Breaking News
Home / 2021 / ಜನವರಿ / 21 (page 3)

Daily Archives: ಜನವರಿ 21, 2021

ಸಚಿವ ಕೋಟ ವಿರುದ್ಧ ಕಿಡಿಗೇಡಿಗಳ ಅಂತರ್ಜಾಲ ಅಪಪ್ರಚಾರಕ್ಕೆ ವ್ಯಾಪಕ ಖಂಡನೆ

ಸಚಿವ ಕೋಟ ವಿರುದ್ಧ ಕಿಡಿಗೆಡಿಗಳ ಅಂತರ್ಜಾಲ ಅಪಪ್ರಚಾರಕ್ಕೆ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಖಂಡನೆ ಉಡುಪಿ; ದ.ಕ ಜಿಲ್ಲಾಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ಅವಹೇಳನ ಬರಹವನ್ನು ಫೇಸ್‌ಬುಕ್ ಖಾತೆಯಲ್ಲಿ ಹರಿಬಿಟ್ಟ ಅನಿಲ್ ಕುಮಾರ್ ಶೆಟ್ಟಿ ಎನ್ನುವನ ವಿರುದ್ಧ ವ್ಯಾಪಕ ಟೀಕೆ ಹಾಗೂ ಖಂಡನೆ ವ್ಯಕ್ತವಾಗಿದ್ದು ಅದರಂತೆ ಬಿಜೆಪಿ‌ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ಈ ಬಗ್ಗೆ ಶೀಘ್ರ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಸಚಿವ ಕೋಟ ಈ …

Read More »

ಬಜೆಟ್ 2021: ಆನ್‌ಲೈನ್ ಶಿಕ್ಷಣದ ನಿರೀಕ್ಷೆಗಳೇನು?

ನವದೆಹಲಿ, ಜನವರಿ 20: ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಭಾರೀ ಆರ್ಥಿಕ ಹಾನಿ ಎದುರಿಸಿರುವ ಭಾರತದಲ್ಲಿ ಈ ಬಾರಿ ಕೇಂದ್ರ ಬಜೆಟ್‌ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಕೇಂದ್ರ ಬಜೆಟ್‌ನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಪ್ರತಿಯೊಂದು ಕ್ಷೇತ್ರವು ಬೆಟ್ಟದಷ್ಟು ನಿರೀಕ್ಷೆಗಳನ್ನು ಹೊತ್ತು ಕಾಯುತ್ತಿದೆ. ಅದರಲ್ಲೂ ಕೋವಿಡ್-19 ಸಾಂಕ್ರಾಮಿಕದಿಂದ ಹೆಚ್ಚು ಬದಲಾದ ಕ್ಷೇತ್ರಗಳಲ್ಲಿ ಒಂದು ಶಿಕ್ಷಣ ಕ್ಷೇತ್ರ. ಇದೀಗ …

Read More »

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್’ ಆರಂಭ: ಸ್ಮಾರ್ಟ್ ಪೋನ್ ಗಳಿಗೆ 40% ಡಿಸ್ಕೌಂಟ್ !

ನವದೆಹಲಿ: ದೇಶದ ಬೃಹತ್ ಆನ್ ಲೈನ್ ಮಾರುಕಟ್ಟೆ ಮಳಿಗೆಯಾಗಿರುವ ಅಮೆಜಾನ್ ಗಣರಾಜ್ಯೋತ್ಸವದ ಸಂಭ್ರಮಾಚರಣೆಯ ತಯಾರಿಯಲ್ಲಿರುವ ತನ್ನ ಭಾರತೀಯ ಗ್ರಾಹಕರಿಗಾಗಿ ‘ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್’ ಅನ್ನು ಪ್ರಾರಂಭಿಸಿದೆ. ಆ ಮೂಲಕ ಸ್ಮಾರ್ಟ್ ಪೋನ್ ಗಳನ್ನು ಒಳಗೊಂಡಂತೆ ಹಲವು ಇಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಭಾರಿ ಆಫರ್ ನೀಡಲು ಮುಂದಾಗಿದೆ. ಈಗಾಗಲೇ ಅಮೆಜಾನ್ ಪ್ರೈಮ್ ಬಳಕೆದಾರರಿಗೆ ಈ ಆಫರ್ ಗಳು ಲ‍ಭ್ಯವಿದ್ದು, ಇಂದಿನಿಂದ ಆರಂಭಗೊಂಡು ಜನವರಿ 23 ರ ವರೆಗೆ ಎಲ್ಲಾ …

Read More »

ಜನರ ಆಕ್ರೋಶಕ್ಕೆ ಮಣಿದ ‘ತಾಂಡವ್’ ತಂಡ: ವಿವಾದಿತ ದೃಶ್ಯಕ್ಕೆ ಕತ್ತರಿ ಪ್ರಯೋಗ

ನವದೆಹಲಿ: ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳೊಂದಿಗೆ ನಡೆದ 2ನೇ ಸುತ್ತಿನ ಮಾತುಕತೆಯ ನಂತರ ‘ತಾಂಡವ್’ ವೆಬ್ ಸೀರೀಸ್ ತಂಡ ಕೊನೆಗೂ ವಿವಾದದ ಕಿಡಿ ಹೊತ್ತಿಸಿದ ದೃಶ್ಯವನ್ನು ತೆಗೆದುಹಾಕಿದೆ. ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡಿದ ಆರೋಪ ಎದುರಿಸಿ, ಬಾಲಿವುಡ್ ನಟ ಸೈಫ್ ಆಲಿಖಾನ್ ಅಭಿನಯದ ತಾಂಡವ್ ವೆಬ್ ಸೀರೀಸ್ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತಾಗಿ ತಾಂಡವ್ ತಂಡ ಕೂಡ ಬಹಿರಂಗವಾಗಿ ಕ್ಷಮೆಯಾಚಿಸಿತ್ತು. ಇದೀಗ ವಿವಾದದ ಕಿಡಿ ಹೊತ್ತಿಸಿದ ದೃಶ್ಯವನ್ನು …

Read More »

ಕಾಂಗ್ರೆಸ್ ಶಾಸಕಿ ಕೀಳುಮಟ್ಟದ ವರ್ತನೆ ಖಂಡನೀಯ – ಕ್ಯಾಪ್ಟನ್ ಕಾರ್ಣಿಕ್ ಖಂಡನೆ

ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ರಾಮಲಿಂಗಾರೆಡ್ಡಿ ಅವರ ಮಗಳು, ಶಾಸಕಿ ಸೌಮ್ಯ ರೆಡ್ಡಿ, ಇವತ್ತು ನಡೆದ ಕಾಂಗ್ರೆಸ್ ಪಕ್ಷದ ನಾಟಕೀಯ ಪ್ರತಿಭಟನೆ ಸಂದರ್ಭದಲ್ಲಿ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ನಡೆಸುವ ಕೀಳು ಮಟ್ಟದ ವರ್ತನೆಯನ್ನು ತೋರಿದ್ದಾರೆ. ಇದು ಖಂಡನೀಯ ವಿಷಯ ಎಂದು, ಭಾರತೀಯ ಜನತಾ ಪಕ್ಷದ ರಾಜ್ಯ ವಕ್ತಾರರು ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರೂ ಆದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು. ಮಲ್ಲೇಶ್ವರಂನ ಬಿಜೆಪಿ ಕಾರ್ಯಾಲಯ …

Read More »

ಅಂತರ್‌ರಾಜ್ಯ ಕಾರ್‌ ಲೋನ್‌ ಜಾಲ ಬೇಧಿಸಿದ ಪೊಲೀಸ್‌

ಮುಂಬೈ: ಅಂತರ್‌ ರಾಜ್ಯ ಕಾರ್‌ ಲೋನ್‌ ವಂಚನೆ ಜಾಲವನ್ನು ಮುಂಬೈ ಕ್ರೈ ಬ್ರ್ಯಾಂಚ್‌ ಬೇಧಿಸಿದ್ದು, 19 ಲಕ್ಷುರಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ 7 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಬ್ಯಾಂಕ್‌ ಒಂದರ ಮಾಜಿ ಲೋನ್‌ ಎಕ್ಸಿಕ್ಯೂಟಿವ್‌ ಕೂಡ ಸೇರಿದ್ದಾನೆ. ಆರೋಪಿಗಳು ಈ ಕಾರುಗಳನ್ನು ಮುಂಬೈ ಅಲ್ಲದೆ ಬೆಂಗಳೂರು, ಅಹ್ಮದಾಬಾದ್‌ನಲ್ಲಿ ಅಡ ಇಟ್ಟಿರುವ ಸಂಗತಿ ಕೂಡ ಬೆಳಕಿಗೆ ಬಂದಿದೆ. ಮರ್ಸಿಡಿಸ್‌ ಬೆನ್ ‌l, ಆಡಿ, ಟೊಯೊಟಾ ಇನ್ನೋವಾ, ಫಾರ್ಚೂನರ್‌, ಫೋರ್ಡ್‌, ಮಿನಿಕೂಪರ್‌ನಂಥ …

Read More »

ರೈತರ ಹಣದೊಂದಿಗೆ ವ್ಯಾಪಾರಿ ನಾಪತ್ತೆ

ಸಿರುಗುಪ್ಪ :ರೈತರ ಹಣದೊಂದಿಗೆ ವ್ಯಾಪಾರಿ ನಾಪತ್ತೆ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಕರ್ಚಿಗನೂರು ಶಾನವಾಸಪುರ,ಸೂಗೂರು, ಹಚ್ಚೊಳ್ಳಿ, ಅರಳಿಗನೂರು ಸೇರಿದಂತೆ ಹಲವು ಗ್ರಾಮಗಳ.35ಕ್ಕೂ ಹೆಚ್ಚು ರೈತರಿಂದ18 ಕೋಟಿ 30 ಲಕ್ಷ ರೂ ಮೌಲ್ಯದ ಭತ್ತವನ್ನು ಮಾರುಕಟ್ಟೆ ಧರಕ್ಕಿಂತ ಹೆಚ್ಚಿನ ಧರದಲ್ಲಿ ಖರೀದಿಸಿದ ವ್ಯಕ್ತಿ ಈಗ ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದಾನಂತೆ. ಮೂಲತಃ ಕಾರಟಿಗಿಯ ಮೆಹಬೂಬ್ ಭಾಷಾ ಎನ್ನುವಾತ ಸಿರುಗುಪ್ಪದಲ್ಲಿ ವಾಸವಾಗಿದ್ದ ಕಳೆದ ವರ್ಷ ಭತ್ತ ಖರೀದಿಸಿ ರೈತರಿಗೆ ಸಮರ್ಪಕವಾಗಿ ಹಣ ಪಾವತಿ …

Read More »

ಈ ಬಾರಿ ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ಇಲ್ಲ?

ಶಿವಮೊಗ್ಗ : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಶಾಲಾ, ಕಾಲೇಜು ವಿಳಂಬವಾಗಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಬೇಸಿಗೆ ರಜೆ ಬಳಸಿಕೊಂಡು ಮೇ ತಿಂಗಳವರವರೆಗೆ ತರಗತಿಗಳನ್ನು ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಶಾಲಾ-ಕಾಲೇಜುಗಳು ವಿಳಂಬವಾಗಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಬೇಸಿಗೆ ರಜೆ ಬಳಸಿಕೊಂಡು ಮೇ ವರೆಗೆ ಶಾಲೆಗಳನ್ನು ನಡೆಸುವ ಚಿಂತನೆ ಇದೆ. ಜೂನ್ ನಲ್ಲಿ ಎಸ್‌ಎಸ್‌ಎಲ್ ಸಿ ಪರೀಕ್ಷೆಗಳು ನಡೆಯಲಿವೆ. ಈಗಾಗಲೇ ಸಾಕಷ್ಟು ರಜೆ …

Read More »

SSLC ಪರೀಕ್ಷೆಗೆ ಹಾಜರಾತಿ ವಿನಾಯಿತಿ: ಪರೀಕ್ಷಾ ಮಂಡಳಿ

ಬೆಂಗಳೂರು: ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ ಕುರಿತ ಮಾರ್ಗಸೂಚಿ ಬಿಡುಗಡೆ ಮಾಡಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ವಿದ್ಯಾರ್ಥಿಗಳಿಗೆ ಕನಿಷ್ಠ ಹಾಜರಾತಿಯಿಂದ ವಿನಾಯಿತಿ ನೀಡಿದೆ. ಈ ವರ್ಷ ಪರೀಕ್ಷೆಗೆ ಕನಿಷ್ಠ ಹಾಜರಾತಿ ಇರುವುದಿಲ್ಲ. ಎಲ್ಲ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು ಎಂಬ ಬಗ್ಗೆ ಜ.11ರಂದು ಉದಯವಾಣಿ’ ವಿಸ್ತೃತ ವರದಿ ಪ್ರಕಟಿಸಿತ್ತು. ಈಗ ಮಂಡಳಿ ಬಿಡುಗಡೆ ಮಾಡಿರುವ ಅಧಿಸೂಚನೆಯಲ್ಲಿ ಅದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಜೂನ್‌ ತಿಂಗಳಲ್ಲಿ ನಡೆಯಲಿರುವ ವಾರ್ಷಿಕ ಪರೀಕ್ಷೆಯ ಪ್ರಕ್ರಿಯೆ ಹೇಗಿರಬೇಕು …

Read More »

ನೋ ಪ್ರೊಟೆಸ್ಟ್ ನಥಿಂಗ ಡಿಸಿಪಿ ವಿಕ್ರಂ ಅಮಟೆ ಖಡಕ್ ಎಚ್ಚರಿಕೆ ಪ್ರತಿಭಟನೆ ಕೈ ಬಿಟ್ಟ ಎಂಇಎಸ್

ಬೆಳಗಾವಿ  – ಯಾವುದೇ ಕಾರಣದಿಂದ ಪ್ರತಿಭಟನೆಗೆ ಅವಕಾಶವಿಲ್ಲ. ಹಾಗೊಮ್ಮೆ ಪ್ರತಿಭಟನೆಗಿಳಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಿಸಿಪಿ ವಿಕ್ರಂ ಅಮಟೆ ನೀಡಿದ ಗಂಭೀರ ಎಚ್ಚರಿಕೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆ ಬಾಲ ಮುದುಡಿಕೊಂಡಿದೆ. ಗುರುವಾರ ಬೆಳಗಾವಿಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಪ್ರತಿಭಟನೆ ಕೈ ಬಿಟ್ಟಿವೆ. ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಕನ್ನಡ ಧ್ವಜ ಹಾಕಿರುವುದನ್ನು ಪ್ರತಿಭಟಿಸಿ ಎಂಇಎಸ್ ಗುರುವಾರ ಬೃಹತ್ ಪ್ರತಿಭಟನೆ ಮಾಡುವುದಾಗಿ ಹೇಳಿತ್ತು. ಇದಕ್ಕಾಗಿ ಎಲ್ಲ ಕಡೆ ಸಿದ್ಧತೆ …

Read More »