Breaking News
Home / Uncategorized / ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಶುಭ ಕೋರಿದ ರಾಹುಲ್​ ಗಾಂಧಿ​

ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಶುಭ ಕೋರಿದ ರಾಹುಲ್​ ಗಾಂಧಿ​

Spread the love

ನವದೆಹಲಿ: ವಿಶ್ವದ ದೊಡ್ಡಣ್ಣ ಅಮೆರಿಕ ದೇಶದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಜೋ ಬೈಡನ್ ಅವರಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಇಂದು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಅಮೆರಿಕ ಪ್ರಜಾಪ್ರಭುತ್ವದಲ್ಲಿ ಹೊಸ ಅಧ್ಯಾಯದ ಆರಂಭವಾಗಿದೆ ಎಂದು ಅವರು ತಿಳಿಸಿದರು.

ಅದುವಲ್ಲದೇ ಭಾರತ ಮೂಲದ ಅಮೆರಿಕದ ಮೊದಲ ಉಪಾಧ್ಯಕ್ಷೆ ಆಗಿ ಪದಗ್ರಹಣ ಮಾಡಿರುವ ಕಮಲಾ ಹ್ಯಾರಿಸ್ ಅವರಿಗೂ ಶುಭಾಶಗಳನ್ನು ಕೋರಿದ್ದಾರೆ.

ಅಮೆರಿಕದ ಉಪಾಧ್ಯಕ್ಷೆ ಸ್ಥಾನ ವಹಿಸುತ್ತಿರುವ ದಕ್ಷಿಣ ಏಷ್ಯಾದ ಮೊದಲ ಮಹಿಳಾ ಉಪಾಧ್ಯಕ್ಷೆ ಹಾಗೂ ಮೊದಲ ಕಪ್ಪುವರ್ಣೀಯ ಎಂಬ ಹಿರಿಮೆಗೂ ಕಮಲಾ ಹ್ಯಾರಿಸ್ ಪಾತ್ರವಾಗಿದ್ದಾರೆ.


Spread the love

About Laxminews 24x7

Check Also

ಉಚಿತ ಭಾಗ್ಯ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿ

Spread the love Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ