ತಾಪಿಸಲಾಗಿರುವ ಬದಲಾವಣೆಗಳ ಕುರಿತು ಸಂಸದೀಯ ಸಮಿತಿಯ ಸದಸ್ಯರು ಕಳವಳ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ. ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿ ಎದುರು ವಾಟ್ಸ್‌ಆಯಪ್‌ನ ಪ್ರತಿನಿಧಿ ಹಾಜರಾಗಿದ್ದು, ‘ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ನೀತಿಯನ್ನು ಪ್ರಸ್ತಾಪಿಸಲಾಗಿದೆ. ವಾಟ್ಸ್‌ಆಯಪ್‌ ಚಾಟ್‌ ಹಾಗೂ ಕರೆಗಳು ಆಗಲೂ ಎಂಡ್‌-ಟು-ಎಂಡ್‌ ಎನ್‌ಕ್ರಿಪ್ಟೆಡ್‌ (ಬೇರೆಯವರು ಸಂದೇಶ ನೋಡಲು ಆಗುವುದಿಲ್ಲ) ಆಗಿರಲಿದೆ ಎಂದಿದ್ದಾರೆ. ಭಾರತೀಯ ಬಳಕೆದಾರರಿಗೆ ಅನುಕೂಲಕರವಲ್ಲದ ಬದಲಾವಣೆಗಳನ್ನು ಪ್ರಸ್ತಾಪಿಸಿರುವ ಬಗ್ಗೆ …

Read More »

ಎಸ್ಸೆಸ್ಸೆಲ್ಸಿಗೆ ಈ ಬಾರಿ ವಿದ್ಯಾರ್ಥಿಸ್ನೇಹಿ ಪ್ರಶ್ನೆಪತ್ರಿಕೆ’

ಶಿವಮೊಗ್ಗ: ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಬುಧವಾರ ನಡೆದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಜತೆಗಿನ ಶೈಕ್ಷಣಿಕ ಸಂವಾದದಲ್ಲಿ ಶಿಕ್ಷಕರು, ಶಾಲಾ, ಕಾಲೇಜುಗಳ ಹಲವು ಸಮಸ್ಯೆಗಳು ಅನಾವರಣಗೊಂಡವು. ಶಿಕ್ಷಕರ ವೇತನ ವಿಳಂಬ, ಅತಿಥಿ ಶಿಕ್ಷಕರ ನೇಮಕ, ಶಾಲಾ ಆರಂಭದ ಸಿದ್ಧತೆಗಳಲ್ಲಿನ ತೊಡಕುಗಳು, ಅನುದಾನ ರಹಿತ ಶಾಲಾ ಶಿಕ್ಷಕರ ವೇತನ, ಶಾಲೆಗಳ ಶುಲ್ಕ ನಿಗದಿ ಮತ್ತಿತರ ವಿಚಾರಗಳು ಪ್ರತಿಧ್ವನಿಸಿದವು. ತೀರ್ಥಹಳ್ಳಿ ತಾಲ್ಲೂಕು ಹೊಸೂರು ಗುಡ್ಡೇಕೇರಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಚ್‌.ಪಿ. ಮಂಜುಬಾಬು, …

Read More »

ಪೊಗರು ಸಿನಿಮಾ 1000ಕ್ಕಿಂತ ಹೆಚ್ಚು ಥಿಯೇಟರ್‌ನಲ್ಲಿ ಪ್ರದರ್ಶನವಾಗಲಿದೆ.

ಫೆಬ್ರವರಿ 19 ರಂದು ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ತೆರೆಕಾಣುತ್ತಿದೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಪೊಗರು ಬಿಡುಗಡೆಯಾಗುತ್ತಿದೆ. ವಿಶೇಷ ಅಂದ್ರೆ ಪೊಗರು ಸಿನಿಮಾ 1000ಕ್ಕಿಂತ ಹೆಚ್ಚು ಥಿಯೇಟರ್‌ನಲ್ಲಿ ಪ್ರದರ್ಶನವಾಗಲಿದೆ. ಬುಧವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಆಯೋಜಿಸಿದ್ದ ಪೊಗರು ಚಿತ್ರತಂಡ ಈ ಕುರಿತು ಮಾಹಿತಿ ಹಂಚಿಕೊಂಡಿದೆ. ಪೊಗರು ಚಿತ್ರದಲ್ಲಿ ಧ್ರುವ ಸರ್ಜಾ ಬಾಡಿ ಟ್ರಾನ್ಸ್‌ಫರ್‌ಮೇಶನ್‌ಗೆ ಹೆಚ್ಚು ಒತ್ತು ನೀಡಿದ್ದು, ಹಾಗಾಗಿ, ಸಿನಿಮಾ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ. ಪೊಗರು ಚಿತ್ರದಲ್ಲಿ …

Read More »

ಬಾಂಬೆ ಹೈಕೋರ್ಟ್‌ ನಲ್ಲಿ ಹಿನ್ನಡೆ: ಸಂಕಷ್ಟದಲ್ಲಿ ಸೋನು ಸೂದ್

ಕೊರೊನಾ ಲಾಕ್‌ಡೌನ್ ಕಾಲದಲ್ಲಿ ಸಹಸ್ರಾರು ಜನರಿಗೆ ಸಹಾಯ ಮಾಡಿ ‘ಮಸ್ಸೀಹಾ’ (ದೇವರು) ಎನಿಸಿಕೊಂಡಿದ್ದ ನಟ ಸೋನು ಸೂದ್‌ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಟ ಸೋನು ಸೂದ್ ಗೆ ಸೇರಿದ ಮುಂಬೈನಲ್ಲಿನ ಸ್ಟಾರ್ ಹೋಟೆಲ್‌ಗೆ ಮುಂಬೈ ಮಹಾನಗರ ಪಾಲಿಕೆಯು ನೊಟೀಸ್ ಜಾರಿ ಮಾಡಿದ್ದು. ಸೋನು ಸೂದ್ ಅವರ ಹೋಟೆಲ್ ಕಟ್ಟಡವು ಅಕ್ರಮವಾಗಿ ಕಟ್ಟಲ್ಪಟ್ಟಲಾಗಿದೆ ಎಂದು ಬಿಎಂಸಿ ಆರೋಪಿಸಿದೆ. ಬಿಎಂಸಿಯ ನೊಟೀಸ್‌ ಅನ್ನು ಪ್ರಶ್ನಿಸಿ, ಬಿಎಂಸಿ ನೊಟೀಸ್‌ ಗೆ ತಡೆ ನೀಡಬೇಕು ಎಂದು …

Read More »

ಮಗುವಿಗೆ ಜನ್ಮ ನೀಡಿದ ಬಳಿಕ ಮೊದಲ ಬಾರಿಗೆ ಕ್ಯಾಮರಾ ಮುಂದೆ ಕಾಣಿಸಿಕೊಂಡ ನಟಿ ಅನುಷ್ಕಾ ಶರ್ಮಾ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ಮಗಳು ಜನಿಸಿದ ಸಂತಸದಲ್ಲಿದ್ದಾರೆ. ಮೊದಲ ಮಗುವನ್ನು ಸ್ವಾಗತ ಮಾಡಿದ ವಿರುಷ್ಕಾ ದಂಪತಿ ಮಗಳ ಫೋಟೊವನ್ನು ರಿವೀಲ್ ಮಾಡಿಲ್ಲ. ಕ್ಯಾಮರಾ ಕಣ್ಣಿನಿಂದ ದೂರ ಇರುವ ಅನುಷ್ಕಾ ಮತ್ತು ವಿರಾಟ್ ಇದೀಗ ಮಗಳು ಜನಿಸಿದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಜನವರಿ 11 ಮಧ್ಯಾಹ್ನ ಅನುಷ್ಕಾ ಶರ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಜನಿಸಿದ ಬಳಿಕ ವಿರಾಟ್ ಮಗಳು …

Read More »

ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಶುಭ ಕೋರಿದ ರಾಹುಲ್​ ಗಾಂಧಿ​

ನವದೆಹಲಿ: ವಿಶ್ವದ ದೊಡ್ಡಣ್ಣ ಅಮೆರಿಕ ದೇಶದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಜೋ ಬೈಡನ್ ಅವರಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಇಂದು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಅಮೆರಿಕ ಪ್ರಜಾಪ್ರಭುತ್ವದಲ್ಲಿ ಹೊಸ ಅಧ್ಯಾಯದ ಆರಂಭವಾಗಿದೆ ಎಂದು ಅವರು ತಿಳಿಸಿದರು. ಅದುವಲ್ಲದೇ ಭಾರತ ಮೂಲದ ಅಮೆರಿಕದ ಮೊದಲ ಉಪಾಧ್ಯಕ್ಷೆ ಆಗಿ ಪದಗ್ರಹಣ ಮಾಡಿರುವ ಕಮಲಾ ಹ್ಯಾರಿಸ್ ಅವರಿಗೂ ಶುಭಾಶಗಳನ್ನು ಕೋರಿದ್ದಾರೆ. ಅಮೆರಿಕದ …

Read More »