Breaking News

Daily Archives: ಜನವರಿ 22, 2021

ಎಲ್ಲಾ ಬಗೆಯ ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ರಾಜ್ಯದಲ್ಲಿ ಎಲ್ಲಾ ಬಗೆಯ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಕುರಿತು ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯ ಉಚ್ಛ ನ್ಯಾಯಾಲಯ ನಿರ್ದೇಶಿಸಿದೆ. ಪರಿಸರ ಹಾಗೂ ಸಾರ್ವಜನಿಕರ ಆರೋಗ್ಯದ ವಿಚಾರವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಲು ಹೈಕೋರ್ಟ್ ಸೂಚಿಸಿದೆ.ಎಲ್ಲಾ ಬಗೆಯ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಕುರಿತು ಮೂರು ತಿಂಗಳ ಒಳಗೆ ನಿರ್ಧಾರ ಕೈಗೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

Read More »

ಪೊಕೊ ಸಿ3 : ಒಂದು ಮಿಲಿಯನ್ ಯೂನಿಟ್‌ಗಳ ಮಾರಾಟ

ಬೆಂಗಳೂರು: ಭಾರತದ 3ನೇ ಅತ್ಯಂತ ದೊಡ್ಡ ಆನ್‌ಲೈನ್ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ಪೊಕೊ, ಪೊಕೊ ಸಿ3 ಯ 1 ಮಿಲಿಯನ್‌ (10 ಲಕ್ಷ) ಗೂ ಅಧಿಕ ಯೂನಿಟ್‌ಗಳು ಮಾರಾಟವಾಗಿವೆ. ಇತ್ತೀಚೆಗೆ ಬಿಡುಗಡೆಯಾದ ಪೊಕೊ ಸಿ3 ರೂ.10000ಕ್ಕಿಂತ ಕಡಿಮೆ ಬೆಲೆಯ ದರಪಟ್ಟಿಯಲ್ಲಿ ತನ್ನದೇ ಆದ ಸ್ಥಾನ ಪಡೆದಿದೆ. 6.53 ಇಂಚು ಎಚ್.ಡಿ+ಎಲ್‌ಸಿಡಿ ಡಿಸ್ ಪ್ಲೇ, ಹೀಲಿಯೊ ಜಿ35 ಚಿಪ್‌ಸೆಟ್, 5,000 ಎಂಎಎಚ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಮಾಡಲ್‍ ಹಣಕ್ಕೆ ತಕ್ಕ …

Read More »

ವೇದಾವತಿ ಕಣಿವೆ ಮೂಲಕ ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಜಲಾಶಯಕ್ಕೆ ನೀರು

ಹಾಸನ: ಮುಂದಿನ ಮಳೆಗಾಲದಲ್ಲಿ ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಜಲಾಶಯಕ್ಕೆ ವೇದಾವತಿ ಕಣಿವೆ ಮೂಲಕ ತಾತ್ಕಾಲಿಕವಾಗಿ ನೀರು ಹರಿಸಲಾಗುತ್ತದೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಶುಕ್ರವಾರ ಜಿಲ್ಲೆಯ ಬೇಲೂರು ತಾಲೂಕಿನ ಎತ್ತಿನಹೊಳೆ ಯೋಜನಾ ಕಾಮಗಾರಿಯನ್ನು ಪರಿವೀಕ್ಷಿಸಿದ ಸಚಿವರು, ಸುದ್ದಿಗಾರರೊಂದಿಗೆ ಮಾತನಾಡಿದರು. ಎತ್ತಿನಹೊಳೆ ಯೋಜನೆಯ ಹಂತ-1ರ ಕಾಮಗಾರಿಗಳು ಮತ್ತು ಹಂತ-2ರ 33 ಕಿ.ಮೀ.ವರೆಗಿನ ಗುರುತ್ವಾ ಕಾಲುವೆ ಕಾಮಗಾರಿಗಳನ್ನು ಮೇ ತಿಂಗಳೊಳಗೆ ಪೂರ್ಣಗೊಳಿಸಲಾಗುತ್ತದೆ. ಪ್ರಾಯೋಗಿಕ ನೀರನ್ನು ವೇದಾವತಿ ಕಣಿವೆಯ …

Read More »

ದೇಶದಲ್ಲಿ ಉತ್ತಮ ಆಡಳಿತ ನೀಡಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಆ ಕಾಲ ಮರುಕಳಿಸಲಿ: ಶಾಸಕ ಸತೀಶ ಜಾರಕಿಹೊಳಿ ಬಣ್ಣನೆ ಸಿದ್ದರಾಮಯ್ಯ ನೇತೃತ್ವದಲ್ಲಿ 5 ವರ್ಷ ಕಾಂಗ್ರೆಸ್ ದೇಶಕ್ಕೆ ಮಾದರಿ

ಚಿಕ್ಕೋಡಿ:  ಸಿದ್ದರಾಮಯ್ಯ ನೇತೃತ್ವದಲ್ಲಿ ಐದು ವರ್ಷ ಪೈರೈಸಿದ  ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಉತ್ತಮ ಆಡಳಿತ ನೀಡಿದ ಉದಾಹರಣೆ ಇದೆ. ಅದೇ ರೀತಿ ಮತ್ತೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ಯಕ್ಸಂಬಾ ಪಟ್ಟಣದಲ್ಲಿ ಶುಕ್ರವಾರ ನಡೆದ ನೂತನ ಗ್ರಾಮ ಪಂಚಾಯತಿ ಸದಸ್ಯರಿಗೆ ಸತ್ಕಾರ ಹಾಗೂ ಅನ್ನಪೂರ್ಣೇಶ್ವರಿ ಸಂಸ್ಥೆ ಆಯೋಜಿಸಿರುವ ಹೊಲಿಗೆ ಯಂತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ಹಿಂದೆ ಕಾಂಗ್ರೆಸ್ …

Read More »

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮೇ 29ರಂದು ಚುನಾವಣೆ

ಹೊಸದಿಲ್ಲಿ : ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಮೇ 29ರಂದು ಚುನಾವಣೆ ನಡೆಸುವ ಪ್ರಸ್ತಾವವನ್ನು ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಮುಂದಿಟ್ಟಿದೆ.   ಇದೇ ದಿನವೇ ಎಐಸಿಸಿ ಅಧಿವೇಶನ ನಡೆಸಲು ಉದ್ದೇಶಿಸಲಾಗಿದೆ. ಈ ಎರಡು ವಿಷಯಗಳ ಬಗ್ಗೆ ಕಾಂಗ್ರೆಸ್‌ ಕಾರ್ಯಕಾರಿ (ಸಿಡಬ್ಲ್ಯೂಸಿ) ಸಮಿತಿ ಸಭೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ.   ಸಭೆಯಲ್ಲಿ ಪ್ರಸ್ತುತ ರಾಜಕೀಯ ಪರಿಸ್ಥಿತಿ, ಕೃಷಿ ಕಾಯ್ದೆಗಳು ಹಾಗೂ ರೈತರ ಪ್ರತಿಭಟನೆ, ಸಂಸತ್‌ನ ಬಜೆಟ್‌ ಅಧಿವೇಶನದಲ್ಲಿ ಪಕ್ಷದ ಕಾರ್ಯತಂತ್ರ ಮುಂತಾದ …

Read More »

ಶಾರ್ಟ್ ಸರ್ಕಿಟ್ : ಸುಟ್ಟು ಕರಕಲಾದ 150 ಎಕರೆ ಪ್ರದೇಶದ ಮೇವು

ಚಿಕ್ಕೋಡಿ : ಗಾಳಿ ವಿದ್ಯುತ್ ಉತ್ಪಾದನಾ ಘಟಕದಲ್ಲಿ (ವಿಂಡ ಪಾವರ್) ಶಾರ್ಟ್ ಸರ್ಕಿಟ್ ದಿಂದ ಲಕ್ಷಾಂತರ ರೂ.ಮೌಲ್ಯದ 150 ಎಕರೆ ಪ್ರದೇಶದಲ್ಲಿ ಬೆಳೆದಿರುವ ಹುಲ್ಲು ಗಾವಲು ಸುಟ್ಟು ಕರಕಲಾಗಿದೆ. ತಾಲ್ಲೂಕಿನ ಜೈನಾಪೂರ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಸಂಭವಿಸಿದೆ. ಬೇಸಿಗೆ ಕಾಲದಲ್ಲಿ ಜೈನಾಪೂರ ಗ್ರಾಮದ ಜಾನುವಾರುಗಳಿಗೆ ಮೇವು ಪೂರೈಕೆ ಮಾಡುತ್ತಿದ್ದ ಬೆಟ್ಟದಲ್ಲಿನ ಹುಲ್ಲು ಸುಟ್ಟು ಕರಕಲಾಗಿದ್ದು, ಜಾನುವಾರುಗಳಿಗೆ ಮೇವು ಇಲ್ಲದೆ ಗ್ರಾಮದ ರೈತರು ಕಂಗಾಲಾಗಿದ್ದಾರೆ. ರೈತರು ಬೇಸಿಗೆಯಲ್ಲಿ ಅದೇ ಮೇವಿನ ಮೇಲೆ …

Read More »

ಗೋಕಾಕ 33 ಗ್ರಾಮ ಪಂಚಾಯತಿ ಮೀಸಲಾತಿ ಪ್ರಕಟ: ಇಲ್ಲಿದೆ ಫುಲ್ ಡಿಟೇಲ್ಸ್!!

ಗೋಕಾಕ: ತಾಲೂಕಿನ 33 ಗ್ರಾಮ ಪಂಚಾಯತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿದೆ. ಇಲ್ಲಿನ ಶುಗರ್ ಪ್ಯಾಕ್ಟರಿ ಕ್ರಾಸ್ ಘಟಪ್ರಭಾ ರಸ್ತೆ ಸಮೀಪದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಮೀಸಲಾತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮೀಸಲಾತಿ ಪ್ರಕಟಿಸಿದರು.   ತಳಕಟ್ನಾಳ ಗ್ರಾ.ಪಂ ಅಧ್ಯಕ್ಷ (ಹಿಂದುಳಿದ‘ಅ’ವರ್ಗ), ಉಪಾಧ್ಯಕ್ಷ (ಎಸ್.ಸಿ.ಮಹಿಳೆ). ಖನಗಾಂವ- ಅಧ್ಯಕ್ಷ (ಹಿಂದುಳಿದ ‘ಅ’ವರ್ಗ),ಉಪಾಧ್ಯಕ್ಷ (ಸಾಮಾನ್ಯ ಮಹಿಳೆ) ಪಾಮಲದಿನ್ನಿ- ಅಧ್ಯಕ್ಷ (ಹಿಂದುಳಿದ ‘ಅ’ವರ್ಗ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ) ನಂದಗಾಂವ- ಅಧ್ಯಕ್ಷ (ಹಿಂದುಳಿದ ‘ಅ’ವರ್ಗ …

Read More »

ಮುಂದಿನ ಮಳೆಗಾಲದಲ್ಲಿ ವೇದಾವತಿ ಕಣಿವೆಯಿಂದ ವಾಣಿ ವಿಲಾಸ ಜಲಾಯಶಕ್ಕೆ ನೀರು : ಸಚಿವ ರಮೇಶ್ ಜಾರಕಿಹೊಳಿ

ಹಾಸನ : ಮುಂದಿನ ಮಳೆಗಾಲದಲ್ಲಿ ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಜಲಾಶಯಕ್ಕೆ ವೇದಾವತಿ ಕಣಿವೆ ಮೂಲಕ ತಾತ್ಕಾಲಿಕವಾಗಿ ನೀರು ಹರಿಸಲಾಗುತ್ತದೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಜಿಲ್ಲೆಯ ಬೇಲೂರು ತಾಲ್ಲೂಕಿನ ಎತ್ತಿನಹೊಳೆ ಯೋಜನಾ ಕಾಮಗಾರಿಯನ್ನು ಶುಕ್ರವಾರ ಪರಿವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯ ಹಂತ-1ರ ಕಾಮಗಾರಿಗಳು ಮತ್ತು ಹಂತ-2ರ 33 ಕಿ.ಮೀ.ವರೆಗಿನ ಗುರುತ್ವಾ ಕಾಲುವೆ ಕಾಮಗಾರಿಗಳನ್ನು ಮೇ ತಿಂಗಳೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದರು. ಪ್ರಾಯೋಗಿಕ ನೀರನ್ನು …

Read More »

ನನಗೂ ಸಿಎಂ ಆಗುವ ಆಸೆ ಇದೆ : ಸಚಿವ ಉಮೇಶ ಕತ್ತಿ

ತುಮಕೂರು : ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ. ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಸೀನಿಯರ್ ಇದಾರೆ. ಅವರಿಗಿಂತ ನಾನು ಸೀನಿಯರ್ ಇದ್ದೇನಿ. ಸಿಎಂ ಸ್ಥಾನಕ್ಕೆ ಯತ್ನಾಳ ಹಾಗೂ ನನಗೆ ಪೈಪೋಟಿ ನಡೆಯಲಿ ಎಂದು ನೂತನ ಸಚಿವ ಉಮೇಶ ಕತ್ತಿ ಹಾಸ್ಯವಾಗಿ ಹೇಳಿದರು. ತುಮಕೂರು ಸಿದ್ದಗಂಗಾ ಮಠಕ್ಕೆ ಶುಕ್ರವಾರ ಭೇಟಿ ನೀಡಿದ ಬಳಿ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಈಗ ಖಾಲಿ ಇಲ್ಲ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಬಿಜೆಪಿಯಲ್ಲಿ 75 ವರ್ಷದವರೆಗೂ …

Read More »

15 ಕೋಟಿ ರೂ. ವೆಚ್ಚದ ಗೋಸಬಾಳ ಗ್ರಾಮದಲ್ಲಿ 110 ಕೆವ್ಹಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

  ಗೋಕಾಕ : ತಾಲೂಕಿನ ಗೋಸಬಾಳ ಗ್ರಾಮದಲ್ಲಿ ಹೊಸ 110 ಕೆವ್ಹಿ ವಿದ್ಯುತ್ ಉಪಕೇಂದ್ರ ನಿರ್ಮಾಣದ ಬಳಿಕ ಈ ಭಾಗದ ಎಲ್ಲಾ ಗ್ರಾಮಗಳ ಸಾರ್ವಜನಿಕರಿಗೆ ನಿಗದಿತ ಪ್ರಮಾಣದ ನಿರಂತರ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಶುಕ್ರವಾರದಂದು ತಾಲೂಕಿನ ಗೋಸಬಾಳ ಗ್ರಾಮದಲ್ಲಿ ಕೆಪಿಟಿಸಿಎಲ್‍ನಿಂದ 15.09 ಕೋಟಿ ರೂ. ವೆಚ್ಚದ 110 ಕೆವ್ಹಿ ಉಪಕೇಂದ್ರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ …

Read More »