Breaking News
Home / ಜಿಲ್ಲೆ / ಬೆಳಗಾವಿ / ನೋ ಪ್ರೊಟೆಸ್ಟ್ ನಥಿಂಗ ಡಿಸಿಪಿ ವಿಕ್ರಂ ಅಮಟೆ ಖಡಕ್ ಎಚ್ಚರಿಕೆ ಪ್ರತಿಭಟನೆ ಕೈ ಬಿಟ್ಟ ಎಂಇಎಸ್

ನೋ ಪ್ರೊಟೆಸ್ಟ್ ನಥಿಂಗ ಡಿಸಿಪಿ ವಿಕ್ರಂ ಅಮಟೆ ಖಡಕ್ ಎಚ್ಚರಿಕೆ ಪ್ರತಿಭಟನೆ ಕೈ ಬಿಟ್ಟ ಎಂಇಎಸ್

Spread the love

ಬೆಳಗಾವಿ  – ಯಾವುದೇ ಕಾರಣದಿಂದ ಪ್ರತಿಭಟನೆಗೆ ಅವಕಾಶವಿಲ್ಲ. ಹಾಗೊಮ್ಮೆ ಪ್ರತಿಭಟನೆಗಿಳಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಿಸಿಪಿ ವಿಕ್ರಂ ಅಮಟೆ ನೀಡಿದ ಗಂಭೀರ ಎಚ್ಚರಿಕೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆ ಬಾಲ ಮುದುಡಿಕೊಂಡಿದೆ.

ಗುರುವಾರ ಬೆಳಗಾವಿಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಪ್ರತಿಭಟನೆ ಕೈ ಬಿಟ್ಟಿವೆ.

ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಕನ್ನಡ ಧ್ವಜ ಹಾಕಿರುವುದನ್ನು ಪ್ರತಿಭಟಿಸಿ ಎಂಇಎಸ್ ಗುರುವಾರ ಬೃಹತ್ ಪ್ರತಿಭಟನೆ ಮಾಡುವುದಾಗಿ ಹೇಳಿತ್ತು. ಇದಕ್ಕಾಗಿ ಎಲ್ಲ ಕಡೆ ಸಿದ್ಧತೆ ಮಾಡಿಕೊಂಡಿತ್ತು. ಕನ್ನಡಿಗರ ವಿರುದ್ಧ ಪ್ರಚೋದನೆ ನೀಡಿ ಮುಗ್ದ ಮರಾಠಿ ಭಾಷಿಕರನ್ನು ಕೆರಳಿಸಿ ಪ್ರತಿಭಟನೆಗೆ ಕರೆತರುವ ಹುನ್ನಾರ ನಡೆಸಿತ್ತು.

ಆದರೆ ಪೊಲೀಸ್ ಉಪ ಆಯುಕ್ತ ವಿಕ್ರಂ ಅಮಟೆ ಪ್ರತಿಭಟನಾ ಕಾರರಿಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಗೆ ಅವಕಾಶವಿಲ್ಲ. ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಿ. ಪ್ರತಿಭಟನೆಗೆ ಇಳಿದಿದ್ದೇ ಆದಲ್ಲಿ ಕಠಿಣ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದ್ದಾರೆ.

ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡದ್ದರಿಂದ ಪ್ರತಿಭಟನೆ ಕೈಬಿಟ್ಟಿದ್ದೇವೆ. ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ಎಂಇಎಸ್ ಮುಖಂಡ ದೀಪಕ್ ದಳವಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಗೋಕಾಕ: ಮಾರ್ಚ್ 28ರಂದು ಕಾಂಗ್ರೆಸ್ ಕಾರ್ಯಕರ್ತರ ಸಭೆ

Spread the loveಗೋಕಾಕ: ಬೆಳಗಾವಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾರ್ಚ್ 28ರಂದು ಬೆಳಿಗ್ಗೆ 11 ಗಂಟೆಗೆ ನಗರದ ಮಹಾಲಕ್ಷ್ಮಿ ಸಭಾಭವನದಲ್ಲಿ ಗೋಕಾಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ